For Quick Alerts
ALLOW NOTIFICATIONS  
For Daily Alerts

'ಜಿಯೋ ಆಫರ್ಸ್' ಕೊಡುವುದರ ಉದ್ದೇಶಗಳೇನು? ಇಲ್ಲಿವೆ ಕುತೂಹಲಕಾರಿ 7 ಅಂಶಗಳು

ಮುಖೇಶ್ ಅಂಬಾನಿ ಇಷ್ಟೇಲ್ಲಾ ಉಚಿತ ಮತ್ತು ಕಡಿಮೆ ದರದ ಆಫರ್ ಗಳನ್ನು ಕೊಡುತ್ತಾರೆಂದರೆ ಯಾರಿಗಾದರೂ ಕುತೂಹಲ ಮತ್ತು ಗೊಂದಲ ಉಂಟಾಗುತ್ತದೆ. ಹೊಸ ಕೊಡುಗೆಗಳ ಮೂಲಕ ಮೂಲಕ ಹೊಸ ಗ್ರಾಹಕರನ್ನು ಸೆಳೆಯುವ ರೀತಿ ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡತ್ತೆ.

By Siddu
|

ಜಿಯೋ ಲಾಂಚ್ ಆದಾಗಿನಿಂದ ಇಲ್ಲಿಯವರೆಗೆ ಹಲವಾರು ಜನಪ್ರಿಯ ಆಫರ್ ಗಳನ್ನು ಮುಖೇಶ್ ಅಂಬಾನಿ ಘೋಷಿಸುತ್ತಾ ಬಂದಿದ್ದಾರೆ. ಪ್ರಾರಂಭದಲ್ಲಿ ವೆಲ್ಕಮ್ ಆಫರ್, ನಂತರ ಹ್ಯಾಪಿ ನ್ಯೂ ಇಯರ್ ನಂತಹ ಉಚಿತ ಆಫರ್ ಗಳನ್ನು ನೀಡಿದ್ದರು. ಮೂರನೇ ಪ್ರಯತ್ನದಲ್ಲಿ ಟ್ರಾಯ್ ನಿಯಮಗಳಿಗೆ ಅನುಸಾರವಾಗಿ ಕಡಿಮೆ ದರದಲ್ಲಿ ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್ ಘೋಷಣೆ ಮಾಡಿತ್ತು. ಪ್ರಸ್ತುತ ಧನ್ ಧನಾ ಧನ್ ಆಫರ್ ನೀಡುತ್ತಿದ್ದು, ಇದರ ಪ್ರಕಾರ 309 ರೂಪಾಯಿ ರೀಚಾರ್ಜ್ ಮಾಡಿದರೆ ಮೂರು ತಿಂಗಳು ಡೇಟಾ ಮತ್ತು ಇನ್ನಿತರ ಸೇವೆಗಳನ್ನು ಗ್ರಾಹಕರು ಪಡೆಯುತ್ತಿದ್ದಾರೆ. ಜಿಯೋ ಹೊಸ ಅವತಾರ! 100% ಕ್ಯಾಶ್ ಬ್ಯಾಕ್ ಬಂಪರ್ ಆಫರ್!!

ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್ ಮತ್ತು ಧನ್ ಧನಾ ಧನ್ ಆಫರ್ ಗಳಿಗಾಗಿ ರೂ. 99 ಪಾವತಿಸಿ ಜಿಯೋ ಫ್ರೈಮ್ ಮೆಂಬರ್ ಶಿಪ್ ಪಡೆಯಬೇಕಾಗಿದ್ದು, ಇದು ಹಲವು ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿದೆ. ಇದರ ಜತೆಗೆ ಜಿಯೋ ಪ್ರಿಪೇಡ್ ಮತ್ತು ಪೋಸ್ಟ್ ಪೇಡ್ ಪ್ಲಾನ್ ಗಳನ್ನು ಬಿಡುಗಡೆಗೊಳಿಸಿದೆ. ಜಿಯೋ ಉಲಾಲಾ.... ಇನ್ನೂ 12-18 ತಿಂಗಳು ಉಚಿತ ಆಫರ್!!

ಗ್ರಾಹಕರಲ್ಲಿ ಕೂತೂಹಲ/ಗೊಂದಲ

ಗ್ರಾಹಕರಲ್ಲಿ ಕೂತೂಹಲ/ಗೊಂದಲ

ಮುಖೇಶ್ ಅಂಬಾನಿ ಇಷ್ಟೇಲ್ಲಾ ಉಚಿತ ಮತ್ತು ಕಡಿಮೆ ದರದ ಆಫರ್ ಗಳನ್ನು ಕೊಡುತ್ತಾರೆಂದರೆ ಯಾರಿಗಾದರೂ ಕುತೂಹಲ ಮತ್ತು ಗೊಂದಲ ಉಂಟಾಗುತ್ತದೆ. ಹೊಸ ಹೊಸ ಕೊಡುಗೆಗಳ ಮೂಲಕ ಮೂಲಕ ಹೊಸ ಹೊಸ ಗ್ರಾಹಕರನ್ನು ಸೆಳೆಯುವ ರೀತಿ ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡತ್ತೆ. ನೀವು ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್ ಮತ್ತು ಧನ್ ಧನಾ ಧನ್ ಆಫರ್ ಗಳಿಗೆ ಸೈನ್ ಅಪ್ ಆಗುವಾಗ ನಿಮಗೆ ಗೊತ್ತಾಗದೆ ಇರುವ ಕೆಲ ಸಂಗತಿಗಳು ಇಲ್ಲಿವೆ ನೋಡಿ....

1. ಫ್ರೈಮ್ ಮೆಂಬರ್ ಶಿಪ್ ಅವಧಿ 1 ವರ್ಷ?

1. ಫ್ರೈಮ್ ಮೆಂಬರ್ ಶಿಪ್ ಅವಧಿ 1 ವರ್ಷ?

ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಜಿಯೋ ಫ್ರೈಮ್ ಮೆಂಬರ್ ಶಿಪ್ ಆಫರ್ ಘೋಷಿಸುವಾಗ ಅನೇಕ ಸಂಗತಿಗಳನ್ನು ಉಲ್ಲೇಖಿಸಿದ್ದರು. ಅದರಲ್ಲಿ ರೂ. 99ಕ್ಕೆ ಫ್ರೈಮ್ ಮೆಂಬರ್ ಶಿಪ್ ಪಡೆದುಕೊಂಡರೆ ನಾನ್ ಫ್ರೈಮ್ ಗ್ರಾಹಕರಿಗೆ ಹೋಲಿಸಿದರೆ ಹೆಚ್ಚುವರಿ ಡೇಟಾ ಪ್ಯಾಕ್ ಪ್ರಯೋಜನಗಳನ್ನು ಒಂದು ವರ್ಷದ ಅವಧಿವರೆಗೆ ಪಡೆಯಲಿದ್ದಾರೆ ಎಂದಿದ್ದರು. ಹಾಗಾಗಿ ಇಲ್ಲಿಯವರೆಗೆ ಯಾರ್ ಯಾರು ಜಿಯೋ ಫ್ರೈಮ್ ಮೆಂಬರ್ ಶಿಪ್ ಪಡೆದಿದ್ದಾರೋ ಅವರಲ್ಲಿ ಯಾರು ಕೂಡ ಒಂದು ವರ್ಷದ ಅವಧಿಗೆ ಫ್ರೈಮ್ ಮೆಂಬರ್ ಶಿಪ್ ಪಡೆದುಕೊಂಡಿಲ್ಲ. ಆದರೆ ಸದಸ್ಯತ್ವ ಅವಧಿ ಮಾರ್ಚ್ 31, 2018ಕ್ಕೆ ಮುಗಿಯಲಿದೆ. ಜಿಯೋ ಪರಿಚಯಾತ್ಮಕ ರೂ. 99 ಕಡ್ಡಾಯ.

2. 509 ರೀಚಾರ್ಜ್ ಮಾಡಿದರೂ ದಿನಕ್ಕೆ 1GB ಯಾಕೆ?
 

2. 509 ರೀಚಾರ್ಜ್ ಮಾಡಿದರೂ ದಿನಕ್ಕೆ 1GB ಯಾಕೆ?

ಪ್ರತಿದಿನ ಗ್ರಾಹಕರಿಗೆ ಜಿಯೋ 1gb ಡೇಟಾದೊಂದಿಗೆ ಹ್ಯಾಪಿ ನ್ಯೂ ಇಯರ್ ಸೇವೆಗಳನ್ನು ಒದಗಿಸುತ್ತಿದೆ. ರೂ. 499 ಮತ್ತು 509 ರೀಚಾರ್ಜ್ ಗಳ ಮೇಲೆ ಜಿಯೋ ಸಮ್ಮರ್ ಸರ್ಪ್ರೈಸ್ ಮತ್ತು ಧನ್ ಧನಾ ಧನ್ ಆಫರ್ ಪ್ರತಿದಿನ 2GB ಡೇಟಾ ಬಳಕೆದಾರರಿಗೆ ಕ್ರಮವಾಗಿ ನೀಡಿತ್ತು. ಅದಾಗ್ಯೂ, ಏಪ್ರಿಲ್ ಮಧ್ಯಭಾಗದಲ್ಲಿ ಅಥವಾ ತದನಂತರದಲ್ಲಿ ಆಫರ್ ಪಡೆಯುತ್ತಿರುವವರು 2gb ಗೆ ಬದಲಾಗಿ ದಿನಕ್ಕೆ 1gb ಡೇಟಾ ಪಡೆಯುತ್ತಿದ್ದಾರೆ. ಇದಕ್ಕೆ ಸಂಬಂಧಿತ ಮಾಹಿತಿಯನ್ನು ಮೈ ಜಿಯೋ ಆಫ್ ನಲ್ಲಿ ಮೈ ಪ್ಲಾನ್ ಸೆಕ್ಷನ್ ಅಥವಾ ಜಿಯೋ ವೆಬ್ಸೈಟ್ ನಲ್ಲಿ ಲಾಗಿನ ಆಗುವ ಮೂಲಕ ತಿಳಿಯಬಹುದು.

3. ಜಿಯೋ ಸಮ್ಮರ್ ಸರ್ಪ್ರೈಸ್ ಗ್ರಾಹಕರಾಗಿದ್ದಲ್ಲಿ ಮುಂದಿನ ರೀಚಾರ್ಜ್ ಪ್ಯಾಕ್ ಯಾವಾಗ?

3. ಜಿಯೋ ಸಮ್ಮರ್ ಸರ್ಪ್ರೈಸ್ ಗ್ರಾಹಕರಾಗಿದ್ದಲ್ಲಿ ಮುಂದಿನ ರೀಚಾರ್ಜ್ ಪ್ಯಾಕ್ ಯಾವಾಗ?

ರೂ. 99 ಫ್ರೈಮ್ ಸದಸ್ಯತ್ವ ಪಡೆದ ನಂತರ ರೂ. 303 ಪಾವತಿಸಿ ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್ ಪಡೆಯಬೇಕಾಗಿತ್ತು. ಇದು ಮೂರು ರೀಚಾರ್ಜ್ ಗಳ ಮೇಲೆ ಉಚಿತ ಡೇಟಾ ನೀಡಿತ್ತು. ಉದಾಹರಣೆಗೆ ಬಳಕೆದಾರ ಸಮ್ಮರ್ ಸರ್ಪ್ರೈಸ್ ಸದಸ್ಯರಾಗಿ ಜುಲೈ 11ರವರೆಗೆ ಉಚಿತ ಡೇಟಾ ಪಡೆಯುತ್ತಾರೆ. ಜುಲೈ 12ರಂದು ರೂ. 303 ಪ್ಲಾನ್ ಸ್ವಯಂಚಾಲಿತವಾಗಿ ಶುರುವಾಗುತ್ತದೆ. ಇದರರ್ಥ ಮುಂದಿನ ರೀಚಾರ್ಜ್ ಆಗಸ್ಟ್ 10ಕ್ಕೆ ಮಾಡಬೇಕಾಗುತ್ತದೆ.

4. ಜಿಯೋ ರೀಚಾರ್ಜ್ ಮಾಡಿಸದಿದ್ದರೆ ಸೇವೆಗಳನ್ನು ಮುಂದುವರೆಸಲು ಏನು ಮಾಡಬೇಕು?

4. ಜಿಯೋ ರೀಚಾರ್ಜ್ ಮಾಡಿಸದಿದ್ದರೆ ಸೇವೆಗಳನ್ನು ಮುಂದುವರೆಸಲು ಏನು ಮಾಡಬೇಕು?

ಇಲ್ಲಿಯವರೆಗೆ ಒಂದೂ ರೀಚಾರ್ಜ್ ಮಾಡದೆ ಇರುವ ಗ್ರಾಹಕರ ಸಂಪರ್ಕವನ್ನು ಜಿಯೋ ಕಡಿತಗೊಳಿಸುತ್ತಿದೆ. ಗ್ರೇಸ್ ಅವಧಿಯಲ್ಲಿ ಉಚಿತ ಸೌಲಭ್ಯ ಪಡೆಯುತ್ತಿರುವವರ ಸಂಪರ್ಕ ಕಡಿತ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕಡಿಮೆ ದರದ ಪ್ರಯೋಜನಗಳಿಗಾಗಿ ರೂ. 309 ರೀಚಾರ್ಜ್ ಮಾಡುವ ಮೂಲಕ ನೀವೂ ಫ್ರೈಮ್ ಮೆಂಬರ್ ಆಗುವ ಆಯ್ಕೆ ಇದೆ. ಆಕಸ್ಮಾತ್ ನಿಮ್ಮ ಜಿಯೋ ನಂಬರ್ ಡಿಸ್ ಕನೆಕ್ಟ್ ಆಗಿದ್ದಲ್ಲಿ ಜಿಯೋ ಸ್ಟೋರ್ ಗೆ ಹೋಗಿ ಪುನರ್ ಆರಂಭಿಸಲು ವಿನಂತಿಸಿ.

5. ಜಿಯೋ ಆಫ್ ಗಳನ್ನು ಬಳಸಲು ಜಿಯೋ ಫ್ರೈಮ್ ಮೆಂಬರ್ ಶಿಪ್ ಅಗತ್ಯವೆ?

5. ಜಿಯೋ ಆಫ್ ಗಳನ್ನು ಬಳಸಲು ಜಿಯೋ ಫ್ರೈಮ್ ಮೆಂಬರ್ ಶಿಪ್ ಅಗತ್ಯವೆ?

ಹ್ಯಾಪಿ ನ್ಯೂ ಇಯರ್ ಆಫರ್ ಘೋಷಣೆ ಮಾಡಿದ್ದಾಗ ಜಿಯೋ ಆಫ್ ಗಳನ್ನು ಡಿಸೆಂಬರ್ 31, 2017ರ ವರೆಗೆ ಉಚಿತವಾಗಿ ಗ್ರಾಹಕರು ಪಡೆಯಲಿದ್ದಾರೆ ಎಂದು ಹೇಳಿತ್ತು. ಈಗ ಜಿಯೋ ಪ್ರೈಮ್ ಬಳಕೆದಾರರು ಮಾರ್ಚ್ 31, 2018ವರೆಗೆ ಮೂರು ತಿಂಗಳ ವಿಸ್ತರಣೆಯೊಂದಿಗೆ ಜಿಯೋ ಅಪ್ಲಿಕೇಷನ್ ಚಂದಾದಾರಿಕೆಯನ್ನು ಪಡೆಯಬಹುದು ಎಂದು ಅಧಿಕೃತ ವೆಬ್ಸೈಟ್ ಹೇಳುತ್ತದೆ. ಆದಾಗ್ಯೂ, ಬಳಕೆದಾರರು ಸೇವೆಗಳನ್ನು ಮುಂದುವರಿಸಲು ರೂ. 309 ಅಥವಾ ಹೆಚ್ಚಿನ ಮೊತ್ತದ ರೀಚಾರ್ಜ್ ಮಾಡಬೇಕು.

6. ನಾನ್ ಫ್ರೈಮ್ ಸದಸ್ಯರ ಸೌಲಭ್ಯಗಳ ಖಾತರಿ ಇಲ್ಲ

6. ನಾನ್ ಫ್ರೈಮ್ ಸದಸ್ಯರ ಸೌಲಭ್ಯಗಳ ಖಾತರಿ ಇಲ್ಲ

ಇನ್ನೊಂದೆಡೆ ನಾನ್ ಫ್ರೈಮ್ ಗ್ರಾಹಕರು ಸೌಲಭ್ಯಗಳನ್ನು ಪಡೆಯುತ್ತಾರೆಂಬ ಖಾತರಿ ಇಲ್ಲ. ರೂ. 149 ಅಥವಾ ಅದಕ್ಕಿಂತ ಕಡಿಮೆ ರೀಚಾರ್ಜ್ ಮಾಡಿಕೊಂಡಿರುವ ನಾನ್ ಫ್ರೈಮ್ ಸದಸ್ಯರು ಆಪ್ ಚಂದಾದಾರಿಕೆ ಡಿಸೆಂಬರ್ 31, 2017 ಅಥವಾ ಮಾರ್ಚ್ 31, 2018ರವರೆಗೆ ಪಡೆಯುತ್ತಾರೆ ಎಂಬ ಗ್ಯಾರೆಂಟಿ ಇಲ್ಲ.

7. ಡಿಜಿಟಲ್ ಉದ್ಯಮಿಗಳೊಂದಿಗೆ ಪಾಲುದಾರಿಕೆ

7. ಡಿಜಿಟಲ್ ಉದ್ಯಮಿಗಳೊಂದಿಗೆ ಪಾಲುದಾರಿಕೆ

ರಿಲಯನ್ಸ್ ಜಿಯೋ

English summary

Reliance Jio Offers: 5 Things You Probably Didn't Know

Since launch, Reliance Jio has released a number of plans to ensure customers get services for free or, more recently, at ultra-low rates. While the first two offers - Jio Welcome Offer, and Jio Happy New Year Offer - ensured customers got services for free, the third such attempt.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X