For Quick Alerts
ALLOW NOTIFICATIONS  
For Daily Alerts

ಬ್ಯಾಂಕು ವಹಿವಾಟುಗಳಿಗಾಗಿ ಗುರುತಿನ ಚೀಟಿ ದೃಢೀಕರಣ ಕಡ್ಡಾಯ

ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಲ್ಲಿ ನಿಗದಿಪಡಿಸಿದ ರೂ. 50 ಸಾವಿರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವ್ಯವಹಾರ ನಡೆಸುವ ಗ್ರಾಹಕರು ಈ ಮೊದಲು ಒದಗಿಸಿದ್ದ ಮೂಲ ಗುರುತಿನ ಚೀಟಿಗಳನ್ನು ದೃಢೀಕರಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ.

By Siddu
|

ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಲ್ಲಿ ನಿಗದಿಪಡಿಸಿದ ರೂ. 50 ಸಾವಿರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವ್ಯವಹಾರ ನಡೆಸುವ ಗ್ರಾಹಕರು ಈ ಮೊದಲು ಒದಗಿಸಿದ್ದ ಮೂಲ ಗುರುತಿನ ಚೀಟಿಗಳನ್ನು ದೃಢೀಕರಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ.

 

ಹಣಕಾಸು ಸಚಿವಾಲಯ ಅಕ್ರಮ ಹಣ ವರ್ಗಾವಣೆ ತಡೆ (ದಾಖಲೆಗಳ ನಿರ್ವಹಣೆ) ನಿಯಮಗಳಿಗೆ ತಿದ್ದುಪಡಿ ತಂದಿದ್ದು, ರೆವೆನ್ಯೂ ಇಲಾಖೆ ಇದಕ್ಕೆ ಸಂಬಂಧಿಸಿದಂತೆ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ.

ನಕಲಿ ಪ್ರತಿಗಳ ತಡೆ

ನಕಲಿ ಪ್ರತಿಗಳ ತಡೆ

ಗುರುತಿನ ಚೀಟಿಗಳ ನಕಲಿ ಪ್ರತಿಗಳ ಬಳಕೆ ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಕಾನೂನುಬಾಹಿರ ಹಣ ವರ್ಗಾವಣೆ ಮತ್ತು ಕಪ್ಪು ಹಣ ನಿರ್ಬಂಧಿಸುವ ಉದ್ದೇಶದಿಂದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯನ್ನು (ಪಿಎಂಎಲ್ಎ) ಈಗಾಗಲೇ ಜಾರಿಗೆ ತರಲಾಗಿದೆ.

ಹೋಲಿಕೆ

ಹೋಲಿಕೆ

ಗ್ರಾಹಕರು ಬ್ಯಾಂಕುಗಳಿಗೆ ಸಲ್ಲಿಸಿರುವ ಮೂಲ ಗುರುತಿನ ಚೀಟಿಗಳನ್ನು ವಹಿವಾಟಿನ ಸಂದರ್ಭದಲ್ಲಿ ನೀಡಲಾಗುವ ಛಾಯಾ ಪ್ರತಿಗಳ ಜತೆ ಹೋಲಿಸಿ ದೃಢೀಕರಿಸಿಕೊಳ್ಳುವುದು ಈಗ ಕಡ್ಡಾಯವಾಗಿರಲಿದೆ.

ಅಧಿಕೃತ ದಾಖಲೆ ಸಲ್ಲಿಕೆ
 

ಅಧಿಕೃತ ದಾಖಲೆ ಸಲ್ಲಿಕೆ

ಷೇರು ಬ್ರೋಕರ್, ಚಿಟ್‌ಫಂಡ್‌ ಸಂಸ್ಥೆ, ಸಹಕಾರಿ ಬ್ಯಾಂಕ್‌, ಗೃಹ ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ ಜತೆ ಖಾತೆ ಆಧಾರಿತ ವ್ಯವಹಾರ ಹೊಂದಿರುವಾಗ, ಅವರ ಗುರುತನ್ನು ದೃಢೀಕರಿಸಿಕೊಂಡಿರಬೇಕು. ಬ್ಯಾಂಕು ಖಾತೆ ಆರಂಭಿಸಲು ಮತ್ತು ರೂ. 50 ಸಾವಿರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಗದು ವಹಿವಾಟು ನಡೆಸಿದಾಗ ಆಧಾರ್‌ ಮತ್ತು ಇತರ ಅಧಿಕೃತ ದಾಖಲೆಗಳನ್ನು ಸಲ್ಲಿಸಬೇಕಾಗಿರುವುದನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ.

English summary

Banks to Ask For Original Identity Proofs For Transactions

The Government has made it mandatory for banks and financial institutions to check the original identification documents of individuals dealing in cash above the prescribed threshold.
Story first published: Monday, October 23, 2017, 16:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X