For Quick Alerts
ALLOW NOTIFICATIONS  
For Daily Alerts

ನಿಮ್ಮ ಮಕ್ಕಳ ಉತ್ತಮ ಶೈಕ್ಷಣಿಕ ಭವಿಷ್ಯವನ್ನು ರೂಪಿಸುವುದು ಹೇಗೆ?

ಶೈಕ್ಷಣಿಕ ವೆಚ್ಚ ಹೆಚ್ಚುತ್ತಿರುವ ಹೊರತಾಗಿಯೂ, ಜವಾಬ್ದಾರಿಯುತ ಪೋಷಕರಾಗಿ ಮಕ್ಕಳ ಭವಿಷ್ಯದ ವಿಷಯದಲ್ಲಿ ಯಾರೂ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಖರ್ಚುಗಳನ್ನು ಹೊಂದಿಸುವುದು ಪಾಲಕರ ಮುಂದಿರುವ ದೊಡ್ಡ ಸವಾಲು.

By Siddu
|

ಶೈಕ್ಷಣಿಕ ವೆಚ್ಚ ಹೆಚ್ಚುತ್ತಿರುವ ಹೊರತಾಗಿಯೂ, ಜವಾಬ್ದಾರಿಯುತ ಪೋಷಕರಾಗಿ ಮಕ್ಕಳ ಭವಿಷ್ಯದ ವಿಷಯದಲ್ಲಿ ಯಾರೂ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಖರ್ಚು ವೆಚ್ಚಗಳನ್ನು ಹೊಂದಿಸುವುದು ಪ್ರತಿಯೊಬ್ಬ ಪಾಲಕರ ಮುಂದಿರುವ ಬಹುದೊಡ್ಡ ಸವಾಲು.

 

ಭವಿಷ್ಯತ್ತಿನಲ್ಲಿ ಮಕ್ಕಳ ಶೈಕ್ಷಣಿಕ ಖರ್ಚುವೆಚ್ಚಗಳನ್ನು ಭರಿಸಲು ಪೋಷಕರು ಉತ್ತಮವಾದ ಇನ್ವೆಸ್ಟ್ಮೆಂಟ್ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬೆಕು. ಇಲ್ಲವೇ ಇನ್ನಿತರ ಆಯಾಮಗಳಲ್ಲಿ ಆ ಬಗ್ಗೆ ಚಿಂತಿಸಿ ಪೂರ್ವತಯಾರಿ ಮಾಡಬೇಕು. ದಂಪತಿಗಳು ಹಾಗು ಮದುವೆ ಆಗೋರು ತಿಳಿಯಬೇಕಾದ ವಿಷಯಗಳೇನು?

ವೈದ್ಯಕೀಯ ಖರ್ಚು ವೆಚ್ಚ

ವೈದ್ಯಕೀಯ ಖರ್ಚು ವೆಚ್ಚ

ಕುಟುಂಬದ ಹಣಕಾಸು ಯೋಜನೆ ಹೇಗಿರಬೇಕು?ಕುಟುಂಬದ ಹಣಕಾಸು ಯೋಜನೆ ಹೇಗಿರಬೇಕು?

ಟರ್ಮ್ ವಿಮೆಯನ್ನು ಹೆಚ್ಚಿಸಿ

ಟರ್ಮ್ ವಿಮೆಯನ್ನು ಹೆಚ್ಚಿಸಿ

ನೀವು ಈಗಾಗಲೇ ಹೊಂದಿರುವ ಟರ್ಮ್ ವಿಮೆ ಸಾಕಷ್ಟಿದೆಯೇ ಅಥವಾ ನಿಮ್ಮ ಮಗುವಿನ ಭವಿಷ್ಯದ ದೃಷ್ಟಿಯಿಂದ ಸೇರಿಸಿಕೊಳ್ಳಬೇಕೆ ಎಂಬುದನ್ನು ಪರಿಶೀಲಿಸಿ. ಇದು ಸಾಕಷ್ಟು ಇಲ್ಲದೇ ಇದ್ದ ಸಂದರ್ಭದಲ್ಲಿ ಇದನ್ನು ಸರಿದೂಗಿಸುವಂತಹ ಟರ್ಮ್ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಿ. ಯಾವುದೇ ಅಪಘಾತದ ಸಂದರ್ಭದಲ್ಲಿ ಇದು ಸಹಾಯಕ್ಕೆ ಬರುತ್ತದೆ.

ಹೆಚ್ಚುತ್ತಿರುವ ಶಿಕ್ಷಣದ ಖರ್ಚು ವೆಚ್ಚಗಳು
 

ಹೆಚ್ಚುತ್ತಿರುವ ಶಿಕ್ಷಣದ ಖರ್ಚು ವೆಚ್ಚಗಳು

ಶಿಕ್ಷಣ ವೆಚ್ಚಗಳು ಪ್ರತಿವರ್ಷವೂ ಗಗನಕ್ಕೆ ಏರುತ್ತಿವೆ. ನಿಮ್ಮ ಕಾಲೇಜು ಶಿಕ್ಷಣಕ್ಕಾಗಿ ನಿಮ್ಮ ತಂದೆಯು ಏನು ಖರ್ಚು ಮಾಡಿದ್ದರೋ ಅದು ಈಗ ನಿಮ್ಮ ಮಗುವಿನ ಪ್ರಾಥಮಿಕ ಶಾಲಾ ಶಿಕ್ಷಣಕ್ಕಾಗಿ ನೀವು ಖರ್ಚು ಮಾಡಬೇಕಾದಂತಹ ಪರಿಸ್ಥಿತಿಯಿದೆ. ಆದುದರಿಂದ ನಿಮ್ಮ ಮಾಸಿಕ ಬಜೆಟ್ ನಲ್ಲಿ ಸಾಕಷ್ಟು ಹಣವು ಶಾಲಾ ಶಿಕ್ಷಣದ ಖರ್ಚಿಗಾಗಿ ಮೀಸಲಿಡಬೇಕಾಗುತ್ತದೆ. ಇದಕ್ಕಾಗಿ ಸೂಕ್ತ ಯೋಜನೆ ರೂಪಿಸಲು ಮರೆಯದಿರಿ.

ಉನ್ನತ ಶಿಕ್ಷಣಕ್ಕಾಗಿ ಹಣಕಾಸು ಯೋಜನೆ

ಉನ್ನತ ಶಿಕ್ಷಣಕ್ಕಾಗಿ ಹಣಕಾಸು ಯೋಜನೆ

ನಿಮ್ಮ ಮಗುವಿನ ಉನ್ನತ ಶಿಕ್ಷಣಕ್ಕೆ ನೀವು ಇನ್ನೂ ಯಾವುದೇ ಯೋಜನೆಯನ್ನು ತೆಗೆದುಕೊಂಡಿಲ್ಲವೆಂದರೆ ಇದರಿಂದ ನಿಮಗೆ ಆರ್ಥಿಕ ಆಘಾತವಾಗುವುದರಲ್ಲಿ ಸಂಶಯವಿಲ್ಲ. ಒಂದು ವೇಳೆ ಯಾವುದೇ ಯೋಜನೆಮಾಡದಿದ್ದಲ್ಲಿ ತಡ ಮಾಡದೇ ನಿಮ್ಮ ಮಗುವಿನ ಆಗಮನವಾದ ಕೂಡಲೇ ಪ್ರಾರಂಭಿಸಿ.
ಹೀಗೆ ಮಾಡಿದಲ್ಲಿ ನಿಮಗೆ ತುಂಬಾ ಸಮಯ ಸಿಗುವುದು. ನಿಮ್ಮ ಮಗು ತನ್ನ ವಿದ್ಯಾಭ್ಯಾಸವನ್ನು ಇಂದು ಪೂರ್ಣಗೊಳಿಸಿದೆ ಎಂದು ಊಹಿಸಿ. ಇಂದಿನ ವೆಚ್ಚದಲ್ಲಿ ನೀವು ಉನ್ನತ ಶಿಕ್ಷಣಕ್ಕಾಗಿ ಎಷ್ಟು ಖರ್ಚು ಮಾಡಬೇಕೆಂಬುದನ್ನು ಲೆಕ್ಕಹಾಕಿ. ಈ ವೆಚ್ಚವು ಹಣದುಬ್ಬರದ ಕಾರಣದಿಂದ ಪ್ರತಿ ವರ್ಷವೂ ಹೆಚ್ಚುತ್ತಾ ಹೋಗುತ್ತದೆ. ಭವಿಷ್ಯದ ಹಣದುಬ್ಬರದ ದರದೊಂದಿಗೆ ಈ ವೆಚ್ಚವನ್ನು ತಾಳೆ ಹಾಕಿ. ಈಗ ನಿಜವಾಗಿಯೂ ಒಂದು ಮಗು ತನ್ನ ಶಿಕ್ಷಣವನ್ನು ಭವಿಷ್ಯದಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸುವಷ್ಟರಲ್ಲಿ ಎಷ್ಟು ಹಣ ನಿಮಗೆ ಬೇಕಾಗಬಹುದು ಎಂದು ಈಗ ನೀವು ತಿಳಿದುಕೊಳ್ಳಬಹುದು.

ನಿಮ್ಮ ಮಗುವಿನ ಬಗ್ಗೆ ಇತರ ಕನಸುಗಳು

ನಿಮ್ಮ ಮಗುವಿನ ಬಗ್ಗೆ ಇತರ ಕನಸುಗಳು

ಉನ್ನತ ಶಿಕ್ಷಣದ ಹೊರತಾಗಿ ನಿಮ್ಮ ಮಗುವಿಗೆ ಮನೆಯೊಂದನ್ನು ಖರೀದಿಸುವುದು, ನಿಮ್ಮ ಮಗುವಿನ ಭವಿಷ್ಯದ ವೃತ್ತಿ ಅಥವಾ ವ್ಯವಹಾರಕ್ಕಾಗಿ ಅಥವಾ ಕಾರ್ಪಸ್ ಸೃಷ್ಟಿ ಅಥವಾ ಮದುವೆಗಾಗಿ ಹೀಗೆ ಇತರ ಕನಸುಗಳನ್ನು ನೀವು ಹೊಂದಿರಬಹುದು.
ಈ ಕನಸುಗಳನ್ನು ಪೂರೈಸಲು ಅಗತ್ಯವಿರುವ ಹಣವನ್ನು ಅಂದಾಜು ಮಾಡಲು 'ಉನ್ನತ ಶಿಕ್ಷಣಕ್ಕಾಗಿ ಹಣಕಾಸು ಯೋಜನೆಯಲ್ಲಿ' ಉಲ್ಲೇಖಿಸಲಾದ ಹಂತಗಳನ್ನು ನೀವು ಅನುಸರಿಸಬೇಕು. ಇಂತಹ ಆರ್ಥಿಕ ಯೋಜನೆಯನ್ನು ಮಾಡಲು ನಿಮಗೆ ಸಮಯ ಅಥವಾ ತಿಳುವಳಿಕೆ ಇಲ್ಲದ ಪಕ್ಷದಲ್ಲಿ ವೃತ್ತಿಪರ ಹಣಕಾಸು ಯೋಜಕರ ಸಹಾಯ ಪಡೆಯಬಹುದು. ಅವರು ನಿಮ್ಮ ಸಮಯವನ್ನು ಉಳಿಸುತ್ತಾರೆ. ಅಲ್ಲದೆ ನಿಮ್ಮ ಮಗುವಿಗಾಗಿ ಹಣಕಾಸಿನ ಗುರಿಗಳನ್ನು ಸಾಧಿಸುವ ಬಗ್ಗೆ ಅವರು ತಿಳುವಳಿಕೆ ನೀಡುತ್ತಾರೆ.

ಮಗುವಿಗಾಗಿ ಉಳಿತಾಯ ಖಾತೆ

ಮಗುವಿಗಾಗಿ ಉಳಿತಾಯ ಖಾತೆ

ಸಣ್ಣ ಮಗುವಿನ ಹೆಸರಿನ ಉಳಿತಾಯ ಖಾತೆಯನ್ನು (ಮೈನರ್) ತೆರೆಯಬಹುದು. ಜನ್ಮದಿನಗಳು ಮುಂತಾದ ಸಂದರ್ಭಗಳಲ್ಲಿ ಚೆಕ್ ಅಥವಾ ಹಣದ ಮೂಲಕ ಮಗುವು ಯಾವ ರೀತಿಯ ಉಡುಗೊರೆಗಳನ್ನು ಪಡೆಯುತ್ತದೋ ಅದನ್ನು ಇಲ್ಲಿ ಹೂಡಿಕೆ ಮಾಡಬಹುದು.
ಅಲ್ಲದೆ, ಈ ಖಾತೆ ಮಾಡುವುದರಿಂದ ಪಾಕೆಟ್ ಹಣದಿಂದ ಮಗುವಿಗೆ ಹಣ ಉಳಿತಾಯ ಮಾಡಲು ಪ್ರೇರೇಪಿಬಹುದು. ನಿಮ್ಮ ಮಗುವಿನ ಭವಿಷ್ಯಕ್ಕಾಗಿ ನೀವು ಮಾಡುವ ಇತರ ಹೂಡಿಕೆಗಳಾದ ಮ್ಯೂಚುಯಲ್ ಫಂಡ್ ಅಥವಾ ಕಂಪೆನಿಯ ಷೇರುಗಳಲ್ಲಿ ನಿಮ್ಮ ಮಗುವಿನ ಹೆಸರು ಸೇರಿಸಬೇಕಾಗಿಲ್ಲ. ಯಾಕೆಂದರೆ ಸಾಮಾನ್ಯವಾಗಿ ಬ್ಯಾಂಕುಗಳು, ಚಿಕ್ಕವರ(ಮೈನರ್) ಹೆಸರಿನಲ್ಲಿರುವ ಷೇರುಗಳು ಅಥವಾ ಮ್ಯೂಚುಯಲ್ ಫಂಡ್ ವಿರುದ್ಧ ಸಾಲ ನೀಡುವುದಿಲ್ಲ. ಆದ್ದರಿಂದ, ಇದನ್ನು ನಿಮ್ಮ ಹೆಸರಿನಲ್ಲಿ ಹೂಡಿಕೆ ಮಾಡಬಹುದು. ಅಗತ್ಯವಿದ್ದಾಗ ಮತ್ತು ಮಗುವಿಗೆ ವೆಚ್ಚಗಳನ್ನು ಪೂರೈಸಲು ಅದನ್ನು ಲಗತ್ತಿಸಬಹುದು.

English summary

Children’s education: How to save for a better future for your child

As a responsible parent, you would not like to compromise on your child’s career, regardless of the rising cost of education. You need a well-developed investment plan that will allow you to meet all expenses for your child’s future.
Story first published: Wednesday, October 25, 2017, 15:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X