ರಾಜ್ಯಗಳ ನಷ್ಟ ಭರ್ತಿಗೆ ಜಿಎಸ್ಟಿ ಮಂಡಳಿ ಒಮ್ಮತ

ಮುಂದಿನ ವರ್ಷದಿಂದ ಜಿಎಸ್ಟಿ ಮಸೂದೆ ಜಾರಿಗೆ ಬರುವುದರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಮಂಡಳಿ ರಾಜ್ಯಗಳಿಗೆ ಶೇ. 14ರಷ್ಟು ನಷ್ಟ ಭರ್ತಿ ಮಾಡಿಕೊಡಲು ನಿರ್ಧರಿಸಿದೆ ಎಂದು ಸಚಿವ ಅರುಣ್‌ ಜೇಟ್ಲಿ ತಿಳಿಸಿದರು.

ಮುಂದಿನ ವರ್ಷದಿಂದ ಜಿಎಸ್ಟಿ ಮಸೂದೆ ಜಾರಿಗೆ ಬರುವುದರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಮಂಡಳಿ ರಾಜ್ಯಗಳಿಗೆ ಶೇ. 14ರಷ್ಟು ನಷ್ಟ ಭರ್ತಿ ಮಾಡಿಕೊಡಲು ನಿರ್ಧರಿಸಿದೆ ಎಂದು ಸಚಿವ ಅರುಣ್‌ ಜೇಟ್ಲಿ ತಿಳಿಸಿದರು.

ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಮಂಡಳಿಯ ಮೂರು ದಿನಗಳ ಸಭೆ ಮಂಗಳವಾರದಿಂದ ಪ್ರಾರಂಭವಾಗಿದೆ. ಈ ಸಭೆಯಲ್ಲಿ ಜಿಎಸ್ಟಿ ದರಗಳ ಬಗ್ಗೆಯೂ ಚರ್ಚಿಸಲಾಗಿದ್ದು, ಶೇಕಡ 6, 12, 18 ಮತ್ತು 26ರಷ್ಟು ದರ ನಿಗದಿ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಆದರೆ, ದರದ ನಿಗದಿ ಬಗ್ಗೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ.

ರಾಜ್ಯಗಳ ನಷ್ಟ ಭರ್ತಿಗೆ ಜಿಎಸ್ಟಿ ಮಂಡಳಿ ಒಮ್ಮತ

ರಾಜ್ಯಗಳ ನಷ್ಟ ಭರ್ತಿಗೆ ಒಮ್ಮತ
2017ರ ಏಪ್ರಿಲ್‌ ತಿಂಗಳಿನಿಂದ ದೇಶದಾದ್ಯಂತ ಜಿಎಸ್ಟಿ ವ್ಯವಸ್ಥೆ ಜಾರಿಯಾಗುವುದರಿಂದ ರಾಜ್ಯಗಳಿಗೆ ಆಗಬಹುದಾದ ನಷ್ಟ ಭರ್ತಿ ಮಾಡುವ ಬಗ್ಗೆ ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿದೆ. ರಾಜ್ಯಗಳ ನಷ್ಟದ ಪ್ರಮಾಣವನ್ನು ನಿಗದಿಪಡಿಸಲು 2015-16ನೆ ವರ್ಷವನ್ನು ಮೂಲ ವರ್ಷವನ್ನಾಗಿ ಪರಿಗಣಿಸಲು ಚಿಂತಿಸಲಾಗಿದೆ.

ದಿನನಿತ್ಯದ ಅವಶ್ಯಕ ಸರಕುಗಳಿಗೆ ಕಡಿಮೆ ದರ, ಐಷಾರಾಮಿ ಸರಕು ಮತ್ತು ತಂಬಾಕು ಉತ್ಪನ್ನಗಳಿಗೆ ದುಬಾರಿ ದರ ವಿಧಿಸಲಾಗುವುದು. ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ಸಾಮಾನ್ಯ ಬಳಕೆಯ ಶೇ 50ರಷ್ಟು ಸರಕುಗಳಿಗೆ ತೆರಿಗೆ ವಿನಾಯ್ತಿ ನೀಡುವ ಬಗ್ಗೆ ಚರ್ಚಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+