ಇವರು 2017ರ ಭಾರತದ ಅತ್ಯಂತ ಶ್ರೀಮಂತ ಸ್ಟಾರ್ಟ್ಅಪ್ ಸ್ಥಾಪಕರು

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಇಲ್ಲಿಯವರೆಗೆ ಸ್ಟಾರ್ಟ್ಅಪ್ ಸ್ಥಾಪನೆ ಮತ್ತು ಬೆಳವಣಿಗೆ ತುಂಬಾ ಮಂದಗತಿಯಲ್ಲಿತ್ತು. ಅಲ್ಲದೆ ಕಳೆದ ಕೆಲವು ವರ್ಷಗಳಿಂದ ಫಂಡಿಂಗ್ ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಇದಕ್ಕಾಗಿ ಅನೇಕ ದೊಡ್ಡ ದೊಡ್ಡ ಕಂಪನಿಗಳು ಒದ್ದಾಡಿ ಹೋಗಿವೆ. ಅದರೆ ಭಾರತದ ಸ್ಟಾರ್ಟ್ಅಪ್ ಉದ್ಯಮಿಗಳು ಯಶಸ್ವಿ ಉದ್ಯಮವನ್ನು ನಿರ್ಮಿಸುತ್ತಿದ್ದು, ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ ಅಕರ್ಷಕ ಮೊತ್ತದ ಹಣವನ್ನು ಹೊಂದಿದ್ದಾರೆ.

  2017ರಲ್ಲಿ ಭಾರತದ ಟೆಕ್ ಉದ್ಯಮಿಗಳ ಪಟ್ಟಿಯಲ್ಲಿ ಇನ್ನೂ ಅನೇಕ ಪರಿಚಿತ ಹೆಸರುಗಳಿವೆ. ಅದರೆ ಕೆಲವರ ಹೆಸರು ಈ ಪಟ್ಟಿಯಿಂದ ಜಾರಿ ಹೋಗಿದೆ. ಸ್ನ್ಯಾಪ್‍ಡೀಲ್ ಕುನಾಲ್ ಬಹಾಲ್ ಮತ್ತು ಓಲಾ ಸಂಸ್ಥೆಯ ಭವಿಷ್ ಅಗರ್ವಾಲ್ ಅವರು ಭಾರತದ 15 ಶ್ರೀಮಂತರ ಉದ್ಯಮಿಗಳ ಪಟ್ಟಿಯಲ್ಲಿದ್ದಾರೆ. ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?

  ಇಲ್ಲಿ ಅಗ್ರ ಹತ್ತರ ಪಟ್ಟಿಯಲ್ಲಿರುವ ಭಾರತದ ಶ್ರೀಮಂತ ಉದ್ಯಮಿಗಳ ಪಟ್ಟಿ ನೀಡಲಾಗಿದೆ.

  1. ಭವಿನ್ ತುರಾಖಿಯ, ಡೈರೆಕ್ಟಿ/ಮೀಡಿಯಾ.ನೆಟ್ (ರೂ. 11,500 ಕೋಟಿ)

  2017ರಲ್ಲಿ ಇವರ ಸಂಪತ್ತು ನಾಲ್ಕು ಪಟ್ಟು ಹೆಚ್ಚಾಗಿದ್ದರಿಂದ ಭವಿನ್ ತುರಾಖಿಯ ಮೊದಲ ಸ್ಥಾನಕ್ಕೆ ಏರಿದರು. 2016ರ ಅಂತ್ಯದ ವೇಳೆಗೆ ತುರಾಖಿಯ ತಮ್ಮ ಸಹೋದರ ದಿವ್ಯಾಂಕ್ ತುರಾಖಿಯ ಅವರೊಂದಿಗೆ ತಮ್ಮ ಮೀಡಿಯಾ.ನೆಟ್ ವ್ಯವಹಾರವನ್ನು 900 ದಶಲಕ್ಷ ಡಾಲರ್ ಗೆ ಚೀನಾದ ಕಂಪನಿಗೆ ಮಾರಾಟ ಮಾಡಿದರು. ಮೀಡಿಯಾ.ನೆಟ್ ಪೂರ್ತಿಯಾಗಿ ಬೂಟ್ ಸ್ಟ್ರಾಪ್ ಮಾಡಲ್ಪಟ್ಟಿತು. ಇದರಿಂದಾಗಿ ಇಬ್ಬರು ಸಹೋದರರು ಶತಕೋಟ್ಯಾಧಿಪತಿಗಳಾದರು. ಪ್ರಸ್ತುತ ರೂ. 11,500 ಕೋಟಿ ಮೌಲ್ಯದ ಸಂಪತ್ತನ್ನು ಹೊಂದಿರುವ ಭವಿನ್ ತುರಾಖಿಯ ಈಗ ಭಾರತದ ಅತ್ಯಂತ ಶ್ರೀಮಂತ ಟೆಕ್ ಉದ್ಯಮಿ ಎನಿಸಿದ್ದಾರೆ. ಕೋಟ್ಯಾಧಿಪತಿ ಆಗುವುದು ಹೇಗೆ ಗೊತ್ತೆ?

  2. ವಿಜಯ್ ಶೇಖರ್ ಶರ್ಮಾ, ಪೇಟಿಎಂ (ರೂ. 9000 ಕೋಟಿ)

  2017ರಲ್ಲಿ ಪೇಟಿಎಂನ ವಿಜಯ್ ಶೇಖರ್ ಶರ್ಮಾ ಸ್ಟಾರ್ಟ್ಅಪ್ ಕ್ಷೇತ್ರದಹೊಸ ತಾರೆಯಾಗಿ ಹೊರಹೊಮ್ಮಿದ್ದಾರೆ. ಗರಿಷ್ಟ ಮೊತ್ತದ ನೋಟುಗಳ ಅಪಮೌಲ್ಯೀಕರಣದ ಸಮಯ ಅಂದರೆ 2016 ರ ಅಂತ್ಯದ ವೇಳೆಗೆ ಪೇಟಿಎಂನ ಅಲೆ ಆರಂಭವಾಯಿತು. ಇದು ಪೇಟಿಎಂ ಬ್ಯಾಂಕ್ ನ್ನು ಕೂಡ ಲಾಂಚ್ ಮಾಡಿದೆ. ಅದು 2017 ರ ಆಯವ್ಯಯದಲ್ಲೂ ತನ್ನ ಸ್ಥಾನ ಬಿಡಲಿಲ್ಲ. ಕಂಪನಿಯು ಸಾಫ್ಟ್ ಬ್ಯಾಂಕ್ ಕಡೆಯಿಂದ 1.4 ಶತಕೋಟಿ ಡಾಲರ್‌ಗೆ ಪಡೆದುಕೊಂಡಿತು. ಅಲ್ಲದೆ ತನ್ನ ಮೌಲ್ಯವನ್ನು ಎಂಟು ಬಿಲಿಯನ್ ಡಾಲರ್‌ಗೆ ಹೆಚ್ಚಿಸಿಕೊಂಡಿತು. ಶರ್ಮಾರವರು ಪ್ರಸ್ತುತ ರೂ. 9000 ಕೋಟಿ ಮೊತ್ತದ ಸಂಪತ್ತನ್ನು ಹೊಂದಿದ್ದಾರೆ.

  3. ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್, ಫ್ಲಿಫ್ ಕಾರ್ಟ್ (ರೂ. 5400 ಕೋಟಿ)

  ಭಾರತದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಫ್ಲಿಫ್‌ಕಾರ್ಟ್ ಸಂಸ್ಥಾಪಕ ಜೋಡಿಯು ಮೂರನೇ ಸ್ಥಾನದಲ್ಲಿದೆ. ಬನ್ಸಾಲ್ ಸಹೋದರರು ಕಳೆದ ಕೆಲವು ವರ್ಷಗಳಿಂದ ತಮ್ಮ ನಿವ್ವಳ ಮೌಲ್ಯದಲ್ಲಿ ಇಳಿಕೆಯನ್ನು ಕಂಡಿದ್ದಾರೆ. 2015 ರಲ್ಲಿ ಕಂಪನಿಯ ಮೌಲ್ಯ 9,010 ಕೋಟಿಯಷ್ಟಿತ್ತು. ಪ್ರಸ್ತುತ ಕಂಪನಿಯ ನಿವ್ವಳ ಮೌಲ್ಯ 5,400 ಕೋಟಿ ರೂ. ನಷ್ಟಿದೆ.

  4. ಗಣೇಶ್ ಕೃಷ್ಣನ್, ಪೋರ್ಟಿಯಾ ಮೆಡಿಕಲ್ (ರೂ. 5,100 ಕೋಟಿ)

  ಉದ್ಯಮಿ ಗಣೇಶ್ ಕೃಷ್ಣನ್ ರೂ. 5,100 ಕೋಟಿ ಸಂಪತ್ತಿನೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಕೃಷ್ಣ‍ನ್‌ರವರು ಪೋರ್ಟಿಯಾ ಮೆಡಿಕಲ್ ಮತ್ತು ಟುಟೋರ್ ವಿಸ್ತಾದ ಸಂಸ್ಥಾಪಕರಾಗಿದ್ದಾರೆ. ಅಲ್ಲದೆ ಬಿಗ್ ಬಾಸ್ಕೆಟ್, ಬ್ಲೂಸ್ಟೋನ್.ಕಾಮ್ ಮತ್ತು ಹೋಮ್ಲೇನ್.ಕಾಮ್‌ಗಳ ಪ್ರಾಯೋಜಕರಾಗಿದ್ದಾರೆ.

  5. ಸಂಜೀವ್ ಬಿಕ್ಚಂದಾನಿ, ಇನ್ಫೋ ಎಡ್ಜ್ (ರೂ.4,800 ಕೋಟಿ)

  ನೌಕರಿ.ಕಾಮ್, ಜೀವನ್‌ಸಾಥಿ, ಮತ್ತು 99Acres.com ನಂತಹ ಜನಪ್ರಿಯ ಪೋರ್ಟಲ್‌ಗಳನ್ನು ನಡೆಸುತ್ತಿರುವ ಇನ್ಫೋ ಎಡ್ಜ್ ಭಾರತದ ಅತ್ಯಂತ ಪ್ರಮುಖ ಅಂತರ್ಜಾಲ ಸಂಘಟಿತ ಸಂಸ್ಥೆಯಾಗಿದೆ. ಇದು ಝೊಮ್ಯಾಟೋದಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ. ಸ್ಥಾಪಕ ಸಂಜೀವ್‌ರವರು 1997 ರಲ್ಲಿ ನೌಕರಿ.ಕಾಮ್ ಅನ್ನು ಆರಂಭಿಸಿದರು. ಈಗ ಅವರು ರೂ. 4,800 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

  6. ವಿಶಾಲ್ ಮೆಹ್ತಾ, ಇನ್ಫೀಬೀಮ್.ಕಾಮ್ (ರೂ. 3,500 ಕೋಟಿ)

  ಅಮೆಜಾನ್ ವಿರುದ್ಧ ಹೆಚ್ಚಿನ ಫಂಡ್ ಇರುವ ಇ-ಕಾಮರ್ಸ್ ಕಂಪನಿಗಳು ಹೋರಾಡಿ ಮಣ್ಣು ಮುಕ್ಕುತ್ತಿದ್ದರೂ ಇನ್ಫೀಬೀಮ್.ಕಾಮ್ ಬಲ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗುತ್ತಿದೆ. ಕಂಪನಿಯು ಈಗ ಲಾಭದಾಯಕವಾಗಿದ್ದು, ಕಳೆದ ವರ್ಷ ಸಾರ್ವಜನಿಕವಾಗಿ ಲಭ್ಯವಾಗಲು ಆರಂಭಿಸಿದ ದಿನದಿಂದ ಅದರ ಸ್ಟಾಕ್ ಗಣನೀಯವಾಗಿ ಹೆಚ್ಚಿದೆ. ಸಂಸ್ಥಾಪಕ ವಿಶಾಲ್ ಮೆಹ್ತಾರವರ ವೈಯಕ್ತಿಕವಾಗಿ ರೂ. 3,500 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

  7. ಧೀರಜ್ ರಾಜರಾಮ್/ಅಂಬಿಗ ಸುಬ್ರಹ್ಮಣಿಯನ್, ಮೂ ಸಿಗ್ಮಾ (ರೂ. 2,500 ಕೋಟಿ)

  ಧೀರಜ್ ರಾಜರಾಮ್ 2015 ರಲ್ಲಿ ಭಾರತದ ಅತ್ಯಂತ ಶ್ರೀಮಂತ ಟೆಕ್ ಉದ್ಯಮಿಯಾಗಿದ್ದು, ಕಂಪನಿಯ ಮೌಲ್ಯ ರೂ. ರೂ. 17,000 ಕೋಟಿ ಆಗಿತ್ತು. ಅವರ ಕಂಪೆನಿಯು ಅವರ ಪತ್ನಿಯ ವಿಚ್ಛೇದನ ಮತ್ತು ಸಹೋದ್ಯೋಗಿ ಅಂಬಿಗ ಸುಬ್ರಹ್ಮಣಿಯನ್ ಬಿಟ್ಟು ಹೋದ ನಂತರ ಅಲ್ಲಿಂದ ಹೆಣಗಾಡಬೇಕಾಯಿತು. ರಾಜರಾಮ್ ಈಗ ಸುಬ್ರಹ್ಮಣಿಯನ್ ಪಾಲನ್ನು ಖರೀದಿಸಿ, ಕಂಪನಿಯನ್ನು ಮೊದಲಿನ ಹಂತಕ್ಕೆ ಕರೆದೊಯ್ಯಲು ಯೋಜಿಸುತ್ತಿದ್ದಾರೆ. ಮಾಜಿ ಪತಿ-ಪತ್ನಿ ಜೋಡಿ ರೂ. 2,500 ಕೋಟಿ ನಿವ್ವಳ ಮೌಲ್ಯದೊಂದಿಗೆ 7 ನೇ ಶ್ರೀಮಂತ ಭಾರತೀಯ ಸ್ಟಾರ್ಟ್ಅಪ್ ಸಂಸ್ಥಾಪಕರಾಗಿದ್ದಾರೆ.

  8. ರಾಹುಲ್ ಶರ್ಮಾ/ಸುಮೀತ್ ಕುಮಾರ್/ವಿಕಾಸ್ ಜೈನ್/ ರಾಜೇಶ್ ಅಗರ್ವಾಲ್, ಮೈಕ್ರೋಮ್ಯಾಕ್ಸ್ (ರೂ. 1,400 ಕೋಟಿ)

  ಇತ್ತೀಚಿನ ವರ್ಷದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಪ್ರವಾಹ ಎಬ್ಬಿಸಿರುವ ಓಪ್ಪೋ ಮತ್ತು ವಿವೋ ಗಳಂತಹ ಚೀನಿ ಸಂಸ್ಥೆಗಳ ಜೊತೆ ಮೈಕ್ರೋಮ್ಯಾಕ್ಸ್ ತನ್ನ ಸ್ಪರ್ಧೆಯನ್ನು ಹೆಚ್ಚಿಸಿದೆ. ಅದರ ನಾಲ್ಕು ಸಂಸ್ಥಾಪಕರು ರಾಹುಲ್ ಶರ್ಮಾ, ಸುಮೀತ್ ಕುಮಾರ್, ವಿಕಾಸ್ ಜೈನ್ ಮತ್ತು ರಾಜೇಶ್ ಅಗರ್ವಾಲ್ ಪ್ರತಿಯೊಬ್ಬರು 1,400 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

  9. ವಿ.ಎಸ್.ಎಸ್ ಮಣಿ, ಜಸ್ಟ್‌ಡಯಲ್ (ರೂ.1,100 ಕೋಟಿ)

  ಜಸ್ಟ್‌ಡಯಲ್ ತನ್ನ 21 ವರ್ಷದ ಪ್ರಯಾಣದ ಅವಧಿಯಲ್ಲಿ ಅನೇಕ ಏರುಪೇರುಗಳು ಹಾದುಹೋಗಿವೆ. ಆದರೆ ಈಗಲೂ ಮುಂದುವರಿಯುತ್ತ ಸಾಗಿದೆ. ಅದರ ಹೊಸ ಸ್ಪರ್ಧಿಗಳನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳುತ್ತಿದೆ. ಸಂಸ್ಥಾಪಕ ವಿ.ಎಸ್.ಎಸ್. ಮಣಿ ಅವರ ನಿವ್ವಳ ಮೌಲ್ಯವು ಈ ವರ್ಷ ರೂ. 1,100 ಕೋಟಿ ಆಗಿದೆ.

  10. ಬೈಜು ರವೀಂದ್ರನ್, ಬೈಜುಸ್ (ರೂ. 1,000 ಕೋಟಿ)

  ಬೈಜುಸ್ ಈ ವರ್ಷ ತನ್ನ ಬೆಳವಣಿಗೆಯ ಮಹತ್ವಾಕಾಂಕ್ಷೆಯನ್ನು ಸೂಚಿಸುತ್ತಿದೆ. ಚಾನ್ ಜ್ಯೂಕರ್‌ಬರ್ಗ್ ರಂತಹ ಹೂಡಿಕೆದಾರರಿಂದ ಬೃಹತ್ ಪ್ರಮಾಣದ ಹಣವನ್ನು ಸಂಗ್ರಹಿಸಿ ಅಂತಾರಾಷ್ಟ್ರೀಯವಾಗಿ ವಿಸ್ತರಿಸಲು ಯೋಜಿಸುತ್ತಿದೆ. ಕಂಪೆನಿಯು ಈ ವರ್ಷದ ಮಾರಾಟದಲ್ಲಿ ರೂ. 400 ಕೋಟಿ ಮೊತ್ತವನ್ನು ಗಳಿಸಿದೆ. ಸಂಸ್ಥಾಪಕ ಬೈಜು ರವೀಂದ್ರನ್ ರವರು 1,000 ಕೋಟಿ ರೂ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

  English summary

  India’s Richest Startup Founders In 2017

  India’s list of richest tech entrepreneurs in 2017 still contains many familiar names, but some have slipped off — Snapdeal’s Kunal Bahl and Ola’s Bhavish Aggarwal are no longer in the top 15 richest entrepreneurs.
  Company Search
  Enter the first few characters of the company's name or the NSE symbol or BSE code and click 'Go'
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more