For Quick Alerts
ALLOW NOTIFICATIONS  
For Daily Alerts

ಪಿಪಿಎಫ್, ಎನ್ಎಸ್ಸಿ, ಸುಕನ್ಯಾ, ಹಿರಿಯ ನಾಗರಿಕರ ಯೋಜನೆಗಳ ಬಡ್ಡಿದರ ಏರಿಕೆ ಇಲ್ಲ

ಸಣ್ಣ ಉಳಿತಾಯ ಹೂಡಿಕೆದಾರರಿಗೆ ಇಲ್ಲೊಂದು ಕಹಿ ಸುದ್ದಿ ಇದೆ. ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್, ಎನ್ ಎಸ್ ಸಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಮೇಲಿನ ಬಡ್ಡಿದರಗಳು ಹೆಚ್ಚಳಗೊಳ್ಳುವ ಸಾಧ್ಯತೆಯಿಲ್ಲ.

By Siddu
|

ಸಣ್ಣ ಉಳಿತಾಯ ಹೂಡಿಕೆದಾರರಿಗೆ ಇಲ್ಲೊಂದು ಕಹಿ ಸುದ್ದಿ ಇದೆ. ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್, ಎನ್ ಎಸ್ ಸಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಮೇಲಿನ ಬಡ್ಡಿದರಗಳು ಹೆಚ್ಚಳಗೊಳ್ಳುವ ಸಾಧ್ಯತೆಯಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

 
ಪಿಪಿಎಫ್, ಎನ್ಎಸ್ಸಿ, ಸುಕನ್ಯಾ ಯೋಜನೆಗಳ ಬಡ್ಡಿದರ ಏರಿಕೆ ಇಲ್ಲ

ಸರ್ಕಾರ ಪ್ರತಿ ತ್ರೈಮಾಸಿಕದ ಅವಧಿಯಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸುತ್ತದೆ. 2018ರ ಏಪ್ರಿಲ್‌ - ಜೂನ್‌ ತ್ರೈಮಾಸಿಕದ ಅವಧಿಯಲ್ಲಿ ಪೋಸ್ಟ್ ಆಫೀಸ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು ಹೆಚ್ಚಳವಾಗುವ ಸಾಧ್ಯತೆ ಹಣಕಾಸು ಸಚಿವಾಲಯ ತಳ್ಳಿ ಹಾಕಿದೆ. 'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ, 90 ಸಾವಿರ ಸಬ್ಸಿಡಿ ಪಡೆಯಿರಿ

 

ಪಿಪಿಎಫ್ ಮತ್ತು ಎನ್ಎಸ್ಸಿ ಶೇ. 7.6, ಕೆ.ವಿ.ಪಿ ಶೇ. 7.3 ರಷ್ಟು ವಾರ್ಷಿಕ ಕಡಿಮೆ ದರವನ್ನು ನೀಡುತ್ತಿವೆ. ವಾರ್ಷಿಕವಾಗಿ ಸುಕನ್ಯಾ ಸಮೃದ್ಧಿ ಯೋಜನೆ ಶೇ. 8.1ರಷ್ಟು ಬಡ್ಡಿದರ ಒದಗಿಸುತ್ತದೆ. ಸರ್ಕಾರದ ಸಾಲ ಪತ್ರಗಳಲ್ಲಿನ ಹೂಡಿಕಾ ಪ್ರತಿಫಲದಲ್ಲಿನ ಏರಿಕೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಹೆಚ್ಚಳಕ್ಕೆ ಕಾರಣವಾಗಲಿದೆ ಎನ್ನಲಾಗಿತ್ತು.

English summary

Interest Rate of PPF, NSC, Senior citizen, Sukanya Account Will Not Go Up

Government fixes every quarter interest rates of small savings schemes like PPF, NSC, senior citizen savings scheme and Sukanya Samriddhi Scheme.
Story first published: Tuesday, March 27, 2018, 11:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X