Englishहिन्दी മലയാളം தமிழ் తెలుగు

ವಿಶ್ವದ ಅತೀ ಶ್ರೀಮಂತ 15 ರಾಷ್ಟ್ರಗಳು ಯಾವುವು ಗೊತ್ತೆ?

Written By: Siddu
Subscribe to GoodReturns Kannada

ಪ್ರಪಂಚದ ಸುಮಾರು 200 ರಾಷ್ಟ್ರಗಳಲ್ಲಿ, ಕೆಲವು ಪ್ರತಿ ವರ್ಷ ಬಿಲಿಯನ್, ಟ್ರಿಲಿಯನ್ ಆದಾಯ ಉತ್ಪಾದಿಸುತ್ತವೆ. ಆದರೆ ಜಗತ್ತಿನ ಒಟ್ಟಾರೆ ಸಂಪತ್ತು ಮಾತ್ರ ಕೆಲವೇ ವ್ಯಕ್ತಿಗಳ ಹಾಗೂ ಕೆಲವೇ ರಾಷ್ಟ್ರಗಳ ಬಳಿ ಹೆಚ್ಚಾಗಿ ಕ್ರೂಢೀಕೃತವಾಗಿದೆ. ಕೆಲ ವ್ಯಕ್ತಿಗಳ ಆದಾಯವಂತೂ ಬಿಲಿಯನ್, ಟ್ರಿಲಿಯನ್ ಗಳಷ್ಟಿದೆ. ಆದರೆ ಈ ವಿಶ್ವದಲ್ಲಿ ಅತಿ ಶ್ರೀಮಂತ ರಾಷ್ಟ್ರ ಯಾವುದು ಗೊತ್ತೇ? ಈ ಮಾಹಿತಿಯನ್ನು ನೀಡಲು ನಾವು ವಿಶ್ವದ ಹದಿನೈದು ದೇಶಗಳ ನಿವ್ವಳ ಉತ್ಪಾದನೆಯನ್ನು ಗಮನಿಸೋಣ..

ಆಯಾ ರಾಷ್ಟ್ರಗಳ ಜಿಡಿಪಿ(ಒಟ್ಟು ದೇಶೀಯ ಉತ್ಪನ್ನ) ಪರಿಗಣಿಸಬೇಕಾಗುತ್ತದೆ. ಜಿಡಿಪಿಯನ್ನು ಆಯಾ ರಾಷ್ಟ್ರದ ಕೊಳ್ಳುವ ಶಕ್ತಿ, ರಾಷ್ಟ್ರದ ಹಣಕಾಸಿನ ಮೌಲ್ಯ, ಒಂದು ನಿಗದಿತ ವಸ್ತುವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಳ್ಳಬಹುದಾದ ಶಕ್ತಿ ಮೊದಲಾದವುಗಳನ್ನು ಪರಿಗಣಿಸಿಯೇ ಯಾವ ರಾಷ್ಟ್ರ ಅತೀ ಶ್ರೀಮಂತ ಎಂಬುದನ್ನು ಐಎಂಎಫ್ ನಿರ್ಧರಿಸುತ್ತದೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕತಾರ್ ಹಾಗೂ ಬ್ರೂನೈ ತಮ್ಮ ದೇಶಗಳ ಉತ್ಪನ್ನಕ್ಕಾಗಿ ಪೆಟ್ರೋಲಿಯಂ ಮಾರಾಟವನ್ನು ಬಹುವಾಗಿ ನೆಚ್ಚಿಕೊಂಡಿವೆ. ಆದರೆ 2014ರಿಂದ ಸತತವಾಗಿ ಇಳಿಯುತ್ತಾ ಸಾಗಿರುವ ತೈಲಬೆಲೆ ಜಿಡಿಪಿಯನ್ನು ಬಹುವಾಗಿ ಬಾಧಿಸಿವೆ. ಇದೇ ಹೊತ್ತಿನಲ್ಲಿ ಇತರ ದೇಶಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತೊಡಗಿಸಿರುವ ಬಂಡವಾಳ ಹಾಗೂ ದೇಶದ ಅಭಿವೃದ್ದಿಯಲ್ಲಿ ನೀಡಿರುವ ನೆರವು ಜಿಡಿಪಿ ಏರಲು ನೆರವಾಗಿವೆ. ಇದಕ್ಕೆ ಐರ್ಲೆಂಡ್ ಹಾಗೂ ಐಸ್ಲ್ಯಾಂಡ್ ಗಳೇ ಸಾಕ್ಷಿ.

ಅಕ್ಟೋಬರ್ 2017ರಲ್ಲಿ ಐಎಂಎಫ್ ಬಿಡುಗಡೆಗೊಳಿಸಿರುವ ಜಿಡಿಪಿ, ತಲಾ ಆದಾಯ ಆಧಾರಿತ ಅಂಕಿಅಂಶಗಳನ್ನು ಆಧರಿಸಿದ ವಿಶ್ವದ ಅತಿ ಶ್ರೀಮಂತ ರಾಷ್ಟ್ರಗಳು ಯಾವುವು ಎಂಬುದನ್ನು ನೋಡೋಣ ಬನ್ನಿ..

15. ಐಸ್ಲ್ಯಾಂಡ್ (52,150 ಡಾಲರ್)

ಹೆಸರೇ ಸೂಚಿಸುವಂತೆ ಈ ರಾಷ್ಟ್ರ ಅತಿ ಶೀತಲವಾದ ಪ್ರದೇಶ ಹೊಂದಿದೆ. ಇದನ್ನೇ ಪ್ರವಾಸೋದ್ಯಮಕ್ಕೆ ಬಳಸುವ ಮೂಲಕ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಿ ದೇಶದ ಜಿಡಿಪಿ ಏರಲು ಬಳಸಿಕೊಂಡಿದೆ. ಈ ಏಳ್ಗೆಯನ್ನು ಗಮನಿಸಿದ ಐಎಂಎಫ್ ಅಂಕಿ ಅಂಶಗಳ ಆಧಾರದ ಮೇಲೆ ಈ ಬೆಳವಣಿಗೆ ಹೆಚ್ಚಿನ ಅವಧಿಯವರೆಗೆ ಮುಂದುವರೆಯಲಿದೆ ಎಂದು ಊಹಿಸಿ ಹದಿನೈದನೆಯ ಸ್ಥಾನವನ್ನು ನೀಡಿದೆ.

14. ನೆದರ್ಲ್ಯಾಂಡ್ಸ್ (53,580 ಡಾಲರ್)

2016ರ ಅಂಕಿ ಅಂಶಗಳ ವರದಿಯನ್ನು ಗಮನಿಸಿದ ಐಎಂಎಫ್ ಹಿಂದಿನ ವರ್ಷಗಳಲ್ಲಿ ಎದುರಾಗಿದ್ದ ಆರ್ಥಿಕ ಹಿಂಜರಿತವನ್ನು ಎದುರಿಸಿ ಮುಂದೆ ಬರುವ ಪ್ರಯತ್ನ ಹಾಗೂ ಬ್ರೆಕ್ಸಿಟ್ ಒಪ್ಪಂದದ ಮೂಲಕ ದೇಶದ ಆರ್ಥಿಕತೆಗೆ ಎದುರಾಗಿದ್ದ ಕಂಟಕದಿಂದ ಪಾರಾಗುವ ಕ್ರಮಗಳನ್ನೂ ಪರಿಗಣಿಸಿದೆ. ನೆದರ್ಲ್ಯಾಂಡ್ಸ್ ವಾಸ್ತವವಾಗಿ ನೆದರ್ಲ್ಯಾಂಡ್, ಅರೂಬಾ, ಕುರಾಕಾವೋ ಹಾಗೂ ಸೈಂಟ್ ಮಾರ್ಟೆನ್ ಎಂಬ ನಾಲ್ಕು ದೇಶಗಳನ್ನು ಸಂಯುಕ್ತವಾಗಿ ನೆದರ್ಲ್ಯಾಂಡ್ ಅಧಿಪತ್ಯ (The Kingdom of the Netherlands) ಎಂದು ಕರೆಯಲಾಗುತ್ತದೆ. ಒಟ್ಟಾರೆ ಜನಸಂಖ್ಯೆ ಕೇವಲ 1.7 ಕೋಟಿ. ಇವರಲ್ಲಿ ಹೆಚ್ಚಿನವರು ನೆದರ್ಲ್ಯಾಂಡ್ಸ್ ನಲ್ಲಿಯೇ ನೆಲೆಸಿದ್ದಾರೆ.

13. ಸೌದಿ ಅರೇಬಿಯಾ (55,260 ಡಾಲರ್)

ಈ ದೇಶದ ಜಿಡಿಪಿ ಬಹುತೇಕವಾಗಿ ತೈಲದ ಮಾರಾಟವನ್ನೇ ಆಧರಿಸಿದೆ. ಇತ್ತೀಚಿನ ತೈಲಬೆಲೆಯಲ್ಲಿ ಕುಸಿತದ ಬಳಿಕ ಇತರ ಕ್ಷೇತ್ರಗಳಲ್ಲಿಯೂ ದೇಶ ಹೂಡಿರುವ ಹಣವನ್ನು ಪರಿಗಣಿಸಿ ಐಎಂಎಫ್ ಮುಂದಿನ ವರ್ಷಗಳಲ್ಲಿ ಪಡೆಯಬಹುದಾದ ಏಳ್ಗೆಯನ್ನೂ ಮುಂಗಂಡು ಈ ಪಟ್ಟಿಯಲ್ಲಿ ಸ್ಥಾನ ನೀಡಿದೆ. 3.2 ಕೋಟಿ ಜನಸಂಖ್ಯೆಯ ಈ ದೇಶ ಈಗ ವಿಷನ್ 2030 ಅಥವಾ 2030ರಲ್ಲಿ ದೇಶ ಪಡೆಯಬೇಕಾದ ಏಳ್ಗೆಗಾಗಿ ಇಂದಿನ ಕ್ರಮಗಳನ್ನು ಹೊರಡಿಸಿದ್ದು ನಿಧಾನವಾಗಿ ತೈಲದ ಮೇಲಿನ ಅವಲಂಬನೆಯಿಂದ ಹೊರಬರುವ ಪ್ರಯತ್ನಗಳನ್ನು ನಡೆಸುತ್ತಿದೆ.

12. ಅಮೇರಿಕಾ ಸಂಯುಕ್ತ ಸಂಸ್ಥಾನ (59,500 ಡಾಲರ್)

ಐಎಂಎಫ್ ಪ್ರಕಾರ, ಈ ವಿಶಾಲ ದೇಶದಲ್ಲಿ 32.5 ಕೋಟಿ ಜನರಿದ್ದು 1850ರಿಂದ ಈ ದೇಶ ಪಡೆದ ಅಗಾಧ ಬೆಳವಣಿಗೆ ಹಾಗೂ ವಿಸ್ತರಣೆ ವಿಶ್ವದಲ್ಲಿಯೇ ಅಪ್ರತಿಮವಾಗಿದ್ದು ಈ ಬೆಳವಣಿಗೆ ಇಂದಿಗೂ ಮುಂದುವರೆಯುತ್ತಿದೆ. 2016ರ IMF ವರದಿಯ ಪ್ರಕಾರ ಈ ದೇಶದಲ್ಲಿ ನಿರುದ್ಯೋಗ ಅತಿ ಕಡಿಮೆ ಇದ್ದು ವಿವಿಧ ಕ್ಷೇತ್ರಗಳಲ್ಲಿ ಹೂಡಿರುವ ಬಂಡವಾಳ ಹಾಗೂ ಖರ್ಚು ಮಾಡುವ ಶಕ್ತಿ ಈ ದೇಶದ ಏಳ್ಗೆಗೆ ನೆರವಾಗುತ್ತಿವೆ.

11. ಸ್ಯಾನ್ ಮಾರಿನೋ (60,360 ಡಾಲರ್)

ಕೇವಲ ತೊಂಭತ್ತು ಲಕ್ಷ ಜನಸಂಖ್ಯೆ ಇರುವ ಈ ಪುಟ್ಟ ರಾಷ್ಟ್ರದಲ್ಲಿ ನಿರುದ್ಯೋಗ ನಿವಾರಣೆಗೆ ನೀಡಿರುವ ಹೆಚ್ಚಿನ ಒತ್ತು ಹಾಗೂ ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ದೇಶದ ಏಳ್ಗೆಗೆ ನೆರವಾಗಿದೆ. ಆರ್ಥಿಕ ಹಿಂಜರಿತದಿಂದ ನಲುಗಿದ್ದ ರಾಷ್ಟ್ರಕ್ಕೆ ಈ ಪ್ರಯತ್ನಗಳೇ ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕಾರಣವಾಗಿವೆ.

10. ಹಾಂಕಾಂಗ್ (61,020 ಡಾಲರ್)

ಐಎಂಎಫ್ ನೀಡಿರುವ ವರದಿಯ ಪ್ರಕಾರ 2016ರಲ್ಲಿ ಈ ದೇಶದ ಪ್ರಗತಿಯ ಗತಿ ನಿಧಾನವಾಗಿತ್ತು. ಆದರೂ ಈ ದೇಶ ಪಟ್ಟಿಯಲ್ಲಿ ಕೊಂಚ ಕಳಸರಿದಿರಬಹುದೇ ಹೊರತು ಹೊರಬಿದ್ದಿಲ್ಲ. ಇಂದಿಗೂ ಈ ದೇಶ ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲೊಂದಾಗಿದೆ. ಕಳೆದ ವರ್ಷ ನೆರೆಯ ಚೀನಾದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ ಹಾಗೂ ಕೊಳ್ಳುವಿಕೆಯೂ ಕಡಿಮೆಯಾದ ಕಾರಣ ಹಿಂಜರಿತಕ್ಕೆ ಒಳಗಾಗಿತ್ತು. ಆದರೆ ಈ ವರ್ಷ ವಿವಿಧ ಕ್ಷೇತ್ರಗಳಲ್ಲಿ ಹೂಡಿರುವ ಹೂಡಿಕೆಯ ಮೂಲಕ ಮತ್ತೊಮ್ಮೆ ಏಳ್ಗೆಯತ್ತ ಸಾಗುತ್ತಿದೆ. ಪುಟ್ಟ ರಾಷ್ಟ್ರವಾಗಿದ್ದರೂ ಇದರ ಎಪ್ಪತ್ತು ಲಕ್ಷ ಜನರು ವಾಸವಾಗಿದ್ದು ಜಗತ್ತಿನ ಅತಿ ಹೆಚ್ಚಿನ ಜನಸಾಂದ್ರತೆ ಹೊಂದಿರುವ ದೇಶವಾಗಿದೆ.

9. ಸ್ವಿಟ್ಜರ್ಲ್ಯಾಂಡ್ (61,360 ಡಾಲರ್)

2015ರಲ್ಲಿ ಈ ದೇಶದ ಕೇಂದ್ರೀಯ ಬ್ಯಾಂಕ್ 52ಬಿಲಿಯಲ್ ಡಾಲರುಗಳನ್ನು ಕಳೆದುಕೊಂಡ ಬಳಿಕ ಈಗ ಚೇತರಿಕೆಯ ಹಂತದಲ್ಲಿದೆ. 2016ರಲ್ಲಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಈ ದೇಶ ಕಳೆದ ವರ್ಷ ಒಂದೂವರೆ ಶೇಖಡಾದಷ್ಟು ಪ್ರಗತಿ ಸಾಧಿಸಿದೆ. ಅಲ್ಲದೇ ಈ ಹಿಂಜರಿತದಿಂದ ಹೊರಬರಲು ನಡೆಸುತ್ತಿರುವ ಪ್ರಯತ್ನಗಳು ಎಂಭತ್ತು ಲಕ್ಷ ಜನಸಂಖ್ಯೆಯ ಈ ದೇಶವನ್ನು ನಿಧಾನ ಹಿಂದಿನ ವೈಭವಕ್ಕೆ ಮರಳಿಸುತ್ತಿವೆ.

8. ಸಂಯುಕ್ತ ಅರಬ್ ಸಂಸ್ಥಾನ (68,250 ಡಾಲರ್)

ತೈಲಬೆಲೆ ಹೆಚ್ಚಿದ್ದಾಗ ವಿಶ್ವದ ಶ್ರೀಮಂತ ರಾಷ್ಟ್ರವಾಗಿದ್ದ ಯು.ಎ.ಇ. ತೈಲಮಾರುಕಟ್ಟೆಯಲ್ಲಿ ಆಗಿರುವ ಇಳಿಕೆಯಿಂದ 2016ರಲ್ಲಿ ಪಟ್ಟಿಯಲ್ಲಿ ಕೆಳಗಿಳಿಯಬೇಕಿತ್ತು. ಆದರೆ ಈ ರಾಷ್ಟ್ರ ತೈಲದ ಮೇಲಿನ ಅವಲಂಬನೆಯಿಂದ ಹೊರಬರಲು 1994ರಲ್ಲಿ ಕೈಗೊಂಡಿದ್ದ ಕ್ರಮಗಳ ಪರಿಣಾಮವಾಗಿ ಇತರ ಕ್ಷೇತ್ರಗಳ ಮೇಲೆ ಹೂಡಿದ್ದ ಹೂಡಿಕೆಗಳು ಇಂದು ಫಲನೀಡುತ್ತಿದ್ದು ಶೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಇಂದಿಗೂ ಸ್ಥಾನ ಪಡೆಯುವಂತಾಗಿದೆ. ಸುಮಾರು ಒಂದು ಕೋಟಿಯಷ್ಟು ನಾಗರಿಕರು ವಿಶ್ವದ ಅತ್ಯಂತ ಉನ್ನತ ಮಟ್ಟದ ಜೀವನವನ್ನು ನಡೆಸುತ್ತಿದ್ದಾರೆ. ಈ ಏಳ್ಗೆ 2017ರಲ್ಲಿ ಮುಂದುವರೆಯುತ್ತಾ ಸಾಗಿದೆ.

7. ಕುವೈತ್ (69,670 ಡಾಲರ್)

ಸುಮಾರು ನಲವತ್ತು ಲಕ್ಷದಷ್ಟು ನಾಗರಿಕರಿರುವ ಈ ದೇಶಕ್ಕೆ ತೈಲಮಾರಾಟವೇ ಪ್ರಮುಖ ಆದಾಯವಾಗಿತ್ತು. 2016ರಲ್ಲಿ ಇಳಿದ ತೈಲಬೆಲೆ ದೇಶದ ಆರ್ಥಿಕತೆಯ ಮೇಲೆ ಪ್ರಭಾವ ಬೀರಿತ್ತು ಎಂದು ಐಎಂಎಫ್ ವರದಿ ತಿಳಿಸುತ್ತದೆ. ಆದರೆ ತೈಲದ ಹೊರತಾಗಿ ಇತರ ಕ್ಷೇತ್ರಗಳಲ್ಲಿ ದೇಶ ಹೂಡಿದ ಹೂಡಿಕೆ ಈ ಹಿಂಜರಿಕೆಯಿಂದ ಹೊರಬರಲು ನೆರವಾಗಿದೆ ಹಾಗೂ ನೆರವಾಗುತ್ತಿದೆ.

6. ನಾರ್ವೆ (70,590 ಡಾಲರ್)

ಕೇವಲ ಐವತ್ತು ಲಕ್ಷದ ನಾಗರಿಕರಿರುವ ಈ ಸ್ಕಾಂಡಿನೀವಿಯನ್ ದೇಶ ವಿಶ್ವದ ಐದು ಶ್ರೀಮಂತ ರಾಷ್ಟ್ರಗಳ ಪಟ್ಟಿಯಿಂದ ಒಂದೇ ಹಂತ ದೂರದಲ್ಲಿದೆ. ಐಎಂಎಫ್ ಪ್ರಕಾರ ಕೆಳೆದ ಎರಡು ವರ್ಷಗಳಲ್ಲಿ ತೈಲಬೆಲೆ ಇಳಿಕೆಯಿಂದ ಪ್ರಭಾವಗೊಂಡಿತ್ತು. 2008 ಮತ್ತು 2009ರ ಆರ್ಥಿಕ ಹಿಂಜರಿತದಿಂದಲೂ ಈ ದೇಶ ನಲುಗಿತ್ತು. ಆದರೆ ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಒತ್ತು ಮತ್ತು ನಿರುದ್ಯೋಗ ಕಡಿಮೆ ಮಾಡಲು ಕೈಗೊಂಡ ಪ್ರಯತ್ನಗಳು ಈ ದೇಶವನ್ನು ಮತ್ತೊಮ್ಮೆ ಶ್ರೀಮಂತ ರಾಷ್ಟ್ರವಾಗಿಸಲು ನೆರವಾಗಿವೆ.

5. ಐರ್ಲೆಂಡ್ (72,630 ಡಾಲರ್)

ಯೂರೋಪ್ ನಲ್ಲಿಯೇ ಅತಿ ಹೆಚ್ಚು ಶೀಘ್ರವಾಗಿ ಏಳ್ಗೆಯನ್ನು ಪಡೆದಿರುವ ದೇಶವಾಗಿರುವ ಐರ್ಲೆಂಡ್ ಪ್ರಮುಖ ಐದು ದೇಶಗಳಲ್ಲಿ ಒಂದಾಗಿದೆ. 2016ರಲ್ಲಿ ಈ ದೇಶ ಹೂಡಿರುವ ಹೂಡಿಕೆ, ಕಟ್ಟಡ ನಿರ್ಮಾಣ ಮೊದಲಾದವು ದೇಶದ ಜಿಡಿಪಿ ಏರಲು ನೆರವಾಗಿವೆ ಎಂದು ಐ ಎಂ ಎಫ್ ವರದಿ ಮಾಡಿದೆ.

4. ಬ್ರೂನಿ (76,740 ಡಾಲರ್)

2016ರಲ್ಲಿ ಜಿಡಿಪಿಯಲ್ಲಿ ಇಳಿಕೆ ಕಂಡಿದ್ದರೂ ನಿರೀಕ್ಷಿಸಿದ್ದಕ್ಕಿಂತಲೂ ಉತ್ತಮವಾಗಿಯೇ ನಿರ್ವಹಿಸಿದೆ ಎಂದು ಐ ಎಂ ಎಫ್ ವರದಿ ಮಾಡಿದೆ. ಕೇವಲ ನಾಲ್ಕು ಲಕ್ಷ ನಾಗರಿಕರಿರುವ ಈ ದೇಶದ ಮುಖ್ಯ ಆದಾಯವಾದ ತೈಲದ ಬೆಲೆ ಕಳೆದ ಎರಡು ವರ್ಷಗಳಿಂದ ಇಳಿಕೆ ಕಂಡಿದ್ದರೂ ರಫ್ತು ಮಾತ್ರ ಕಡಿಮೆಯಾಗಿರುವುದು ಶ್ರೀಮಂತಿಕೆ ಕಡಿಮೆಯಾಗದಿರಲು ಮುಖ್ಯ ಕಾರಣವಾಗಿದೆ. 90% ರಷ್ಟು ಆದಾಯ ತೈಲ ಮತ್ತು ನೈಸರ್ಗಿಕ ಅನಿಲದ ಮಾರಾಟದಿಂದ ಬರುತ್ತಿದೆ. 2014ರಲ್ಲಿ ವಿಶ್ವದ ಅತಿ ಹೆಚ್ಚು ಆದಾಯವನ್ನು ಈ ದೇಶ ತೈಲ ಮಾರಾಟದಿಂದಲೇ ಗಳಿಸಿತ್ತು.

3. ಸಿಂಗಾಪುರ (90,530 ಡಾಲರ್)

ವಿಶ್ವದ ಅತಿಶ್ರೀಮಂತ ರಾಷ್ಟವಾಗಲು ಈ 2017ರ ಮೊದಲ ಮೂರು ತಿಂಗಳಲ್ಲಿ ಜಿಡಿಪಿಯಲ್ಲಿ ಸಾಧಿಸಿದ 2.7% ರಷ್ಟು ಏರಿಕೆಯನ್ನು ಐ ಎಂ ಎಫ್ ಪರಿಗಣಿಸಿದೆ. ಸುಮಾರು ಐವತ್ತಾರು ಲಕ್ಷದಷ್ಟಿರುವ ಜನಸಂಖ್ಯೆಯ ಈ ಪುಟ್ಟ ರಾಷ್ಟ್ರ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟದಿಂದ ಸತರ ಏಳ್ಗೆ ಪಡೆದಿದ್ದರೂ ಕಳೆದ ವರ್ಷ ಕೊಂಚ ಹಿಂದೆ ಬಿದ್ದಿತ್ತು. ಆದರೆ ಈ ರಾಷ್ಟ್ರ ರಫ್ತುಗಳನ್ನೇ ಹೆಚ್ಚು ನೆಚ್ಚಿಕೊಂಡಿರುವ ಕಾರಣ ಈ ಮೂಲಕ ಪಡೆಯುವ ಲಾಭ ದೇಶವನ್ನು ಶ್ರೀಮಂತವಾಗಿಸಲು ನೆರವಾಗಿದೆ.

2. ಲಕ್ಸೆಂಬರ್ಗ್ (109,190 ಡಾಲರ್)

ಕೇವಲ ಆರು ಲಕ್ಷದಷ್ಟು ಜನಸಂಖ್ಯೆ ಇರುವ ಈ ರಾಷ್ಟ್ರ ಅತಿ ಶ್ರೀಮಂತ ರಾಷ್ಟ್ರಗಳಲ್ಲಿ ಎರಡನೆಯ ಸ್ಥಾನ ಪಡೆಯಲು ಇದರ ನಾಗರಿಕರಲ್ಲಿ ಹೆಚ್ಚಿನವರು ಉದ್ಯೋಗಸ್ಥರಾಗಿರುವುದೇ ಕಾರಣವಾಗಿದೆ. 2016ರಲ್ಲಿ ಯೂರೋಪಿಯನ್ ಯೂನಿಯನ್ ನ ಒಟ್ಟಾರೆ ಏಳ್ಗೆಗಿಂತಲೂ ಈ ದೇಶ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಶ್ರೀಮಂತಿಕೆ ತುಂಬಿ ತುಳುಕುತ್ತಿದೆ. ಆದರೆ ಬ್ರೆಕ್ಸಿಟ್ ಹಾಗೂ ಇತರ ಧೋರಣೆಗಳಲ್ಲಿ ಬದಲಾವಣೆ ಅಮೇರಿಕಾಕ್ಕೆ ಎದುರಾದಂತೆಯೇ ಈ ದೇಶದ ಮೇಲೂ ಪ್ರಭಾವ ಬೀರಬಹುದೆಂದು ಐ ಎಂ ಎಫ್ ಅನುಮಾನ ವ್ಯಕ್ತಪಡಿಸಿದೆ.

1. ಕತಾರ್ (124,930 ಡಾಲರ್)

ಈ ವರ್ಷದ ಶ್ರೀಮಂತ ರಾಷ್ಟ್ರದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಕತರ್ ಕೇವಲ 22.7ಲಕ್ಷ ಜನಸಂಖ್ಯೆ ಹೊಂದಿದೆ. ಈ ವರ್ಷದ ಒಟ್ಟಾರೆ ಗಳಿಕೆಯನ್ನು ಹಂಚಿದರೆ ಪ್ರತಿ ನಾಗರಿಕನೂ $124,930 ರಷ್ಟು ಧನವನ್ನು ಪಡೆಯುತ್ತಾನೆ. ಈ ಮಾಹಿತಿಯೇ ಅಗ್ರಸ್ಥಾನ ಪಡೆಯಲು ನೆರವಾಗಿದೆ ಎಂದು ಐ ಎಂ.ಎಫ್ ವರದಿ ಮಾಡಿದೆ. ತೈಲಬೆಲೆ ಇಳಿದಿದ್ದರೂ ಈ ದೇಶದ ಇನ್ನೊಂದು ಉತ್ಪನ್ನವಾದ, ಪರ್ಯಾಯ ಇಂಧನದ ರೂಪವಾದ ಹೈಡ್ರೋ ಕಾರ್ಬನ್ನುಗಳ ಮಾರಾಟ ಈ ದೇಶದ ಗಳಿಕೆಗೆ ನೆರವಾಗಿದೆ. ಜಿಡಿಪಿಯಲ್ಲಿ ಏಳ್ಗೆ ಈ ವರ್ಷವೂ ಮುಂದುವರೆಯಲಿದೆ ಎಂದು ಐಎಂಎಫ್ ಅಂದಾಜಿಸಿದೆ.

Read more about: rich cities, india, world, economy, gdp, finance news
English summary

These Are the Richest Countries in the World

Many of the highest ranking countries, like Brunei and Qatar, have fuel and oil propelling their economies. However, GDP growth for what are often the richest countries have changed as the price of oil dropped in 2014. Investment and strong banking systems have also helped propel economic growth in other countries.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns