For Quick Alerts
ALLOW NOTIFICATIONS  
For Daily Alerts

ವಾಲ್‌ಮಾರ್ಟ್ ಫ್ಲಿಪ್‌ಕಾರ್ಟ್ ಡೀಲ್! ಭಾರತದ ಮಾರುಕಟ್ಟೆ ಮೇಲುಂಟಾಗುವ ಪರಿಣಾಮಗಳೇನು?

ಜಗತ್ತಿನ ಅತಿ ದೊಡ್ಡ ರಿಟೇಲ್ ಕಂಪನಿ ವಾಲ್‌ಮಾರ್ಟ್, ಭಾರತದ ರಿಟೇಲ್ ಕ್ಷೇತ್ರದ ದೈತ್ಯ ಫ್ಲಿಪ್‌ಕಾರ್ಟ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 16 ಬಿಲಿಯನ್ ಡಾಲರ್ ಪಾವತಿಸುವ ಮೂಲಕ ವಾಲ್‌ಮಾರ್ಟ್ ಫ್ಲಿಪ್‌ಕಾರ್ಟ್‌ನಲ್ಲಿ ಶೇ. 77 ರಷ್ಟು ಪಾಲ

By Siddu
|

ಜಗತ್ತಿನ ಅತಿ ದೊಡ್ಡ ರಿಟೇಲ್ ಕಂಪನಿ ವಾಲ್‌ಮಾರ್ಟ್, ಭಾರತದ ರಿಟೇಲ್ ಕ್ಷೇತ್ರದ ದೈತ್ಯ ಫ್ಲಿಪ್‌ಕಾರ್ಟ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 16 ಬಿಲಿಯನ್ ಡಾಲರ್ ಪಾವತಿಸುವ ಮೂಲಕ ವಾಲ್‌ಮಾರ್ಟ್ ಫ್ಲಿಪ್‌ಕಾರ್ಟ್‌ನಲ್ಲಿ ಶೇ. 77 ರಷ್ಟು ಪಾಲು ಪಡೆದುಕೊಂಡಿದೆ.

ವಾಲ್‌ಮಾರ್ಟ್ ಹಾಗೂ ಫ್ಲಿಪ್‌ಕಾರ್ಟ್ ಎರಡೂ ಸಂಸ್ಥೆಗಳು ಪ್ರತ್ಯೇಕ ಬ್ರ್ಯಾಂಡ್‌ಗಳಾಗಿಯೇ ಕಾರ್ಯ ನಿರ್ವಹಿಸಲಿವೆ. ಮುಂದಿನ ದಿನಗಳಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಹೆಚ್ಚಿನ ಪಾಲುದಾರಿಕೆಯೊಂದಿಗೆ, ಅದನ್ನು ಶೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಮಾಡುವ ಉದ್ದೇಶವನ್ನು ವಾಲ್‌ಮಾರ್ಟ್ ಹೊಂದಿದೆ.

ಫ್ಲಿಪ್‌ಕಾರ್ಟ್‌ನ ಸ್ವಾಧೀನ ಪ್ರಕ್ರಿಯೆ ವಾಲ್‌ಮಾರ್ಟ್‌ನ ಅತಿದೊಡ್ಡ ಡೀಲ್‌ಗಳಲ್ಲೊಂದಾಗಿದೆ. ಜೊತೆಗೆ ಭಾರತೀಯ ಸ್ಟಾರ್ಟಅಪ್ ಕಂಪನಿಯೊಂದರ ಅತಿ ಯಶಸ್ವಿ ಸ್ವಾಧೀನ ಪ್ರಕ್ರಿಯೆ ಇದಾಗಿದೆ.
ಈ ಮಧ್ಯೆ ಮೆಗಾ ಡೀಲ್ ದೇಶದ ರಿಟೇಲ್ ಕ್ಷೇತ್ರಕ್ಕೆ ಒಳ್ಳೆಯದಾ ಅಥವಾ ಕೆಟ್ಟದ್ದಾ ಎಂಬ ಕುರಿತು ದೇಶದ ಉದ್ಯಮ ವಲಯ ಹಾಗೂ ಸಾರ್ವಜನಿಕರಿಂದ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ದಂಪತಿಗಳಿಗೆ ಹಾಗು ಮದುವೆ ಆಗುವವರಿಗಾಗಿ ಈ ಲೇಖನ. ತಪ್ಪದೇ ಓದಿ..

ಫ್ಲಿಪ್‌ಕಾರ್ಟ್ ನಡೆದು ಬಂದ ದಾರಿ

ಫ್ಲಿಪ್‌ಕಾರ್ಟ್ ನಡೆದು ಬಂದ ದಾರಿ

ಬೆಂಗಳೂರು ಮೂಲದ ಫ್ಲಿಪ್‌ಕಾರ್ಟ್ ಜಗತ್ತಿನ ಮೂರನೇ ಅತಿ ದೊಡ್ಡ ಖಾಸಗಿ ಬಂಡವಾಳ ಹೊಂದಿದ ಕಂಪನಿಯಾಗಿ ಗುರುತಿಸಿಕೊಂಡಿದೆ. 2007 ರಲ್ಲಿ ಸಚಿನ್ ಬನ್ಸಲ್ ಹಾಗೂ ಬಿನ್ನಿ ಬನ್ಸಲ್ (ಇಬ್ಬರೂ ಸಂಬಂಧಿಕರಲ್ಲ) ಫ್ಲಿಪ್‌ಕಾರ್ಟ್ ಆರಂಭಿಸಿದರು. ಭಾರತದ ಮೊದಲ ಪ್ರಮುಖ ಇ-ಕಾಮರ್ಸ್ ಕಂಪನಿಯಾಗಿ ಹೊರಹೊಮ್ಮಿದ ಫ್ಲಿಪ್‌ಕಾರ್ಟ್ ಅಮೇಜಾನ್ ಹಾಗೂ ಇನ್ನಿತರ ಸಂಸ್ಥೆಗಳು ಬರುವ ಮುಂಚೆಯೇ ರಿಟೇಲ್ ಕ್ಷೇತ್ರವನ್ನು ಆವರಿಸಿಕೊಂಡಿತ್ತು.
ಇಂದು 30 ಸಾವಿರ ಸಿಬ್ಬಂದಿ, 7.5 ಬಿಲಿಯನ್ ಡಾಲರ್ ವಾರ್ಷಿಕ ಜಿಎಂವಿ (ಗ್ರಾಸ್ ಮರ್ಚಂಡೈಸ್ ವ್ಯಾಲ್ಯು), 54 ಮಿಲಿಯನ್ ಸಕ್ರಿಯ ಗ್ರಾಹಕರು ಹಾಗೂ ವಾರ್ಷಿಕ 2.3 ಬಿಲಿಯನ್ ಡಾಲರ್ ವಹಿವಾಟನ್ನು ಕಂಪನಿ ಹೊಂದಿದೆ.

ಫ್ಲಿಪ್‌ಕಾರ್ಟ್ ಹೆಗ್ಗಳಿಕೆ

ಫ್ಲಿಪ್‌ಕಾರ್ಟ್ ಹೆಗ್ಗಳಿಕೆ

ಫ್ಲಿಪ್‌ಕಾರ್ಟ್ ದೇಶದ ಆರಂಭಿಕ ಹಂತದ ಯಶಸ್ವಿ ಸ್ಟಾರ್ಟ್‌ಅಪ್‌ಗಳಲ್ಲೊಂದಾಗಿದ್ದು, ಭಾರತದ ಜನತೆಯ ಮನದಲ್ಲಿ ಕಂಪನಿ ಒಂದು ವಿಶಿಷ್ಟ ಸ್ಥಾನ ಪಡೆದಿದೆ. ಫ್ಲಿಪ್‌ಕಾರ್ಟ್‌ನೊಂದಿಗೆ ಭಾರತೀಯರು ಒಂದು ರೀತಿಯ ಅವಿನಾಭಾವ ಸಂಬಂಧ ಹೊಂದಿದ್ದಾರೆ.
ಬಹುತೇಕ ಭಾರತೀಯರು ಪ್ರಪ್ರಥಮವಾಗಿ ಆನ್‌ಲೈನ್ ಮೂಲಕ ಪುಸ್ತಕ, ಬಟ್ಟೆಗಳು, ಮೊಬೈಲ್ ಫೋನ್, ಗಿಫ್ಟ್ ಮುಂತಾದ ತಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಿ ಪಡೆದುಕೊಂಡಿದ್ದೇ ಫ್ಲಿಪ್‌ಕಾರ್ಟ್ ಮೂಲಕ. ಅದರಲ್ಲೂ ಮನೆ ಬಾಗಿಲಿಗೆ ವಸ್ತು ಬಂದ ಮೇಲೆಯೇ ದುಡ್ಡು ಪಾವತಿಸುವ ಅವಕಾಶ ನೀಡಿದ್ದು ಫ್ಲಿಪ್‌ಕಾರ್ಟ್ ಹೆಗ್ಗಳಿಕೆ. ಡಿಜಿಟಲ್ ಪಾವತಿ ಇನ್ನೂ ಕಠಿಣವಾಗಿದ್ದ ಹಾಗೂ ಸೂಕ್ತ ಜ್ಞಾನವೂ ಇರದ ದಿನಗಳಲ್ಲಿ ಕ್ಯಾಶ ಆನ್ ಡೆಲಿವರಿ ಭಾರತೀಯರಿಗೆ ಅಚ್ಚುಮೆಚ್ಚಿನದಾಯಿತು.
ಫ್ಲಿಪ್‌ಕಾರ್ಟ್‌ನ ಆರಂಭಿಕ ಹಂತದ ಪ್ರಯೋಗಗಳು ಹಾಗೂ ವಿಧಾನಗಳು ಭಾರತ ಹಾಗೂ ಇನ್ನಿತರ ಅಭಿವೃದ್ಧಿಶೀಲ ದೇಶಗಳಲ್ಲಿ ಆನ್‌ಲೈನ್ ವ್ಯವಹಾರ ಹೇಗಿರಬಹುದೆಂಬುದಕ್ಕೆ ಮಾದರಿಯಾದವು. ಹೀಗಾಗಿಯೇ ದೇಶದಲ್ಲಿ ಇತ್ತೀಚೆಗಷ್ಟೆ ಕಾಲಿಟ್ಟ ಉಬರ್ ಸಹ ನಗದು ಪಾವತಿಯನ್ನು ಸ್ವೀಕರಿಸುತ್ತಿದೆ ಎಂದರೆ ತಪ್ಪಾಗಲಾರದು.

ನವೋದ್ಯಮಿಗಳ ಪಾಲಿಗೆ ಶತಮಾನದ ಯುಗ

ನವೋದ್ಯಮಿಗಳ ಪಾಲಿಗೆ ಶತಮಾನದ ಯುಗ

ದೇಶದಲ್ಲಿ ವಿಶ್ವ ಮಟ್ಟದ ಒಂದು ಕಂಪನಿಯನ್ನು ಕಟ್ಟಿ ಬೆಳೆಸುವುದಷ್ಟೇ ಅಲ್ಲದೆ ಅದನ್ನು ಕೊಳ್ಳಲು ವಾಲ್‌ಮಾರ್ಟ್‌ನಂಥ ಬೃಹತ್ ಕಂಪನಿಗಳು ಮುಂದೆ ಬರುವಂತೆ ಮಾಡಬಹುದು ಎಂಬುದನ್ನು ಭಾರತದ ಉದ್ಯಮ ವಲಯ ಈಗ ಗುರುತಿಸಲಾರಂಭಿಸಿದೆ. ಇಂಡಿಯಾ ಕೋಶಂಟ್ ಕಂಪನಿಯ ಇನ್ವೆಸ್ಟರ್ ವಿಭಾಗದ ವಿಸಿ ಫ್ಲಿಪ್‌ಕಾರ್ಟ್ ಕುರಿತು ಟ್ವೀಟ್ ಮಾಡಿದ್ದು ಹೀಗೆ : 'ಈ ನಿರ್ಗಮನ ಐತಿಹಾಸಿಕ ಮೈಲುಗಲ್ಲಾಗಿದೆ. ಫ್ಲಿಪ್‌ಕಾರ್ಟ್‌ನ ಕಳೆದ ದಶಕ ಭಾರತದ ನವೋದ್ಯಮಿಗಳ ಪಾಲಿಗೆ ಶತಮಾನದ ಯುಗವಾಗಿದೆ.'

ಅನಾರೋಗ್ಯಕರ ಪೈಪೋಟಿಯ ಸಾಧ್ಯತೆ

ಅನಾರೋಗ್ಯಕರ ಪೈಪೋಟಿಯ ಸಾಧ್ಯತೆ

ವಾಲ್‌ಮಾರ್ಟ್‌ನ ಈ ಡೀಲ್ ಬಗ್ಗೆ ಎಲ್ಲರೂ ಖುಷಿಯಾಗಿಲ್ಲ. ಭಾರತದಲ್ಲಿ ಮಲ್ಟಿ ಬ್ರ್ಯಾಂಡ್ ಫಿಸಿಕಲ್ ರಿಟೇಲ್ ವಲಯದಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆ (ಎಫ್‌ಡಿಐ) ಯನ್ನು ನಿರ್ಬಂಧಿಸಲಾಗಿದೆ. ಆದರೆ ಈಗ ದೇಶದ ಆನ್‌ಲೈನ್ ರಿಟೇಲ್ ಕಂಪನಿಯ ಮೇಲೆ ಪ್ರಭುತ್ವ ಸಾಧಿಸುವುದರ ಮೂಲಕ ಎಫ್‌ಡಿಐ ನಿಯಮಾವಳಿಗಳನ್ನು ಮೀರಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ದೇಶದ ಚಿಕ್ಕ ವ್ಯಾಪಾರಗಳ ಹಿತಚಿಂತಕ ಸಂಸ್ಥೆ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ), ಈ ಡೀಲ್‌ನಲ್ಲಿ ಅಕ್ರಮ ದರ ನಿಗದಿ ಹಾಗೂ ಇನ್ನಿತರ ಕಾನೂನಿಗೆ ವಿರುದ್ಧವಾದ ಪ್ರಕ್ರಿಯೆಗಳು ನಡೆದ ಬಗ್ಗೆ ಸಂಶಯಗಳಿದ್ದು, ಕೇಂದ್ರ ಸರಕಾರ ತಕ್ಷಣ ಮಧ್ಯ ಪ್ರವೇಶಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.

ಬ್ರ್ಯಾಂಡ್ ದುರುಪಯೋಗ ಸಾಧ್ಯತೆ

ಬ್ರ್ಯಾಂಡ್ ದುರುಪಯೋಗ ಸಾಧ್ಯತೆ

ಇನ್ನು ಫ್ಲಿಪ್‌ಕಾರ್ಟ್‌ನ ವೆಂಡರ್ಸ್‌ಗಳನ್ನು ಹೊಂದಿರುವ ಆಲ್ ಇಂಡಿಯಾ ಆನ್‌ಲೈನ್ ವೆಂಡರ್ಸ್ ಅಸೋಸಿಯೇಶನ್, ವಾಲ್‌ಮಾರ್ಟ್ ತನ್ನ ಸ್ವಂತ ಬ್ರ್ಯಾಂಡ್‌ಗಳನ್ನು ಫ್ಲಿಪ್‌ಕಾರ್ಟ್ ಮೂಲಕ ದೇಶದ ಮಾರುಕಟ್ಟೆಗೆ ತರುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದೆ.

ತಜ್ಞರ ಅಭಿಪ್ರಾಯಗಳು

ತಜ್ಞರ ಅಭಿಪ್ರಾಯಗಳು

ವ್ಯಾಪಾರಸ್ಥರ ಪ್ರಮುಖ ಮುಖಂಡ ಹಾಗೂ ದೇಶದ ಮೊದಲ ಇ-ಕಾಮರ್ಸ್ ಕಂಪನಿ ಫ್ಯಾಬ್ ಮಾರ್ಟ್ ಸಂಸ್ಥಾಪಕ ಕೆ. ವೈದೀಶ್ವರನ್, ಫ್ಲಿಪ್‌ಕಾರ್ಟ್‌ನ ಬೆಲೆಯನ್ನು ಅತಿಯಾಗಿ ಹೆಚ್ಚಿಸಲಾಗಿದೆ ಎಂದಿದ್ದಾರೆ. ಫ್ಲಿಪ್‌ಕಾರ್ಟ್‌ನ ದರ ನಿಗದಿ ಸರಿಯಾಗಿಯೇ ಇದೆ ಎನ್ನುತ್ತಾರೆ ವಾಟರ್ ಬ್ರಿಜ್ ವೆಂಚರ್ಸ್‌ನ ವಿಸಿ ಸರಬ್‌ವೀರ್ ಸಿಂಗ್. ಬ್ಲೂಮ್‌ಕ್ವಿಂಟ್‌ನೊಂದಿಗೆ ಇತ್ತೀಚೆಗೆ ಮಾತನಾಡಿದ ಸಿಂಗ್, ಈ ಡೀಲ್ ವಾಲ್‌ಮಾರ್ಟ್ ಕೇಂದ್ರಿಕೃತವಾಗಿದೆ. ಕೆಲ ವರ್ಷಗಳ ಹಿಂದೆ ಸಾಫ್ಟ್ ಬ್ಯಾಂಕ್ ಹಾಗೂ ಟೆನ್‌ಸೆಂಟ್‌ಗಳ ಬಂಡವಾಳ ಹೂಡಿಕೆಯ ನಂತರ ಫ್ಲಿಪ್‌ಕಾರ್ಟ್‌ನ ಸಮಸ್ಯೆಗಳು ಬಗೆಹರಿದಿದ್ದವು. ಇ-ಕಾಮರ್ಸ್ ವಲಯದಲ್ಲಿ ಹೆಜ್ಜೆ ಗುರುತು ಮೂಡಿಸಲು ಯತ್ನಿಸುತ್ತಿದ್ದ ವಾಲ್ ಮಾರ್ಟ್‌ಗೆ ಫ್ಲಿಪ್‌ಕಾರ್ಟ್ ವರವಾಗಿ ಪರಿಣಮಿಸಿತು. ಈ ವ್ಯವಹಾರ ವಾಲ್‌ಮಾರ್ಟ್ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಪರ್ಧೆ ಎದುರಿಸುವ ಭೀತಿ

ಸ್ಪರ್ಧೆ ಎದುರಿಸುವ ಭೀತಿ

ವಾಲ್‌ಮಾರ್ಟ್‌ನ ಯುಎಸ್‌ಎ ಘಟಕ ಚೀನಾದ ಪೂರೈಕೆದಾರರೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಹೀಗಾಗಿ ಈಗ ಫ್ಲಿಪ್‌ಕಾರ್ಟ್‌ಗೆ ವಸ್ತುಗಳನ್ನು ಪೂರೈಕೆ ಮಾಡುತ್ತಿರುವವರು ಸ್ಪರ್ಧೆ ಎದುರಿಸುವ ಭೀತಿ ಎದುರಾಗಿದೆ. ಅಮೆರಿಕಾ ಅಷ್ಟೇ ಅಲ್ಲದೆ ಚೀನಾ ವಸ್ತುಗಳೊಂದಿಗೂ ಸ್ಪರ್ಧೆ ಮಾಡುವ ಸ್ಥಿತಿ ಬರಲಿದೆ ಎಂಬ ಕಳವಳ ವ್ಯಕ್ತವಾಗುತ್ತಿದೆ.

ಭಾರತದಲ್ಲಿ ವಿದೇಶಿ ಕಂಪನಿಗಳ ಪಾರಮ್ಯ!

ಭಾರತದಲ್ಲಿ ವಿದೇಶಿ ಕಂಪನಿಗಳ ಪಾರಮ್ಯ!

ದೇಶದಲ್ಲೇ ಸ್ಥಾಪನೆಯಾಗಿ ಬೆಳೆದ ಫ್ಲಿಪ್‌ಕಾರ್ಟ್‌ನ ಸ್ವಾಧೀನತೆಯಿಂದ ಇನ್ನು ದೇಶದ ಇ-ಕಾಮರ್ಸ್ ವಲಯ ಎರಡು ವಿದೇಶಿ ಕಂಪನಿಗಳಾದ ಅಮೆಜಾನ್ ಹಾಗೂ ವಾಲ್‌ಮಾರ್ಟ್‌ಗಳೇ ಪಾರಮ್ಯ ಮೆರೆಯಲಿವೆ. ಕೆಲ ಫ್ಲಿಪ್‌ಕಾರ್ಟ್ ಹಿತ ಚಿಂತಕರು ಈ ಬಗ್ಗೆ ಅಸಮಾಧನಗೊಂಡಿದ್ದಾರೆ. ಸ್ವದೇಶಿ ಕಂಪನಿಯಾಗಿದ್ದ ಫ್ಲಿಪ್‌ಕಾರ್ಟ್‌ನೊಂದಿಗೆ ವ್ಯವಹಾರ ಮಾಡಿದ ಗ್ರಾಹಕರು ಈಗ ಅದೇ ಕಂಪನಿಯನ್ನು ಅಮೇರಿಕನ್ ಕಾರ್ಪೊರೇಟ್ ಕಂಪನಿಯಾಗಿ ಯಾವ ರೀತಿ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ.

ಹೊಸ ಯುಗದ ಆರಂಭ

ಹೊಸ ಯುಗದ ಆರಂಭ

ಒಟ್ಟಾರೆ ಈ ಸ್ವಾಧೀನ ಪ್ರಕ್ರಿಯೆಯಿಂದ ದೇಶದ ನವೋದ್ಯಮ ವಲಯದಲ್ಲಿ ಹೊಸ ಯುಗವೊಂದು ಆರಂಭವಾದಂತಾಗಿದೆ. ಸ್ವಾಧೀನ ಪ್ರಕ್ರಿಯೆ ದೇಶ ಹಾಗೂ ಜಾಗತಿಕ ಮಾರುಕಟ್ಟೆಯ ಮೇಲೆ ಯಾವ ರೀತಿ ಪರಿಣಾಮ ಉಂಟು ಮಾಡಲಿದೆ ಎಂದು ನೋಡಬೇಕು. ಒಂದು ಸ್ಟಾರ್ಟ್ ಅಪ್ ಐಡಿಯಾ ಆಗಿ ಯಶಸ್ಸು ಕಂಡ ಫ್ಲಿಪ್‌ಕಾರ್ಟ್‌ನ ಒಂದು ಕಾಲಚಕ್ರ ತಿರುಗಿದೆ ಎಂದು ಹೇಳಬಹುದು.

ಗೇಮ್ ಚೇಂಜರ್

ಗೇಮ್ ಚೇಂಜರ್

ಇನ್ನು ಇಂಥ ಒಂದು ದೊಡ್ಡ ಕಂಪನಿ ಫ್ಲಿಪ್‌ಕಾರ್ಟ್ ಅನ್ನು ಸುಮಾರು ಇಪ್ಪತ್ತು ಯುವಕರು ಬೆಂಗಳೂರಿನ ಒಂದು ಚಿಕ್ಕ ಅಪಾರ್ಟಮೆಂಟ್‌ನಲ್ಲಿ ಆರಂಭಿಸಿದ್ದರು ಎಂದು ತಿಳಿದರೆ ಆಶ್ಚರ್ಯವಾಗುತ್ತದೆ. ದಶಕದಲ್ಲಿ ಅದನ್ನೊಂದು ಗ್ರಾಹಕರ ಅತಿ ಮೆಚ್ಚಿನ ಹಾಗೂ ಬೃಹತ್ ಕಂಪನಿಯಾಗಿ ಬೆಳೆಸಿ ವಾಲ್‌ಮಾರ್ಟ್ ಗೆ ಅದನ್ನು ಮಾರಲಿದ್ದಾರೆ ಎಂದು ಅವತ್ತು ಯಾರಾದರೂ ಹೇಳಿದ್ದರೆ ಯಾರೂ ನಂಬುತ್ತಿರಲಿಲ್ಲ. ಆದರೆ ಅಂಥ ಬೃಹತ್ ಸಾಧನೆ ಈ ದೇಶದ ನೆಲದಲ್ಲಿ ನಡೆದಿದೆ.
ಫ್ಲಿಪ್‌ಕಾರ್ಟ್‌ನ ಈ ನಿರ್ಗಮನ ಭಾರತದ ಉದ್ಯಮಶೀಲತೆಗೆ ಒಂದು ಬದಲಾಯಿಸಲಾಗದ ಗೇಮ್ ಚೇಂಜರ್ ಆಗಿದೆ. ಸ್ಟಾರ್ಟ್ಅಪ್‌ಗಳಿಂದ ಏನನ್ನು ಸಾಧಿಸಬಹುದು ಎಂಬ ಮಾನದಂಡವನ್ನೇ ಫ್ಲಿಪ್‌ಕಾರ್ಟ್ ಎಚ್ಚರಿಸಿದ್ದು, ಮುಂದಿನ ದಿನಗಳಲ್ಲಿ ಉದ್ಯಮಶೀಲರಿಗೆ ಇದೊಂದು ದೊಡ್ಡ ಪಾಠವಾಗಲಿದೆ.
ಭಾರತದ ಸ್ಟಾರ್ಟ್ಅಪ್ ವ್ಯವಸ್ಥೆ ತುಂಬಾ ಹಳೆಯದಲ್ಲ, ಅದು ಕಳೆದೊಂದು ದಶಕದಲ್ಲಿ ಫ್ಲಿಪ್‌ಕಾರ್ಟ್‌ನೊಂದಿಗೆಯೇ ಬೆಳೆದು, ಅಭಿವೃದ್ಧಿ ಹೊಂದಿದೆ.

English summary

Walmart Flipkart Deal! What are the consequences of the Indian Market?

The world’s largest retailer, Walmart, has acquired Indian e-commerce giant, Flipkart for $16 billion and a 77% stake
Story first published: Friday, May 11, 2018, 9:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X