For Quick Alerts
ALLOW NOTIFICATIONS  
For Daily Alerts

ಭಾರತದ 10 ಶ್ರೀಮಂತ ನಗರಗಳು ಯಾವುವು ಗೊತ್ತೆ?

ಶ್ರೀಮಂತ ನಗರ ಎಂಬುದನ್ನು ಆಯಾ ನಗರಗಳ ಜಿಡಿಪಿ, ವಾಣಿಜ್ಯ ವ್ಯವಹಾರ, ಬಂಡವಾಳ ಹೂಡಿಕೆ, ಆರ್ಥಿಕ ಅಭಿವೃದ್ಧಿಯ ವೇಗ, ಪ್ರವಾಸೋದ್ಯಮ, ಸಂಸ್ಕೃತಿ ಇತ್ಯಾದಿ ಅಂಶಗಳು ಇದರ ಪ್ರಮುಖ ಸಹಜ ಮಾನದಂಡಗಳಾಗಿರುತ್ತವೆ.

By Siddu
|

ಜಾಗತಿಕವಾಗಿ ಭಾರತ ತುಂಬಾ ವೇಗವಾಗಿ ಬೆಳೆಯುತ್ತಿರುವ ದೇಶ. ಪ್ರತಿಯೊಂದು ಕ್ಷೇತ್ರದಲ್ಲೂ ಮೂಂಚುಣಿಯ ಸ್ಥಾನದಲ್ಲಿ ನಿಲ್ಲುತ್ತಿದ್ದು, ತನ್ನದೇ ಛಾಪನ್ನು ಮೂಡಿಸುತ್ತಿದೆ. ಜಾಗತಿಕ ವೇದಿಕೆಯಲ್ಲಿ, ಆರ್ಥಿಕತೆಯಲ್ಲಿ ಅಮೇರಿಕಾ, ಚೀನಾದಂತಹ ದೇಶಗಳೊಂದಿಗೆ ಸಮರ್ಥವಾಗಿ ಪೈಪೋಟಿಗೆ ಎದುರಾಗಿದೆ. ಇಡೀ ಜಗತ್ತೆ ಭಾರತದೆಡೆಗೆ ನೋಡುತ್ತಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಅನೇಕ ನಗರಗಳು ವಿವಿಧ ಕ್ಷೇತ್ರಗಳಲ್ಲಿ ಶ್ರೀಮಂತಿಕೆಯನ್ನು ಪಡೆದಿವೆ.

 

ಅದೇ ರೀತಿ ಭಾರತದಲ್ಲಿಯೂ ಸಹ ಅನೇಕ ಶ್ರೀಮಂತ ನಗರಗಳು ತನ್ನ ವೈಶಿಷ್ಟ್ಯತೆಯಿಂದಾಗಿ ಮತ್ತು ಹಣದಿಂದಾಗಿ ಜನಪ್ರಿಯತೆ ಗಳಿಸಿವೆ. ಶ್ರೀಮಂತ ನಗರ ಎಂಬುದನ್ನು ಆಯಾ ನಗರಗಳ ಜಿಡಿಪಿ, ವಾಣಿಜ್ಯ ವ್ಯವಹಾರ, ಬಂಡವಾಳ ಹೂಡಿಕೆ, ಆರ್ಥಿಕ ಅಭಿವೃದ್ಧಿಯ ವೇಗ, ಪ್ರವಾಸೋದ್ಯಮ, ಸಂಸ್ಕೃತಿ ಇತ್ಯಾದಿ ಅಂಶಗಳು ಇದರ ಪ್ರಮುಖ ಸಹಜ ಮಾನದಂಡಗಳಾಗಿರುತ್ತವೆ.

ನಮ್ಮ ದೇಶದ ಪ್ರಖ್ಯಾತ ಮತ್ತು ಶ್ರೀಮಂತ ಹತ್ತು ನಗರಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಮುಂಬೈ

ಮುಂಬೈ

209 ಬಿಲಿಯನ್ USD ಜಿಡಿಪಿ ಹೊಂದಿರುವ ನಗರ ಬಾಲಿವುಡ್ ಖ್ಯಾತಿಯ ಮುಂಬೈ. ಇದು ವಾಣಿಜ್ಯ, ಪ್ಯಾಷನ್, ಎಂಟರ್ಟೇನ್ಮೆಂಟ್, ಬಂಡವಾಳ ಹೂಡಿಕೆ ಕ್ಷೇತ್ರದಲ್ಲಿ ಭಾರತದ ಶ್ರೇಷ್ಠ ಮತ್ತು ಪ್ರಖ್ಯಾತ ನಗರ.
ಮುಂಬೈ ಮಹಾರಾಷ್ಟ್ರದ ರಾಜಧಾನಿ ಆಗಿದೆ. ರಾಷ್ಟ್ರದ ಅರ್ಥವ್ಯವಸ್ಥೆಯ 70% ರಷ್ಟು ವ್ಯವಹಾರವನ್ನು ಇದೊಂದೆ ನಿರ್ವಹಿಸುತ್ತದೆ. ಭಾರತಿಯ ಆರ್ಥಿಕತೆಗೆ ಇದು 6% ರಷ್ಟು ಕೊಡುಗೆಯನ್ನು ನೀಡುತ್ತದೆ.
10% ರಷ್ಟು ಪ್ಯಾಕ್ಟರಿ ಉದ್ಯೋಗ, 30% ಐಟಿ ಸಂಗ್ರಹ, 60% ಕಸ್ಟಮ್ ಡ್ಯೂಟಿ ಸಂಗ್ರಹ, 20%ರಷ್ಟು ಕೇಂದ್ರ ಅಬಕಾರಿ ತೆರಿಗೆ ಸಂಗ್ರಹ, 40%ರಷ್ಟು ವಿದೇಶಿ ವ್ಯಾಪಾರ ಸಂಗ್ರಹ, ಮತ್ತು 10 ಬಿಲಿಯನ್ USD ಕಾರ್ಪೊರೇಟ್ ತೆರಿಗೆಯನ್ನು ಸಂಗ್ರಹಿಸುತ್ತದೆ.
ಮುಂಬೈ ಎನ್ಎಸ್ಇ, ಬಿಎಸ್ಇ, ಆರ್ಬಿಐ ಮತ್ತು ಇನ್ನಿತರ ಅನೇಕ ಮಹತ್ವದ ಕಂಪನಿ, ವ್ಯವಹಾರಗಳಿವೆ. ಅಲ್ಲದೆ ಪ್ರಮುಖ ಬಂದರು ನಗರ.
ದೇಶದ ಅತಿ ದೊಡ್ಡ ಕಂಪನಿಗಳಾದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಟಾಟಾ ಗ್ರೂಪ್ ಮತ್ತು ಆದಿತ್ಯ ಬಿರ್ಲಾ ಮುಂಬೈ ಹೊರತು ಪಡಿಸಿ ಜಗತ್ತಿನ ಅನೇಕ ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ದೆಹಲಿ
 

ದೆಹಲಿ

ಭಾರತದ ರಾಜಧಾನಿಯಾದ ದೆಹಲಿ ದೇಶದ ಎರಡನೇ ಶ್ರೀಮಂತ ನಗರಿ ಎಂಬ ಖ್ಯಾತಿ ಹೊಂದಿದೆ. ದೆಹಲಿಯ ಜಿಡಿಪಿ 167 ಬಿಲಿಯನ್ USD ಆಗಿದೆ. ಇದು ಅತಿ ಹೆಚ್ಚಿನ ಸರ್ಕಾರಿ ಉದ್ಯೋಗಿ ಮತ್ತು ಅರೆ ಸರ್ಕಾರಿ ಉದ್ಯೋಗಿಗಳನ್ನು ಹೊಂದಿರುವ ನಗರ. ಚಿಲ್ಲರೆ ಮಾರುಕಟ್ಟೆಯಲ್ಲಿ ಅತ್ಯಂತ ಲಾಭದಾಯಕದಲ್ಲಿರುವ ದೆಹಲಿ ವಿದೇಶಿ ನೇರ ಬಂಡವಾಳ ವನ್ನು ಆಕರ್ಷಿಸುತ್ತದೆ. ದೆಹಲಿಯ ಜಿಡಿಪಿಯಲ್ಲಿ 80% ರಷ್ಟು ಸೇವಾ ವಲಯದ ಕೊಡುಗೆ ಇದೆ. ಮಾಹಿತಿ ತಂತ್ರಜ್ಞಾನ, ಹೋಟೆಲ್ ಉದ್ಯಮ, ಬ್ಯಾಂಕು, ಮಾದ್ಯಮ ಮತ್ತು ಪ್ರವಾಸೋದ್ಯಮ ಸೇವೆಯ ಮತ್ತು ಆದಾಯದ ಮೂಲಗಳಾಗಿವೆ.

ಕೊಲ್ಕತ್ತಾ

ಕೊಲ್ಕತ್ತಾ

ಇದು ಪಶ್ಚಿಮ ಬಂಗಾಳದ ರಾಜಧಾನಿ ಹಾಗೂ ಭಾರತದ ಹಿಂದಿನ ರಾಜಧಾನಿ ಕೇಂದ್ರ. ಇದರ ಜಿಡಿಪಿ ಪ್ರಮಾಣ 150 ಬಿಲಿಯನ್ USD ಆಗಿದೆ. ಪ್ರಮುಖ ಬಂದರು ನಗರ ಹಾಗೂ ಈಶ್ಯಾನ್ಯ ಭಾರತದ ವಾಣಿಜ್ಯ ಕೇಂದ್ರ. ಐಟಿ ಕಂಪನಿ ಮತ್ತು ಬಿಪಿಒ ಸೇರಿದಂತೆ ಅನೇಕ ವ್ಯವಹಾರಗಳ ಆಕರ್ಷಕ ಕೇಂದ್ರವಾಗಿ ಬದಲಾಗುತ್ತಿದೆ. ಐಟಿಸಿ ಲಿಮಿಟೆಡ್, ಅಲಹಾಬಾದ್ ಬ್ಯಾಂಕ್, ಮತ್ತು ಯುಕೊ ಬ್ಯಾಂಕು ಸೇರಿದಂತೆ ಅನೇಕ ಜಾಗತಿಕ ಕಂಪನಿಗಳಿಗೆ ನಿಚ್ಚಿನ ತಾಣವಾಗಿದೆ. ಈ ನಗರದಲ್ಲಿ ಪ್ರಸ್ತುತ ಐಟಿ ವಲಯವು 70% ವೇಗವಾಗಿ ಅಭಿವೃದ್ಧಿಯೆತ್ತ ಸಾಗುತ್ತಿದ್ದು, ಜತೆಗೆ ವಿಶೇಷ ಆರ್ಥಿಕ ವಲಯವು ವೇಗವಾಗಿ ಬೆಳೆಯುತ್ತಿದೆ.

ಬೆಂಗಳೂರು

ಬೆಂಗಳೂರು

ಬೆಂಗಳೂರು ಕರ್ನಾಟಕದ ರಾಜಧಾನಿಯಾಗಿದ್ದು, ಸಿಲಿಕಾನ್ ಸಿಟಿ ಎಂದು ಖ್ಯಾತಿ ಪಡೆದಿದೆ. ಏಕೆಂದರೆ ಅನೇಕ ಐಟಿ ವಲಯದ ಪ್ರಸಿದ್ದ ಕಂಪನಿಗಳಿಗೆ ಜನ್ಮ ನೀಡಿದ ನಗರ ಇದು. ಇದರ ಜಿಡಿಪಿ ಪ್ರಮಾಣ 83 ಬಿಲಿಯನ್ USD ಆಗಿದೆ.
ಉದ್ಯಮಿಗಳ ಆದ್ಯತೆಯ ಮತ್ತು ನೆಚ್ಚಿನ ನಗರಗಳಲ್ಲಿ ಬೆಂಗಳೂರು ಜಗತ್ತಿನಲ್ಲಿ ಮೊದಲ ಹತ್ತು ನಗರಗಳ ಸಾಲಿನಲ್ಲಿ ಸ್ಥಾನ ಪಡೆದಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಏಕೆಂದರೆ ಇದು ನವೊದ್ಯಮಗಳ ನೆಚ್ಚಿನ ತಾಣವಾಗಿದೆ. ದೇಶದಲ್ಲಿ ಶೆ 35ರಷ್ಟು ಐಟಿ ಉದ್ಯೋಗಿಗಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದಿಂದ ವಿದೇಶಕ್ಕೆ ಹೋಗುವ ತಂತ್ರಜ್ಞರಲ್ಲಿ ಹೆಚ್ಚಿನವರು ಬೆಂಗಳೂರಿನವರೆ ಆಗಿದ್ದಾರೆ.
ಭಾರತದಲ್ಲಿ ವಾಯುಯಾನಕ್ಕೆ ಸಂಬಂಧಿಸಿದಂತೆ 65% ವ್ಯಾಪಾರ ಬೆಂಗಳೂರಿನಲ್ಲೆ ನಡೆಸಲಾಗುತ್ತದೆ.
ಬೆಂಗಳೂರಿನಲ್ಲಿ ಆರ್ ಮತ್ತು ಡಿ ಹಾಗೂ ಎಂಜಿನೀಯರಿಂಗ್ ಕೇಂದ್ರಗಳಾದ ಬೋಯಿಂಗ್, ಏರ್ಬಸ್, ಜಿಇ ಏವಿಯೆಷನ್ ಕೇಂದ್ರಗಳಿವೆ. ಜತೆಗೆ ಜಾಗ್ವಾರ್, ಸುಖೋಯ್ 30 ನಂತಹ ಪ್ರಸಿದ್ದ ವಿಮಾನಗಳನ್ನು ತಯಾರಿಸುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಬೆಂಗಳೂರಿನಲ್ಲಿದೆ. ರೇಷ್ಮೆ ಉದ್ಯಮದ 35ಬಿಲಿಯನ್ ನಷ್ಟು ಕೆಲಸ ಬೆಂಗಳೂರಿನಿಂದಲೇ ನಡೆಯುತ್ತದೆ.

ಹೈದರಾಬಾದ್

ಹೈದರಾಬಾದ್

ದೇಶದ ಮುತ್ತುಗಳ ನಗರ ಎಂದು ಪ್ರಸಿದ್ದಿ ಪಡೆದಿರುವ ಹೈದರಾಬಾದ್ 74 ಬಿಲಿಯನ್ USD ಜಿಡಿಪಿಯನ್ನು ಹೊಂದಿದೆ. ಹೈದರಾಬಾದ್ ಮತ್ತು ಅದರ ಉಪನಗರಗಳು ಭಾರತದಲ್ಲಿ ಹೆಚ್ಚಿನ ವಿಶೇಷ ಆರ್ಥಿಕ ವಲಯಗಳನ್ನು ಹೊಂದಿದೆ. ಲನಲಿ ಪ್ಲಾನೇಟ್ ದರ್ಜೆಯ ಪ್ರಕಾರ ಹೈದರಾಬಾದ್ ಪ್ರವಾಸೋದ್ಯಮಲ್ಲಿ ವಿಶ್ಚದಲ್ಲೆ 3ನೇ ಅತ್ಯುತ್ತಮ ನಗರ ಎಂಬ ದರ್ಜೆ ಪಡೆದಿದೆ.
ಭಾರತದ ಜಿನೋಮ್ ವ್ಯಾಲಿ ಎಂದು ಪರಿಚಿತವಾಗಿದ್ದು, ಹೊಸದಾಗಿ ರೂಪಗೊಂಡ ತೆಲಂಗಾಣ ರಾಜಧಾನಿ ವಿಶ್ವದ ಔಷದಿಯ ಉದ್ಯಮ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಪ್ರಮುಖ ಐಟಿ ನಗರ ಆಗಿರುವ ಹೈದರಾಬಾದ್ ಗೂಗಲ್, ಅಮೆಜಾನ್, ಐಬಿಎಮ್ ಹಾಗೂ ವಿವಿಧ ಅಂತರ್ರಾಷ್ತ್ರೀಯ ಕಂಪನಿಗಳು ಕಚೇರಿಗಳನ್ನು ಹೊಂದಿವೆ.

ಚೆನ್ನೈ

ಚೆನ್ನೈ

ಚೆನ್ನೈ ತಮಿಳುನಾಡಿನ ರಾಜಧಾನಿಯಾಗಿದ್ದು, ದಕ್ಷಿಣ ಭಾರತದ ಬಂದರು ನಗರವಾಗಿದೆ. ಈ ನಗರ 66 ಬಿಲಿಯನ್ USD ಜಿಡಿಪಿಯನ್ನು ಹೊಂದಿದೆ.
ಅಟೋಮೊಬೈಲ್ಸ್, ವಾಹನಗಳು, ತಂತ್ರಾಂಶ ಸೇವೆಗಳು, ವೈದ್ಯಕೀಯ ಪ್ರವಾಸೋದ್ಯಮ, ಯಂತ್ರಾಂಶ ಉತ್ಪಾದನೆ ಮತ್ತು ಆರ್ಥಿಕ/ಹಣಕಾಸು ಸೇವೆಗಳು ಇವು ಚೆನ್ನೈ ನಲ್ಲಿ ಏಳಿಗೆಯಲ್ಲಿರುವ ಉದ್ಯಮಗಳಾಗಿವೆ. ಇದು ಐಟಿ ಸಂಬಂಧಿತ ಸೇವೆಗಳ ಎರಡನೇ ಅತಿದೊಡ್ಡ ರಪ್ತುದಾರನಾಗಿದೆ. ಭಾರತದ ಅತಿದೊಡ್ಡ ಇಲೆಕ್ಟ್ರಾನಿಕ್ ರಪ್ತುದಾರ ಕೇಂದ್ರವಾಗಿದ್ದು, ಒಟ್ಟು 50% ರಪ್ತು ಮಾಡುತ್ತದೆ. ಫೋರ್ಡ್, ನಿಸ್ಸಾನ್, ಬಿಎಂಡಬ್ಯ್ಲು ಮುಂತಾದ ಕಂಪನಿಗಳ ಕಚೇರಿಗಳು ಚೆನ್ನೈ ನಲ್ಲಿವೆ.

ಅಹಮ್ಮದಾಬಾದ್

ಅಹಮ್ಮದಾಬಾದ್

ಅಹಮ್ಮದಾಬಾದ್ ಗುಜರಾತಿನ ಶಕ್ತಿಶಾಲಿ ನಗರ ಎಂದು ಕರೆಯಲ್ಪಟ್ಟಿದೆ. 64 ಬಿಲಿಯನ್ USD ಜಿಡಿಪಿ ಪ್ರಮಾಣವನ್ನು ಹೊಂದಿದೆ.

ಅದಾನಿ ಗ್ರೂಪ್, ನಿರ್ಮಾ, ಅರವಿಂದ ಮಿಲ್ಸ್, ಕ್ಯಾಡಿಲಾ, ಮತ್ತು ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ ಇಂತಹ ಅನೇಕ ಅಂತರ್ರಾಷ್ಟ್ರೀಯ ಕಂಪನಿಗಳು ಈ ನಗರದಲ್ಲಿವೆ. 

ಅಹಮ್ಮದಾಬಾದ್ ಡೆನಿಮ್, ರತ್ನಗಳು ಮತ್ತು ಆಭರಣಗಳನ್ನು ರಪ್ತು ಮಾಡುವ ಅತಿದೊಡ್ಡ ನಗರವಾಗಿದೆ. ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಹಮ್ಮದಾಬಾದ್ ತುಂಬಾ ವೇಗವಾಗಿ ಪಶ್ಚಿಮ ವಲಯದ ಆರ್ಥಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ.

 

ಪುಣೆ

ಪುಣೆ

ಪುಣೆ ಮಹಾರಾಷ್ಟ್ರದ ಎರಡನೇ ಅತಿದೊಡ್ಡ ನಗರವಾಗಿದೆ. ಇದು 48 ಬಿಲಿಯನ್ USD ಜಿಡಿಪಿ ಪ್ರಮಾಣವನ್ನು ಹೊಂದಿದೆ. ಕಳೆದ ಒಂದು ದಶಕದಿಂದ ಇಲ್ಲಿ ಅನೇಕ ಐಟಿ ಮತ್ತು ಆಟೋಮೊಬೈಲ್ ಕಚೇರಿಗಳು ಹಠಾತ್ ಆಗಿ ಏರಿಕೆ ಕಂಡಿರುವುದರಿಂದ ತುಂಬಾ ಪ್ರಸಿದ್ದಿ ಪಡೆದಿದೆ.
ಪುಣೆಯಲ್ಲಿ ಆಹಾರ ಮತ್ತು ತರಕಾರಿ ಸಂಸ್ಕರಣೆ ಘಟಕ ಸ್ಥಾಪಿಸಲು ವಿಶ್ವ ಬ್ಯಾಂಕ್ ಹೂಡಿಕೆ ಮಾಡುತ್ತಿದೆ.
250ಕ್ಕಿಂತಲೂ ಹೆಚ್ಚಿನ ಜರ್ಮನಿ ಕಂಪನಿಗಳು ಪುಣೆಯಲ್ಲಿ ತಮ್ಮ ಕಚೇರಿಗಳನ್ನು ತೆರೆಯುತ್ತಿವೆ.

ಸೂರತ್

ಸೂರತ್

ಇದು ಗುಜರಾತಿನ ಇನ್ನೊಂದು ಪ್ರಮುಖ ನಗರವಾಗಿದೆ. 40 ಬಿಲಿಯನ್ USD ಜಿಡಿಪಿ ಇದೆಯೆಂದು ಅಂದಾಜಿಸಲಾಗಿದೆ.
ಸಿಟಿ ಮೇಯರ್ ಫೌಂಡೇಷನ್ ಅನುಸಾರ 2020ರಲ್ಲಿ ಜಿಡಿಪಿ ಪ್ರಮಾಣ 57 ಬಿಲಿಯನ್ USD ಆಗಲಿದೆ ಎಂದು ಅಂದಾಜಿಸಲಾಗಿದೆ.
ಸೂರತ್ ನಗರವನ್ನು ಜಗತ್ತಿನ ಡೈಮಂಡ್ ಹಬ್ ಎಂದು ಕರೆಯಲಾಗುತ್ತದೆ. ವಿಶ್ವದ ಒಟ್ಟು 90%ರಷ್ಟು ಕಚ್ಚಾ ವಜ್ರಗಳನ್ನು ಇಲ್ಲಿ ಕತ್ತರಿಸಿ ಪಾಲಿಶ್ ಮಾಡಲಾಗುತ್ತದೆ. ಇದು ಭಾರತದ ಶೇ. 99.9 ಆಗಿದೆ. ಭಾರತದಿಂದ ರಪ್ತಾಗುವ ಶೇ 90ರಷ್ಟು ವಜ್ರಗಳು ಸೂರತ್ ನಿಂದ ಹೋಗುತ್ತವೆ. ಜವಳಿ ಉದ್ಯಮದ ಹೆಚ್ಚಿನ ಪಾಲು ಈ ನಗರಕ್ಕೆ ಸೇರುತ್ತದೆ.

ವಿಶಾಖಪಟ್ಟಣ

ವಿಶಾಖಪಟ್ಟಣ

ವಿಶಾಖಪಟ್ಟಣ ವಿಜಾಗ್ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಈ ಬಂದರು ನಗರದ ಜಿಡಿಪಿ 36 ಬಿಲಿಯನ್ USD ಆಗಿದೆ. ಇದು ದೇಶದ ಅತ್ಯಂತ ಹಳೆಯ ನೌಕಾಂಗಣ ಮತ್ತು ದೊಡ್ಡ ಬಂದರು ಆಗಿದೆ. ಆಂದ್ರಪ್ರದೇಶದ ಹಳೆಯ ನಗರವಾದ ವಿಶಾಖಪಟ್ಟಣದಲ್ಲಿ ಗೈಲ್, ವಿಹಾಗ್ ಸ್ಟೀಲ್ ಮತ್ತು ಹಿಂದುಸ್ತಾನ ಸ್ಟೀಲ್ ಇತ್ಯಾದಿ ಪ್ರಮುಖ ಕಂಪನಿಗಳು ಇವೆ.
ವಿಶಾಖಪಟ್ಟಣದ ನಿವಾಸಿಗಳು ಮೀನುಗಾರಿಕೆ ಮೂಲಕ ಜೀವನ ಸಾಗಿಸುತಿದ್ದು, ಒಣಗಿದ ಮೀನುಗಳು ಇಲ್ಲಿಂದ ಹೆಚ್ಚಿನ ಪ್ರಮಾಣದಲ್ಲಿ ರಪ್ತಾಗುತ್ತವೆ. ಅಲ್ಲದೆ ಅನೇಕ ಕೈಗಾರಿಕೆಗಳು ಇಲ್ಲಿ ನೆಲೆಯೂರುತ್ತಿದ್ದು ಐಟಿ ಕೇಂದ್ರವಾಗಿ ಮಾರ್ಪಡುತ್ತಿದೆ.

English summary

Top 10 richest cities in india

India is fastest growing country in the international level.On an international scale, we know India as the second largest country in terms of population, falling right behind China with 1.2 billion people.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X