ಇವರು ಭಾರತದ ಉದ್ಯಮವನ್ನು ಆಳಲಿರುವ ಯುವ ಉದ್ಯಮಿಗಳು!

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಸಾಧನೆಗೆ ವಯಸ್ಸಿನ ಮಿತಿ ಎಂಬುದೇ ಇಲ್ಲ. ಕಲೆ ಇದ್ದವರಿಗೆ ಈ ಜಗತ್ತಿನಲ್ಲಿ ಬೆಲೆ ಇದ್ದೆ ಇರುತ್ತದೆ. ಯಾವ ವಯಸ್ಸಿನಲ್ಲಾದರೂ, ಯಾರಾದರೂ ಯಾವ ಸಾಧನೆ ಬೇಕಾದರೂ ಮಾಡಬಹುದು.

  ಆದರೆ ಯುವಕರು, ಚಿಕ್ಕ ವಯೋಮಾನದವರು ಜಗತ್ತನ್ನೆ ಬದಲಾಯಿಸಬಲ್ಲ ಪ್ರಸಿದ್ದ ಉದ್ಯಮಶೀಲರಾಗಿ/ಬರಹಗಾರರಾಗಿ ಯಶಸ್ಸಿನ ಉತ್ತುಂಗಕ್ಕೆ ಏರಿದಾಗ ಆಶ್ಚರ್ಯ ಆಗದೆ ಇರುವುದೆ?

  ಹೈಸ್ಕೂಲು, ಕಾಜೇಜಿನಲ್ಲಿ ಓದುವ, ಆಟ ಆಡುವ, ಕುಚೇಷ್ಟೆ ಮಾಡುವ, ಬೈಕ್ ರೈಡ್ ಮಾಡುವ, ವಿಡಿಯೋ ಗೇಮ್ ಗಳನ್ನು ಆಡುವ, ಅಲ್ಲಿ ಇಲ್ಲಿ ಓಡಾಡಿ ಸಮಯ ಕಳೆಯುವ ಚಿಕ್ಕ ವಯಸ್ಸಿನಲ್ಲಿ ಅಸಾಧಾರಣವಾದ ಸಾಧನೆಗಳನ್ನು ಮಾಡಿದ್ದಾಗ ಯಾರಿಗಾದರೂ ಹೆಮ್ಮೆ ಅನಿಸದೆ ಇರುವುದೆ? (ಮುಂದಿನ ತಲೆಮಾರಿನ 10 ಯುವ ಸಿರಿವಂತರು)

  ಚಿಕ್ಕ ವಯಸ್ಸಿನಲ್ಲಿಯೇ ಮಹತ್ತರ ಸಾಧನೆ ಮಾಡಿ ಕಂಪನಿಗಳನ್ನು ಕಟ್ಟಿ, ಪುಸ್ತಕ ಬರೆದು, ವಿಚಾರಗೋಷ್ಠಿ ಕೊಟ್ಟು ನಮ್ಮೆಲ್ಲರಿಗೂ ಸ್ಪೂರ್ತಿಯ ಚಿಲುಮೆ ಆಗಿರುವ ಕೆಲ ಸಾಧಕರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

  ಬಿನ್ನಿ ಮತ್ತು ಸಚಿನ್ ಬನ್ಸಾಲ್

  ಬಿನ್ನಿ ಮತ್ತು ಸಚಿನ್ ಬನ್ಸಾಲ್ ಇವರು ಯಾರಿಗೆ ತಾನೆ ಗೊತ್ತಿಲ್ಲ. ಬಾರತದ ಇ-ಕಾಮರ್ಸ್, ಆನ್ಲೈನ್ ಮಾರುಕಟ್ಟೆ ಲೋಕದ ದಿಗ್ಗಜರು.
  ಬಾರತದ ಇ-ಕಾಮರ್ಸ್ ವೇದಿಕೆಯಾದ ಪ್ಲಿಪ್ಕಾರ್ಟ್ ನ ಸಹ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಸಾಪ್ಟವೇರ್ ಇಂಜಿನೀಯರ್ ಮತ್ತು ಅಂತರ್ಜಾಲ ಉದ್ಯಮಿ. ಚಂಡಿಗಡ ಮೂಲದ ಇವರು ದೆಹಲಿಯ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಟೆಕ್ನಾಲೋಜಿ ಇಂಜಿನೀಯರ್ ಪದವಿ ಪಡೆದವರು. ಇವರ ಬ್ಯುಸಿನೆಸ್ ಪಾರ್ಟ್ನರ್ ಆದ ಬಿನ್ನಿ ಬನ್ಸಾಲ್ ಕೂಡ ಚಂದಿಗಡ ಮೂಲದವರು. ಅವರು 2006ರಲ್ಲಿ ಅಮೆಜಾನ್.ಕಾಮ್ ನಲ್ಲಿ ಹಿರಿಯ ಇಜಿನೀಯರ್ ಆಗಿ ಸೇರಿದರು. ಅಲ್ಲಿ ಸೇರಿದ ಇವರು ಆನ್ಲೈನ್ ಮತ್ತು ಇ-ಕಾಮರ್ಸ್ ಮಾರುಕಟ್ಟೆಯ ಮಹತ್ವವನ್ನು ಅರಿತು ಆರು ತಿಂಗಳ ನಂತರ ಕೆಲಸಕ್ಕೆ ರಾಜಿನಾಮೆ ನಿಡಿ ಭಾರತಕ್ಕೆ ಹಿಂತಿರುಗಿದರು. ಭಾರತದಲ್ಲಿ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಮಹೋನ್ನತ ಭವಿಷ್ಯ ಇದೆ ಎಂದು ತಿಳಿದು 2007ರಲ್ಲಿ ಪ್ಲಿಪ್ಕಾರ್ಟ್ ಎಂಬ ಇ-ಕಾಮರ್ಸ್ ಕಂಪನಿಯನ್ನು ಪ್ರಾರಂಭಿಸಿದರು.

  ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಬೆಂಗಳೂರಿನ ಒಂದು ಸಣ್ಣ ಅಪಾರ್ಟ್ಮೆಂಟಿನಲ್ಲಿ ರೂ. 400,000 ($6500) ಗಳಿಗೆ ಪ್ರಾರಂಭಿಸಿದರು. ಪ್ಲಿಪ್ಕಾರ್ಟ್ ನ ಪ್ರಾರಂಭದ ದಿನಗಳಲ್ಲಿ (2007ರಲ್ಲಿ) ಇವರಿಬ್ಬರು ತಮ್ಮ ಸ್ಕೂಟಿ ಮೇಲೆ ಪುಸ್ತಕಗಳನ್ನು ಹಾಕಿ ಮನೆ ಮನೆಗೆ ಹೋಗಿ ಮಾರಾಟ ಮಾಡತೊಡಗಿದರು. ವೈಯಕ್ತಿಕವಾಗಿ ಮತ್ತು ಆನ್ಲೈನ್ ಮೂಲಕ ಆರ್ಡರ್ ಗಳನ್ನು ಪಡೆದು ಗ್ರಾಹಕರಿಗೆ ಸರಕುಗಳನ್ನು ಪೂರೈಕೆ ಮಾಡತೊಡಗಿದರು. 2015ರಲ್ಲಿ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಭಾರತದ ೮೬ನೇ ಶ್ರೀಮಂತರು ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ 151.3ಬಿಲಿಯನ್(2016) ಆಗಿದೆ.

  ಅಂಕೂರ್ ವಾರಿಕೂ

  ಅಂಕೂರ್ ವಾರಿಕೂ ಭಾರತದ ಅಂತರ್ಜಾಲ ಉದ್ಯಮಿ ಮತ್ತು ಏಂಜೆಲ್ ಹೂಡಿಕೆಗಾರ ಆಗಿದ್ದಾರೆ. ಇವರು nearbuy (formerly Groupon India) ಸಹ ಸಂಸ್ಥಾಪಕರು ಮತ್ತು ಸಿಇಓ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ರಾಕೆಟ್ ಇಂಟರ್ನೆಟ್ ನಲ್ಲಿ ಉದ್ಯಮಿ ಹಾಗೂ ಅಸೆಂಟಿಯಮ್ ವೆಬ್ ನಲ್ಲಿ ಸಹ ಸಂಸ್ಥಾಪಕರಾಗಿದ್ದರು. ಇವರು ಇಂಡಿಯನ್ ಸ್ಕೂಲ್ ಆಪ್ ಬ್ಯುಸಿನೆಸ್ ನಲ್ಲಿ ಎಂಬಿಎ ಪದವಿ, ಮಿಚಿಗನ್ ಸ್ಟೇಟ್ ಯುನಿವರ್ಸಿಟಿ ಯಿಂದ ಎಂಎಸ್ ಪದವಿ ಪಡೆದಿದ್ದಾರೆ.
  ಗ್ರೂಪ್ ಇಂಡಿಯಾ ಸೇರುವ ಮುನ್ನ ವಾರಿಕೂ ರಾಕೆಟ್ ಇಂಟರ್ನೆಟ್ ಇಂಡಿಯ ಫೌಂಡಿಂಗ್ ಟೀಮ್ ಮತ್ತು ಜಾಬಾಂಗ್.ಕಾಮ್ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. 2015ರಿಂದ ಗ್ರೂಪ್ ಇಂಡಿಯಾದ ಮೂಲಕ ಇವರು ಇಂಡಿಯ, ಇಂಡೊನೆಷ್ಯಾ, ಥೈಲ್ಯಾಂಡ್ ಮತ್ತು ಫಿಲಿಪೀನ್ಸ್ ದೇಶಗಳ ಕಾರ್ಯನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ.

  ವರುಣ್ ಅಗರ್ವಾಲ್

  ವರುಣ್ ಅಗರ್ವಾಲ್ ಭಾರತದ ಮೊದಲ ಪಿಳೀಗೆಯ ಉದ್ಯಮಿ, ಪಿಲ್ಮ್ ಮೇಕರ್ ಮತ್ತು ಲೇಖಕ. ಇವರು ಡಿಸೆಂಬರ್ 6, 1987 ರಲ್ಲಿ ಬೆಂಗಳುರಿನಲ್ಲಿ ಜನಿಸಿದರು. ಸಿಎಂಆರ್ ಇನಸ್ಟಿಟ್ಯೂಟ್ ಆಪ್ ಟೆಕ್ನಾಲೋಜಿ ಕಾಲೀಜಿನಲ್ಲಿ ಇಂಜಿನೀಯರಿಂಗ್ ಮುಗಿಸಿದರು. ಕಾಲೇಜು ಸಮಯದಲ್ಲಿ ಶಾರ್ಟ್ ಪಿಲ್ಮ್ ಗಳನ್ನು ಮಾಡುತ್ತಿದ್ದರು. ಇವರು ಅಲ್ಮಾ ಮ್ಯಾಟರ್ ಮತ್ತು ಇನ್ನೇರಡು ರೇಟಿಕ್ಯುಲರ್ ಮತ್ತು ಲಾಸ್ಟ್ ಮಿನಿಟ್ ಪಿಲ್ಮ್ಸ್ ಎಂಬ ಕಂಪನಿಗಳನ್ನು ಕಟ್ಟಿದ್ದಾರೆ. ಅಲ್ಲದೇ ಹವ್ ಐ ಬ್ರೆವ್ಡ್ ಅನು ಆಂಟಿ ಪುಸ್ತಕ ಬರೆದಿದ್ದಾರೆ. ಮಿಲಿಯನ್ ಡಾಲರ್ ಕಂಪನಿಯ ಸಹ ಸಂಸ್ಥಾಪಕರಾಗಿದ್ದಾರೆ.

  ಲಾಸ್ಟ್ ಮಿನಿಟ್ ಪಿಲ್ಮ್ಸ್ ಮೂಲಕ ಅನೇಕ ವಿಡಿಯೋ, ಕಾರ್ಪೊರೇಟ್ ಫಿಲ್ಮ್ಸ್ ಮತತ್ಉ ಜಾಹಿರಾತುಗಳನ್ನು ಮಾಡಿದ್ದಾರೆ. ಎ.ಆರ್ .ರೆಹಮಾನ್, ಪ್ರೀತಿ ಜಿಂಟಾ ಮತ್ತು ಕರಣ್ ಜೋಹಾರ್ ನಂತವರ ಜತೆ ಕೆಲಸ ಮಾಡಿದ್ದಾರೆ.

  ರಾಹುಲ್ ಯಾದವ್

  ರಾಹುಲ್ ಯಾದವ್ ಭಾರತೀಯ ಉದ್ಯಮಿ. ಇವರನ್ನು ಸ್ಟಾರ್ಟ್ಅಪ್ ಗಳ ಬ್ಯಾಡ್ ಬಾಯ್ ಅಂತಲೂ ಸಹ ಕರೆಯುತ್ತಾರೆ. ಮುಂಬೈ ಮೂಲದ ರಿಯಲ್ ಎಸ್ಟೇಟ್ ಕ್ಷೇತ್ರದ ಹೌಸಿಂಗ್.ಕಾಮ್ ಕಂಪನಿಯ ಮಾಜಿ ಸಹ ಸಂಸ್ಥಾಪಕ ಮತ್ತು ಸಿಇಓ ಆಗಿದ್ದರು. ಹೌಸಿಂಗ್.ಕಾಮ್ ಮೂಲಕ ಇವರು ಮೂವತ್ತರ ಒಳಗಿನ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.
  ಆಮೇಲೆ ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡು ಹೊಸ ಹುಮ್ಮಸ್ಸಿನೊಂದಿಗೆ ವರ್ಚುವಲ್, ಅಗ್ಮೆಂಟೆಡ್ ರಿಯಾಲಿಟಿ ಮತ್ತು ಇಂಟರ್ಪೆಸಸ್-ಹೌಸಿಂಗ್.ಕಾಮ್ ಮೂಲಕ ಮತ್ತೆ ಎದ್ದು ನಿಂತರು.

  ರಿತೇಶ್ ಅಗರ್ವಾಲ್

  ಇವರು ಭಾರತದ ಯುವ ಉದ್ಯಮಿಯಾಗಿದ್ದು, ಓಯೊ ರೂಮ್ಸ್ ನ ಸಂಸ್ಥಾಪಕರು ಮತ್ತು ಸಿಇಓ ಆಗಿದ್ದಾರೆ. ತನ್ನ 17ನೇ ವಯಸ್ಸಿನಲ್ಲಿಯೇ ಉದ್ಯಮ ಪ್ರಾರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಥೈಲ್ ಫೆಲೋಷಿಪ್ ಪಡೆದ ಮೊದಲ ಭಾರತೀಯ. ಇತ್ತಿಚೆಗೆ ಫೊರ್ಬ್ಸ್ ಬಿಡುಗಡೆಗೊಳಿಸಿದ ಮೂವತ್ತರ ಒಳಗಿನ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
  ಓಯೊ ರೂಮ್ಸ್ ಭಾರತದ ಅತಿದೊಡ್ಡ ಹೊಟೆಲ್ ವಸತಿ ಜಾಲವಾಗಿದ್ದು, 160 ನಗರಗಳಲ್ಲಿ ತನ್ನ ಸೇವೆಯನ್ನು ಒದಗಿಸುತತ್ಇದೆ. 40,000 ಸಾವಿರ ರೂಮ್ ಗಳನ್ನು ಇದರ ಅಡಿಯಲ್ಲಿ ಕಾರ್ಯನಿರತವಾಗಿವೆ. ಹೊಟೆಲ್ ಮತ್ತು ಲಾಡ್ಜ್ ಗಳಲ್ಲಿ ಇರುವ ಸಮಸ್ಯೆ, ಸರಿಯಿರದ ಸೌಲಭ್ಯ ಪೂರೈಕೆ ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸಲು ಓಯೊ ರೂಮ್ಸ್ ಪ್ರಾರಂಭಿಸಲಾಗಿದೆ ಎಂದು ರಿತೇಶ್ ಹೇಳುತ್ತಾರೆ.

  ಭವಿಶ್ ಅಗರ್ವಾಲ್ ಮತತ್ಉ ಅಂಕಿತ್ ಅಗರ್ವಾಲ್

  ಬಾಂಬೆ ಮೂಲದ ಐಐಟಿ ಪದವಿದರರಾದ ಇವರು ಓಲಾಕ್ಯಾಬ್ಸ್ ನ ಸಂಸ್ಥಾಪಕರು. ಎರಡು ವರ್ಷ ಮೈಕ್ರೊಸಾಫ್ಟ್ ಕಂಪನಿಯಲ್ಲಿ ಭವಿಶ್ ಕೆಲಸ ಮಾಡಿ ನಂತರ ಪ್ರವಾಸ ಮತ್ತು ರಜಾದಿನಗಳ ಸರಕುಗಳನ್ನು ಪೂರೈಸುವ ಆನ್ಲೈನ್ ಕಂಪನಿ ಪ್ರಾರಂಭಿಸಿದರು. ಕಾರ್ ಬಾಡಿಗೆಗೆ ಪಡೆದು ಬೆಂಗಳೂರಿನಿಂದ ಬಂಡಿಪುರಕ್ಕೆ ಟ್ರಾವೆಲಿಂಗ್ ಮಾಡುವಾಗ ತುಂಬಾ ಕಟ್ಟ ಅನುಭವ ಆಯಿತು. ಕಾರು ಕಟ್ಟು ನಿಂತು ಡ್ರೈವರ್ ಅರ್ಧಕ್ಕೆ ಕೈಕೊಟ್ಟರು.
  ಆಗ ಓಲಾಕ್ಯಾಬ್ಸ್ ಪರಿಕಲ್ಪನೆ ತಲೆಗೆ ಬಂತು. ದೇಶದಾದ್ಯಂತ ಇಂತಹ ಅನೇಕ ಸಮಸ್ಯೆಗಳನ್ನು ಗ್ರಾಹಕರು ಎದುರಿಸುತ್ತಿದ್ದಾರೆ. ಹೀಗಾಗಿ ಓಲಾಕ್ಯಾಬ್ಸ್ ಪ್ರಾರಂಭಿಸಬೇಕೆಂದು ನಿರ್ಧರಿಸಿದರು. ತದನಂತರದಲ್ಲಿ ನವೋದ್ಯಮದ ಯುಗದಲ್ಲಿ ಓಲಾಕ್ಯಾಬ್ಸ್ ಎಂತಹ ಜಾದು ಮಾಡುತ್ತಿದೆ ಎನ್ನುವು ಎಲ್ಲರಿಗೂ ತಿಳಿದಿದೆ.

  ಆಯಾನ್ ಚಾವ್ಲಾ

  ಭಾರತ ಮೂಲದ ಆಯಾನ್ ಚಾವ್ಲಾ ಹೂಡಿಕೆದಾರ, ಪ್ರೊಗ್ರಾಮರ್, ಲೋಕೊಪಕಾರಿಯಾಗಿದ್ದಾರೆ. ಏಷಿಯನ್ ಫಾಕ್ಸ್ ಡೆವಲೆಪ್ಮೆಂಟ್, ಗ್ಲೋಬಲ್ ವೆಬ್ ಮೌಂಟ್ ಮತ್ತು ಗ್ರೂಪ್ ಫಾರ್ ಬಡ್ಡಿಸ್ ನ ಸಂಸ್ಥಾಪಕ ಸಿಇಓ ಆಗಿದ್ದಾರೆ. ಏಷಿಯನ್ ಫಾಕ್ಸ್ ಡೆವಲೆಪ್ಮೆಂಟ್ ಕಂಪನಿ ಪ್ರಮುಖ ಐಟಿ ಸೋಲುಷನ್ ಕಂಪನಿಯಾಗಿದ್ದು, ಮೈಕ್ರೊಸಾಫ್ಟ್, ಇಂಟೆಲ್, ಐಬಿಎಂ, ಸಿಸ್ಕೊ, ಷೇರಿಪ್ ಯೂರೋಪ್, ಮ್ಯಾಗಿಕ್ಷ್, ಕೊರೆಲ್ ಮತ್ತು ಆನ್ಲೈನ್ ಮೇಡಿಯಾ
  ಪಾರ್ಟ್ನರ್ ಆಗಿ ಕೆಲಸ ಮಾಡುತ್ತಿದೆ.
  ಡಾಮಿನ್ ಮತ್ತು ಹಾಸ್ಟಿಂಗ್ ಕ್ಷೇತ್ರದಲ್ಲಿ ಜಾಗತಿಕವಾಗಿ ಗ್ಲೋಬಲ್ ವೆಬ್ ಮೌಂಟ್ ತುಂಬಾ ವೇಗವಾಗಿ ಬೆಳೆಯುತ್ತಿರುವ ಪ್ರಸಿದ್ದ ಕಂಪನಿಯಾಗಿದೆ.

  ಕಿಂಗ್ ಸಿದ್ದಾರ್ಥ

  ಕಿಂಗ್ ಸಿದ್ದಾರ್ಥ ಬಹುಮುಖ ಪ್ರತಿಭೆಯ ಯುವಕ. ಇವರೊಬ್ಬ ಭಾಷಣಕಾರ, ಲೇಖಕ, ಮ್ಯಾಗಜಿನ್ ಪ್ರಕಾಶಕ. ಹನ್ನೊಂದನೆಯ ವಯಸ್ಸಿನಲ್ಲಿ ತನ್ನ ಸ್ನೇಹಿತರೊಂದಿಗೆ ಜತೆಗೂಡಿ ಮಕ್ಕಳಿಗೆ ಬೇರೆ ಬೇರೆ ಕಾರ್ಯಕ್ರಮಗಳನ್ನು ಮತ್ತು ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಅದರ ಮೇಲೆ ಇವರು ಶುಲ್ಕ ವಿಧಿಸುತ್ತಿದ್ದರು. ಬಂದ ಹಣದಿಂದ ಗೆದ್ದ ಮಕ್ಕಳಿಗೆ ಬಹುಮಾನಗಳನ್ನು ಕೊಡುತ್ತಿದ್ದರು. ಇದರಿಂದಾಗಿ ತುಂಬಾ ಯಶಸ್ವಿಯಾದರು ಜತೆಗೆ ಉತ್ತಮ ಹಣವನ್ನು ಸಂಪಾದಿಸಿದರು.

  ಇವರು ಪ್ರಾಥಮಿಕವಾಗಿ ವೆಬ್ಸೈಟ್ ಅಭಿವೃದ್ಧಿ ಮತ್ತು ಡಿಸೈನ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದರು.

  ಫರ್ಹಾದ್ ಅಸಿಡವಾಲಾ

  ಇವನು ತನ್ನ ಪಾಲಕರಿಂದ $10 ಪಡೆದು ಡಾಮೆನ್ ಹೆಸರು ಪಡೆದು ಉದ್ಯಮವನ್ನು ಪ್ರಾರಂಭಿಸಿದರು. ಈ ವೆಬ್ಸೈಟ್ ಏರೊ ಮಾಡೆಲಿಂಗ್ ಕ್ಷೇತ್ರದಲ್ಲಿ ತನ್ನದೆ ಛಾಪನ್ನು ಮೂಡಿಸಿ ಯಶಸ್ವಿಯಾಯಿತು. ತದನಂತರ ಇದನ್ನು ಅವರು ಉತ್ತಮ ಮೌಲ್ಯಕ್ಕೆ ಮಾರಾಟ ಮಾಡಿದರು. ಆಮೇಲೆ ರಾಕ್ ಸ್ಟಾ ಮೆಡಿಯಾ ಪ್ರಾರಂಭಿಸಿ ಮಾರ್ಕೆಟಿಂಗ್, ಜಾಹೀರಾತು ಮತ್ತು ಬ್ರಾಂಡಿಂಗ್ ಮಾಡತೊಡಗಿದರು.

  ರಶ್ಮಿ ಬನ್ಸಾಲ್

  ಇವರು ಪ್ರಸಿದ್ದ ಬರಹಗಾರ್ತಿ, ಉದ್ಯಮಿ ಮತ್ತು ಯುವ ತಜ್ಞೆ. ಇವರು ಅನೇಕ ಬೆಸ್ಟ್ ಸೆಲ್ಲರ್ ಪುಸ್ತಕಗಳ ಲೇಖಕಿಯಾಗಿದ್ದಾರೆ. ‘Stay Hungry Stay Foolish' ‘I Have a Dream' ಮತ್ತು ‘Connect the Dots' ಈ ಎರಡು ಪುಸ್ತಕಗಳು ಜಗತ್ತಿನಾದ್ಯಂತ ೮ ಭಾಷೆಗಳಲ್ಲಿ ಭಾಷಾಂತರಗೊಂಡಿದ್ದು, ಒಂದು ಲಕ್ಷಕ್ಕಿಂತ ಹೆಚ್ಚು ಪ್ರತಿಗಳು ಮಾರಾಟಗೊಂಡಿವೆ. ಯೂತ್ ಐಕಾನ್ ಆಗಿ ಮುಂಚೂಣಿಯಲ್ಲಿದ್ದಾರೆ.

  English summary

  Top 10 Young Entrepreneurs In India

  Entrepreneurship has no bar on age, but nevertheless, you get surprised to see some youngsters making it big as entrepreneurs.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more