For Quick Alerts
ALLOW NOTIFICATIONS  
For Daily Alerts

ಬುಲೆಟ್ ರೈಲು ಯೋಜನೆ (ಅವಧಿ, ವೆಚ್ಚ, ವೇಗ, ಸಾಮರ್ಥ್ಯ, ಉದ್ಯೋಗ) ಬಗ್ಗೆ ನಿಮಗೆಷ್ಟು ಗೊತ್ತು?

ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ದೇಶದ ಪ್ರಥಮ ಬುಲೆಟ್ ರೈಲು ಯೋಜನೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

By Siddu
|

ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ದೇಶದ ಪ್ರಥಮ ಬುಲೆಟ್ ರೈಲು ಯೋಜನೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಬುಲೆಟ್ ರೈಲು ಯೋಜನೆಗೆ ಸಾಬರಮತಿ ರೈಲು ನಿಲ್ದಾಣದಲ್ಲಿ ಮೋದಿ ಮತ್ತು ಅಬೆ ಶಂಕುಸ್ಥಾಪನೆ ನೇರವೇರಿಸಿದ್ದು, ಇದು ದೇಶದ ಸಾರಿಗೆ ಸಂಪರ್ಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಲಿದೆ ಎನ್ನಲಾಗಿದೆ.

ಯೋಜನಾ ಅವಧಿ

ಯೋಜನಾ ಅವಧಿ

508 ಕಿ.ಮೀ ಉದ್ದದ ಮುಂಬೈ-ಅಹಮದಾಬಾದ್ ನಡುವಿನ ಆದುನಿಕ ತಂತ್ರಜ್ಞಾನದ ಬುಲೆಟ್‌ ರೈಲು ಯೋಜನೆಯನ್ನು 2023ರಲ್ಲಿ ಪೂರ್ಣಗೊಳಿಸಲಾಗುವುದು ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ 2022ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾಗುವುದರಿಂದ ಅದೇ ವರ್ಷ ರೈಲು ಪ್ರಯಾಣ ಆರಂಭಿಸಲು ಉದ್ದೇಶಿಸಲಾಗಿದೆ.

ವೇಗ, ಪ್ರಯಾಣ ದರ

ವೇಗ, ಪ್ರಯಾಣ ದರ

ಬುಲೆಟ್ ರೈಲು ಪ್ರತಿ ಗಂಟೆಗೆ 320-350km ವೇಗದಲ್ಲಿ ಸಂಚರಿಸಲಿದೆ. ಎರಡು ನಗರಗಳ ನಡುವಿನ ಸಮಯ ಉಳಿತಾಯವಾಗಲಿದ್ದು, 7-8 ಗಂಟೆಗಳ ಪ್ರಯಾಣವನ್ನು 2 ಗಂಟೆಗಳಲ್ಲಿ ತಲುಪಬಹುದಾಗಿದೆ. ಪ್ರಯಾಣ ದರ ರೂ. 3000-5000 ನಡುವೆ ಇರಲಿದೆ ಎನ್ನಲಾಗಿದೆ. ತಜ್ಞರು ಹೇಳಿರುವಂತೆ ಪ್ರತೀ 300 ಕಿ.ಮೀ ಪ್ರಯಾಣಕ್ಕೆ ಸುಮಾರು ರೂ. 1500 ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ರೈಲು ಸಾಮರ್ಥ್ಯ, ಬೋಗಿಗಳು

ರೈಲು ಸಾಮರ್ಥ್ಯ, ಬೋಗಿಗಳು

ಸಾಮಾನ್ಯವಾಗಿ, ಹೈ ಸ್ಪೀಡ್ ರೈಲಿನ 10 ಬೋಗಿಗಳು 750 ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿರುತ್ತದೆ. ಅದೇ ರೀತಿ 16 ಬೋಗಿಗಳು 1,200 ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿರುತ್ತದೆ. ವಾರ್ಷಿಕವಾಗಿ 1.6 ಕೋಟಿ ಜನ ಬುಲೆಟ್ ರೈಲು ಮೂಲಕ ಪ್ರಯಾಣಿಸುವ ನಿರೀಕ್ಷೆಯಿದೆ. 2050 ರ ಹೊತ್ತಿಗೆ ಪ್ರತಿದಿನ 1.6 ಲಕ್ಷ ಪ್ರಯಾಣಿಕರು ಹೈ ಸ್ಪೀಡ್ ರೈಲು ಮೂಲಕ ಪ್ರಯಾಣಿಸಲಿದ್ದಾರೆ.

ಬುಲೆಟ್ ರೈಲು ವೆಚ್ಚ

ಬುಲೆಟ್ ರೈಲು ವೆಚ್ಚ

ಭಾರತದ ಮೊದಲ ಬುಲೆಟ್ ರೈಲಿನ ವೆಚ್ಚ 1.10 ಲಕ್ಷ ಕೋಟಿಯಾಗಿದೆ. ಈ ಪೈಕಿ ಶೇ. 81ರಷ್ಟು ಮೊತ್ತ ಅಂದರೆ ಸುಮಾರು 88 ಸಾವಿರ ಕೋಟಿಯನ್ನು ಜಪಾನ್ ಸರ್ಕಾರ ನೀಡಲಿದೆ. ಭಾರತದ ಬುಲೆಟ್ ರೈಲು ಯೋಜನೆಗೆ ನೀಡುವ ಈ ಸಾಲಕ್ಕೆ ಜಪಾನ್ ಸರ್ಕಾರ ವಿಶ್ವಬ್ಯಾಂಕ್ ಗಿಂತಲೂ ಅತ್ಯಂತ ಕಡಿಮೆ ಬಡ್ಡಿ ದರ ಅಂದರೆ ಶೇ. 01ರಷ್ಟು ಬಡ್ಡಿದರ ವಿಧಿಸಲಿದೆ. ಜತೆಗೆ ಈ ಸಾಲಕ್ಕೆ ವಿಶ್ವಬ್ಯಾಂಕ್ ಗಿಂತಲೂ ಹೆಚ್ಚಿನ ಕಾಲಾವಕಾಶ ಮಿತಿ ನೀಡಿದ್ದು, 50 ವರ್ಷಗಳಲ್ಲಿ ಸಾಲ ತೀರಿಸಲು ಯೋಜನೆಗೆ ಸಹಿ ಹಾಕಲಾಗಿದೆ.

ಉದ್ಯೋಗ ಸೃಷ್ಟಿ

ಉದ್ಯೋಗ ಸೃಷ್ಟಿ

ಬುಲೆಟ್ ರೈಲು ಯೋಜನೆ ಭಾರತ ಮತ್ತು ಜಪಾನ್ ಸ್ನೇಹದ ಪ್ರತೀಕವಾಗಿದ್ದು, ಈ ಯೋಜನೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸುಮಾರು 40 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಸುಮಾರು 20,000, ನಿರ್ವಹಣಾ ಕ್ಷೇತ್ರದಲ್ಲಿ 4 ಸಾವಿರ ಹಾಗೂ ವಿವಿಧ ಕ್ಷೇತ್ರದಲ್ಲಿ 2 ಸಾವಿರ ಉದ್ಯೋಗ ಹಾಗೂ ಪರೋಕ್ಷ ಘಟಕಗಳಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಬುಲೆಟ್ ರೈಲು ಮಾರ್ಗ

ಬುಲೆಟ್ ರೈಲು ಮಾರ್ಗ

ಈ ಬುಲೆಟ್ ರೈಲು ಯೋಜನೆಯ ರೈಲ್ವೇ ಕಾರಿಡಾರ್ ಮುಂಬೈ ನಿಂದ ಅಹಮದಾಬಾದ್ ವರೆಗೆ ಒಟ್ಟು 508km ಉದ್ದವಿದ್ದು, ಯೋಜನೆಗೆ ಕೇವಲ 825 ಹೆಕ್ಟೇರ್ ಭೂಮಿ ಮಾತ್ರ ಅಗತ್ಯವಿದ್ದು, ಶೇ. 92ರಷ್ಟು ಮಾರ್ಗ ಎತ್ತರದಲ್ಲಿರುತ್ತದೆ. ಶೇ. 6ರಷ್ಟು ಸುರಂಗಗಳ ಮೂಲಕ ಹಾದುಹೋಗುತ್ತದೆ. ಉಳಿದ ಶೇ. 2ರಷ್ಟು ಮಾತ್ರ ನೆಲದ ಮೇಲೆ ಇರುತ್ತದೆ. ಮುಂಬೈನ ಬೋಯಿಸರ್ ಮತ್ತು ಬಿಕೆಸಿ ನಡುವೆ ಸುಮಾರು 21 ಕಿಮೀ ಸುರಂಗ ಮಾರ್ಗ, ಥಾಣೆ ಮತ್ತು ವಸೈ ನಡುವೆ ಹೆಚ್ಚುಕಡಿಮೆ 40km ಪ್ರದೇಶ ಸಮುದ್ರದೊಳಗೆ ಮತ್ತು ಮುಂಬೈ ನಲ್ಲಿ ಅಂಡರ್ ಗ್ರೌಂಡ್ ಮೂಲಕ ಈ ಯೋಜನೆಯ ಹಳಿಗಳು ಹಾದುಹೋಗಲಿವೆ.

ಸ್ಟೇಶನ್ ಮಾಹಿತಿ

ಸ್ಟೇಶನ್ ಮಾಹಿತಿ

ಅಹಮದಾಬಾದ್-ಮುಂಬೈ ಮಾರ್ಗದಲ್ಲಿ 12 ನಿಲ್ದಾಣಗಳನ್ನು ಪ್ರಸ್ತಾವಿಸಲಾಗಿದೆ. ಮುಂಬೈ, ಥಾಣೆ, ವಿರಾರ್, ಬೋಯಿಸರ್, ವಪಿ, ಬಿಲಿಮೊರಾ, ಸೂರತ್, ಭರೂಚ್, ವಡೋದರಾ, ಆನಂದ್, ಅಹಮದಾಬಾದ್ ಮತ್ತು ಸಾಬರಮತಿ.

English summary

India's first bullet train project: you must know these things

Prime Minister Narendra Modi and his Japanese counterpart Shinzo Abe laid the foundation stone for India's first bullet train project in Ahmedabad on Thursday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X