For Quick Alerts
ALLOW NOTIFICATIONS  
For Daily Alerts

ಗುಜರಾತ್ ಎಫೆಕ್ಟ್: ಷೇರುಪೇಟೆಯಲ್ಲಿ ಗೂಳಿಯ ಅಬ್ಬರ!

ದಿನದ ಆರಂಭಕ್ಕೆ ಗುಜರಾತ್ ಚುನಾವಣಾ ಫಲಿತಾಂಶ ಷೇರುಪೇಟೆಯಲ್ಲಿನ ಗೂಳಿ, ಕರಡಿ ಕುಣಿತಕ್ಕೆ ಕಾರಣವಾಗಿತ್ತು!

By Siddu
|

ದಿನದ ಆರಂಭಕ್ಕೆ ಗುಜರಾತ್ ಚುನಾವಣಾ ಫಲಿತಾಂಶ ಷೇರುಪೇಟೆಯಲ್ಲಿನ ಗೂಳಿ, ಕರಡಿ ಕುಣಿತಕ್ಕೆ ಕಾರಣವಾಗಿತ್ತು!

ಗುಜರಾತ್ ಎಫೆಕ್ಟ್: ಷೇರುಪೇಟೆಯಲ್ಲಿ ಗೂಳಿಯ ಅಬ್ಬರ!

ಇಂದು ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆ ಫಲಿತಾಂಶ ಷೇರುಪೇಟೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 33,601 ಅಂಶಗಳೊಂದಿಗೆ 138 ಅಂಕ ಏರಿಕೆ ಕಂಡಿದ್ದು, ನಿಪ್ಟಿ 10,388 ಅಂಶಗಳೊಂದಿಗೆ 55 ಅಂಕ ಚೇತರಿಕೆ ಕಂಡಿದೆ.

ದಿನದ ಆರಂಭಕ್ಕೆ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದಾಗ ಸೆನ್ಸೆಕ್ಸ್ 650 ಪಾಯಿಂಟ್ ಇಳಿಕೆ ಕಂಡಿತ್ತು. ನಂತರದಲ್ಲಿ ಸುಮಾರು 9.21 ಗಂಟೆಗೆ 850 ಅಂಕಗಳಷ್ಟು ಸೆನ್ಸೆಕ್ಸ್ ಕುಸಿತಕ್ಕೆ ಒಳಗಾಗಿತ್ತು. ನಂತರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದಾಗ ಷೇರುಪೇಟೆ ಚೇತರಿಕೆ ಕಾಣತೊಡಗಿತು.

10.25 ಗಂಟೆಗೆ ಸೆನ್ಸೆಕ್ಸ್ 33,653 ಅಂಶಗಳೊಂದಿಗೆ 190 ಅಂಕ ಏರಿಕೆ ಕಂಡು, ನಿಪ್ಟಿ 62 ಅಂಕ ಚೇತರಿಕೆ ಕಂಡಿತು.

ಗುಜರಾತ್ ಎಫೆಕ್ಟ್: ಷೇರುಪೇಟೆಯಲ್ಲಿ ಗೂಳಿಯ ಅಬ್ಬರ!

ಗುಜರಾತ್ ಅಭಿವೃದ್ಧಿಯ ಯಶಸ್ಸು ಮತ್ತು ಇತರ ಭಾಗದಲ್ಲಿ ಎನ್ಡಿಎ ಸರ್ಕಾರದ ಸುಧಾರಣೆಗಳು ಗೆಲುವಿಗೆ ಪ್ರಮುಖ ಕಾರಣಗಳೆನಿಸಿದವು.
ಗುಜರಾತ್ ಮೂಲದ ಕಂಪೆನಿಗಳ ಷೇರುಗಳು ಬೆಳಿಗ್ಗೆಯ ವ್ಯಾಪಾರದ ಸಂದರ್ಭದಲ್ಲಿ ಶೇ. 5 ರಷ್ಟು ಇಳಿಕೆಯಾಗಿವೆ. ಅದಾನಿ ಪೋರ್ಟ್ ಮತ್ತು ಅದಾನಿ ಎಂಟರ್ಪ್ರೈಸ್ ಷೇರುಗಳು ಹೆಚ್ಚಾಗಿದೆ. ಕ್ಯಾಡಿಲ್ಲ ಹೆಲ್ತ್ ಕೇರ್, ಗುಜರಾತ್ ಪೆಟ್ರೋನೆಟ್ ಎಲ್ಎನ್ಜಿ, ಜಿಎಸ್ಎಫ್ಸಿ ಮುಂತಾದವು ದಿನನಿತ್ಯದ ಉತ್ತಮ ಲಾಭದೊಂದಿಗೆ ಕೊನೆಗೊಂಡವು.

ಮೋದಿಯವರ ಜಿಎಸ್ಟಿ ಮಸೂದೆ, ನೋಟು ರದ್ದತಿ ಮುಂತಾದ ನಿರ್ಧಾರಗಳು ಬಿಜೆಪಿಗೆ ಮುಳುವಾಗಬಹುದೆಂಬ ನಿರೀಕ್ಷಣೆಯಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತು.

ಗುಜರಾತ್ ಎಫೆಕ್ಟ್: ಷೇರುಪೇಟೆಯಲ್ಲಿ ಗೂಳಿಯ ಅಬ್ಬರ!

English summary

Gujarat effect: Sensex Ends 138 Points Higher

Benchmark indices ended higher in trade, as the BJP won a hard-fought victory in the Gujarat elections, which until some months was seen as a cakewalk.
Story first published: Monday, December 18, 2017, 16:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X