For Quick Alerts
ALLOW NOTIFICATIONS  
For Daily Alerts

ಇಪಿಎಫ್ಒ ಹೊಸ ಸೇವೆ ಆರಂಭ

ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ತನ್ನ 4.5 ಕೋಟಿ ಚಂದಾದಾರರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

By Siddu
|

ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ತನ್ನ 4.5 ಕೋಟಿ ಚಂದಾದಾರರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

ಪ್ರಸ್ತುತ ಹೊಂದಿರುವ ಯುಎಎನ್ (UAN) ಸಂಖ್ಯೆಯೊಂದಿಗೆ ಪಿಎಫ್ ಬಹು ಖಾತೆಗಳನ್ನು ವಿಲೀನ ಮಾಡಬಹುದಾಗಿದೆ. ಈ ಸೌಲಭ್ಯದ ಪ್ರಕಾರ ನೌಕರರ ಭವಿಷ್ಯ ನಿಧಿ ಸಂಸ್ಥೆ (ಎಪಿಎಫ್ಒ) ಚಂದಾದಾರರು ಈ ಹಿಂದೆ ಹೊಂದಿರುವ ಹತ್ತು ಖಾತೆಗಳನ್ನು ವಿಲೀನಗೊಳಿಸಬಹುದು.

ಇಪಿಎಫ್ಒ ಹೊಸ ಸೇವೆ ಆರಂಭ

ಪ್ರಸ್ತುತ, ಇಪಿಎಫ್ಒ ಯುಎಎನ್ ಪೋರ್ಟಲ್ ನಲ್ಲಿ ಆನ್ಲೈನ್ ಮೂಲಕ ಇಪಿಎಫ್ಓ ಚಂದಾದಾರರು ಪ್ರತ್ಯೇಕ ವರ್ಗಾವಣೆ ಹಕ್ಕುಗಳನ್ನು ಸಲ್ಲಿಸುವ ಅಗತ್ಯವಿದೆ. ಇಪಿಎಫ್ಒ ಹೊಸ ಆನ್ಲೈನ್ ಸೇವಾ ಸೌಲಭ್ಯ ಆರಂಭ

ಆದರೆ ಸೌಲಭ್ಯವನ್ನು ಪಡೆದುಕೊಳ್ಳಲು, ಚಂದಾದಾರರು ಯುಎಎನ್ ಸಕ್ರಿಯ ಮಾಡಬೇಕಾಗುತ್ತದೆ. ತಮ್ಮ ಬ್ಯಾಂಕ್ ಖಾತೆಗಳನ್ನು ಆಧಾರ್ ಮತ್ತು ಪ್ಯಾನ್ ನಂತಹ ಇತರ ವಿವರಗಳೊಂದಿಗೆ ಲಿಂಕ್ ಮಾಡಬೇಕಾಗುತ್ತದೆ. ಹೊಸ ಸೌಲಭ್ಯ ಪಡೆಯುವಂತೆ ಸರ್ಕಾರ ಸೂಚಿಸಿದ್ದು, ಈಗಾಗಲೇ ಸೌಲಭ್ಯ ಅಳವಡಿಸುವಂತೆ 120ಕ್ಕೂ ಹೆಚ್ಚು ಕಚೇರಿಗಳಿಗೆ ನಿರ್ದೇಶನ ನೀಡಿದೆ.

ಇಪಿಎಫ್ಒ ಚಂದಾದಾರರು ಸಕ್ರಿಯ ಯುಎಎನ್ ಸಂಖ್ಯೆ, ಸದಸ್ಯರ ಗುರುತಿನ ಚೀಟಿ, ಯುಎಎನ್ ಪೋರ್ಟಲ್ ನೊಂದಿಗೆ ನೋಂದಣಿಯಾದ ಮೊಬೈಲ್ ಸಂಖ್ಯೆಯನ್ನು ಸಲ್ಲಿಸಬೇಕು. ಸದಸ್ಯರು ಇಪಿಎಫ್ಒ (EPFO) ವೆಬ್ಸೈಟ್ ಮೂಲಕವೂ ಈ ಸೌಲಭ್ಯ ಪಡೆಯಬಹುದು.

English summary

EPFO's new service

Retirement fund body EPFO has opened a new facility for its over 4.5 crore members that will allow consolidation or merger of their multiple PF (provident fund) accounts with the current universal portable account number.
Story first published: Friday, December 8, 2017, 14:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X