For Quick Alerts
ALLOW NOTIFICATIONS  
For Daily Alerts

ಜಗತ್ತಿನ ಟಾಪ್ 10 ಶಕ್ತಿಶಾಲಿ ಮಿಲಿಟರಿ ದೇಶಗಳು

ಮಾನವ ಸಂಪನ್ಮೂಲ, ಲ್ಯಾಂಡ್ ಸಿಸ್ಟಮ್, ವಿಮಾನ ಶಕ್ತಿ, ನೌಕಾಬಲ, ನೈಸರ್ಗಿಕ ಸಂಪನ್ಮೂಲ, ಹಣಕಾಸು ಹಾಗೂ ಭೌಗೋಳಿಕತೆ ಮಾನದಂಡಗಳ ಮೇಲೆ ಪ್ರಬಲ ಮಿಲಿಟರಿ ಶಕ್ತಿ-ಸಾಮರ್ಥ್ಯ ಹೊಂದಿರುವ ದೇಶಗಳನ್ನು ಅಳೆಯಲಾಗುತ್ತದೆ.

By Siddu
|

ಮಾನವ ಸಂಪನ್ಮೂಲ, ಲ್ಯಾಂಡ್ ಸಿಸ್ಟಮ್, ವಿಮಾನ ಶಕ್ತಿ, ನೌಕಾಬಲ, ಭೂಸೇನೆ, ನೈಸರ್ಗಿಕ ಸಂಪನ್ಮೂಲ, ಜಿಡಿಪಿ, ಹಣಕಾಸು ಹಾಗೂ ಭೌಗೋಳಿಕತೆ ಮಾನದಂಡಗಳ ಮೇಲೆ ಪ್ರಬಲ ಮಿಲಿಟರಿ ಶಕ್ತಿ-ಸಾಮರ್ಥ್ಯ ಹೊಂದಿರುವ ದೇಶಗಳನ್ನು ಅಳೆಯಲಾಗುತ್ತದೆ.

ಜಗತ್ತಿನ ಅತಿದೊಡ್ಡ ಆರ್ಥಿಕತೆ ಹಾಗೂ ಮಿಲಿಟರಿ ಶಕ್ತಿಯಾಗಿ ಜಗತ್ತನ್ನು ಆಳಬಲ್ಲ ರಾಷ್ಟ್ರಗಳು ಯಾವುವು? ಮಿಲಿಟರಿ ಮತ್ತು ರಕ್ಷಣಾ ರಂಗದಲ್ಲಿ ಯಾವ ದೇಶಗಳು ಮುಂಚೂಣಿಯಲ್ಲಿವೆ ಎಂಬ ಕುತೂಹಲ ಇದ್ದೇ ಇರುತ್ತದೆ. ಇದರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. ಮೊದಲ ಸ್ಥಾನದಲ್ಲಿ ಅಮೆರಿಕಾ ಇದ್ದರೆ ಭಾರತ ನಾಲ್ಕನೇ ಸ್ಥಾನದಲ್ಲಿದೆ.

ಅಂತಹ ಪ್ರಮುಖ 10 ದೇಶಗಳ ಮಿಲಿಟರಿ ಸಾಮರ್ಥ್ಯದ ರೋಮಾಂಚನಕಾರಿ ವಿವರ ಇಲ್ಲಿದೆ.

1. ಯುಎಸ್ಎ

1. ಯುಎಸ್ಎ

ಸಾಮರ್ಥ್ಯ ಸೂಚ್ಯಂಕ: 0.2475
ರಕ್ಷಣಾ ಬಜೆಟ್: $ 689,591,000,000
ಸಕ್ರಿಯ ಸೇನಾ ಸಿಬ್ಬಂದಿ: 1,477,896
ಲೇಬರ್ ಫೊರ್ಸ್: 153,600,000
ಒಟ್ಟು ವಿಮಾನ ಸಾಮರ್ಥ್ಯ: 15,293
ಒಟ್ಟು ನೌಕಾ ಸಾಮರ್ಥ್ಯ: 290
ಜಗತ್ತಿನ ದೊಡ್ಡಣ್ಣ ಖ್ಯಾತಿಯ ಅಮೆರಿಕ ಮಿಲಿಟರಿ ಶಕ್ತಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದರಲ್ಲಿ ನ್ಯೂಕ್ಲಿಯರ್ ಸಾಮರ್ಥ್ಯಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. 2016ರಲ್ಲಿ ಜಿಡಿಪಿ 17,149 ಬಿಲಿಯನ್ ಡಾಲರ್ ಇದ್ದು, 2016 ರಿಂದ 2030ರಲ್ಲಿ ಶೇ. 2.3ರಷ್ಟು ಹೆಚ್ಚಳ ಆಗಲಿದೆ. ಪ್ರಸ್ತುತ ಅಮೆರಿಕಾದ ಒಟ್ಟು ಸಂಪತ್ತು ರೂ. 3276 ಲಕ್ಷ ಕೋಟಿ ಆಗಿದೆ.

2. ರಷ್ಯಾ

2. ರಷ್ಯಾ

ಸಾಮರ್ಥ್ಯ ಸೂಚ್ಯಂಕ: 0.2618
ರಕ್ಷಣಾ ಬಜೆಟ್: $64,000,000,000
ಸಕ್ರಿಯ ಸೇನಾ ಸಿಬ್ಬಂದಿ: 1,200,000
ಲೇಬರ್ ಫೊರ್ಸ್: 75,330,000
ಒಟ್ಟು ವಿಮಾನ ಸಾಮರ್ಥ್ಯ: 4,498
ಒಟ್ಟು ನೌಕಾ ಸಾಮರ್ಥ್ಯ: 224
ಜಗತ್ತಿನ ಅತಿದೊಡ್ಡ ದೇಶವಾಗಿರುವ ರಷ್ಯಾ ಎರಡನೇ ಅತಿದೊಡ್ಡ ಮಿಲಿಟರಿ ಶಕ್ತಿಯಾಗಿದೆ. ಯೂರೋಪಿಯನ್ ಮತ್ತು ಏಷಿಯನ್ ದೇಶಗಳು, ಪೆಸಿಫಿಕ್ ಮತ್ತು ಅರ್ಕಾಟಿಕ್ ಸರೋವರಗಳು ಇದರ ಗಡಿ ಪ್ರದೇಶಗಳಾಗಿವೆ. 2016ರಲ್ಲಿ ರಷ್ಯಾ ಜಿಡಿಪಿ 1594 ಬಿಲಿಯನ್ ಡಾಲರ್ ಇದ್ದು, 2030ರಲ್ಲಿ ರಷ್ಯಾ ಜಿಡಿಪಿ 2219 ಬಿಲಿಯನ್ ಡಾಲರ್ ಆಗಲಿದೆ.

3. ಚೀನಾ

3. ಚೀನಾ

ಸಾಮರ್ಥ್ಯ ಸೂಚ್ಯಂಕ: 0.3351
ರಕ್ಷಣಾ ಬಜೆಟ್: $129,272,000,000
ಸಕ್ರಿಯ ಸೇನಾ ಸಿಬ್ಬಂದಿ: 2,285,000
ಲೇಬರ್ ಫೊರ್ಸ್: 795,500,000
ಒಟ್ಟು ವಿಮಾನ ಸಾಮರ್ಥ್ಯ: 5,048
ಒಟ್ಟು ನೌಕಾ ಸಾಮರ್ಥ್ಯ: 972
ಚೀನಾ ಏಷಿಯಾದ ಮೊದಲ ಹಾಗೂ ವಿಶ್ವದ ಎರಡನೇ ಶ್ರೀಮಂತ ದೇಶ. 2016ರಲ್ಲಿ ಜಿಡಿಪಿ 9307 ಬಿಲಿಯನ್ ಡಾಲರ್ ಇದ್ದು, 2030ರ ವೇಳೆಗೆ ಶೇ. 4ರಷ್ಟು ಹೆಚ್ಚಳವಾಗಲಿದೆ. ಪ್ರಸ್ತುತ ಚೀನಾ ದೇಶ ಒಟ್ಟು ರೂ. 1165 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

4. ಭಾರತ

4. ಭಾರತ

ಸಾಮರ್ಥ್ಯ ಸೂಚ್ಯಂಕ: 0.4346
ರಕ್ಷಣಾ ಬಜೆಟ್: $44,282,000,000
ಸಕ್ರಿಯ ಸೇನಾ ಸಿಬ್ಬಂದಿ: 1,325,000
ಲೇಬರ್ ಫೊರ್ಸ್: 487,600,000
ಒಟ್ಟು ವಿಮಾನ ಸಾಮರ್ಥ್ಯ: 1,962
ಒಟ್ಟು ನೌಕಾ ಸಾಮರ್ಥ್ಯ: 170
ಬಾರತ ಜಗತ್ತನ್ನು ಆಳಬಲ್ಲ ವಿಶ್ವದ ಮೂರನೇ ದೇಶ ಹಾಗೂ ಏಷಿಯಾದ 2ನೇ ದೇಶವಾಗಿದ್ದು, 4ನೇ ಅತಿದೊಡ್ಡ ಮಿಲಟರಿ ಶಕ್ತಿಯಾಗಿದೆ. 2016ರಲ್ಲಿ ಇರುವ 2557 ಬಿಲಿಯನ್ ಡಾಲರ್ ಜಿಡಿಪಿಯಿಂದ 2030ರ ವೇಳೆಗೆ 7287 ಬಿಲಿಯನ್ ಡಾಲರ್ ಜಿಡಿಪಿ ಏರಲಿದೆ. ಅತಿ ದೊಡ್ಡ ಜನಸಂಖ್ಯೆಯಿಂದಾಗಿ ಭಾರತವು ಜಗತ್ತಿನ 10 ಸಿರಿವಂತ ದೇಶಗಳ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ. ಈಗ ಭಾರತವು ಒಟ್ಟು ರೂ. 375 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

5. ಯುನೈಟೆಡ್ ಕಿಂಗ್ಡಮ್(ಯುಕೆ)

5. ಯುನೈಟೆಡ್ ಕಿಂಗ್ಡಮ್(ಯುಕೆ)

ಸಾಮರ್ಥ್ಯ ಸೂಚ್ಯಂಕ: 0.5185
ರಕ್ಷಣಾ ಬಜೆಟ್: $57,875,170,000
ಸಕ್ರಿಯ ಸೇನಾ ಸಿಬ್ಬಂದಿ: 224,500
ಲೇಬರ್ ಫೊರ್ಸ್: 31,720,000
ಒಟ್ಟು ವಿಮಾನ ಸಾಮರ್ಥ್ಯ: 1,412
ಒಟ್ಟು ನೌಕಾ ಸಾಮರ್ಥ್ಯ: 77
ಯುನೈಟೆಡ್ ಕಿಂಗ್ಡಮ್ ಶೇ. 2.5ರಷ್ಟು ಆರ್ಥಿಕ ಕ್ರಾಂತಿಯೊಂದಿಗೆ 2030ರಲ್ಲಿ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊಮ್ಮಲಿದ್ದು, ಒಟ್ಟು ಸಂಪತ್ತು ರೂ. 616 ಲಕ್ಷಕೋಟಿ ಹೊಂದಿದೆ.

6. ಫ್ರಾನ್ಸ್

6. ಫ್ರಾನ್ಸ್

ಸಾಮರ್ಥ್ಯ ಸೂಚ್ಯಂಕ: 0.6163
ರಕ್ಷಣಾ ಬಜೆಟ್: $58,244,000,000
ಸಕ್ರಿಯ ಸೇನಾ ಸಿಬ್ಬಂದಿ: 362,485
ಲೇಬರ್ ಫೊರ್ಸ್: 29,610,000
ಒಟ್ಟು ವಿಮಾನ ಸಾಮರ್ಥ್ಯ: 544
ಒಟ್ಟು ನೌಕಾ ಸಾಮರ್ಥ್ಯ: 180
ಫ್ರಾನ್ಸ್ ವಿಶ್ವದ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು, ಪ್ರಸ್ತುತ 2809 ಬಿಲಿಯನ್ ಡಾಲರ್ ಜಿಡಿಪಿಯಿಂದ ಹೊಂದಿದೆ. ಇದು ರೂ. 442 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

7. ಜರ್ಮನಿ

7. ಜರ್ಮನಿ

ಸಾಮರ್ಥ್ಯ ಸೂಚ್ಯಂಕ: 0.6491
ರಕ್ಷಣಾ ಬಜೆಟ್: $43,478,000,000
ಸಕ್ರಿಯ ಸೇನಾ ಸಿಬ್ಬಂದಿ: 148,996
ಲೇಬರ್ ಫೊರ್ಸ್: 43,620,000
ಒಟ್ಟು ವಿಮಾನ ಸಾಮರ್ಥ್ಯ: 925
ಒಟ್ಟು ನೌಕಾ ಸಾಮರ್ಥ್ಯ: 67
ಮಿಲಿಟರಿ ಸಾಮರ್ಥ್ಯದಲ್ಲಿ 7ನೇ ಸ್ಥಾನದಲ್ಲಿರುವ ಜರ್ಮನಿಯು ಜಿಡಿಪಿ ಮೌಲ್ಯ 3747 ಬಿಲಿಯನ್ ಡಾಲರ್ ಹೊಂದಿದೆ. ಒಟ್ಟು ಸಂಪತ್ತು ರೂ. 609 ಲಕ್ಷಕೋಟಿ ಆಗಿದೆ.

8. ದಕ್ಷಿಣ ಕೋರಿಯ

8. ದಕ್ಷಿಣ ಕೋರಿಯ

ಸಾಮರ್ಥ್ಯ ಸೂಚ್ಯಂಕ: 0.6547
ರಕ್ಷಣಾ ಬಜೆಟ್: $28,280,000,000
ಸಕ್ರಿಯ ಸೇನಾ ಸಿಬ್ಬಂದಿ: 653,000
ಲೇಬರ್ ಫೊರ್ಸ್: 25,100,000
ಒಟ್ಟು ವಿಮಾನ ಸಾಮರ್ಥ್ಯ: 871
ಒಟ್ಟು ನೌಕಾ ಸಾಮರ್ಥ್ಯ: 190

9. ಇಟಲಿ

9. ಇಟಲಿ

ಸಾಮರ್ಥ್ಯ ಸೂಚ್ಯಂಕ: 0.6838
ರಕ್ಷಣಾ ಬಜೆಟ್: $31,946,000,000
ಸಕ್ರಿಯ ಸೇನಾ ಸಿಬ್ಬಂದಿ: 293,202
ಲೇಬರ್ ಫೊರ್ಸ್: 25,080,000
ಒಟ್ಟು ವಿಮಾನ ಸಾಮರ್ಥ್ಯ: 770
ಒಟ್ಟು ನೌಕಾ ಸಾಮರ್ಥ್ಯ: 179
ಇಟಲಿ ಜಗತ್ತಿನ 10ನೇ ಸಿರಿವಂತ ಹಾಗೂ 2030ರ ಹತ್ತನೇ ಅತಿದೊಡ್ಡ ಆರ್ಥಿಕ ದೇಶಗಳ ಸಾಲಿನಲ್ಲಿ ನಿಂತಿದೆ. 2016ರಲ್ಲಿ 2071 ಬಿಲಿಯನ್ ಡಾಲರ್ ಇರುವ ಆರ್ಥಿಕ ಮೌಲ್ಯ 2030ರ ವೇಳೆಗೆ 2350 ಬಿಲಿಯನ್ ಡಾಲರ್ ಆಗಲಿದೆ. ಪ್ರಸ್ತುತ ರೂ. 294 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

10. ಬ್ರೆಜಿಲ್

10. ಬ್ರೆಜಿಲ್

ಸಾಮರ್ಥ್ಯ ಸೂಚ್ಯಂಕ: 0.6912
ರಕ್ಷಣಾ ಬಜೆಟ್: $31,576,000,000
ಸಕ್ರಿಯ ಸೇನಾ ಸಿಬ್ಬಂದಿ: 371,199
ಲೇಬರ್ ಫೊರ್ಸ್: 104,700,000
ಒಟ್ಟು ವಿಮಾನ ಸಾಮರ್ಥ್ಯ: 822
ಒಟ್ಟು ನೌಕಾ ಸಾಮರ್ಥ್ಯ: 106

Read more about: india indian army usa economy
English summary

10 Most Powerful Militaries in The World

The folks at Global Firepower ranked the world’s 10 most powerful militaries. They examined the defence forces of 68 countries in order to compile the rankings, taking into account manpower, land systems, air power, naval power, resources, logistics, finances and geography covered.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X