For Quick Alerts
ALLOW NOTIFICATIONS  
For Daily Alerts

ಮೊಬೈಲ್ ಕರೆ ದರ ಕಡಿತ, ಇನ್ಮುಂದೆ ಮೊಬೈಲ್ ಬಿಲ್ ಕಡಿಮೆ ಆಗಲಿದೆ!

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ಮೊಬೈಲ್ ಕರೆ ಸಂಪರ್ಕ ದರವನ್ನು ಪ್ರತಿ ನಿಮಿಷಕ್ಕೆ 6 ಪೈಸೆ ಇಳಿಸಿದೆ. ಈ ನಿರ್ಣಯದ ಫಲವಾಗಿ ಮೊಬೈಲ್ ಕರೆ ದರಗಳು ಅಗ್ಗವಾಗಲಿವೆ.

By Siddu
|

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ಮೊಬೈಲ್ ಕರೆ ಸಂಪರ್ಕ ದರವನ್ನು ಪ್ರತಿ ನಿಮಿಷಕ್ಕೆ 6 ಪೈಸೆ ಇಳಿಸಿದೆ. ಈ ನಿರ್ಣಯದ ಫಲವಾಗಿ ಮೊಬೈಲ್ ಕರೆ ದರಗಳು ಅಗ್ಗವಾಗಲಿವೆ.

 

ಮೊಬೈಲ್ ಸೇವಾ ಕಂಪನಿಗಳು ಕರೆ ಶುಲ್ಕ ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸಿದರೆ ಸ್ಥಳೀಯ ಕರೆಗಳ ಶುಲ್ಕ ಇಳಿಕೆಯಾಗಲಿದೆ.

14 ಪೈಸೆಯಿಂದ 6 ಪೈಸೆಗೆ ಇಳಿಕೆ

14 ಪೈಸೆಯಿಂದ 6 ಪೈಸೆಗೆ ಇಳಿಕೆ

ಮೊಬೈಲ್ ಕರೆ ಅಂತರ್ ಸಂಪರ್ಕ ಬಳಕೆ ಶುಲ್ಕವನ್ನು (ಕಾಲ್ ಕನೆಕ್ಟ್ ಚಾರ್ಜ್) 6 ಪೈಸೆಗೆ ಇಳಿಕೆ ಮಾಡಲಿದೆ. ಟ್ರಾಯ್ ಮೊಬೈಲ್ ಸೇವಾ ಕಂಪನಿಗಳ ನಡುವೆ ಇದ್ದ ಕರೆ ಅಂತರ್ ಸಂಪರ್ಕ ಬಳಕೆ ಶುಲ್ಕವನ್ನು 14 ಪೈಸೆಯಿಂದ 6 ಪೈಸೆಗೆ ಇಳಿಸುವ ನಿರ್ಧಾರ ಇದೆ.

ಜಾರಿ ಯಾವಾಗ?

ಜಾರಿ ಯಾವಾಗ?

ಅಕ್ಟೋಬರ್ 1ರಿಂದ ಹೊಸ ಕರೆದ ರಗಳು ಜಾರಿಗೆ ಬರಲಿದೆ. ಜತೆಗೆ 2020ರ ಜನವರಿಯಿಂದ ಕರೆ ಅಂತರ್ ಸಂಪರ್ಕ ಶುಲ್ಕವನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ. ಮೊಬೈಲ್ ಕಂಪನಿಗಳು ಶುಲ್ಕ ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸಿದರೆ ಮೊಬೈಲ್ ಕರೆ ದರಗಳು ಇನ್ನಷ್ಟು ಅಗ್ಗವಾಗಲಿವೆ. ಇದು ಜಾರಿಯಾದಲ್ಲಿ ರಿಲಾಯನ್ಸ್ ಜಿಯೋಗೆ ಹೆಚ್ಚಿನ ಲಾಭ ಸಿಗಲಿದೆ.

ಮೊಬೈಲ್ ಸೇವಾ ಸಂಸ್ಥೆಗಳ ವಿರೋಧ
 

ಮೊಬೈಲ್ ಸೇವಾ ಸಂಸ್ಥೆಗಳ ವಿರೋಧ

‘ಟ್ರಾಯ್‌'ನ ಈ ನಿರ್ಧಾರದಿಂದ ಮೊಬೈಲ್‌ ಸೇವಾ ಕಂಪನಿಗಳಿಗೆ ಭಾರಿ ಹಾನಿ ಸಂಭವಿಸಲಿದೆ ಎಂದು ಮೊಬೈಲ್ ಸೇವಾ ಸಂಸ್ಥೆಗಳ ಸಂಘ (ಸಿಒಎಐ) ವಿರೋಧ ವ್ಯಕ್ತಪಡಿಸಿದೆ. ಟ್ರಾಯ್ ನಿರ್ಧಾರದ ವಿರುದ್ಧ ಕೋರ್ಟ್ ಗೆ ಮೋರೆ ಹೋಗುವುದಾಗಿ ಸಂಘಟನೆ ತಿಳಿಸಿದೆ.

Read more about: trai telecom finance news jio taxes
English summary

Trai lowers call connect charge to 6 paise, no rate from 2020

Telecom regulator Trai Tuesday announced slashing of the mobile call connection charge by more than half to 6 paise a minute and said no rate will apply from January 1, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X