For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ಎಫೆಕ್ಟ್: ಮದುವೆಗಳು ಶೇ. 10-15ರಷ್ಟು ತುಟ್ಟಿ ಆಗಲಿವೆ

ಮದುವೆ ಖರ್ಚುವೆಚ್ಚಗಳು ಜಿಎಸ್ಟಿ ಕಾರಣಕ್ಕೆ ಶೇ. 10 ರಿಂದ 15ರಷ್ಟು ತುಟ್ಟಿಯಾಗಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ವರದಿ ಮಾಡಿದೆ.

By Siddu
|

ಇನ್ನೇನು ನವೆಂಬರ್ ತಿಂಗಳಿನಿಂದ ಮದುವೆ ಸೀಜನ್ ಜೋರಾಗಿ ನಡೆಯಲಿದೆ. ಮದುವೆಗಾಗಿ ಕುಟುಂಬವೊಂದು ಮಾಡುವ ವೆಚ್ಚಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಋಣಾತ್ಮಕ ಪರಿಣಾಮ ಬೀರಲಿದೆ.

ಮದುವೆ ಖರ್ಚುವೆಚ್ಚಗಳು ಜಿಎಸ್ಟಿ ಕಾರಣಕ್ಕೆ ಶೇ. 10 ರಿಂದ 15ರಷ್ಟು ತುಟ್ಟಿಯಾಗಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ವರದಿ ಮಾಡಿದೆ. ಜಿಯೋ ಧೋಕಾ! ಜಿಯೋ ಹೊಸ ರೀಚಾರ್ಜ್ ಪ್ಲಾನ್ ಗಳು ದುಬಾರಿ

ಯಾವುದಕ್ಕೆ ಹೆಚ್ಚು ಜಿಎಸ್ಟಿ

ಯಾವುದಕ್ಕೆ ಹೆಚ್ಚು ಜಿಎಸ್ಟಿ

ಸಾಮಾನ್ಯವಾಗಿ ನವೆಂಬರ್ ನಿಂದ ಮದುವೆ ಸಮಾರಂಭಗಳು ಭರ್ಜರಿಯಾಗಿ ನಡೆಯುತ್ತವೆ. ಮದುವೆ ಸಂಭ್ರಮ ಹೆಚ್ಚಿಸುವ ವಸ್ತ್ರ, ಚಿನ್ನಾಭರಣಗಳು, ಸಮಾರಂಭ ನಡೆಯುವ ಸಭಾಂಗಣದ ಬಾಡಿಗೆ, ಊಟೋಪಚಾರ, ಛಾಯಾಚಿತ್ರ, ವಿಡಿಯೊ ಚಿತ್ರೀಕರಣ ಮುಂತಾದ ಸೇವೆಗಳಿಗೆ ಜಿಎಸ್ಟಿಯಿಂದಾಗಿ ಹೆಚ್ಚು ಹಣ ಪಾವತಿಸುವುದು ಈಗ ಅನಿವಾರ್ಯವಾಗಲಿದೆ.

ಜಿಎಸ್ಟಿ, ನೋಟು ರದ್ದತಿ ಎಫೆಕ್ಟ್

ಜಿಎಸ್ಟಿ, ನೋಟು ರದ್ದತಿ ಎಫೆಕ್ಟ್

ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ಮತ್ತು ಜಿಎಸ್ಟಿ ಜಾರಿ ಫಲವಾಗಿ ಮದುವೆ ಸಂಬಂಧಿತ ವೆಚ್ಚ ದುಬಾರಿಯಾಗಲಿದೆ. ಬ್ಯೂಟಿಪಾರ್ಲರ್‌, ಮದುವೆ ಕರೆಯೋಲೆಗಳ ಕೊರಿಯರ್‌, ಅತಿಥಿಗಳಿಗಾಗಿ ಹೋಟೆಲ್‌ ಕೋಣೆಗಳ ಬಾಡಿಗೆ ವೆಚ್ಚಗಳೂ ತುಟ್ಟಿಯಾಗಲಿವೆ.

ಜಿಎಎಸ್ಟಿ ದರ ಶೇ. 18 ರಿಂದ 28

ಜಿಎಎಸ್ಟಿ ದರ ಶೇ. 18 ರಿಂದ 28

ಮದುವೆ ಸೇವೆಗಳ ಜಿಎಎಸ್ಟಿ ಶೇ. 18 ರಿಂದ 28ರವರೆಗೆ ಇರಲಿದೆ. ಜಿಎಸ್ಟಿ ಜಾರಿ ಮುನ್ನ ಮದುವೆ ಸಿದ್ಧತೆಗಳಿಗೆ ಮಾಡುವ ವೆಚ್ಚಗಳಿಗೆ ಅಧಿಕೃತ ರಸೀದಿ ನೀಡುವ ನಿಯಮ ಕಟ್ಟುನಿಟ್ಟಾಗಿರಲಿಲ್ಲ. ಹೀಗಾಗಿ ತೆರಿಗೆ ಕಟ್ಟುವ ಅಗತ್ಯ ಇದ್ದಿರಲಿಲ್ಲ. ಈಗ ಜಿಎಸ್ಟಿ ವ್ಯವಸ್ಥೆಯಡಿ ತೆರಿಗೆ ಪಾವತಿಸುವ ಬದ್ಧತೆ ಹೆಚ್ಚುತ್ತಿದೆ.

ಮದುವೆ ಪ್ರಾಶಸ್ತ್ಯ

ಮದುವೆ ಪ್ರಾಶಸ್ತ್ಯ

ಒಂದು ಅಂದಾಜಿನ ಪ್ರಕಾರ ಭಾರತೀಯರು ತಮ್ಮ ಸಂಪತ್ತಿನ ಒಂದು ಐದಾಂಶದಷ್ಟು ಭಾಗ ಮದುವೆ ಸಮಾರಂಭಗಳಿಗೆ ಖರ್ಚು ಮಾಡುತ್ತಾರೆ. ಜಿಎಸ್ಟಿ ಫಲವಾಗಿ ಮದುವೆ ವೆಚ್ಚಗಳು ಗಣನೀಯವಾಗಿ ಹೆಚ್ಚಾಗಲಿರುವುದರಿಂದ ಜನರು ಮದುವೆ ಬಜೆಟ್ ಪರಿಷ್ಕರಿಸಲಿದ್ದು, ವೆಚ್ಚಕ್ಕೆ ಕಡಿವಾಣ ಹಾಕಲಿದ್ದಾರೆ ಎಂದು ಅಸೋಚಾಂ ವರದಿಯಲ್ಲಿ ತಿಳಿಸಿದೆ.

English summary

GST may impact wedding season business by 10-15%

The upcoming wedding season starting in November may be impacted by 10 to 15 per cent owing to demonetisation and GST.
Story first published: Tuesday, October 24, 2017, 14:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X