Englishहिन्दी മലയാളം தமிழ் తెలుగు

ಬೇನಾಮಿ ವ್ಯವಹಾರಕ್ಕೆ 7 ವರ್ಷ ಕಠಿಣ ಜೈಲು ಶಿಕ್ಷೆ

Written By: Siddu
Subscribe to GoodReturns Kannada

ಬೇನಾಮಿ ವ್ಯವಹಾರ ನಡೆಸುವವರು 7 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

'ಬೇನಾಮಿ ಆಸ್ತಿ ವಹಿವಾಟು ಕಾಯ್ದೆ -1988' 2016ರ ನವೆಂಬರ್‌ನಿಂದ ಜಾರಿಗೆ ಬಂದಿದ್ದು, ಯಾರು ಕೂಡ ಬೇನಾಮಿ ವಹಿವಾಟು ನಡೆಸಬಾರದು. ಒಂದು ವೇಳೆ ಬೇನಾಮಿ ವ್ಯವಹಾರ ನಡೆಸಿರುವುದು ಸಾಬೀತಾದಲ್ಲಿ ಕಠಿಣ ಜೈಲು ಶಿಕ್ಷೆ ಹಾಗೂ ದುಬಾರಿ ದಂಡ ಭರಿಸಬೇಕಾಗುತ್ತದೆ ಎಂದು ಇಲಾಖೆ ಹೇಳಿದೆ. ಈಗಾಗಲೇ ಇದರ ಕುರಿತು ದೇಶದಾದ್ಯಂತ ಪತ್ರಿಕೆಗಳಲ್ಲಿ ಜಾಹೀರಾತು ಕೂಡ ನೀಡಿದೆ.

ತೆರಿಗೆ ಇಲಾಖೆ ಮನವಿ

ಬ್ಯ್ಲಾಕ್ ಮನಿ ಘೋರ ಅಪರಾಧವಾಗಿದ್ದು, ಕಪ್ಪು ಹಣ ನಿವಾರಣೆಗೆ ನೆರವಾಗಲು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರಿಗೆ ಮನವಿ ಮಾಡಿಕೊಳ್ಳುತ್ತೇವೆ ಎಂದು ತೆರಿಗೆ ಇಲಾಖೆ ತಿಳಿಸಿದೆ.

ತಪ್ಪು ಮಾಹಿತಿಗೆ ಶಿಕ್ಷೆ

ಆದಾಯ ಇಲಾಖೆಗೆ ತಪ್ಪು ಮಾಹಿತಿ ನೀಡುವವರನ್ನು ಬೇನಾಮಿ ಕಾಯ್ದೆ ಅಡಿಯಲ್ಲಿ ವಿಚಾರಣೆಗೆ ಗುರಿಪಡಿಸಬಹುದಾಗಿದೆ. ಅಲ್ಲದೆ ಅಂಥವರ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ತಿಳಿಸಿದೆ.

ಶೇ. 25ರಷ್ಟು ದಂಡ

ಬೇನಾಮಿ ಕೃತ್ಯಗಳಿಗೆ ಕುಮ್ಮಕ್ಕು ನೀಡುವವರ ವಿರುದ್ಧ ಕೂಡ ಮೊಕದ್ದಮೆ ದಾಖಲಿಸಬಹುದು. ಬೇನಾಮಿ ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇ. 25ರಷ್ಟನ್ನು ದಂಡ ಭರಿಸಸಬೇಕಾಗುತ್ತದೆ ಎಂದು ಇಲಾಖೆ ತಿಳಿಸಿದೆ.

English summary

Benami Act violators to face double whammy of legal action

The tax department today warned that those who undertake Benami transactions would invite Rigorous Imprisonment (RI) of up to 7 years and such violators would also stand to be charged under the normal I-T Act.
Story first published: Saturday, March 4, 2017, 17:33 [IST]
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC