For Quick Alerts
ALLOW NOTIFICATIONS  
For Daily Alerts

ಟಾಟಾ ಗ್ರೂಪ್ ಮುಂದಿನ ಅಧ್ಯಕ್ಷ ಹುದ್ದೆ ಯಾರಿಗೆ?

ಭಾರತೀಯ ಕಾರ್ಪೊರೇಟ್ ರಂಗದ ದಿಗ್ಗಜ ಉದ್ಯಮ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ವಜಾ ನಂತರ ಮುಂದಿನ ಅಧ್ಯಕ್ಷ ಯಾರಾಗಬಹುದು ಎಂಬ ಚರ್ಚೆ ಹಾಗೂ ಊಹೆಗಳು ತುಂಬಾ ಜೋರಾಗಿ ನಡೆದಿವೆ.

By Siddu
|

ಭಾರತೀಯ ಕಾರ್ಪೊರೇಟ್ ರಂಗದ ದಿಗ್ಗಜ ಉದ್ಯಮ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ವಜಾ ನಂತರ ಮುಂದಿನ ಅಧ್ಯಕ್ಷ ಯಾರಾಗಬಹುದು ಎಂಬ ಚರ್ಚೆ ಹಾಗೂ ಊಹೆಗಳು ತುಂಬಾ ಜೋರಾಗಿ ನಡೆದಿವೆ.

ಜಾಗತಿಕ ದೈತ್ಯ ಕಂಪನಿ ಟಾಟಾ ಗ್ರೂಪ್ ಮುನ್ನಡೆಸಲು ಎಂತಹ ನಾಯಕ ಬೇಕು ಎಂಬುದನ್ನು ಪ್ರತಿಯೊಬ್ಬರೂ ಊಹಿಸಬಲ್ಲರು. ಅವರಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯ ಜ್ಞಾನ, ಟಾಟಾ ಸಮೂಹದ ತತ್ವಗಳನ್ನು ಅರಿಯುವ ಸಾಮರ್ಥ್ಯ ಹಾಗೂ ಹೆಚ್ಚಿನ ಸಮಗ್ರತೆ, ಸಮರ್ಪಣೆ ಇವೆಲ್ಲವೂ ಅಗತ್ಯವಾಗಿ ಇರಬೇಕಾಗುತ್ತದೆ.

ಏಕೆಂದರೆ ಟಾಟಾ ಸಮೂಹ ಜಗತ್ತಿನಾದ್ಯಂತ ತನ್ನ ವ್ಯಾಪಕ ಜಾಲವನ್ನು ಹೊಂದಿದ್ದು, ಜಾಗ್ವಾರ್ ಲ್ಯಾಂಡ್ರೋವರ್ ಅಪರೇಷನ್ಸ್ ಮತ್ತು ಯೂರೋಪಿನ ಕೋರಸ್ ನಂತಹ ಪ್ರಸಿದ್ದ ಕಂಪನಿಗಳೊಂದಿಗೆ ಗಮನಾರ್ಹ ಉಪಸ್ಥಿತಿ ಹೊಂದಿದೆ. ಟಾಟಾ ಗ್ರೂಪ್ ಅಧ್ಯಕ್ಷ ಸೈರಸ್ ಮಿಸ್ತ್ರಿ ವಜಾ, ರತನ್ ಟಾಟಾ ಹಂಗಾಮಿ ಅಧ್ಯಕ್ಷ! ಕಾರಣಗಳೇನು?

1. ಸ್ಪರ್ಧೆಯಲ್ಲಿರುವ ಆಕಾಂಕ್ಷಿಗಳು ಯಾರು?

1. ಸ್ಪರ್ಧೆಯಲ್ಲಿರುವ ಆಕಾಂಕ್ಷಿಗಳು ಯಾರು?

ರತನ್ ಟಾಟಾ ಅವರಿಂದ ಸೈರಸ್ ಮಿಸ್ತ್ರಿಯನ್ನು ಬದಲಾಯಿಸಲಾಗಿದೆ ಎಂದು ಕೈಗಾರಿಕೋದ್ಯಮಿ ಹರ್ಷ ಗೋಯಂಕ್ ಮೊದಲಿನಂದಲೂ ಟ್ವೀಟ್ ಮಾಡುತ್ತಲೇ ಇದ್ದಾರೆ. ಅವರ ಇತ್ತೀಚಿನ ಟ್ವೀಟ್ ಪ್ರಕಾರ ಎನ್. ಚಂದ್ರಶೇಖರನ್, ರವಿ ವೆಂಕಟೇಶನ್, ಸಂಜಯ್ ಝಾ, ಶಂತನು ನಾರಾಯಣ್ ಮತ್ತು ನಂದನ್ ನಿಲೇಖಣಿ ಮುಂತಾದವರು ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ. ಜತೆಗೆ ಅಂತರಾಷ್ಟ್ರೀಯ ಮಾನ್ಯತೆ ಹೊಂದಿರುವ ಮಾಸ್ಟರ್ ಕಾರ್ಡ್ ಅಧ್ಯಕ್ಷ ಹಾಗೂ ಸಿಇಒ ಅಜಯ್ ಬಂಗಾ ಹಾಗೂ ಫೆಪ್ಸಿಕೋ ಸಿಇಒ ಇಂದ್ರಾ ನೂಯಿ ಕೂಡ ಸ್ಪರ್ಧೆಯಲ್ಲಿದ್ದಾರೆ.ಆದರೆ ಇಂದ್ರ ನೂಯಿ, ನೊಯಲ್ ಟಾಟಾ ಮತ್ತು ಎನ್ ಚಂದ್ರಶೇಖರನ್ ಈ ಮೂರು ಅಭ್ಯರ್ಥಿಗಳು ತೀವ್ರ ಸ್ಪರ್ಧೆಯಲ್ಲಿದ್ದಾರೆ ಎಂದು ಎಲ್ಲರೂ ವರದಿ ಮಾಡುತಿದ್ದಾರೆ.

ಟಾಟಾ ಸನ್ಸ್ ಅಧ್ಯಕ್ಷ ಗಾದಿಗೆ ತೀವ್ರ ಸ್ಪರ್ಧೆಯಲ್ಲಿರುವ ಈ ಆಕಾಂಕ್ಷಿಗಳ ಸಾಮರ್ಥ್ಯ ಹಾಗೂ ಕುಂದುಕೊರತೆಗಳು ಏನು ಎಂಬುದನ್ನು ನೋಡೋಣ...

 

ಎನ್ ಚಂದ್ರಶೇಖರನ್

ಎನ್ ಚಂದ್ರಶೇಖರನ್

ಎನ್ ಚಂದ್ರಶೇಖರನ್ ಟಿಸಿಎಸ್ ಸಿಇಒ ಆಗಿದ್ದು, ಅನೇಕ ಕಾರಣಗಳಿಂದ ಅಧ್ಯಕ್ಷ ಗಾದಿಗೆ ನೆಚ್ಚಿನ ವ್ಯಕ್ತಿಯೆನಿಸಿದ್ದಾರೆ. ಅತ್ಯಂತ ಲಾಭದಾಯಕ ಕಂಪನಿಯೆನಿಸಿರುವ ಟಿಸಿಎಸ್ ನ ಮುಖ್ಯಸ್ಥರಾಗಿರುವ ಇವರು ಇನ್ನು ಯಂಗ್ ಆಗಿದ್ದು, ಹೆಚ್ಚಿನ ಸಮಗ್ರತೆಯನ್ನು ತರಬಲ್ಲ ಮನುಷ್ಯ. ಕಳೆದ ಅನೇಕ ವರ್ಷಗಳಿಂದ ಟಿಸಿಎಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಟಾಟಾ ಗ್ರೂಪ್ ಚೆನ್ನಾಗಿ ಬಲ್ಲರು. ಆದರೆ ಹಿಂದೆಂದಿಗಿಂತಲೂ ಟಿಸಿಎಸ್ ಚುಕ್ಕಾಣಿಯನ್ನು ಮುನ್ನಡೆಸಲು ಎನ್ ಚಂದ್ರಶೇಖರನ್ ಅಗತ್ಯತೆ ಟಿಸಿಎಸ್ ಗೆ ಇದೆ ಎನ್ನುವುದೇ ಒಂದು ಸಮಸ್ಯೆ. ಟಿಸಿಎಸ್ ತ್ರೈಮಾಸಿಕ ಫಲಿತಾಂಶ ಪ್ರಕಟಿಸುವುತ್ತಿರುವುದರಿಂದ ಇದು ಸವಾಲಿನ ಕೆಲಸವಾಗಿದೆ.

ಇಂದ್ರಾ ನೂಯಿ

ಇಂದ್ರಾ ನೂಯಿ

ಪೆಪ್ಸಿಕೋ ಸಿಇಒ ಆಗಿರುವ ಇಂದ್ರಾ ನೂಯಿ ಅಗ್ರ ಸ್ಥಾನದಲ್ಲಿದ್ದಾರೆ. ಜಗತ್ತಿನ ಎರಡನೇ ಅತಿದೊಡ್ಡ ಆಹಾರ ಮತ್ತು ಪಾನೀಯ ಕಂಪನಿ ಎಂಬ ಖ್ಯಾತಿ ಹೊಂದಿರುವುದರಿಂದ ಇವರ ಆಯ್ಕೆ ಪ್ರಮುಖವಾಗಿದೆ. ಅಲ್ಲದೆ ಸಾಕಷ್ಟು ಅಂತರಾಷ್ಟ್ರೀಯ ಅನುಭವವನ್ನು ಹೊಂದಿದ್ದಾರೆ.
ಇಂದ್ರಾ ನೂಯಿ ಅಂತರಾಷ್ಟ್ರೀಯ ಕಾರ್ಯಚರಣೆ ಹಾಗೂ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಅದಾಗ್ಯೂ, ಟಾಟಾ ಗ್ರೂಪ್ ಅತ್ಯಂತ ಭಿನ್ನವಾಗಿದ್ದು, ಉಕ್ಕಿನಿಂದ ಉಪ್ಪಿನವರೆಗೆ ಎಲ್ಲವನ್ನು ಮಾಡುತ್ತದೆ.

ನೊಯಲ್ ಟಾಟಾ

ನೊಯಲ್ ಟಾಟಾ

ನೊಯಲ್ ಟಾಟಾ ಅವರು ನಾವಲ್ ಮತ್ತು ಸಿಮೋನೆ ಟಾಟಾ ಅವರ ಪುತ್ರ. ಇವರು ಟ್ರೆಂಟ್ ಮ್ಯಾನೆಜಿಂಗ್ ಡೈರೆಕ್ಟರ್ ಆಫ್ ಟಾಟಾ ಇಂಟರ್ನ್ಯಾಷನಲ್ ಅಧ್ಯಕ್ಷರಾಗಿದ್ದಾರೆ. ಟಾಟಾ ಕುಟುಂಬದವರೆಂಬುದು ದೊಡ್ಡ ಪಾಸಿಟಿವ್ ಅಂಶ ಆಗಬಹುದು. ಆದರೂ ಟಾಟಾ ಸಮೂಹವನ್ನು ನಿರ್ವಹಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಅಂತರಾಷ್ಟ್ರೀಯ ಕಾರ್ಯಾಚರಣೆ, ಪ್ರಧಾನವಾಗಿ ಮರುನಿರ್ಮಾಣ ಮತ್ತು ಟಾಟಾ ಸ್ಟೀಲ್ ಮಾರಾಟ ತುಂಬಾ ಕ್ಲಿಷ್ಟಕರವಾಗಿದೆ.

ನಂದನ್ ನಿಲೇಕಣಿ

ನಂದನ್ ನಿಲೇಕಣಿ

ನಂದನ್ ನಿಲೇಕಣಿ ಅವರ ಹೆಸರೂ ಕೂಡ ಕೇಳಿ ಬರುತ್ತಿದ್ದು, ಮುಂಚೂಣಿಯಲ್ಲಿರುವ ಸ್ಪರ್ಧಿ ಎಂದು ನಿರ್ಣಯಿಸಲಾಗುವುದಿಲ್ಲ. ನಂದನ್ ನಿಲೇಕಣಿ ಇನ್ಫೋಸಿಸ್ ಸಹಸಂಸ್ಥಾಪಕರಲ್ಲಿ ಒಬ್ಬರು. ಬೇರೆಯವರಿಗೆ ಹೋಲಿಸಿದರೆ ನಂದನ್ ನಿಲೇಕಣಿ ಅವರ ಅನಾನುಕೂಲವೆಂದರೆ ಯಾವುದೇ ವೈವಿದ್ಯಮಯ ಅಂತರಾಷ್ಟ್ರೀಯ ಅನುಭವ ಹೊಂದದೆ ಇರುವುದು. ಟಾಟಾ ಸ್ವಾಧೀನ ಪಡಿಸಿಕೊಂಡ ಕೋರಸ್ ನಂತಹ ಬೃಹತ್ ಕಂಪನಿಗಳನ್ನು ಸಂಬಾಳಿಸಲು ನಿರ್ವಹಣಾ ಪರಿಣಿತಿ ಮತ್ತು ಆರ್ಥಿಕ ಕುಶಾಗ್ರಮತಿಯಂತಹ ಅಂಶಗಳು ಬೇಕಾಗುತ್ತವೆ.

English summary

Who Will Be The Next Chairman Of Tata Group?

Assuming the battle does not get ugly and ends-up in Court, let us see the likely potential candidates, who could become the next Chairman of Tata Sons, after the board replaced Cyrus Mistry with an interim Chairman.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X