For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್: ಆದಾಯ ತೆರಿಗೆ ದರ ಮತ್ತು ಹಂತಗಳನ್ನು ತಗ್ಗಿಸುವ ಸಾಧ್ಯತೆ

ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್ ನಲ್ಲಿ ಆದಾಯ ತೆರಿಗೆ ದರ ಮತ್ತು ಹಂತಗಳನ್ನು ತಗ್ಗಿಸುವ ಸಾಧ್ಯತೆಗಳಿದ್ದು, ಆದಾಯ ತೆರಿಗೆಗೆ ವಿನಾಯಿತಿ ಸಿಗಬಹುದು ಎಂದು ಅರ್ನ್ಸ್ಟ್ ಅಂಡ್ ಯಂಗ್ ಸಂಸ್ಥೆ ಸಮೀಕ್ಷಾ ವರದಿಯಲ್ಲಿ ತಿಳಿಸಿದೆ.

By Siddu
|

ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್ ನಲ್ಲಿ ಆದಾಯ ತೆರಿಗೆ ದರ ಮತ್ತು ಹಂತಗಳನ್ನು ತಗ್ಗಿಸುವ ಸಾಧ್ಯತೆಗಳಿದ್ದು, ಆದಾಯ ತೆರಿಗೆಗೆ ವಿನಾಯಿತಿ ಸಿಗಬಹುದು ಎಂದು ಅರ್ನ್ಸ್ಟ್ ಅಂಡ್ ಯಂಗ್ ಸಂಸ್ಥೆ ಸಮೀಕ್ಷಾ ವರದಿಯಲ್ಲಿ ತಿಳಿಸಿದೆ.

 
ಕೇಂದ್ರ ಬಜೆಟ್: ಆದಾಯ ತೆರಿಗೆ ದರ ಮತ್ತು ಹಂತ ತಗ್ಗಿಸುವ ಸಾಧ್ಯತೆ

ತೆರಿಗೆ ಸಲಹಾ ಸಂಸ್ಥೆಯಾದ ಅರ್ನ್ಸ್ಟ್ ಅಂಡ್ ಯಂಗ್ ನಡೆಸಿದ ಸಮೀಕ್ಷೆಯಲ್ಲಿ ಹಲವಾರು ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಖರ್ಚು ಮಾಡಲು ಜನರ ಬಳಿ ಹೆಚ್ಚು ಹಣ ಇರಬೇಕೆಂಬ ಕಾರಣದಿಂದ ಆದಾಯ ತೆರಿಗೆಯ ಗರಿಷ್ಠ ಮಿತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆಯೆಂಬುದಾಗಿ ಶೇ. 69ರಷ್ಟು ಜನರು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.

 

ಶೇ. 59ರಷ್ಟು ಮಂದಿ ತೆರಿಗೆಯಲ್ಲಿ ಬೇರೆ ಬೇರೆ ಕಡಿತಗಳ ಬದಲಾಗಿ ನೌಕರರ ಮೇಲಿನ ತೆರಿಗೆಯನ್ನು ತಗ್ಗಿಸುವ ದೃಷ್ಟಿಯಿಂದ ಕಡಿತ ಜಾರಿ ಮಾಡಬಹುದಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.

ಜನೆವರಿಯಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ 150 ಸಿಎಫ್ಓಗಳು, ತೆರಿಗೆ ಮುಖ್ಯಸ್ಥರು ಮತ್ತು ಹಿರಿಯ ಹಣಕಾಸು ವೃತ್ತಿಪರರ ಅಭಿಪ್ರಾಯಗಳನ್ನು ಒಳಗೊಂಡಿದೆ. ಮತ್ತು ಜನವರಿನಲ್ಲಿ ನಡೆಸಲಾಯಿತು. ಶೇ. 48ರಷ್ಟು ಮಂದಿ ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡ 25ಕ್ಕೆ ಕಡಿತಗೊಳಿಸಬೇಕೆಂದು ನಿರೀಕ್ಷಿಸಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿ ಆಗಿರುವುದರಿಂದ ನೇರ ತೆರಿಗೆ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆಗಳಾಗುವ ಸಾಧ್ಯತೆ ಕಡಿಮೆ ಇದೆಯೆಂದು ಸಂಸ್ಥೆಯ ಸುಧೀರ್ ಕಪಾಡಿಯಾ ಅಭಿಪ್ರಾಯ ಪಟ್ಟಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಗೂ ರೂ. 5 ಲಕ್ಷದ ಆರೋಗ್ಯ ವಿಮೆ ಸೌಲಭ್ಯ!

English summary

Government May Tweak Income Tax Slabs, Rates In Budget 2018, Says EY Survey

Government May Tweak Income Tax Slabs, Rates In Budget 2018, Says EY Survey.
Story first published: Monday, January 22, 2018, 14:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X