For Quick Alerts
ALLOW NOTIFICATIONS  
For Daily Alerts

ರೈತರಿಗೆ ಬಂಪರ್! ರೈತ ಬೆಳಕು ಯೋಜನೆಗೆ 3,500 ಕೋಟಿ, ರೈತ ಸಾಲ ಮನ್ನಾ 8165 ಕೋಟಿ, ಕೃಷಿ ಭಾಗ್ಯಕ್ಕೆ 600 ಕೋಟಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕೊನೆ ಬಜೆಟ್ ನಲ್ಲಿ ರೈತರ ಉತ್ತಮ ಕೊಡುಗೆ ನೀಡಲಿದ್ದಾರೆ ಎಂಬುದು ಬಹುನಿರೀಕ್ಷೆ ಆಗಿತ್ತು. ಕೃಷಿ ವಲಯಕ್ಕೆ ಒಟ್ಟು ರೂ. 5080 ಕೋಟಿ ಅನುದಾನ ನೀಡಲಾಗಿದೆ.

By Siddu
|

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕೊನೆ ಬಜೆಟ್ ನಲ್ಲಿ ರೈತರ ಉತ್ತಮ ಕೊಡುಗೆ ನೀಡಲಿದ್ದಾರೆ ಎಂಬುದು ಬಹುನಿರೀಕ್ಷೆ ಆಗಿತ್ತು. ಕೃಷಿ ವಲಯಕ್ಕೆ ಒಟ್ಟು ರೂ. 5080 ಕೋಟಿ ಅನುದಾನ ನೀಡಲಾಗಿದೆ.

 

ರೈತ ಬೆಳಕು ಯೋಜನೆ

ರೈತ ಬೆಳಕು ಯೋಜನೆ

ಕೃಷಿವಲಯಕ್ಕೆ ನಿಡಿದ ಬಹುಮುಖ್ಯ ಭಾಗ್ಯಗಳಲ್ಲಿ ರೈತ ಬೆಳಕು ಪ್ರಮುಖ ಯೋಜನೆಯಾಗಿದೆ. ರೈತ ಬೆಳಕು ಯೋಜನೆಯಡಿ ಮಳೆ ಆಶ್ರಿತರಾಗಿ ಬೆಳೆ ಬೆಳೆಯುವ ರೈತರ ಬ್ಯಾಂಕ್ ಖಾತೆಗಳಿಗೆ ಪ್ರತಿ ವರ್ಷ ತಲಾ ರೂ. 5 ಸಾವಿರ ನೇರ ವರ್ಗಾವಣೆ ಮಾಡುವ ಯೋಜನೆ ಇದಾಗಿದೆ.
ಸಿದ್ದರಾಮಯ್ಯನವರ ಈ ಯೋಜನೆಗಾಗಿ ಪ್ರತಿ ವರ್ಷ ಸುಮಾರು ರೂ. 3,500 ಕೋಟಿ ವೆಚ್ಚವಾಗಲಿದೆ. 70 ಲಕ್ಷ ರೈತರು ಇದರ ಲಾಭ ಪಡೆಯಲಿದ್ದಾರೆ. ಪ್ರತಿಯೊಬ್ಬ ರೈತನಿಗೆ ರೂ. 5 ರಿಂದ ಗರಿಷ್ಠ 10 ಸಾವಿರವರೆಗೆ ನೀಡಲಾಗುವುದು ಎಂದು ಅಂದಾಜಿಸಲಾಗಿದೆ. ರೈತ ಬೆಳಕು ಯೋಜನೆಯಡಿ ಗರಿಷ್ಠ ರೂ. 5 ಸಾವಿರ ಮೊತ್ತ ಪ್ರತಿ ಹೆಕ್ಟೇರ್‌ಗೆ ಸಿಗಲಿದೆ.  ಕರ್ನಾಟಕ ಬಜೆಟ್ 2018: ಸಿದ್ದರಾಮಯ್ಯರವರ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ..

ಕೃಷಿ ಭಾಗ್ಯ ಯೋಜನೆ

ಕೃಷಿ ಭಾಗ್ಯ ಯೋಜನೆ

ಕೃಷಿ ಭಾಗ್ಯ ಯೋಜನೆಗಾಗಿ ರೂ. 600 ಕೋಟಿ ಅನುದಾನ ಮೀಸಲಿಡಲಾಗಿದೆ. ಕೃಷಿ ಹೊಂಡ ಯೋಜನೆಗೆ ರೂ. 1898 ಕೋಟಿ ಹಾಗು ಸಣ್ಣ ನೀರಾವರಿಗಾಗಿ ರೂ. 2090 ಕೋಟಿ ಅನುದಾನ ಮೀಸಲು ಇಡಲಾಗಿದೆ. ಜತೆಗೆ ಸಾವಯವ ಕೃಷಿ, ಸಿರಿಧಾನ್ಯ ಬೆಳೆಗಾರರಿಗೆ ರೂ. 24 ಕೋಟಿ ಅನುದಾನವಿದೆ.

ರೈತರ ಸಾಲಮನ್ನಾ
 

ರೈತರ ಸಾಲಮನ್ನಾ

ರೈತರ ಸಾಲದ ಹೊರೆ ಕಡಿಮೆ ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ರೂ. 8165 ಕೋಟಿ ಸಾಲ ಮನ್ನಾ ಮಾಡಲಾಗಿದೆ.

English summary

Siddaramaiah Budget: Announces schemes for farmers and Agriculture sector

Siddaramaiah Budget: Announces schemes for farmers and Agriculture sector.
Story first published: Saturday, February 17, 2018, 13:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X