For Quick Alerts
ALLOW NOTIFICATIONS  
For Daily Alerts

ಹೀರೋ, ಹೋಂಡಾ, ಬಜಾಜ್ ಸಂಸ್ಥೆಯ ಬಿಎಸ್ 3 ಮಾಡೆಲ್ ಬೈಕ್ ಮೇಲೆ 22 ಸಾವಿರವರೆಗೆ ರಿಯಾಯಿತಿ!

ಏಪ್ರಿಲ್ 1 ರಿಂದ ಬಿಎಸ್ 3 ವಾಹನಗಳ ನೋಂದಣಿ ಮತ್ತು ಮಾರಾಟವನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

By Siddu
|

ಏಪ್ರಿಲ್ 1 ರಿಂದ ಬಿಎಸ್ 3 ವಾಹನಗಳ ನೋಂದಣಿ ಮತ್ತು ಮಾರಾಟವನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

ಮೋಟಾರು ವಾಹನಗಳ ವಾಯುಮಾಲಿನ್ಯ ಪರಿಮಿತಿ ಮಾನದಂಡ ಬಿಎಸ್ 4 ಜಾರಿಗೆ ಬರುವ ಹಿನ್ನೆಲೆಯಲ್ಲಿ ಬಿಎಸ್ 3 ವಾಹನಗಳನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದು, ವಾಹನ ತಯಾರಿಕಾ ಸಂಸ್ಥೆಗಳು ಬಿಎಸ್ 4 ಮಾದರಿ ವಾಹನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಬೇಕಾಗಿದೆ.

ರಿಯಾಯಿತಿ ಪ್ರಕಟಿಸಿದ ಕಂಪನಿಗಳು

ರಿಯಾಯಿತಿ ಪ್ರಕಟಿಸಿದ ಕಂಪನಿಗಳು

ಸುಪ್ರೀಕೋರ್ಟ್ ಬಿಎಸ್ 3 ವಾಹನಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸಂಸ್ಥೆಗಳಾದ ಹೀರೋ, ಹೆಚ್ಎಂಎಸ್ಐ, ಬಜಾಜ್ ಆಟೋ ಸುಜುಕಿ, ಹೋಂಡಾ ಮೋಟಾರ್ ಸೈಕಲ್ಸ್ ಮತ್ತು ಸ್ಕೂಟರ್ 22,000ವರೆಗೆ ರಿಯಾಯಿತಿ ಪ್ರಕಟಿಸಿದೆ.

ಏಪ್ರಿಲ್ 1ರ ಒಳಗಾಗಿ ಡೀಲ್

ಏಪ್ರಿಲ್ 1ರ ಒಳಗಾಗಿ ಡೀಲ್

ಈಗಾಗಲೇ ಮಾರುಕಟ್ಟೆಯಲ್ಲಿ ಸುಮಾರು 8 ಲಕ್ಷ ಬಿಎಸ್ 3 ವಾಹನಗಳು ಮಾರಾಟಕ್ಕೆ ರೆಡಿಯಾಗಿವೆ. ಇದರಲ್ಲಿ 6.71 ಲಕ್ಷ ದ್ವಿಚಕ್ರ ವಾಹನಗಳಾಗಿದ್ದು, ಏಪ್ರಿಲ್ 1ರೊಳಗೆ ಆದಷ್ಟು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಡೀಲರ್ ಗಳು ಮುಂದಾಗಿದ್ದಾರೆ. ಹೀರೋ ಮತ್ತು ಹೋಂಡಾ ಸಂಸ್ಥೆಗಳು 12,500 ವರೆಗೆ ರಿಯಾಯಿತಿ ನೀಡಿದ್ದು, ಅದು 22 ಸಾವಿರದವರೆಗೆ ಹೆಚ್ಚಿಸಿದೆ.

ನೇರ ರಿಯಾಯಿತಿ
 

ನೇರ ರಿಯಾಯಿತಿ

ಹೀರೋ ಸ್ಕೂಟರ್ ಗಳ ಮೇಲೆ 12,500 ಹಾಗೂ ಪ್ರೀಮಿಯಮ್ ಬೈಕ್ ಗಳ ಮೇಲೆ 7,500 ಮತ್ತು ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ 10 ಸಾವಿರ ನೇರ ರಿಯಾಯಿತಿ ನೀಡಲಾಗುತ್ತಿದೆ ಎಂದು ಡೀಲರ್ ಗಳು ತಿಳಿಸಿದ್ದಾರೆ.

ಕೊನೆ ದಿನಾಂಕ ಮುಂದೂಡಿಕೆಗೆ ಒತ್ತಾಯ

ಕೊನೆ ದಿನಾಂಕ ಮುಂದೂಡಿಕೆಗೆ ಒತ್ತಾಯ

ಕೋರ್ಟ್ ಆದೇಶ ಬಂದ ನಂತರ ಕೊನೆ ದಿನಾಂಕವನ್ನು ಮುಂದೂಡುವಂತೆ ಬೈಕ್ ಕಂಪನಿಗಳು ಕೋರ್ಟ್ ಗೆ ಅರ್ಜಿ ಸಲ್ಲಿಸಿವೆ. ಷೋ ರೂಂಗಳಲ್ಲಿ ಬೈಕ್ ಗಳು ಸಾಲುಗಟ್ಟಿ ನಿಂತಿದ್ದು, ಒಂದು ದಿನದಲ್ಲಿ ಮಾರಾಟ ಮಾಡುವುದಾಗಲಿ ಅಥವಾ ಖರೀದಿದಾರರೂ ನೋಂದಣಿ ಮಾಡಿಸುವುದಾಗಲಿ ಕಷ್ಟ. ಹೀಗಾಗಿ ದಿನಾಂಕ ಮುಂದೂಡುವಂತೆ ಕಂಪನಿಗಳು ಒತ್ತಾಯಿಸಿವೆ.

Read more about: finance news money commerce
English summary

BS-III bikes sell out like hot cakes over two-day discounted offer

Two-wheeler majors Hero MotoCorp, HMSI, Bajaj Auto and Suzuki Motorcycle are offering discounts of up to Rs 22,000 on BS-III models to liquidate stocks, a day after the Supreme Court banned sale and registration of such vehicles from April 1.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X