For Quick Alerts
ALLOW NOTIFICATIONS  
For Daily Alerts

ನೋಟು ರದ್ದು ಮಾಡಿದ ಹೆಚ್ಚಿನ ದೇಶಗಳು ವಿಫಲ?

By Siddu
|

ಭಾರತ ರೂ. 500, 1000 ನೋಟುಗಳನ್ನು ರದ್ದು ಮಾಡಿ ಹೊಸ ಮುಖಬೆಲೆಯ ನೋಟುಗಳ ಚಲಾವಣೆಗೆ ಮುನ್ನುಡಿ ಬರೆದು ಯಶಸ್ಸಿನ ಹಾದಿಯಲ್ಲಿ ಸಾಗಿದೆ.

ನೋಟುಗಳ ನಿಷೇಧ ಇದೇ ಮೊದಲೇನಲ್ಲ. ಹಲವು ದೇಶಗಳಲ್ಲಿ ನೋಟು ರದ್ದತಿ ಪ್ರಯತ್ನಗಳು ಹಿಂದೆಯೇ ನಡೆದಿವೆ. ಆದರೆ ಹೆಚ್ಚಿನ ದೇಶಗಳು ಸೋಲನ್ನು ಅನುಭವಿಸಿವೆ ಎಂಬುದು ಗಮನಾರ್ಹ ಸಂಗತಿ.

ಭಾರತ ಹಳೆ ನೋಟುಗಳನ್ನು ನಿಷೇಧಿಸಿ ಹೊಸ ನೋಟುಗಳ ಚಲಾವಣೆಯಂತಹ ಆರ್ಥಿಕ ಕ್ರಾಂತಿಗೆ ಮುನ್ನುಡಿ ಬರೆದಿರುವ ಈ ಸಂದರ್ಭದಲ್ಲಿ ನೋಟುಗಳನ್ನು ರದ್ದು ಮಾಡಿದ ದೇಶಗಳನ್ನು ಮೇಲುಕು ಹಾಕುವುದು ಪ್ರಸ್ತುತ ಎನಿಸುತ್ತಿದೆ.

ಭಾರತಕ್ಕೂ ಮೊದಲು ಅನಾಣ್ಯೀಕರಣಕ್ಕೆ ಪ್ರಯತ್ನಿಸಿದ 9 ದೇಶಗಳ ಸಂಕ್ಷಿಪ್ತ ನೋಟು ಇಲ್ಲಿದೆ ನೋಡಿ...

1. ನೈಜೀರಿಯ
 

1. ನೈಜೀರಿಯ

1984ರಲ್ಲಿ ಮುಹಮ್ಮದು ಬುಹಾರಿ ನೇತೃತ್ವದ ಸರ್ಕಾರ ಹೊಸ ನೋಟುಗಳನ್ನು ಪರಿಚಯಿಸಿ ಹಳೆ ನೋಟುಗಳನ್ನು ನಿಷೇಧಿಸಿತು. ಆದರೆ ಇದರಿಂದಾಗಿ ಹಣದುಬ್ಬರ ಹಾಗೂ ಸಾಲದ ಹೊರೆ ಹೆಚ್ಚಾಗಿ ಆರ್ಥಿಕತೆ ಕುಸಿಯಿತು. ಅಲ್ಲದೇ ಮುಹಮ್ಮದು ಬುಹಾರಿ ಸರ್ಕಾರ ಇದನ್ನು ನಿಭಾಯಿಸುವಲ್ಲಿ ವಿಫಲವಾಯಿತು.

2. ಘಾನಾ

2. ಘಾನಾ

1982ರಲ್ಲಿ ತೆರಿಗೆ ವಂಚಕರನ್ನು ತಡೆಯಲು ಘಾನಾ ದೇಶದಲ್ಲಿ 50 ಸಿಡಿ ನೋಟುಗಳನ್ನು ನಿಷೇಧ ಮಾಡಲಾಯಿತು. ಅಧಿಕ ದ್ರವ್ಯತೆ ಮತ್ತು ಭ್ರಷ್ಟಾಚಾರ ತಡೆಗಟ್ಟುವ ಗುರಿಯನ್ನು ಹೋದಲಾಗಿತ್ತು. ಇದು ದೇಶದ ಜನರು ಕಪ್ಪು ಮಾರುಕಟ್ಟೆ, ವಿದೇಶಿ ಕರೆನ್ಸಿ ಬೆಂಬಲಿಸಲು ಕಾರಣವಾಯಿತು. ಕರೆನ್ಸಿಗಾಗಿ ಕಪ್ಪುಹಣದ ಮಾರುಕಟ್ಟೆ ವ್ಯಾಪಕವಾಗಿ ಬೆಳೆಯಿತು. ಈ ಎಲ್ಲ ಅಂಶಗಳು ಅರ್ಥವ್ಯವಸ್ಥೆಯನ್ನು ದುರ್ಬಲನನ್ನಾಗಿಸಿತ್ತು.

3. ಉತ್ತರ ಕೋರಿಯ

3. ಉತ್ತರ ಕೋರಿಯ

2010ರಲ್ಲಿ ಆಗಿನ ಸರ್ವಾಧಿಕಾರಿ ಕಿಮ್ ಜಾಂಗ್ 11 ಸುಧಾರಣಾ ಕ್ರಮವಾಗಿ ಹಳೆ ನೋಟುಗಳ ಮುಖಬೆಲೆಯಿಂದ ಎರಡು ಸೊನ್ನೆಗಳನ್ನು ತೆಗೆದರು. ಕಪ್ಪುಹಣದ ಮತ್ತು ಅರ್ಥವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸಲು ಈ ಕ್ರಮ ಕೈಗೊಳ್ಳಲಾಯಿತು. ಆದರೆ ಹಣದುಬ್ಬರ ಮತ್ತು ಆಹಾರದ ಕೊರತೆಯಿಂದಾಗಿ ದೇಶ ಸಮಸ್ಯೆ ಎದುರಿಸುವಂತಾಯಿತು.

4. ಜಿಂಬಾಬ್ವೆ
 

4. ಜಿಂಬಾಬ್ವೆ

ಜಿಂಬಾಬ್ವೆ ಒಂದು ನೂರು ಟ್ರಿಲಿಯನ್ ಡಾಲರ್ ನೋಟನ್ನು ಬಳಸಿತ್ತು.

ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಹಣದುಬ್ಬರವನ್ನು ನಿಯಂತ್ರಿಸಲು ನೋಟು ಮೌಲ್ಯವನ್ನು ನಿಷೇಧಿಸಲು ಮುಂದಾದರು. ನೋಟು ನಿಷೇಧದ ನಂತರ ಟ್ರಿಲಿಯನ್ ಡಾಲರ್ ನೋಟಿನ ಮೌಲ್ಯ 0.5 ಡಾಲರ್ ಗೆ ಕುಸಿಯಿತು.

5. ಸೋವಿಯತ್ ಯೂನಿಯನ್

5. ಸೋವಿಯತ್ ಯೂನಿಯನ್

ಮಿಖಾಯಿಲ್ ಗೋರ್ಬಚೆವ್ ನೇತೃತ್ವದಲ್ಲಿ 1991 ಜನೆವರಿಯಲ್ಲಿ ಸೋವಿತಯ್ ಯೂನಿಯನ್ ಒಡೆದು ಚೂರಾಗುವ ಕೆಲ ವರ್ಷಗಳ ಮುನ್ನ ರೂಬಲ್ ಬಿಲ್ ಗಳನ್ನು ಹಿಂತೆಗೆದುಕೊಂಡಿತ್ತು. ಕಪ್ಪುಹಣ ನಿಯಂತ್ರಣ ಮುಖ್ಯ ಉದ್ದೇಶ ಆಗಿತ್ತಾದರೂ ಆರ್ಥಿಕ ಸಮತೋಲನ ಹಾಗೂ ಹಣದುಬ್ಬರ ನಿಯಂತ್ರಿಸಲು ವಿಫಲವಾಯಿತು.

ಆದರೆ ಗೋರ್ಬಚೆವ್ ಮೇಲಿನ ನಂಬಿಕೆ ಕಳೆದುಕೊಂಡ ಜನರು ನಾಗರಿಕ ಕ್ರಾಂತಿಗೆ ಕಾರಣರಾದರು. ರಾಜಕೀಯ ಬಿಕ್ಕಟ್ಟು ಎದುರಾಗಿ ಸೋವಿಯತ್ ಒಕ್ಕೂಟ ಮುರಿದು ಬಿದ್ದಿತ್ತು. ಆದರೆ 1998ರಲ್ಲಿ ರಷ್ಯಾ ರೂಬಲ್ ನ ರಿಡಿನೊಮಿನೇಷನ್ ಮಾಡಿ ಮೂರು ಸೊನ್ನೆಗಳನ್ನು ತೆಗೆದ ಕ್ರಮ ವ್ಯವಸ್ಥಿತವಾಗಿ ನಡೆಯಿತು.

6. ಆಸ್ಟ್ರೇಲಿಯ

6. ಆಸ್ಟ್ರೇಲಿಯ

ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ಬಿಡುಗಡೆಗೊಳಿಸಿದ ಮೊದಲ ದೇಶ ಆಸ್ಟ್ರೇಲಿಯ. ಇದು ಖೋಟಾ ನೋಟುಗಳನ್ನು ತಡೆಯಲು ಪಾಳಿಮರ್ ನೋಟುಗಳನನ್ಉ ಜಾರಿ ತಂದಿತ್ತು. ಆಸ್ಟ್ರೇಲಿಯಾದ ಪಾಲಿಮರ್ ನೋಟು ಜಾರಿಯಿಂದ ಆರ್ಥವ್ಯವಸ್ಥೆ ಮೇಲೆ ಯಾವುದೇ ಅಡ್ಡಪರಿಣಾಮಗಳು ಬಿದ್ದಿಲ್ಲ.

7. ಮಯನ್ಮಾರ್

7. ಮಯನ್ಮಾರ್

ಕಪ್ಪುಹಣದ ನಿಯಂತ್ರಣಕ್ಕಾಗಿ 1987ರಲ್ಲಿ ದೇಶದ ಸೇನಾ ಆಡಳಿತ ಚಲಾವಣೆಯಲ್ಲಿ ಇಲ್ಲದ ಹಣದ ಶೇ. 80ರಷ್ಟು ಮೌಲ್ಯವನ್ನು ನಿಷೇದಿಸಿತು. ನಂತರದ ವರ್ಷಗಳಲ್ಲಿ ವಿದ್ಯಾರ್ಥಿ ಚಳುವಳಿ ಹಾಗೂ ಸಾಮೂಹಿಕ ಪ್ರತಿಭಟನೆಗಳು ತೀವ್ರವಾಗಿ ನಡೆದವು.

8. ಝೈರ್

8. ಝೈರ್

ಝೈರ್ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ ಕಾರಣ 1990ರಲ್ಲಿ ಸರ್ವಾಧಿಕಾರ ಮೊಬುಟು ಸೆಸೆ ಸೆಕೊ ನಿರಂತರವಾಗಿ ನೋಟು ಸುಧಾರಣೆಗಳನ್ನು ತಂದರು. ಇದು ಹಣದುಬ್ಬರಕ್ಕೆ ಕಾರಣವಾಗಿ 1993ರಲ್ಲಿ ಕರೆನ್ಸಿ ಹಿಂತೆಗೆದುಕೊಳ್ಳಬೇಕಾಯಿತು. ಡಾಲರ್ ಮುಂದೆ ವಿನಿಮಯ ದರ ಇಳಿಕೆಯಾಗಿ ನಾಗರಿಕ ಯುದ್ದಕ್ಕೆ ಕಾರಣವಾಗಿ 1997ರಲ್ಲಿ ಮೊಬಟು ಅಧಿಕಾರ ಕಳೆದುಕೊಂಡರು.

9. ಪಾಕಿಸ್ತಾನ

9. ಪಾಕಿಸ್ತಾನ

ಪಾಕಿಸ್ತಾನ ಡಿಸೆಂಬರ್ 2016ರಿಂದ ಹೊಸ ವಿನ್ಯಾಸದ ನೋಟುಗಳನ್ನು ಚಲಾವಣೆಗೆ ತರಲಿದೆ. ಒಂದೂವರೆ ವರ್ಷದ ಹಿಂದೆಯೇ ಟೆಂಡರ್ ಘೋಷಿಸಿದೆ. ಸಾರ್ವಜನಿಕರಿಗೆ ಹಳೆ ನೋಟುಗಳನ್ನು ವಿನಿಮಯ ಮಾಡಲು ಅವಕಾಶ ನೀಡಲಾಗಿದೆ.

ಪೋಟೋ ಸೌಜನ್ಯ: ಇಂಡಿಯ ಟೈಮ್ಸ್

English summary

Which other countries did demonetization?

With the ban of Rs.500 and Rs.1000 currency and introduction of new notes, India is coping with demonetisation. The measure isn’t new, however, as several other countries have embraced it in the past. Some met the purposes, whereas some failed miserably.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more