For Quick Alerts
ALLOW NOTIFICATIONS  
For Daily Alerts

ಮೈಕ್ರೊಮ್ಯಾಕ್ಸ್, ಉಬರ್ ಒಪ್ಪಂದ: 10 ಕೋಟಿ ಗ್ರಾಹಕರಿಗೆ ಸೇವೆ

ದೇಶಿಯ ಮೊಬೈಲ್ ಫೋನ್ ಸಂಸ್ಥೆ ಮೈಕ್ರೊಮ್ಯಾಕ್ಸ್ ಇನ್ಫರ್ಮಾಟಿಕ್ಸ್ ಮತ್ತು ಉಬರ್ ಪಾಲುದಾರಿಕೆಯಲ್ಲಿ ಸೇವೆ ಒದಗಿಸಲಾಗುವುದು ಎಂದು ಘೋಷಿಸಿವೆ.

By Siddu
|

ದೇಶಿಯ ಮೊಬೈಲ್ ಫೋನ್ ಸಂಸ್ಥೆ ಮೈಕ್ರೊಮ್ಯಾಕ್ಸ್ ಇನ್ಫರ್ಮಾಟಿಕ್ಸ್ ಮತ್ತು ಉಬರ್ ಮುಂದಿನ ಮೂರು ವರ್ಷ ಪಾಲುದಾರಿಕೆಯಲ್ಲಿ ಸೇವೆ ಒದಗಿಸಲಾಗುವುದು ಎಂದು ಘೋಷಿಸಿವೆ.

ಉಬರ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳದೆ ಮೈಕ್ರೊಮ್ಯಾಕ್ಸ್ ಗ್ರಾಹಕರು ಉಬರ್ ಟ್ಯಾಕ್ಸಿ ಬುಕ್ ಮಾಡಬಹುದಾಗಿದೆ. ಪಾಲುದಾರಿಕೆ ಪ್ರಕಾರ ಮೈಕ್ರೊಮ್ಯಾಕ್ಸ್ ಸಂಸ್ಥೆಯ ಸಾವಿರಾರು ಗ್ರಾಹಕರು ಮುಂದಿನ ಮೂರು ವರ್ಷ ಉಬರ್ ನೊಂದಿಗೆ ಉತ್ತಮ ಸಮಗ್ರ ಅನುಭವ ಪಡೆಯಲಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

ಈ ಪಾಲುದಾರಿಕೆಯಿಂದ ಉಬರ್ ದೇಶದಾದ್ಯಂತ ಉತ್ತಮ ಸಂಪರ್ಕ ಹೊಂದಲಿದ್ದು, ಮೈಕ್ರೊಮ್ಯಾಕ್ಸ್ ಗ್ರಾಹಕರಿಗೆ ಉತ್ತಮ ಟ್ಯಾಕ್ಸಿ ಅನುಭವ ಮತ್ತು ಸೌಲಭ್ಯ ಸಿಗಲಿದೆ. ಉತ್ತಮ ಪರಿಸರದೊಂದಿಗೆ ಸ್ಥಳೀಯ ಅನುಭವಗಳನ್ನು ನಿರ್ಮಿಸುವುದು ನಮ್ಮ ಗುರಿ ಎಂದು ಮೈಕ್ರೊಮ್ಯಾಕ್ಸ್ ಸಹ ಸಂಸ್ಥಾಪಕ ರಾಹುಲ್ ಶರ್ಮಾ ಹೇಳಿದ್ದಾರೆ.

ಈ ಮಹತ್ವದ ಒಪ್ಪಂದದೊಂದಿಗೆ ಮೈಕ್ರೊಮ್ಯಾಕ್ಸ್ ನ 10 ಕೋಟಿ ಗ್ರಾಹಕರೊಂದಿಗೆ ಉಬರ್ ಸಂಪರ್ಕ ಸಾಧಿಸಲಿದ್ದು, ಮೈಕ್ರೊಮ್ಯಾಕ್ಸ್ ಸ್ಮಾರ್ಟ್ ಫೋನ್ ಗಳ ಮೂಲಕ ಉಬರ್ ಬುಕಿಂಗ್ ಮಾಡಬಹುದು.

ಮೈಕ್ರೊಮ್ಯಾಕ್ಸ್, ಉಬರ್ ಒಪ್ಪಂದ: 10 ಕೋಟಿ ಗ್ರಾಹಕರಿಗೆ ಸೇವೆ

Read more about: uber ola ಉಬರ್
English summary

Micromax, Uber join hands to offer integrated experience

Mobile phone brand Micromax Informatics, and taxi-hailing service Uber today announced a partnership that will help Micromax customers book an Uber ride on their phones without having to download application.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X