For Quick Alerts
ALLOW NOTIFICATIONS  
For Daily Alerts

2020: ಭಾರತದಲ್ಲಿ 730 ಮಿಲಿಯನ್ ಅಂತರ್ಜಾಲ ಬಳಕೆದಾರರು!

By Siddu
|

ನಮ್ಮ ದೇಶದಲ್ಲಿ ಅಂತರ್ಜಾಲ ಬಳಕೆ ಈಗ ಜೀವನದ ಅವಿಭಾಜ್ಯ ಅಂಗವಾಗಿ ಮತ್ತು ಮೂಲಭೂತ ಅವಶ್ಯಕತೆಯಾಗಿ ಮಾರ್ಪಡುತ್ತಿದೆ. ದಿನನಿತ್ಯ ಅಂತರ್ಜಾಲ ಬಳಕೆದಾರರ ಸಂಖ್ಯೆ ವೇಗವಾಗಿ ದ್ವಿಗುಣಗೊಳ್ಳುತ್ತಲೇ ಇದೆ. 2020ರ ವೇಳೆಗೆ ಭಾರತದಲ್ಲಿ 730 ಮಿಲಿಯನ್ ಅಂತರ್ಜಾಲ ಬಳಕೆದಾರರ ಗಡಿ ದಾಟಲಿದೆ ಎಂದು ವರದಿ ಆಗಿದೆ.

 

ಜಾಗತಿಕ ಬಳಕೆದಾರರು

ಜಾಗತಿಕ ಬಳಕೆದಾರರು

2020ರ ವೇಳೆಗೆ ಜಾಗತಿಕವಾಗಿ ಅಂತರ್ಜಾಲ ಬಳಕೆದಾರರ ಸಂಖ್ಯೆ 4,170 ಮಿಲಿಯನ್ ದಾಟಬಹುದು ಎಂದು ನಿರೀಕ್ಷಿಸಿಲಾಗಿದೆ.

ಅಂತರ್ಜಾಲದ ಯಶಶ್ವಿ ಛಾಪು

ಅಂತರ್ಜಾಲದ ಯಶಶ್ವಿ ಛಾಪು

ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಬೇಡಿಕೆಗಳನ್ನು ಪರಿಹರಿಸಲು, ಪರಿಹಾರಗಳನ್ನು ಕಂಡುಕೊಳ್ಳಲು ಅಂತರ್ಜಾಲ ಯಶಶ್ವಿಯಾಗಿ ತನ್ನ ಛಾಪನ್ನು ಮೂಡಿಸಿದ್ದು, ಪ್ರಬಲವಾದ ಪರಿಸರವನ್ನು ಸೃಷ್ಟಿ ಮಾಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ

ಅಂತರ್ಜಾಲ ಬಳಕೆಯಲ್ಲಿ ಭಾರತ 2ನೇ ಸ್ಥಾನ

ಅಂತರ್ಜಾಲ ಬಳಕೆಯಲ್ಲಿ ಭಾರತ 2ನೇ ಸ್ಥಾನ

ಅಂತರ್ಜಾಲ ಬಳಕೆಯಲ್ಲಿ ಚೀನಾದ ನಂತರದ ಎರಡನೇ ಸ್ಥಾನದಲ್ಲಿ ಭಾರತ ಇದೆ. ಭಾರತದ ಅಂತರ್ಜಾಲ ಬಳಕೆ ಅಮೆರಿಕಾಗಿಂತಲೂ ಹೆಚ್ಚಿದ್ದು, ಈಗಾಗಲೇ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ.

ನಾಸ್ಕಾಮ್ ಹೇಳಿಕೆ
 

ನಾಸ್ಕಾಮ್ ಹೇಳಿಕೆ

ಇಂದಿನ ಯುಗದ ಸಾಮಾಜಿಕ ಸಂವಹನ, ಕೆಲಸದ ಶೈಲಿ, ಸಾಮಾನ್ಯ ಜೀವನದಲ್ಲಿ ಭಂಗಾಕಾರನಾಗಿ ಇಂಟರ್ನೆಟ್ ಕಾರ್ಯನಿರ್ವಹಿಸುತ್ತಿದೆ ಎಂದು ನಾಸ್ಕಾಮ್ ಅಧ್ಯಕ್ಷ ಆರ್ ಚಂದ್ರಶೇಖರ ಹೇಳಿದ್ದಾರೆ.

ಸ್ಥಳೀಯ ಭಾಷೆಗಳ ಪ್ರಾಬಲ್ಯ

ಸ್ಥಳೀಯ ಭಾಷೆಗಳ ಪ್ರಾಬಲ್ಯ

ಶೇ. 70ರಷ್ಟು ಇ-ಕಾಮರ್ಸ್ ವ್ಯವಹಾರ ಮೊಬೈಲ್ ಫೋನ್ ಮೂಲಕ ನಡೆಯುತ್ತಿದೆ. ಶೇ. 75ರಷ್ಟು ಹೊಸ ಇಂಟರ್ನೆಟ್ ಬಳಕೆದಾರರು ಭಾರತದ ಸ್ಥಳೀಯ ಭಾಷೆಗಳಲ್ಲಿ ಡೆಟಾವನ್ನು ಉಪಯೋಗಿಸುತ್ತಿದ್ದಾರೆ ಎಂದು ವರದಿ ಆಗಿದೆ.

ವ್ಯಾಪಕ ಜಾಲ

ವ್ಯಾಪಕ ಜಾಲ

ಸಾರ್ವಜನಿಕ ವಲಯ, ಸಾರಿಗೆ, ಮಾದ್ಯಮ, ಆತಿಥ್ಯ, ಇ-ಕಾಮರ್ಸ್, ಹಣಕಾಸು ತಂತ್ರಜ್ಞಾನ ಮತ್ತು ಇತರೆ ಕ್ಷೇತ್ರಗಳಲ್ಲಿ ಅಂತರ್ಜಾಲ ಬಳಕೆ ಗಣನೀಯವಾಗಿ ಹೆಚ್ಚಲಿದೆ ಎಂದು ವರದಿ ಬಹಿರಂಗ ಪಡಿಸಿದೆ.

English summary

India to have 730 Million Internet Users by 2020

There will be 730 million internet users in India by 2020 and the usage will grow in verticals such as hospitality, e-Commerce and financial technologies, among others, a new report revealed on Wednesday. “Globally, the number of internet users is expected to touch 4,170 million by 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X