For Quick Alerts
ALLOW NOTIFICATIONS  
For Daily Alerts

ಆಸ್ಟ್ರೇಲಿಯಾ ಗಣಿ ಡೀಲ್ ಪಡೆದ ಅದಾನಿ ಷೇರುಗಳು ಏರಿಕೆ!

By Mahesh
|

ಮುಂಬೈ, ಅ.16: ಜಗತ್ತಿನ ಅತಿ ದೊಡ್ಡ ಕಲ್ಲಿದ್ದಲು ಗಣಿಯನ್ನು ನಿರ್ಮಿಸುವ ಕನಸು ಹೊತ್ತಿದ್ದ ಭಾರತದ ಗಣಿ ಉದ್ಯಮ ದಿಗ್ಗಜ ಅದಾನಿಗೆ ಬಂಪರ್ ಲಾಟರಿ ಹೊಡೆದಿದೆ. ಸುಮಾರು 16.5 ಬಿಲಿಯನ್ ಡಾಲರ್ ವೆಚ್ಚದ ಯೋಜನೆಗೆ ಷರತ್ತುಗಳೊಂದಿಗೆ ಆಸ್ಟ್ರೇಲಿಯಾ ಸರ್ಕಾರ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಶುಕ್ರವಾರ ಅದಾನಿ ಎಂಟರ್ ಪ್ರೈಸಸ್ ನ ಷೇರುಗಳು ನಾಗಲೋಟ ಮುಂದುವರೆಸಿದೆ.

ಪರಿಸರದ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಮತ್ತು ಅತ್ಯಂತ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಕಲ್ಲಿದ್ದಲು ಗಣಿ ನಿರ್ಮಾಣಕ್ಕೆ ಆಸ್ಟ್ರೇಲಿಯಾ ಸರ್ಕಾರ ಮರು ಅನುಮೋದನೆ ನೀಡಿದೆ. ಆಸ್ಟ್ರೇಲಿಯದ ನ್ಯಾಯಾಲಯವು ಈ ಯೋಜನೆಗೆ ನೀಡಲಾಗಿದ್ದ ಪಾರಿಸಾರಿಕ ಅನುಮೋದನೆಯನ್ನು ಎರಡು ತಿಂಗಳುಗಳ ಹಿಂದೆ ರದ್ದುಪಡಿಸಿತ್ತು. [ಈ ದಿನ ಷೇರುಪೇಟೆಯ ಗಳಿಕೆ-ಇಳಿಕೆ ಅಂಕಿ ಅಂಶ]

ಆಸ್ಟ್ರೇಲಿಯಾ ಗಣಿ ಡೀಲ್ ಪಡೆದ ಅದಾನಿ ಷೇರುಗಳು ಏರಿಕೆ!

ಅದಾನಿ ಸಮೂಹಸಂಸ್ಥೆಯು ಯೋಜಿತ ಗಣಿಗಾರಿಕೆ ಪ್ರದೇಶದಲ್ಲಿ ಅಪರೂಪದ ‘ಯಾಕ್ಕಾ ಸ್ಕಿಂಕ್' ಎಂಬ ಹಲ್ಲಿ ಜಾತಿಯ ವನ್ಯಜೀವಿ ಹಾಗೂ ‘ಆರ್ನಾಮೆಂಟಲ್ ಸ್ನೇಕ್ ಎಂಬ ಹಾವು ವಾಸಿಸುತ್ತಿದ್ದು, ಅವುಗಳ ವಿನಾಶದ ಭೀತಿಯಿಂದ ಫೆಡರಲ್ ನ್ಯಾಯಾಲಯವು ಗಣಿಗಾರಿಕೆಗೆ ಅನುಮೋದನೆಯನ್ನು ರದ್ದುಪಡಿಸಿತ್ತು.

ಶುಕ್ರವಾರ ಬಿಎಸ್ ಇನಲ್ಲಿ 95.80ರು ನಂತೆ ಶೇ 12.9ರಷ್ಟು ಏರಿಕೆ ಕಂಡ ಅದಾನಿ ಷೇರುಗಳು, ಎನ್ ಎಸ್ ಇನಲ್ಲಿ ಶೇ 13ರಷ್ಟು ಮೇಲ್ಮುಖಕ್ಕೆ ಚಲಿಸಿದೆ. ಅದಾನಿ ಎಂಟರ್ ಪ್ರೈಸಸ್ ಅಲ್ಲದೆ ಅದಾನಿ ಸಮೂಹದ ಅದಾನಿ ಪವರ್ 29.40ರು ನಂತೆ ಶೇ 4.81ರಷ್ಟು, ಅದಾನಿ ಪೋರ್ಟ್ಸ್ ಹಾಗೂ ವೀಶೇಷ ಆರ್ಥಿಕ ವಲಯ 330.50 ರು ನಂತೆ ಶೇ 1.94ರಷ್ಟು ಏರಿಕೆ ಕಂಡಿದೆ.

ಅದರೆ, ಮಧ್ಯಾಹ್ನ 2.08 ಗಂಟೆ ಸುಮಾರಿಗೆ ಬಿಎಸ್ ಇನಲ್ಲಿ 80 ಪೈಸೆ ಕಳೆದುಕೊಂಡು ಮತ್ತೆ 95.95 ರು ಆಸುಪಾಸಿನಲ್ಲಿ ಟ್ರೆಂಡ್ ಆಗುತ್ತಿತ್ತು. ಒಟ್ಟಾರೆ ಈ ಒಪ್ಪಂದದಿಂದಾಗಿ ಅದಾನಿ ಸಮೂಹ ಸಂಸ್ಥೆ ಮತ್ತೆ ಷೇರುಪೇಟೆಯಲ್ಲಿ ಸದ್ದು ಮಾಡುತ್ತಿದೆ. (ಪಿಟಿಐ)

English summary

Adani Enterprises Surges 13 Per cent As Aus Re-approves Coal Mine Project

Shares of Adani Enterprises surged 13 per cent today(Oct 16) after mining giant Adani's plan to build one of the world's largest coal mines got a re-approval for the 16.5 billion controversy-hit project by the Australian government.
Story first published: Friday, October 16, 2015, 14:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X