Englishहिन्दी മലയാളം தமிழ் తెలుగు

'ಭೀಮ್' ಆಪ್ ಬಳಕೆ ಹೇಗೆ? ಏನಿದರ ಉಪಯೋಗ?

Written By: Siddu
Subscribe to GoodReturns Kannada

ನಗದು ರಹಿತ ವ್ಯವಹಾರ ಮತ್ತು ಡಿಜಿಟಲ್ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಪ್ರಧಾನಿ ಮೋದಿಯವರು ಡಾ. ಬಿ. ಆರ್. ಅಂಬೇಡ್ಕರ್ ಅವರ ಹೆಸರನ್ನು ಇಟ್ಟಿರುವ 'ಭೀಮ್' ಡಿಜಿಟಲ್ ಪಾವತಿ ಆಪ್ ಬಿಡುಗಡೆಗೊಳಿಸಿದ್ದಾರೆ.

ನಗದು ರಹಿತ ವಹಿವಾಟಿಗೆ ಹೊಸ ಮೊಬೈಲ್ ಪೇಮೆಂಟ್ ಆಪ್ 'ಭೀಮ್' ನೂತನ ವೇಗ ನೀಡಲಿದ್ದು, ತುಂಬಾ ಸುರಕ್ಷಿತವಾಗಿದೆ.

ಭೀಮ್ ಆಪ್ ಪ್ರಯೋಜನ, ಬಳಕೆ ಮತ್ತು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದರ ಸಂಕ್ಷಿಪ್ತ ನೋಟ ಇಲ್ಲಿದೆ.

1. ಭೀಮ್ ಆಪ್ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತ್‌ ಇಂಟರ್ಫೇಸ್‌ ಫಾರ್‌ ಮನಿ(Bharat Interface For Money) ಇದರ ವಿಸ್ತೃತ ರೂಪ ಆಗಿದ್ದು, ರಾಷ್ಟ್ರೀಯ ಪಾವತಿ ನಿಗಮ 'ಭೀಮ್' ಆಪ್ ಅಭಿವೃದ್ಧಿ ಪಡಿಸಿದೆ. ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(UPI) ಮತ್ತು ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್‌ ಡೇಟಾ(USSD) ವ್ಯವಸ್ಥೆಯಂತೆ ಪಾವತಿ ಮಾಡಬಹುದು. ಭೀಮ್ ಆಪ್ ಸ್ಮಾರ್ಟ್‌ಫೋನ್‌ ಮತ್ತು ಸಾಮಾನ್ಯ ಫೋನ್‌ಗಳ ಮೂಲಕ ಹಣ ಪಾವತಿ ಮಾಡುವ ಮತ್ತು ಸ್ವೀಕರಿಸುವ ಸೌಲಭ್ಯ ಹೊಂದಿದೆ.

2. ಭೀಮ್ ಆಪ್ ಡೌನ್ಲೋಡ್ ಹೇಗೆ?

* ಗೂಗಲ್ ಪ್ಲೇ ಸ್ಟೋರ್ ಹೋಗಿ ಭೀಮ್ ಎಂಬುದಾಗಿ ಟೈಪ್ ಮಾಡಿ ಭೀಮ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ.
* ಭೀಮ್ ಆಪ್ ಡೌನ್ಲೋಡ್ ಆದ ನಂತರ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ.(ಇಂಗ್ಲೀಷ, ಹಿಂದಿ)
* ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಸಂಖ್ಯೆ ಪರಿಶೀಲಿಸಿ.
* ನಾಲ್ಕು ಅಂಕೆಗಳ ಪಾಸ್ವರ್ಡ್ ನಮೂದಿಸಿ ಮತ್ತು ಖಚಿತಪಡಿಸಿ.
* ನಿಮ್ಮ ಬ್ಯಾಂಕ್ ಮತ್ತು ಖಾತೆಯನ್ನು ಆಯ್ಕೆ ಮಾಡಿ.
ಸಧ್ಯಕ್ಕೆ ದೇಶದ 32 ಬ್ಯಾಂಕುಗಳು ಭೀಮ್ ಆಪ್ ಪಟ್ಟಿಯಲ್ಲಿದ್ದು, ಪ್ರಸ್ತುತ ಇಂಗ್ಲೀಷ ಮತ್ತು ಹಿಂದಿ ಭಾಷೆಗಳಲ್ಲಿ ಆಪ್ ಲಭ್ಯವಿದೆ. ಮುಂದಿನ ದಿನಗಳಲ್ಲಿ ಎಲ್ಲ ಭಾಷೆಗಳಲ್ಲಿ ಆಪ್ ಲಭ್ಯವಾಗಲಿದೆ.

3. ಹೊಸ ವರ್ಷದ ಕೊಡುಗೆ

ಆಧಾರ್ ಆಧಾರಿತ ಭೀಮ್ ಆಪ್ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೇ ಸಾಮಾನ್ಯ ಫೋನ್‌ಗಳಲ್ಲೂ ಸುಲಭವಾಗಿ, ವೇಗವಾಗಿ ಮತ್ತು ಹೆಚ್ಚು ವಿಶ್ವಾಸಾರ್ಹತೆಯಿಂದ ನಗದು ರಹಿತ ವ್ಯವಹಾರ ನಡೆಸಬಹುದಾಗಿದೆ. 'ಭಿಮ್ ಆಪ್ ದೇಶದ ಜನರಿಗೆ ಹೊಸ ವರ್ಷದ ಕೊಡುಗೆ' ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

4. ಹೆಬ್ಬೆಟ್ಟಿನ ಗುರುತು ಸಾಕು

ಶುಕ್ರವಾರ ದೆಹಲಿಯಲ್ಲಿ ನಡೆದ ಡಿಜಿ ಧನ ಮೇಳದಲ್ಲಿ ‘ಭೀಮ್' ಯೋಜನೆಗೆ ಚಾಲನೆ ನೀಡಿದ ಮೋದಿ, ‘ಇನ್ನು ಎರಡು ವಾರಗಳಲ್ಲಿ ಈ ಆಪ್ ಅನ್ನು ಉನ್ನತ ದರ್ಜೆಗೆ ಏರಿಸುತ್ತೇವೆ. ಈ ವ್ಯವಸ್ಥೆಯಲ್ಲಿ ಹಣ ಪಾವತಿಗೆ ಕೇವಲ ಹೆಬ್ಬೆಟ್ಟಿನ ಗುರುತು ಇದ್ದರೆ ಸಾಕು. ಪ್ರಸ್ತುತ ಇದರ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು. ಅನಕ್ಷರಸ್ಥರನ್ನು ಸಾಮಾನ್ಯವಾಗಿ ಹೆಬ್ಬೆಟ್ಟು ಎಂದು ಅಪಹಾಸ್ಯ ಮಾಡುವ ಕಾಲ ಇತ್ತು. ಆದರೆ ಈಗ ಕಾಲ ಬದಲಾಗಿದ್ದು, ಹೆಬ್ಬೆಟ್ಟು ಬ್ಯಾಂಕ್‌ ಮತ್ತು ಇನ್ನಿತರ ವ್ಯವಹಾರ ಗುರುತಾಗಿ ಪರಿವರ್ತನೆಯಾಗುತ್ತಿದೆ ಎಂದು ವರ್ಣಿಸಿದರು.

5. ಭೀಮ್ ಮೂಲಕ ವಹಿವಾಟು

ದೇಶದ ವ್ಯಾಪಾರ ಮತ್ತು ವಾಣಿಜ್ಯ ವ್ಯವಹಾರಗಳು ಶೀಘ್ರದಲ್ಲಿ ‘ಭೀಮ್' ಮೂಲಕ ನಡೆಯಲಿದೆ. ಆ ಯೋಜನೆ ಮೂಲಕ ಬರುವ ದಿನಗಳಲ್ಲಿ ದೇಶದ ಅರ್ಥವ್ಯವಸ್ಥೆಯಲ್ಲಿ ಅಂಬೇಡ್ಕರ್‌ ಹೆಸರು ಕೇಂದ್ರ ಸ್ಥಾನಕ್ಕೆ ಬರಲಿದೆ ಎಂದು ಮೋದಿ ತಿಳಿಸಿದರು.

6. ಭೀಮ್ ಬಳಕೆ ಹೇಗೆ?

* ಬಳಕೆದಾರರು ಭೀಮ್ ಆಪ್ ಮೂಲಕ ಬ್ಯಾಂಕ್‌ ಖಾತೆಯನ್ನು ನೋಂದಣಿ ಮಾಡಬೇಕು.
* ಭೀಮ್ ಆಪ್ ಬಳಸಿ ಯುಪಿಐ ಪಟ್ಟಿಯಲ್ಲಿ ಇಲ್ಲದ ಬ್ಯಾಂಕ್‌ಗಳಿಗೆ ಐಎಫ್ಎಸ್ಸಿ ಕೋಡ್ ಮೂಲಕ ನೆಟ್‌ ಬ್ಯಾಂಕಿಂಗ್‌ ಮಾದರಿಯಲ್ಲಿ ಹಣ ವರ್ಗಾವಣೆ ಮಾಡಬಹುದು.
* ಖಾತೆ ನೋಂದಣಿಯಾದ ನಂತರ ಯುಪಿಐ ಪಿನ್‌ ಪಡೆಯಬೇಕು.
* ಭೀಮ್ ಆಪ್ ಮೂಲಕ ಒಂದು ಮೊಬೈಲ್‌ ಸಂಖ್ಯೆಗೆ ಹಣ ಕಳುಹಿಸಬಹುದು ಇಲ್ಲವೇ ಮತ್ತೊಂದು ಮೊಬೈಲ್‌ ಸಂಖ್ಯೆಯಿಂದ ಹಣ ಪಡೆಯಬಹುದು.
* ನಿಮ್ಮ ಖಾತೆಯಲ್ಲಿರುವ ಮೊತ್ತವನ್ನು ಪರಿಶೀಲಿಸಬಹುದು.
* ಕ್ಯುಆರ್ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಪಾವತಿಸಬಹುದು.

Read in English:
English summary

BHIM App: How to Download and What are the Uses?

Prime Minister Narendra Modi on Friday launched a new mobile payment app called BHIM to enable fast, secure and reliable payments system that uses smartphones for cashless transactions.The BHIM mobile payment app has been developed by the National Payment Corporation of Ind
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC