Englishहिन्दी മലയാളം தமிழ் తెలుగు

ರೇಷನ್ ಕಾರ್ಡುದಾರರೇ ಈ ಸುದ್ದಿ ಓದಿ! ಫೆ. 9 ರಿಂದ ಆಗಲಿದೆ ದೊಡ್ಡ ಬದಲಾವಣೆ..

Written By: Siddu
Subscribe to GoodReturns Kannada

ಪಡಿತರ ವಿತರಣೆ ವ್ಯವಸ್ಥೆ ರದ್ದುಪಡಿಸಿ ನೇರವಾಗಿ ಫಲಾನುಭವಿಯ ಖಾತೆಗೆ ನಗದು ವರ್ಗಾವಣೆ ಮಾಡುವ ವ್ಯವಸ್ಥೆ ಜಾರಿ ಬಗ್ಗೆ ಹಿಂದೆಯೇ ಮೋದಿ ಚಿಂತನೆ ನಡೆಸಿದ್ದರು.

ಇದೀಗ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಇನ್ನೊಂದು ಬಹುದೊಡ್ಡ ಬದಲಾವಣೆ ಮಾಡಲಾಗುತ್ತಿದೆ. ಇದು ರೇಷನ್ ಕಾರ್ಡುದಾರರಿಗೆ ಲಾಭದಾಯಕವಾದರೆ ಕಾಳಸಂತೆಕೋರರ ಮೇಲೆ ನಿಯಂತ್ರಣ ಹಾಕಲಿದೆ.

ಫೆ. 9ರಿಂದ ಯೋಜನೆ ಜಾರಿ

ಇನ್ಮುಂದೆ ಪಡಿತರ ಅಂಗಡಿಗಳಲ್ಲಿ ಬೆರಳಚ್ಚು ವ್ಯವಸ್ಥೆ ಕಡ್ಡಾಯವಾಗಲಿದೆ. ಫೆ. 9 ರಿಂದ ಈ ಯೋಜನೆ ಜಾರಿಗೆ ಬರಲಿದ್ದು, ರೇಷನ್ ಕಾರ್ಡ್ ತೋರಿಸಿದರೆ ಆಗಲ್ಲ. ಜತೆಗೆ ಪಡಿತರ ಪಡೆಯಲು ಕಾರ್ಡುದಾರರ ಬೆರಳಚ್ಚು ಬೇಕಾಗುತ್ತದೆ. ಪಡಿತರ ವಿತರಣೆ ಬದಲು ನಗದು ವರ್ಗಾವಣೆ: ಮೋದಿ

ಡೆಹ್ರಾಡೂನ್ ನಲ್ಲಿ ಜಾರಿ

ಡೆಹ್ರಾಡೂನ್ ಜಿಲ್ಲೆಯ 1043 ರೇಷನ್ ಅಂಗಡಿಗಳಲ್ಲಿ ಯೋಜನೆ ಜಾರಿಗೆ ಬರುತ್ತಿದೆ. ನ್ಯಾಯಬೆಲೆ ಪಡಿತರ ಅಂಗಡಿಗಳಿಗೆ ಬಯೋಮೆಟ್ರಿಕ್ ಯಂತ್ರವನ್ನು ನೀಡಲಾಗುತ್ತಿದೆ. ಇದೇ ಫೆ. 9ರ ಒಳಗಾಗಿ ಎಲ್ಲ ಅಂಗಡಿಗಳಿಗೂ ಬಯೋಮೆಟ್ರಿಕ್ ಯಂತ್ರ ಲಭ್ಯವಾಗಲಿದೆ.

ಕಾರ್ಡುದಾರನ ಪರವಾಗಿ ಕುಟುಂಬದ ಸದಸ್ಯರು ಪಡೆಯಬಹುದು

ರೇಷನ್ ಕಾರ್ಡ್ ಸಂಖ್ಯೆ ಫೀಡ್ ಮಾಡಿದಾಗ, ಕಾರ್ಡ್ ಹೊಂದಿರುವವರ ಪೂರ್ಣ ವಿವರಗಳು ಬಹಿರಂಗಗೊಳ್ಳುತ್ತವೆ. ಇದರ ನಂತರ, ಕಾರ್ಡುದಾರರು ಬಯೋಮೆಟ್ರಿಕ್ ಗಣಕದಲ್ಲಿ ಹೆಬ್ಬೆಟ್ಟನ್ನು ಒತ್ತಬೇಕಾಗುತ್ತದೆ. ತದನಂತರ ರೇಷನ್ ವಿತರಿಸಲಾಗುತ್ತದೆ. ಕಾರ್ಡುದಾರನ ಪರವಾಗಿ ಅವನ ಕುಟುಂಬದ ಯಾವುದೇ ಸದಸ್ಯರು ಬಯೋಮೆಟ್ರಿಕ್ ಗಣಕದಲ್ಲಿ ಹೆಬ್ಬೆಟ್ಟನ್ನು ಒತ್ತಿದ ನಂತರ ರೇಷನ್ ನೀಡಲಾಗುವುದು.

ಮೋಸ ನಿಯಂತ್ರಣಕ್ಕೆ ಕ್ರಮ

ಪಡಿತರ ವಿತರಣೆ ಸಂದರ್ಭದಲ್ಲಿ ಮೋಸ ನಡೆಯುತಿದ್ದು, ಕಾಳ ಸಂತೆಯಲ್ಲಿ ಪಡಿತರ ಮಾರಾಟವಾಗುತ್ತಿದೆ ಎಂಬ ಸುದ್ದಿಗಳು ಹಾಗು ಅನೇಕ ದೂರುಗಳು ಕೇಳಿಬರುತ್ತಿದ್ದವು. ಪಡಿತರ ವ್ಯವಸ್ಥೆಯಲ್ಲಿನ ಅಕ್ರಮ ತಡೆಯಲು ಸರ್ಕಾರ ಈ ಕ್ರಮ ಕೈಗೊಳ್ಳಲು ಮುಂದಾಗಿದೆ.

ಭ್ರಷ್ಟಾಚಾರ, ದುರುಪಯೋಗ ತಡೆ

ಪಡಿತರ ವಿತರಣೆ ಸಂದರ್ಭದಲ್ಲಿ ಭ್ರಷ್ಟಾಚಾರ, ಬಡವರ ಸೋಗಿನಲ್ಲಿ ದುರುಪಯೋಗ, ಬಡವರ ರೇಷನ್ ಕಾರ್ಡುಗಳನ್ನು ಬಳಸಿ ದುರುಪಯೋಗ ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದವು. ಪಡಿತರ ವಿತರಣೆ ಸಂದರ್ಭದಲ್ಲಿ ಬಯೋಮೆಟ್ರಿಕ್ ಜಾರಿ ಮಾಡಿದರೆ ಫಲಾನುಭವಿಗಳಿಗೆ ಮೋಸವಾಗುವುದಿಲ್ಲ. ಈ ಮೂಲಕ ಭ್ರಷ್ಟಾಚಾರ, ದುರುಪಯೋಗ ನಿಯಂತ್ರಿಸಬಹುದು.

English summary

Big Changes in Ration Card Distribution

The fingerprint system will be mandatory in ration shops. The plan will come into effect from Feb. 9th.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns