For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್: ಸಕ್ಕರೆ ಅಭಿವೃದ್ಧಿ ನಿಧಿಗಾಗಿ ರೂ. 500 ಕೋಟಿ ನಿರೀಕ್ಷೆ

budget, union budget 2018, budget 2018 latest news, budget expectations 2018, arun jaitley, tax expectations, ಕೇಂದ್ರ ಬಜೆಟ್ 2018, ಬಜೆಟ್, ಅರುಣ್ ಜೇಟ್ಲಿ

|

ಸರ್ಕಾರ 2018ರ ಕೇಂದ್ರ ಬಜೆಟ್ ನಲ್ಲಿ ಸಕ್ಕರೆ ಅಭಿವೃದ್ಧಿ ನಿಧಿ (ಎಸ್ಡಿಎಫ್)ಮೊತ್ತವನ್ನು ರೂ. 500 ಕೋಟಿವರೆಗೆ ಹೆಚ್ಚಿಸುವ ನಿರೀಕ್ಷೆ ಇದೆ.

ಕೇಂದ್ರ ಬಜೆಟ್: ಸಕ್ಕರೆ ಅಭಿವೃದ್ಧಿ ನಿಧಿಗಾಗಿ 500 ಕೋಟಿ ನಿರೀಕ್ಷೆ

ಸಕ್ಕರೆ ಅಭಿವೃದ್ಧಿ ನಿಧಿ (ಎಸ್ಡಿಎಫ್) ಆಹಾರ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದ್ದು, ಮಿಲ್ ಗಳಿಗೆ ಕಡಿಮೆ ಬಡ್ಡಿ ದರಗಳಲ್ಲಿ ಹಣವನ್ನು ಸಾಲವಾಗಿ ಒದಗಿಸುತ್ತದೆ. ಕಳೆದ ಹಣಕಾಸು ವರ್ಷಗಳಲ್ಲಿ ಸಕ್ಕರೆ ಗಿರಣಿಗಳಿಂದ ಸಂಗ್ರಹಿಸಲಾದ ಸೆಸ್ ಅನ್ನು ಇದರಲ್ಲಿ ಸಂಗ್ರಹಿಸಲಾಯಿತು.

ಈ ಹಣಕಾಸು ವರ್ಷದಲ್ಲಿ ಎಸ್ಡಿಎಫ್ ಅಡಿಯಲ್ಲಿ ಹೆಚ್ಚಿನ ಹಣವನ್ನು ಬಳಸಲಾಗುತ್ತಿದೆ. ಮುಂದಿನ ಆರ್ಥಿಕ ವರ್ಷಕ್ಕೆ ಸಕ್ಕರೆ ಅಭಿವೃದ್ಧಿ ನಿಧಿ (ಎಸ್ಡಿಎಫ್) ಬಜೆಟ್ ಹಂಚಿಕೆ ರೂ. 500 ಕೋಟಿಗೆ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಬಜೆಟ್ ನಲ್ಲಿ ನರೇಂದ್ರ ಮೋದಿ ಸರ್ಕಾರ ಜನತೆಗೆ ನೀಡಲಿರುವ 5 ಪ್ರಮುಖ ಕೊಡುಗೆಗಳು!

ಸಕ್ಕರೆ ಗಿರಣಿಗಳು ಸಾಲವನ್ನು ಪಾವತಿಸಿದಲ್ಲಿ, ಮತ್ತಷ್ಟು ಸಾಲ ನೀಡಲು ಅದೇ ನಿಧಿಯನ್ನು ಬಳಸಲಾಗುವುದು. ಇಲ್ಲದಿದ್ದರೆ ಹಣದ ಲಭ್ಯತೆ ಕಡಿಮೆಯಾಗಲಿದೆ. ಸಕ್ಕರೆ ಉದ್ಯಮದ ಅಭಿವೃದ್ಧಿಗಾಗಿ ಹಣಕಾಸಿನ ನೆರವು ಒದಗಿಸಲು 1982 ರಲ್ಲಿ ಸಕ್ಕರೆ ಅಭಿವೃದ್ಧಿ ನಿಧಿ (ಎಸ್ಡಿಎಫ್) ಅನ್ನು ಸ್ಥಾಪಿಸಲಾಯಿತು. ಆರಂಭದಿಂದಲೂ ಸಕ್ಕರೆ ಕಾರ್ಖಾನೆಗಳಿಗೆ ಸುಮಾರು ರೂ. 7,500 ಕೋಟಿಗಳನ್ನು ವಿತರಿಸಲಾಗಿದೆ. ಜಿಯೋ ರಿಪಬ್ಲಿಕ್ ಡೇ ಬಂಪರ್ ಆಫರ್! ಹೊಸ ರೀಚಾರ್ಜ್ ಪ್ಲಾನ್ ಗಳ ಸಂಪೂರ್ಣ ಮಾಹಿತಿ..

English summary

Budget 2018: Government may allot Rs 500 crore for sugar development fund

Budget 2018: The government may marginally raise the corpus for Sugar Development Fund (SDF) to Rs 500 crore in the upcoming Budget for 2018-19. SDF, managed by the food ministry, is used for lending money to mills at lower interest rates.
Story first published: Wednesday, January 24, 2018, 17:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X