For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ದರ: 29 ಸರಕು ಹಾಗು 54 ಸೇವೆಗಳು ಅಗ್ಗ, ಇಲ್ಲಿದೆ ಸಂಪೂರ್ಣ ಪಟ್ಟಿ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ 25ನೇ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಮಂಡಳಿಯ ಸಭೆಯಲ್ಲಿ 29 ಉತ್ಪನ್ನಗಳ ಹಾಗು 54 ಸೇವೆಗಳ ಮೇಲಿನ ತೆರಿಗೆಯನ್ನು ತಗ್ಗಿಸಲಾಗಿದೆ.

By Siddu
|

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ 25ನೇ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಮಂಡಳಿಯ ಸಭೆಯಲ್ಲಿ 29 ಉತ್ಪನ್ನಗಳ ಹಾಗು 54 ಸೇವೆಗಳ ಮೇಲಿನ ತೆರಿಗೆಯನ್ನು ತಗ್ಗಿಸಲಾಗಿದೆ.

ಜನೆವರಿ 25ರ ನಂತರದಿಂದ ಬದಲಾದ ದರಗಳು ಅನ್ವಯವಾಗಲಿವೆ. ಈ ಕೆಳಗೆ ಯಾವ ಪದಾರ್ಥಗಳ ಮೇಲಿನ ದರ ಕಡಿತಗೊಳಿಸಲಾಗಿದೆ ಎಂಬ ವಿವರವನ್ನು ನೀಡಲಾಗಿದೆ.

ಶೇ. 28 ರಿಂದ 18

ಶೇ. 28 ರಿಂದ 18

* ಹಳೆಯ ಮತ್ತು ಬಳಸಿದ ಮೋಟಾರು ವಾಹನಗಳು (ಮಧ್ಯಮ ಮತ್ತು ದೊಡ್ಡ ಕಾರುಗಳು ಮತ್ತು ಎಸ್ಯುವಿಗಳು),
* ಜೈವಿಕ ಇಂಧನ ಚಾಲಿತ ಬಸ್ಸುಗಳು
* ಥೀಮ್ ಪಾರ್ಕುಗಳು, ವಾಟರ್ ಪಾರ್ಕುಗಳು ಇತ್ಯಾದಿಗಳಿಗೆ ಪ್ರವೇಶ

ಶೇ. 28 ರಿಂದ 12

ಶೇ. 28 ರಿಂದ 12

* ಎಲ್ಲಾ ರೀತಿಯ ಹಳೆಯ ಮತ್ತು ಬಳಸಿದ ಮೋಟಾರ್ ವಾಹನಗಳು (ಮಧ್ಯಮ ಮತ್ತು ದೊಡ್ಡ ಕಾರುಗಳು ಮತ್ತು ಎಸ್ಯುವಿಗಳನ್ನು ಹೊರತುಪಡಿಸಿ)

ಶೇ. 18 ರಿಂದ 12

ಶೇ. 18 ರಿಂದ 12

* ಸಕ್ಕರೆ ಪಾಕದ ಸಿಹಿತಿಂಡಿ/ ಮಿಠಾಯಿ
* ಪ್ಯಾಕ್ ಆಗಿರುವ 20 ಲೀಟರ್ ಕುಡಿಯುವ ನೀರಿನ ಬಾಟಲ್
* ಫಾಸ್ಪರಿಕ್ ಆಸಿಡ್ ದರ್ಜೆಯ ರಸಗೊಬ್ಬರ
* ಜೈವಿಕ ಡೀಸೆಲ್

ಬಯೋ-ಕೀಟನಾಶಕಗಳು:
ಬ್ಯಾಸಿಲಸ್ ತುರಿಂಗಿಯೆನ್ಸಿಸ್ ವರ್. ಇಸ್ರೇಲೆನ್ಸಿಸ್ ಬ್ಯಾಸಿಲಸ್ ತುರಿಂಜಿಯೆನ್ಸಿಸ್ ವರ್. ಕರ್ಸ್ಟಾಕಿ
ಬ್ಯಾಸಿಲಸ್ ತುರಿಂಜಿಯೆನ್ಸಿಸ್ ವರ್. ಗಲ್ಲಾರಿಯಾ
ಬಾಸಿಲಸ್ ಸ್ಪೇರಿಕಸ್
ಟ್ರೈಕೋಡರ್ಮಾ ವೈರಿಡ್
ಟ್ರೈಕೋಡರ್ಮಾ ಹಾರ್ಜಿನಂ
ಸ್ಯೂಡೋಮೊನಸ್ ಫ್ಲೋರೊಸೆನ್
ಬ್ಯುವೆರಿಯಾಬಾಸಿಯಾನಾ
ಎನ್ಪಿವಿ ಆಫ್ ಹೆಲಿಕೋವರ್ಪಾರ್ಮಿಗೆರಾ
ಎನ್ಪಿವಿ ಆಫ್ ಸ್ಪೊಡೊಪ್ಟೆರಾರಿಟೂರಾ
ಬೇಯಿಸಿದ ಕೀಟನಾಶಕಗಳು
ಸೈಂಬೊಪೊಗನ್
ಬಿದಿರು ಮರದ ಕಟ್ಟಡ ನಿರ್ಮಾಣ
ಹನಿ ನೀರಾವರಿ ವ್ಯವಸ್ಥೆ, ಸಿಂಪರಣಾ ಯಂತ್ರಗಳು
ಯಾಂತ್ರಿಕ ಸ್ಪ್ರೇಯರ್

ಶೇ. 18 ರಿಂದ 5

ಶೇ. 18 ರಿಂದ 5

* ಹುಣಿಸೇಹಣ್ಣು ಪೌಡರ್
* ಮೆಹೆಂದಿ ಪೇಸ್ಟ್
* ಖಾಸಗಿ ಎಲ್ಪಿಜಿ ವಿತರಕರು
* ವೈಜ್ಞಾನಿಕ ಮತ್ತು ತಾಂತ್ರಿಕ ಸಲಕರಣೆಗಳು, ಉಪಕರಣಗಳು, ಬಿಡಿ ಭಾಗಗಳು, ಟೂಲ್ಸ್, ಘಟಕಗಳು, ಮೋಕ್ಅಪ್ ಗಳು ಮತ್ತು ಮಾಡ್ಯೂಲ್ ಗಳು, ಕಚ್ಚಾವಸ್ತುಗಳು ಮತ್ತು ಉಡಾವಣಾ ವಾಹನಗಳು

ಶೇಕಡಾ 12 ರಿಂದ 5

ಶೇಕಡಾ 12 ರಿಂದ 5

* ಸ್ಟ್ರಾ (straw)
* ಇತರ ಪ್ಲೈಟಿಂಗ್ ಸಾಮಗ್ರಿಗಳು
* ಬುಟ್ಟಿ ಸಾಮಾನು ಮತ್ತು ಬೆತ್ತ ಕೆಲಸ

ಶೇ. 12 ರಿಂದ 18

ಶೇ. 12 ರಿಂದ 18

* ಸಿಗರೆಟ್ ಫಿಲ್ಟರ್ ರಾಡ್ ಗಳು

ಶೇ. 12 ರಿಂದ 5 (with no refund of unutilised input tax credit)
*ವೆಲ್ವೆಟ್ ಫ್ಯಾಬ್ರಿಕ್

ಶೇ. 3 ರಿಂದ 0.25
* ವಜ್ರಗಳು ಮತ್ತು ಅಮೂಲ್ಯ ಕಲ್ಲುಗಳು

ಶೂನ್ಯ ಜಿಎಸ್ಟಿ ದರ

ಶೂನ್ಯ ಜಿಎಸ್ಟಿ ದರ

* ವಿಭೂತಿ
* ಕೇಳುವ ಸಾಧನಗಳ ಭಾಗಗಳು ಮತ್ತು ಉಪಕರಣಗಳು
* ಡಿ-ಆಯಿಲ್ಡ್ ಅಕ್ಕಿ ತೌಡು

ಫೆಬ್ರವರಿ 1ರಿಂದ ಇ-ವೇ ಬಿಲ್‌

ಫೆಬ್ರವರಿ 1ರಿಂದ ಇ-ವೇ ಬಿಲ್‌

ದೇಶದಾದ್ಯಂತ ಫೆಬ್ರುವರಿ 1ರಿಂದ ರೂ. 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸರಕುಗಳ ಅಂತರರಾಜ್ಯ ಸಾಗಾಣಿಕೆಯಲ್ಲಿ ವಿದ್ಯುನ್ಮಾನ ವೇಬಿಲ್ (ಇ-ವೇ ಬಿಲ್) ವ್ಯವಸ್ಥೆಯನ್ನು ಜಾರಿಗೆ ತರಲಾಗಲಿದೆ. ವಿದ್ಯುನ್ಮಾನ ವೇಬಿಲ್ ನ ಪ್ರಾಯೋಗಿಕ ಹಂತವಾಗಿ ಇದೇ 25ರವರೆಗೆ ಪರೀಕ್ಷೆ ನಡೆಯಲಿದೆ.

English summary

GST Rate: 29 goods, 53 services got Cheaper: check full list here

The 25th GST council meet was held on Thursday. During the meeting a rate cut on 49 items were recommended.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X