Subscribe to GoodReturns Kannada
For Quick Alerts
For Daily Alerts
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೂ. 200 ಮುಖಬೆಲೆಯ ನೋಟುಗಳನ್ನು ಆಗಸ್ಟ್ ಕೊನೆ ವಾರ ಅಥವಾ ಸೆಪ್ಟಂಬರ್ ಮೊದಲ ವಾರದಲ್ಲಿ ಚಲಾವಣೆಗೆ ತರಲಿದೆ.
ಸರ್ಕಾರ ಇದೇ ಮೊದಲ ಬಾರಿಗೆ 200 ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುತ್ತಿದ್ದು, ಶೀಘ್ರದಲ್ಲಿಯೇ ಜನರ ಕೈ ಸೇರಲಿದೆ. ಆದರೆ 200 ಮುಖಬೆಲೆಯ ನೋಟು ಚಲಾವಣೆಗೆ ಬರಲಿರುವ ದಿನಾಂಕವನ್ನು ಆರ್ಬಿಐ ಅಧಿಕೃತವಾಗಿ ಘೋಷಿಸಿಲ್ಲ.
ಪ್ರಸ್ತುತ ರೂ. 100 ಹಾಗು 500 ಮುಖಬೆಲೆಯ ನೋಟುಗಳಂತೆ ರೂ. 200 ಮುಖಬೆಲೆಯ ನೋಟುಗಳು ಹೆಚ್ಚು ಜನಪ್ರಿಯವಾಗಲಿವೆ ಎಂದು ಆರ್ಬಿಐ ಅಭಿಪ್ರಾಯಪಟ್ಟಿದೆ.
ನೋಟು ನಿಷೇಧದ ಬಳಿಕ ರೂ. 500 ಹಾಗು 2000 ಮುಖಬೆಲೆಯ ಹೊಸ ನೋಟುಗಳನ್ನು ಸರ್ಕಾರ ಪರಿಚಯಿಸಿತ್ತು. ಕಪ್ಪುಹಣ ತಡೆಯುವುದು ಮುಖ್ಯ ಉದ್ದೇಶವಾಗಿರುವುದರಿಂದ ಹೊಸ ನೋಟುಗಳ ಚಲಾವಣೆ ಇದಕ್ಕೆ ಪೂರಕವಾಗಿರಲಿದೆ ಎನ್ನಲಾಗಿದೆ.
English summary