For Quick Alerts
ALLOW NOTIFICATIONS  
For Daily Alerts

ಪಡಿತರ ವಿತರಣೆ ಬದಲು ನಗದು ವರ್ಗಾವಣೆ: ಮೋದಿ

ಪಡಿತರ ವಿತರಣೆ ವ್ಯವಸ್ಥೆ (ಪಿಡಿಎಸ್) ರದ್ದುಪಡಿಸಿ ನೇರವಾಗಿ ಬಡ ಫಲಾನುಭವಿಗಳ ಖಾತೆಗೆ ನಗದು ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

By Siddu
|

ಪಡಿತರ ವಿತರಣೆ ವ್ಯವಸ್ಥೆ (ಪಿಡಿಎಸ್) ರದ್ದುಪಡಿಸಿ ನೇರವಾಗಿ ಬಡ ಫಲಾನುಭವಿಗಳ ಖಾತೆಗೆ ನಗದು ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

 

ಈ ವ್ಯವಸ್ಥೆಯನ್ನು ಹರಿಯಾಣ ಮತ್ತು ಪುದುಚೇರಿಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದ್ದು, ಅಲ್ಲಿ ಸಿಕ್ಕಿರುವ ಯಶಸ್ಸಿನ ಆಧಾರದ ಮೇಲೆ ದೇಶದಾದ್ಯಂತ ಇದು ಜಾರಿ ಮಾಡಲಾಗುವುದು ಎಂದಿದ್ದಾರೆ. ಎಲ್ಪಿಜಿ (LPG) ಸಬ್ಸಿಡಿ ರದ್ದು, ಪ್ರತಿ ತಿಂಗಳು ಸಿಲಿಂಡರ್ ಬೆಲೆ ಏರಿಕೆ

ಸೀಮೆ ಎಣ್ಣೆ ಮುಕ್ತ ರಾಜ್ಯ

ಸೀಮೆ ಎಣ್ಣೆ ಮುಕ್ತ ರಾಜ್ಯ

ಈಗಾಗಲೇ ಹರಿಯಾಣ ಮತ್ತು ಚಂಡೀಗಡ ರಾಜ್ಯಗಳು ಸೀಮೆ ಎಣ್ಣೆ ಮುಕ್ತ ರಾಜ್ಯಗಳಾಗಿವೆ. ಹೀಗಾಗಿ ಸೀಮೆಎಣ್ಣೆ ವಿತರಣೆಯಲ್ಲಿ ವೇಳೆ ನಡೆಯುತ್ತಿದ್ದ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದಿದೆ ಎಂದು ಮೋದಿ ಹೇಳಿದರು.

ನ್ಯಾಯಬೆಲೆ ಅಂಗಡಿ

ನ್ಯಾಯಬೆಲೆ ಅಂಗಡಿ

ಭಾರತೀಯ ಆಹಾರ ನಿಗಮ(ಎಫ್‌ಸಿಐ) ಪಡಿತರ ವಿತರಣೆ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಬಡವರಿಗೆ ಆಹಾರ ಧಾನ್ಯಗಳು ಮತ್ತು ಸೀಮೆಎಣ್ಣೆ ವಿತರಣೆ ಮಾಡುತ್ತಿದೆ.

ಭ್ರಷ್ಟಾಚಾರ, ದುರುಪಯೋಗ ತಡೆ

ಭ್ರಷ್ಟಾಚಾರ, ದುರುಪಯೋಗ ತಡೆ

ಪಡಿತರ ವಿತರಣೆ ಸಂದರ್ಭದಲ್ಲಿ ಭ್ರಷ್ಟಾಚಾರ, ಬಡವರ ಸೋಗಿನಲ್ಲಿ ದುರುಪಯೋಗ, ಬಡವರ ರೇಷನ್ ಕಾರ್ಡುಗಳನ್ನು ಬಳಸಿ ದುರುಪಯೋಗ ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದವು. ಪಿಡಿಎಸ್ ರದ್ದುಪಡಿಸಿ ನೇರವಾಗಿ ಫಲಾನುಭವಿಗಳ ಖಾತೆಗೆ ನಗದು ವರ್ಗಾವಣೆ ಮಾಡುವ ಮೂಲಕ ಇವೇಲ್ಲವನ್ನು ನಿಯಂತ್ರಿಸಬಹುದು ಎಂದರು.

English summary

Government in favour of scrapping PDS

Prime Minister Narendra on Monday said the government is likely to scrap public distribution scheme (PDS) system and transfer money directly to the accounts of poor beneficiaries after getting encouraging results from Haryana and Puducherry.
Story first published: Tuesday, August 1, 2017, 15:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X