ಈ ಯುವ ಶ್ರೀಮಂತರು ಭಾರತದ ಆರ್ಥಿಕ ಭವಿಷ್ಯವನ್ನು ಬದಲಿಸುವರೆ?

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಇವರೇಲ್ಲರೂ ಉನ್ನತ ಮಹಾತ್ವಾಕಾಂಕ್ಷೆ ಹೊಂದಿರುವ ಯುವ ಪಿಳೀಗೆಯವರು. ಅತಿ ಎತ್ತರದ ಯೋಜನೆಗಳನ್ನು, ಗುರಿಗಳನ್ನು ಹೊಂದಿದವರು. ನಮ್ಮ ದೇಶದ ದಿಕ್ಕನ್ನು, ಭವಿಷ್ಯವನ್ನು ಬದಲಾಯಿಸಬಲ್ಲ ಮುಂದಾಲೋಚನೆ ಇರುವವರು. ಇವರು ಭಾರತದ ಆರ್ಥಿಕ ಭವಿಷ್ಯವನ್ನು ಬದಲಿಸುವ ಯುವ ಶ್ರೀಮಂತರು ಎಂದೇ ಭಾವಿಸಲಾಗಿದೆ!

  ಇವರಲ್ಲಿ ಅನೇಕರು ಶ್ರೀಮಂತ ಉದ್ಯಮಿದಾರರ ಹಾಗೂ ಬೃಹತ್ ಕಂಪನಿಗಳ ಮಂಡಳಿ ಸದಸ್ಯರ ಮಕ್ಕಳು. ಭಾರತದಲ್ಲಿನ ವ್ಯವಹಾರ ಮತ್ತು ಉದ್ಯಮಗಳನ್ನು ಇಂತ ದೊಡ್ಡ ದೊಡ್ಡ ಮನೆತನದವರೆ ನಿಯಂತ್ರಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.

  ಅಂತವರಲ್ಲಿ ಇಂದಿನ ಪಿಳೀಗೆಯ ಪ್ರಮುಖ 10 ಯುವ ಸಿರಿವಂತರನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ನೋಡಿ...

  ಇಶಾ ಮತ್ತು ಆಕಾಶ್ ಅಂಬಾನಿ

  ಅವಳಿ ಒಡಹುಟ್ಟಿದವರಾದ ಇಶಾ ಮತ್ತು ಆಕಾಶ್ ಅಂಬಾನಿ ಭಾರತದ ಶ್ರೀಮಂತ ವ್ಯಕ್ತಿಯಾದ ಮುಖೇಶ್ ಅಂಬಾನಿಯ ಮಕ್ಕಳು. ರಿಲಾಯನ್ಸ್ ಜಿಯೊ ಇನ್ಫೊಕಾಮ್ ಲಿಮಿಟೆಡ್ ಮತ್ತು ರಿಲಾಯನ್ಸ್ ರಿಟೆಲ್ ವೆಂಚರ್ಸ್ ಲಿಮಿಟಿಡ್ ನಲ್ಲಿ ಮಂಡಳಿ ಸದಸ್ಯರಾಗಿ 2014ರಲ್ಲಿ ಹೊಸ ಸಾಹಸಕ್ಕಾಗಿ ನಿಯೋಜಿಸಲ್ಪಟ್ಟಿದ್ದಾರೆ.
  ಇಶಾ ಅಂಬಾನಿ ಬೋರ್ಡ್ ಸೇರುವ ಮುನ್ನ ನಿರ್ವಹಣಾ ಸಲಹಾ ಸಂಸ್ಥೆಯಾದ ಮೆಕಿನ್ಸೆ ಮತ್ತು ಕಂಪನಿಯಲ್ಲಿ ವ್ಯವಹಾರ ವಿಶ್ಲೇಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

  ಕವಿನ್ ಭಾರ್ತಿ ಮಿತ್ತಲ್

  ಕವಿನ್ ಭಾರ್ತಿ ಮಿತ್ತಲ್ ಅವರು ಭಾರ್ತಿ ಎಂಟರ್ಪ್ರೈಸ್ ನ ಸಂಸ್ಥಾಪಕ ಅಧ್ಯಕ್ಷರಾದ ಸುನೀಲ್ ಭಾರ್ತಿ ಮಿತ್ತಲ್ ಅವರ ಮಗ. ಇವರು ಇಂಪೆರಿಯಲ್ ಕಾಲೇಜಿನಲ್ಲಿ ಡಿಗ್ರಿ ಮುಗಿಸಿದ್ದಾರೆ. 2009ರಲ್ಲಿ ಇಂಗ್ಲೆಂಡಿನಲ್ಲಿ ಎಲೆಕ್ಟ್ರಿಕಲ್ ಇಂಜಿನೀಯರಿಂಗ್ ಮತ್ತು ಮ್ಯಾನೆಜ್ಮೆಂಟ್ ನಲ್ಲಿ ಮಾಸ್ಟರ್ ಡಿಗ್ರಿಯನ್ನು ಪೂರೈಸಿದ್ದಾರೆ.

  ಅಲೋಕ್ ಸಾಂಘ್ವಿ

  ಅಲೋಕ್ ಸಾಂಘ್ವಿಯವರು ಮಾದ್ಯಮದವರಿಂದ ತುಂಬಾ ದೂರದಲ್ಲಿರುವ ಸರಳ ವ್ಯಕ್ತಿ. ಇವರು ಮಿಚಿಗನ್ ವಿಶ್ವವಿದ್ಯಾಲಯದಿಂದ ಅಣುಜೀವ ವಿಜ್ಞಾನ (ಮೊಲೆಕ್ಯುಲರ್ ಬಯಾಲೊಜಿ) ದಲ್ಲಿ ಪದವಿದರರಾಗಿದ್ದಾರೆ.
  ಇವರು ಪಿವಿ ಪವರ್ಟೆಕ್ ಪ್ರೈ. ಲಿ (PV Powertech Pvt Ltd) ಸಂಸ್ಥಾಪಕ ಉದ್ಯಮದಾರರಾಗಿದ್ದು, ಯೂರೋಪ್, ಏಷಿಯಾ ಮತ್ತು ಆಫ್ರಿಕಾಗಳಲ್ಲಿ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಿದ್ದಾರೆ.
  ಅಲೋಕ್ ಸಾಂಘ್ವಿಯವರು ಭಾರತದ ಎರಡನೇ ಶ್ರೀಮಂತ ವ್ಯಕ್ತಿಯಾದ ದಿಲೀಪ್ ಸಾಂಘ್ವಿಯವರ ಒಡಹುಟ್ಟಿದವರಾಗಿದ್ದಾರೆ.

  ರೋಶನಿ ನಡಾರ್

  ರೋಶನಿ ನಡಾರ್ ಹೆಚ್ಸಿಎಲ್ (HCL) ಸಂಸ್ಥಾಪಕರಾದ ಶಿವ ನಡಾರ್ ರವರ ಏಕೈಕ ಪುತ್ರಿ ಆಗಿದ್ದಾರೆ. ಅವರು ಈಗ HCL ಕಾರ್ಪೋರೇಶನ್ ನಲ್ಲಿ ಸಿಇಓ ಆಗಿದ್ದು, ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತರಾಗಿದ್ದಾರೆ ಹಾಗೂ ಶಿಖರ್ ಮಲ್ಹೋತ್ರಾ ರನ್ನು ಮದುವೆ ಆಗಿದ್ದಾರೆ.

  ಆದಿತ್ಯ ಮಿತ್ತಲ್

  ಆದಿತ್ಯ ಮಿತ್ತಲ್ ಲಕ್ಷ್ಮೀ ಮಿತ್ತಲ್ ರವರ ಮಗ. ಯುನೈಟೆಡ್ ಸ್ಟೇಟ್ಸ್ ನ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಾರ್ಟನ್ ಸ್ಕೂಲ್ ನಿಂದ ಕೌಶಲ್ಯ ನಿರ್ವಹಣೆ ಮತ್ತು ಕಾರ್ಪೊರೇಟ್ ಹಣಕಾಸು ವಿಷಯದಲ್ಲಿ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪಡೆದಿದ್ದಾರೆ.
  ಕಂಪನಿಗೆ ಸೇರುವ ಮುನ್ನ ಅನೇಕ ಕಡೆಗಳಲ್ಲಿ ಕೆಲಸ ಮಾಡಿದ ಅನುಭವವಿದ್ದು, ಈಗ ಏರ್ಸೆಲರ್ ಮಿತ್ತಲ್ ನಲ್ಲಿ ಸಿಎಫ್ಓ ಆಗಿದ್ದಾರೆ.

  ಅಶ್ನಿ ಬಿಯಾನಿ

  ಇವರು ಕಿಶೋರ್ ಬಿಯಾನಿಯವರ ಮಗಳಾಗಿದ್ದಾಳೆ. ತನ್ನ 22ನೇ ವಯಸ್ಸಿನಲ್ಲಿಯೇ ಫ್ಯೂಚರ್ ಗ್ರೂಪ್ ನ ಅನ್ವೇಷಕ ವಿಭಾಗದಲ್ಲಿ ತೊಡಗಿಸಿಕೊಂಡರು. ಮುಂಬೈನಲ್ಲಿ ಶಿಕ್ಷಣವನ್ನು ಪೂರೈಸಿದ್ದು, ಜವಳಿ ವಿನ್ಯಾಸ ಮತ್ತು ವಿನ್ಯಾಸ ನಿರ್ವಹಣೆ ಕೋರ್ಸ್ ಮುಗಿಸಿದ್ದಾರೆ.

  ರಿಷದ್ ಪ್ರೇಮ್ ಜೀ

  ಇವರು ವಿಫ್ರೋ ಲಿಮಿಟೆಡ್ ನಲ್ಲಿ ಮಂಡಳಿ ಸದಸ್ಯ ಹಾಗೂ ಮುಖ್ಯ ಸ್ಟ್ರಾಟಜಿ ಆಫೀಸರ್ ಆಗಿದ್ದಾರೆ. ಜೊತೆಗೆ ಕಂಪನಿಯ ಹೂಡಿಕೆದಾರರೊಂದಿಗೆ ಉತ್ತಮ ಭಾಂದವ್ಯ ಮತ್ತು ಕಾರ್ಪೋರೇಟಿನ ಪ್ರಚಲಿತಗಳ ಬಗ್ಗೆ ಕಾರ್ಯನಿರ್ವಹಿಸುತ್ತಾರೆ.
  ವಿಫ್ರೋದಲ್ಲಿ ಸೇರುವ ಮುನ್ನ ಲಂಡನ್ನಿನ ಬೇನ್ ಮತ್ತು ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ.

  ರೋಹನ್ ಮೂರ್ತಿ

  ಇವರು ಭಾರತದ ಐಟಿ ದಿಗ್ಗಜ ಮತ್ತು ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿಯವರ ಮಗ.
  ರೋಹನ್ ಮೂರ್ತಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ.
  2013ರಲ್ಲಿ ಎಕ್ಷಿಕ್ಯೂಟಿವ್ ಅಸಿಸ್ಟಂಟ್ ಆಗಿ ಇನ್ಫೋಸಿಸ್ ನಲ್ಲಿ ಸೇರಿದ್ದಾರೆ.

  ಅನನ್ಯಶ್ರೀ ಬಿರ್ಲಾ

  ಅನನ್ಯಶ್ರೀ ಬಿರ್ಲಾ ಸಿರಿವಂತ ಉದ್ಯಮಿಯಾದ ಕುಮಾರ್ ಮಂಗಲಮ್ ರವರ ಪುತ್ರಿ. ಇವರು ಸೋಷಿಯಲ್ ಎಂಟರ್ಪ್ರಿನರ್ ಆಗಿದ್ದು, ಸ್ವತಂತ್ರ ಮೈಕ್ರೊಫಿನ್ ಫ್ರೈ. ಎಂಬ ಮೈಕ್ರೊ ಫೈನಾನ್ಸ್ ಕಂಪನಿ ಪ್ರಾರಂಭಿಸಿದ್ದಾರೆ.

  ಆನಂದ ಪರಿಮಳ

  ಇವರು ಭಾರತದ ಪ್ರಸಿದ್ದ ಕೈಗಾರಿಕಾ ಉದ್ಯಮಿ, ದಾನಿ, ಸಾಮಾಜಿಕ ಉದ್ಯಮಿಯಾದ ಅಜಯ್ ಪರಿಮಳ್ ಅವರ ಪುತ್ರ. ಪರಿಮಳ ರಿಯಾಲ್ಟಿ ಗ್ರೂಪಿನಲ್ಲಿ ಇವರು ರಿಯಲ್ ಎಸ್ಟೇಟ್ ನ ಅಭಿವೃದ್ಧಿ ವ್ಯವಹಾರವನ್ನು ನೋಡುತ್ತಿದ್ದಾರೆ.

  English summary

  10 New Generation Tycoons On The Way to change indian economy

  They are young, aspirational and plan to scale newer heights. Most of the young generation kids from the list are part of family business or Board members of the company.
  Company Search
  Enter the first few characters of the company's name or the NSE symbol or BSE code and click 'Go'
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more