ಅಬ್ಬಾ..! ಇವು ಭಾರತದ ಸಾರ್ವಕಾಲಿಕ ಅತಿಹೆಚ್ಚು ವೆಚ್ಚದ ಸಿನಿಮಾಗಳು

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಭಾರತೀಯ ಚಿತ್ರರಂಗ ಜಾಗತಿಕವಾಗಿ ತನ್ನದೇ ಛಾಪನ್ನು ಮೂಡಿಸಿದ್ದು, ಬಾಲಿವುಡ್ ಮತ್ತು ಸೌತ್ ಇಂಡಿಯನ್ ಸಿನಿಮಾಗಳಿಗೆ ವಿಶ್ವದಾದ್ಯಂತ ಭಾರೀ ಬೇಡಿಕೆ ಇದೆ. ಅಷ್ಟೇ ಅಲ್ಲ ಭಾರತದ ಸಿನಿಮಾಗಳ ಮಾರುಕಟ್ಟೆ ಕೂಡ ಊಹಿಸುವುದು ಅಸಾಧ್ಯವಾಗಿದ್ದು, ಜಗದಗಲ ವ್ಯಾಪಿಸಿದೆ.

  ವಿಶ್ವದರ್ಜೆಯ ಉನ್ನತ ಗುಣಮಟ್ಟದ ಕಲಾತ್ಮಕ, ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಹಾಗೂ ಭರ್ಜರಿ ಆಕ್ಷನ್ ನಂತಹ ನೂರಾರು ಚಿತ್ರಗಳನ್ನು ಭಾರತೀಯ ಚಿತ್ರರಂಗ ಜಗತ್ತಿಗೆ ನೀಡಿದೆ.

  ಹೀಗಾಗಿ ಇಂತಹ ಅದ್ದೂರಿ ಸಿನಿಮಾಗಳ ಬಜೆಟ್ ಎಷ್ಟಿರಬಹುದು ಎಂಬ ಪ್ರಶ್ನೆ ಚಿತ್ರರಸಿಕರನ್ನು ಕಾಡುತ್ತಲೇ ಇರುವಂತದ್ದು. ಕೆಲ ನಿರ್ಮಾಪಕರು, ನಿರ್ದೇಶಕರು ಸಿನಿಮಾ ನಿರ್ಮಾಣಕ್ಕಾಗಿ ಕೆಲ ವರ್ಷಗಳನ್ನು ತೆಗೆದುಕೊಂಡು ಅದ್ಬುತಗಳನ್ನು ಸೃಷ್ಟಿ ಮಾಡಿರುವ ಐತಿಹ್ಯ ಕೂಡ ಇದೆ. ಅದೊಂದು ತಪಸ್ಸಾಗಿದ್ದು, ಇದಕ್ಕಾಗಿ ಸಾವಿರಾರು ಕಲಾವಿದರು ಕೆಲ ವರ್ಷಗಳನ್ನು ತ್ಯಾಗ ಮತ್ತು ಸಮರ್ಪಣೆ ಮಾಡಬೇಕಾಗುತ್ತದೆ! ಅಲ್ಲದೇ ಇವುಗಳಲ್ಲಿ ಹೆಚ್ಚಿನವು ದಕ್ಷಿಣ ಭಾರತದ ಚಿತ್ರಗಳು ಎನ್ನುವುದು ಇನ್ನೊಂದು ವಿಶೇಷ.!!

   

  ಹಾಗಿದ್ದರೆ ಇಂತಹ ಸಾರ್ವಕಾಲಿಕ ಅದ್ಬುತ, ಶ್ರೇಷ್ಠ, ಉನ್ನತ ಗುಣಮಟ್ಟದ ಹಾಗೂ ಅತಿಹೆಚ್ಚು ವೆಚ್ಚದ ಭಾರತದ ಚಲನಚಿತ್ರಗಳು ಯಾವುದು ಎಂಬ ಕುತೂಹಲ ನಿಮ್ಮಲ್ಲಿ ಇದೆಯಲ್ಲವೇ..? ಅದಕ್ಕೆ ಉತ್ತರ ಇಲ್ಲಿದೆ ಓದಿ...

  1. ಮಹಾಭಾರತ

  ಮಹಾಭಾರತ ಅನ್ನುವ ಕಥಾವಸ್ತು ಮಹಾದೊಡ್ಡದು. ಅದರಲ್ಲಿ ಬರುವ ಪಾತ್ರಧಾರಿಗಳನ್ನು ಕಣ್ಣಮುಂದೆ ತಂದುಕೊಂಡರೆ ಒಮ್ಮೆ ರೋಮಾಂಚನವಾಗುತ್ತದೆ. ಅಂತಹ ನೂರಾರು ಪಾತ್ರಧಾರಿಗಳನ್ನು ಪರದೆಯ ಮೇಲೆ ತರುವುದೆಂದರೆ ಸುಲಭದ ಕೆಲಸವಲ್ಲ. ಮಹಾಭಾರತ ಚಿತ್ರ ನಿರ್ಮಾಣಕ್ಕೆ ಎಷ್ಟು ಬಜೆಟ್ ಬೇಕಾಗಬಹುದು ಎಂದು ಕೇಳಿದರೆ ಹೇಳುವುದೇ ಕಷ್ಟ. ಏಕೆಂದರೆ ಅದರ ವೆಚ್ಚ ಕಲ್ಪನೆಗೆ ನಿಲಿಕುವುದೇ ಕಷ್ಟ ಎನ್ನಬಹುದು.
  ಭಾರತದ ಇತಿಹಾಸದಲ್ಲಿಯೇ ಅತಿಹೆಚ್ಚು ಬಜೆಟ್ ಹೊಂದಿರುವ ಚಿತ್ರವನ್ನು ನಮ್ಮ ಮಂಗಳೂರು ಮೂಲದ ಯುಎಇ ವಾಸಿ ಬೃಹತ್ ಉದ್ಯಮಿ ಬಿ. ಆರ್ ಶೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ. ಮಹಾಭಾರತದ ಶೂಟಿಂಗ್ ಸೆಪ್ಟಂಬರ್ 2018ರಿಂದ ಪ್ರಾರಂಭವಾಗಲಿದ್ದು, 2020ರ ಆಸುಪಾಸು ತೆರೆ ಕಾಣಲಿದೆ. ಈ ಚಿತ್ರ ಎರಡು ಭಾಗಗಳಲ್ಲಿ ನಿರ್ಮಾಣವಾಗುವ ಸಾಧ್ಯತೆ ಇದೆ. ನಿರ್ದೇಶಕರಾಗಿ ಎಸ್ ಎಸ್ ರಾಜಮೌಳಿ ಹೆಸರು ಕೂಡ ಕೇಳಿ ಬರುತ್ತಿದೆ.
  ಬಜೆಟ್: ಅಂದಾಜು ರೂ. 1000 ಕೋಟಿ
  ನಿರ್ಮಾಪಕರು: ಬಿ. ಆರ್ ಶೆಟ್ಟಿ
  ನಿರ್ದೇಶಕರು: ವಿ. ಎ. ಮೇನನ್

  2. ರೋಬೋಟ್ 2.0

  ಬಜೆಟ್: ರೂ. 350 ಕೋಟಿ
  ನಿರ್ದೇಶಕ: ಎಸ್. ಶಂಕರ್
  ನಿರ್ಮಾಪಕ: ಸುಭಾಸ್ಕರನ್ ಅಳಿರಾಜ್ಹಾ
  ಸಂಗೀತ: ಎ. ಆರ್. ರೆಹಮಾನ್
  ಹೌದು. ಇಲ್ಲಿಯವರೆಗೆ ಅತಿಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಚಿತ್ರವೆಂದರೆ ರೋಬೋಟ್ 2.0. ಇಲ್ಲಿ ಸೂಪರ್ ಸ್ಟಾರ್ ತಲೈವಾ ಖ್ಯಾತಿಯ ರಜಿನಿಕಾಂತ್ ಮತ್ತು ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಇದರಲ್ಲಿ ರಜಿನಿಕಾಂತ್ ಡಬಲ್ ರೋಲ್ ನಲ್ಲಿ ಮಿಂಚಿದ್ದರೆ, ಅಕ್ಷಯ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.

  3. ಬಾಹುಬಲಿ: The Conclusion

  ಬಜೆಟ್: ರೂ. 250 ಕೋಟಿ
  ನಿರ್ದೇಶಕ: ಎಸ್.ಎಸ್ ರಾಜಮೌಳಿ
  ಸಂಗೀತ: ಎಂ.ಎಂ. ಕೀರವಾಣಿ
  ನಿರ್ಮಾಪಕ: ಶೋಬು ಯಾರ್ಲಗಡ್ಡ, ಪ್ರಸಾದ ದೇವಿನೆನಿ
  ಬಾಹುಬಲಿ ಭಾರತ ಚಿತ್ರರಂಗ ಕಂಡ ಅದ್ಬುತ ಸಿನಿಮಾಗಳಲ್ಲಿ ಒಂದು. ಇದು ರಾಜಮೌಳಿ ನಿರ್ದೇಶನದ ಅದ್ಬುತ ಗ್ರಾಫಿಕ್ಸ್ ಮತ್ತು ಮೇಕಿಂಗ್ ಮೂಲಕ ಚಿತ್ರರಸಿಕರನ್ನು ಮನಸೂರೆಗೊಂಡಿದ್ದು, ಎಲ್ಲಾ ದಾಖಲೆಗಳನ್ನು ದೂಳೀಪಟ ಮಾಡಿದ ಬ್ಲಾಕ್ ಬಸ್ಟರ್ ಚಿತ್ರ.

  4. I

  ಬಜೆಟ್: ರೂ. 180 ಕೋಟಿ
  ನಿರ್ದೇಶಕ: ಎಸ್. ಶಂಕರ್
  ನಿರ್ಮಾಪಕ: ವಿ. ರವಿಚಂದ್ರನ್, ಡಿ. ರಮೇಶ್ ಬಾಬು
  ಸಂಗೀತ: ಎ. ಆರ್. ರೆಹಮಾನ್
  ದಕ್ಷಿಣ ಭಾರತದ ಪ್ರಸಿದ್ದ ನಿರ್ದೇಶಕರಾದ ಶಂಕರ್ ರವರ ಚಿತ್ರವಾಗಿದ್ದು, ವಿಕ್ರಮ್ ಮತ್ತು ಆಮಿ ಜಾಕ್ಸನ್ ನಟಿಸಿದ್ದಾರೆ.

  5. ಪ್ರೇಮ್ ರತನ್ ಧನ್ ಪಾಯೋ

  ಬಜೆಟ್: ರೂ. 180 ಕೋಟಿ
  ನಿರ್ದೇಶಕ: ಸೂರಜ್ ಆರ್ ಬಾರ್ಜತ್ಯ
  ನಿರ್ಮಾಪಕ: ಅಜಿತ್ ಕುಮಾರ್ ಬಾರ್ಜತ್ಯ, ರಾಜಕುಮಾರ್ ಬಾರ್ಜತ್ಯ
  ಸಂಗೀತ: ಹಿಮೇಶ್ ರಶಮಿಯಾ
  ಇದು ಇಲ್ಲಿಯವರೆಗಿನ ಅತಿಹೆಚ್ಚು ವೆಚ್ಚದ ಬಾಲಿವುಡ್ ಚಿತ್ರ. ಸಲ್ಮಾನ್ ಖಾನ್, ಸೋನಮ್ ಕಪೂರ್, ಅನುಪಮ್ ಖೇರ್ ಮುಖ್ಯಭೂಮಿಕೆಯಲ್ಲಿದ್ದಾರೆ.

  6. ಧೂಮ್ 3

  ಬಜೆಟ್: ರೂ. 175 ಕೋಟಿ
  ನಿರ್ದೇಶಕ: ವಿಜಯ್ ಕೃಷ್ಣ ಆಚಾರ್ಯ
  ನಿರ್ಮಾಪಕ: ಆದಿತ್ಯ ಛೋಪ್ರಾ
  ಸಂಗೀತ: ಪ್ರೀತಮ್
  ಇದು ಧೂಮ್ ಸರಣಿಯ ಮೂರನೇ ಚಿತ್ರ. ಪೊಲೀಸ್ ಕಳ್ಳ ಕಥಾವಸ್ತು ಹೊಂದಿರುವ ಭರ್ಜರಿ ಆಕ್ಸನ್ ಚಿತ್ರ. ಅಮೀರ್ ಖಾನ್, ಕತ್ರಿನಾಕೈಪ್, ಅಭಿಷೇಕ್ ಬಚನ್, ಉದಯ್ ಛೋಪ್ರಾ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  7. ಬ್ಯಾಂಗ್ ಬ್ಯಾಂಗ್

  ಬಜೆಟ್: ರೂ. 160 ಕೋಟಿ
  ನಿರ್ದೇಶಕ: ಸಿದ್ದಾರ್ಥ ಆನಂದ್
  ನಿರ್ಮಾಪಕ: ಫಾಕ್ಸ್ ಸ್ಟಾರ್ ಸ್ಟೂಡಿಯೋಸ್
  ಸಂಗೀತ: ವಿಶಾಲ್ ಶೇಖರ್
  ಗ್ರೀಕ್ ಗಾಡ್ ಖ್ಯಾತಿಯ ಬಾಲಿವುಡ್ ಚೆಲುವ ಹೃತಿಕ್ ರೋಷನ್ ಮತ್ತು ಕತ್ರಿನಾ ಕೈಫ್ ನಟಿಸಿದ್ದಾರೆ. ಇದು ಹಾಲಿವುಡ್ Knight and Day ಚಿತ್ರದ ಭಾರತೀಯ ಆವೃತ್ತಿ.

  8. ಹ್ಯಾಪಿ ನ್ಯೂ ಇಯರ್

  ಬಜೆಟ್: ರೂ. 150 ಕೋಟಿ
  ನಿರ್ದೇಶಕ: ಫರಾ ಖಾನ್
  ನಿರ್ಮಾಪಕ: ಗೌರಿ ಖಾನ್
  ಸಂಗೀತ: ವಿಶಾಲ್ ಶೇಖರ್
  ಶಾರುಖ್ ಖಾನ್, ಅಭಿಷೇಕ ಬಚ್ಚನ್, ದೀಪಿಕಾ ಪಡುಕೋಣೆ ಹೀಗೆ ಬಹುತಾರಾಗಣದ ಚಿತ್ರ.

  9. ಕಿಕ್

  ಬಜೆಟ್: ರೂ. 140 ಕೋಟಿ
  ನಿರ್ದೇಶಕ: ಸಾಜಿದ್ ನಡಿಯಾದ್ವಾಲಾ
  ನಿರ್ಮಾಪಕ: ಸಾಜಿದ್ ನಡಿಯಾದ್ವಾಲಾ
  ಸಂಗೀತ: ಹಿಮೇಶ್ ರೆಶಿಮಿಯಾ
  ಸಲ್ಮಾನ್ ಖಾನ್, ಜಾಕ್ವೆಲಿನ್ ಫನಾಂಡಿಸ್ ಅಭಿನಯದ ಮೆಗಾ ಹಿಟ್ ಮೂವಿ.

  10. ರೋಬೋಟ್(ಎಂಥಿರನ್)

  ಬಜೆಟ್: ರೂ. 132 ಕೋಟಿ
  ನಿರ್ದೇಶಕ: ಎಸ್ ಶಂಕರ್
  ನಿರ್ಮಾಪಕ: ಕಲಾನಿಥಿ ಮಾರನ್
  ಸಂಗೀತ: ಎ. ಆರ್. ರೆಹಮಾನ್
  ಶಂಕರ್ ವಿಭಿನ್ನ ಕಥಾವಸ್ತುಗಳ ಸಿನಿಮಾ ಮಾಡುವುದರಲ್ಲಿ ನಿಸ್ಸೀಮರು ಎಂಬುದಕ್ಕೆ ಈ ಚಿತ್ರ ಸಾಕ್ಷಿ. ರಜಿನಿಕಾಂತ್ ಮತ್ತು ಐಶ್ವರ್ಯ ರೈ ನಟನೆಯಲ್ಲಿ ಮೂಡಿ ಬಂದಿರುವ ಬ್ಲಾಕ್ ಬಸ್ಟರ್ ಚಿತ್ರ.

  11. ಮುಘಲ್-ಎ-ಅಜಮ್(ವಿಶೇಷ ಉಲ್ಲೇಖ)

  ಬಜೆಟ್: ರೂ. 1.5 ಕೋಟಿ
  ನಿರ್ದೇಶಕ: ಕೆ. ಅಸಿಪ್
  ನಿರ್ಮಾಪಕ: ಶಪೂರ್ಜಿ ಫಲ್ಲೊಂಜಿ
  ಸಂಗೀತ: ನೌಶಾದ್
  1960ರ ದಶಕದಲ್ಲಿ ತೆರೆಕಂಡ ಮುಘಲ್-ಎ-ಅಜಮ್ ಭಾರತೀಯ ಚಿತ್ರರಂಗ ಕಂಡ ಅದ್ಬುತ ಮತ್ತು ವಿಶೇಷ ಸಿನೆಮಾ. ಆ ಕಾಲದಲ್ಲಿ 1.5 ಕೋಟಿ ಎಂದರೆ ಸಣ್ಣ ವಿಚಾರವಲ್ಲ! ಪೃಥ್ವಿರಾಜ್ ಕಪೂರ್, ದಿಲೀಪ್ ಕುಮಾರ್, ಮದುಬಾಲಾ, ದುರ್ಗಾ ಖೋಟೆ ಅಭಿನಯದ ಅತ್ಯದ್ಬುತ ಪ್ರೀತಿ-ಪ್ರೇಮ ಕಥಾವಸ್ತು ಹೊಂದಿರುವ ಐತಿಹಾಸಿಕ ಚಿತ್ರ.

  ಕೆ.ಜಿ.ಎಫ್

  ಕನ್ನಡದ ಮಟ್ಟಿಗೆ ಕೆ.ಜಿ.ಎಫ್ ತುಂಬಾ ವಿಶೇಷ ಹಾಗು ಹೆಮ್ಮೆಯ ಸಿನಿಮಾ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿಎ.ಫ್ ಸಿನಿಮಾ ದೇಶದಾದ್ಯಂತ ಮಾಡುತ್ತಿರುವ ಹವಾ ನಿಮಗೆಲ್ಲಾ ಗೊತ್ತೆ ಇದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹೀಗೆ ಪಂಚ ಭಾಷೆಗಳಲ್ಲಿ ತೆರೆ ಕಾಣುತ್ತಿದ್ದು, ಇದು ಇಂಡಿಯನ್ ಸಿನಿಮಾ ಎಂಬ ಖ್ಯಾತಿ ಪಡೆಯುತ್ತಿದೆ. ಕೆ.ಜಿ.ಎಫ್ ಟ್ರೈಲರ್ 1 ಮತ್ತು ಟ್ರೈಲರ್ 2 ನೋಡಿದವರೆಲ್ಲಾ ಇದರ ಮೇಕಿಂಗ್ ಗೆ ಮರುಳಾಗಿ ಬಿಡುಗಡೆಯ ದಿನವನ್ನು ಎದುರು ನೋಡುವಂತಾಗಿದೆ! ಕೆ.ಜಿ.ಎಫ್ ಮುಖಾಂತರ ಯಶ್ ಗೆ ದೇಶದಾದ್ಯಂತ ಮಾರುಕಟ್ಟೆ ಹಾಗು ಅಭಿಮಾನಿಗಳು ಹುಟ್ಟಿಕೊಳ್ಳೊದು ಪಕ್ಕಾ ಅಂತಿದಾರೆ!
  ಇಷ್ಟೊಂದು ಅದ್ದೂರಿ ಮೇಕಿಂಗ್ ಹೊಂದಿರುವ ಕೆ.ಜಿ.ಎಫ್ ಬಜೆಟ್ ಎಷ್ಟಿರಬಹುದು ಎಂಬ ಕೂತುಹಲ ಎಲ್ಲರಲ್ಲಿ ಇರತ್ತೆ ಅಲ್ವಾ?
  ಕೆ.ಜಿ.ಎಫ್ ಬಜೆಟ್ : ಸುಮಾರು 45-50 ಕೋಟಿ
  ನಿರ್ದೇಶನ: ಪ್ರಶಾಂತ್ ನೀಲ್
  ನಿರ್ಮಾಣ: ಹೊಂಬಾಳೆ ಫಿಲ್ಮ್ಸ್
  ಸಂಗೀತ: ರವಿ ಬಸ್ರೂರು

  English summary

  Top 10 Most Expensive Indian Movies Of All Time!

  Bollywood film making has taken gargantuan proportions thanks to the enormous funding coming its way these days. With major companies and production houses getting in on the game, it’s no wonder why the budgets of movies are sky rocketing by the day.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more