For Quick Alerts
ALLOW NOTIFICATIONS  
For Daily Alerts

  ಕರ್ನಾಟಕದಲ್ಲಿ ಬಿಜೆಪಿ ಯಾಕೆ ಗೆಲ್ಲಲಿದೆ? ಆರ್ಥಿಕತೆಗೆ ಕೊಡುಗೆಗಳೇನು?

  By Siddu
  |

  ಶನಿವಾರ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಶೇ. 72.36ರಷ್ಟು ಮತದಾನ ಆಗಿದೆ. ಚುನಾವಣೆಯ ಫಲಿತಾಂಶ ನಾಳೆ ಮೇ 15ಕ್ಕೆ ಹೊರ ಬಿಳಲಿದೆ. ಮೂರು ಪಕ್ಷಗಳು ವಿಜಯ ಸಾಧಿಸುವ ಹುಮ್ಮಸ್ಸಿನಲ್ಲಿವೆ. ದೇವೆಗೌಡ ನೇತೃತ್ವದ ಜೆಡಿಎಸ್ ಹತ್ತು ವರ್ಷಗಳ ನಂತರ ತನ್ನದೇಯಾದ ಸರ್ಕಾರ ರಚಿಸಲು ಎದುರು ನೋಡುತ್ತಿದ್ದಾರೆ. ಬಿಜೆಪಿ ಪಕ್ಷ ಐದು ವರ್ಷಗಳ ಕಾಂಗ್ರೆಸ್ ಸರ್ಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಶತಾಯಗತಾಯ ಪ್ರಯತ್ನದಲ್ಲಿದೆ.

  ಈ ಮೂವರೊಳಗೆ ಯಾರು ಉತ್ತಮರು? ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಯಾವ ಸರ್ಕಾರ ಉತ್ತಮ ಆಡಳಿತ ನಿಡಬಲ್ಲದು? ಜತೆಗೆ ಕರ್ನಾಟಕದಲ್ಲಿ ಬಿಜೆಪಿ ಗೆಲುವಿಗೆ ಪ್ರಮುಖ ಕಾರಣಗಳೇನು ಎಂಬುದನ್ನು ನೋಡೋಣ ಬನ್ನಿ..

  ಮೂವರೊಳಗೆ ಯಾರು?

  ಅಧಿಕಾರಕ್ಕೆ ಹಿಂದಿರುಗುವ ಬಗ್ಗೆ ಜೆಡಿಎಸ್ ಮಾತನಾಡುತ್ತಿದ್ದರೂ ಸಹ, ಕರ್ನಾಟಕದಲ್ಲಿ ನಿಜವಾದ ಸ್ಪರ್ಧೆ ಇರುವುದು ಆಡಳಿತರೂಢ ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ಎಂಬುದು ಅದು ತಿಳಿದುಕೊಂಡಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಇವುಗಳಲ್ಲಿ ಯಾವ ಪಕ್ಷ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಕೊಡುಗೆ ನಿಡಬಲ್ಲದು ಎಂಬುದು ಕೂಡ ಪ್ರಮುಖ ಅಂಶವಾಗಿದೆ. ಏಕೆಂದರೆ ಮತದಾರರಿಗೆ ಬೇಕಾಗಿರುವುದು ಕರ್ನಾಟಕದ ವಿಕಾಸ.
  ಹಿಂದೆಂದಿಗಿಂತಲೂ ಈ ಬಾರಿಯ ಪ್ರಚಾರ ತುಂಬಾ ಆಕ್ರಮಣಶೀಲ ಮತ್ತು ಪರಿಣಾಮಕಾರಿಯಾಗಿತ್ತು ಎಂಬುದು ಎಲ್ಲರಿಗೂ ಗೊತ್ತು. ಬಿಜೆಪಿ ಏಕೆ ಅಧಿಕಾರಕ್ಕೆ ಬರಬಹುದು ಎಂಬುದನ್ನು ಇಲ್ಲಿ ಕೆಲ ಕಾರಣಗಳಿವೆ.

  ಮೋದಿ ಅಲೆ

  2014 ರ ಲೋಕಸಭಾ ಚುನಾವಣೆಯ ನಂತರ ದೆಹಲಿ ಮತ್ತು ಬಿಹಾರವನ್ನು ಹೊರತುಪಡಿಸಿ ಪ್ರಧಾನಿ ನರೇಂದ್ರ ಮೋದಿ ಎಲ್ಲ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಟ್ರಂಪ್ ಕಾರ್ಡ್ ಎಂಬುದು ಸಾಬೀತಾಗಿದೆ. ಒಂದು ರಾಜ್ಯದ ನಂತರ ಇನ್ನೊಂದು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಅವರು ಖ್ಯಾತಿ ಪಡೆದಿದ್ದಾರೆ ಎಂಬುದು ಹಿಂದಿನ ಫಲಿತಾಂಶಗಳಿಂದ ತಿಳಿದುಬಂದಿದೆ.
  ಕರ್ನಾಟಕದಲ್ಲಿಯೂ ಮೇ 1 ರಿಂದ ಆರಂಭವಾದ ಮೋದಿ ಪ್ರಚಾರವು ಆವೇಗವನ್ನು ಪಡೆಯಿತು. ಆರಂಭಿಕ ಯೋಜನೆ ಪ್ರಕಾರ ಮೋದಿಯವರು 15 ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಇಲ್ಲಿನ ಪರಿಸ್ಥಿಯನ್ನು ಮನಗಂಡ ಬಿಜೆಪಿ ಯೋಜನೆಯನ್ನು ಬದಲಾಯಿಸಿ, 21 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು. ಹೀಗಾಗಿ ರಾಜ್ಯದಲ್ಲಿ ಮತ್ತೊಂದು ವಿಜಯದ ಮಾಲೆಯನ್ನು ಧರಿಸುವ ಉತ್ಸಾಹದಲ್ಲಿ ಬಿಜೆಪಿ ಇದೆ.

  ಆರ್ಥಿಕ ಅಭಿವೃದ್ಧಿಯ ಮಂತ್ರ

  ಮೋದಿಯವರು ಹೇಳುವಂತೆ ಡೆವಲಪ್ಮೆಂಟ್, ಡೆವಲಪ್ಮೆಂಟ್ ಆಂಡ್ ಡೆವಲಪ್ಮೆಂಟ್. ವಿಕಾಸ, ವಿಕಾಸ ಮತ್ತು ವಿಕಾಸ. ಇದು ಮೋದಿಯ ಮೂಲ ಮಂತ್ರ. ಎಲ್ಲಾ ಹಂತಗಳಲ್ಲಿನ ಸರ್ವಾಂಗೀಣ ಅಭಿವೃದ್ಧಿ ನಮ್ಮ ಧ್ಯೇಯ ಎಂದು ಬಿಜೆಪಿ ಹೇಳಿದೆ. ಕರ್ನಾಟಕದ ಆರ್ಥಿಕ ಅಭಿವೃದ್ಧಿಗಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿನ ಹಲವಾರು ಅಂಶಗಳ ಮೂಲಕ ಮತದಾರರನ್ನು ಸೆಳೆದಿದೆ. ರೈತರ ಸಾಲ ಮನ್ನಾ, ರೈತಪರ ಯೋಜನೆಗಳು, ಬಡವರ, ಮಧ್ಯಮ ವರ್ಗದ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳು ಘೋಷಿಸಲಾಗಿದೆ. ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ.

  ಅಮಿತ್ ಶಾ ಸ್ಟ್ರಾಟಜಿ

  ಕಾಂಗ್ರೆಸ್ ಗೆ ಹೋಲಿಸಿದರೆ ತಳಮಟ್ಟದಿಂದ ಬಿಜೆಪಿ ತುಂಬಾ ಸಂಘಟಿತವಾಗಿದೆ. ಬೂತ್ ಮಟ್ಟದಿಂದ ಕಾರ್ಯಕರ್ತರ ಪಡೆಯನ್ನು ಹೊಂದಿದೆ. ಆರ್ಎಸ್ಎಸ್ ಸಂಘಟನೆಯ ಬೆಂಬಲವನ್ನು ಸಹ ಹೊಂದಿದೆ. ಶಾ ಅವರ ರಾಜಕೀಯ ಕುಶಾಗ್ರಮತಿ ಸಾಬೀತಾಗಿದ್ದು, ಅವರೊಬ್ಬ ಸೂಕ್ಷ್ಮ ಮ್ಯಾನೆಜ್ಮೆಂಟ್ ಚುನಾವಣೆಗೆ ಹೆಸರುಪಡೆದಿದ್ದಾರೆ. ತಮ್ಮ ತಂತ್ರವನ್ನು ಬೂತ್ ಮಟ್ಟದಿಂದ ನಡೆಸುತ್ತಾರೆ.

  ಸಿದ್ದರಾಮಯ್ಯ

  ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ವಿರೋಧಿ ಅಧಿಕಾರವನ್ನು ಎದುರಿಸುತ್ತಿದ್ದು, ಅವರು ವಿಭಜನಾ ರಾಜಕೀಯ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ. ಜಾತಿ ರಾಜಕೀಯ ಮತ್ತು ಅಲ್ಪಸಂಖ್ಯಾತರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.

  ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ವಿರೋಧಿ ಅಧಿಕಾರವನ್ನು ಎದುರಿಸುತ್ತಿದ್ದಾರೆ ಹಾಗು ಅವರು ವಿಭಜನಾ ರಾಜಕೀಯ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ. ಜಾತಿ ರಾಜಕೀಯ ಮತ್ತು ಅಲ್ಪಸಂಖ್ಯಾತರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.

  ಲಿಂಗಾಯತ್ ಅನ್ನು ಪ್ರತ್ಯೇಕ ಧರ್ಮವೆಂದು ಘೋಷಣೆ, ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಮತ್ತು ಗೀತೆ, ಟಿಪ್ಪು ಸುಲ್ತಾನ ಜನ್ಮದಿನೋತ್ಸವ ಮುಂತಾದವುಗಳು ದೀರ್ಘಾವಧಿಯಲ್ಲಿ ಕಾಂಗ್ರೆಸ್ ಗೆ ಸಹಕಾರಿಯಾಗಲು ಸಾಕಾಗುವುದಿಲ್ಲ ಎಂಬುದು ಪಂಡಿತರ ಲೆಕ್ಕಾಚಾರ.

  ರಾಹುಲ್ ಗಾಂಧಿ

  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗೆಲುವಿನ ಪ್ರಚಾರಕನಾಗಿ ಮೋದಿಯಂತೆ ತಮ್ಮ ಸಾಮರ್ಥ್ಯವನ್ನು ಸ್ಥಾಪಿಸಬೇಕಿದೆ. ಆದರೂ ಗುಜರಾತ್ ಚುನಾವಣೆಯ ನಂತರ ರಾಹುಲ್ ಗಾಂಧಿ ಹಂತಹಂತವಾಗಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ.
  ಕರ್ನಾಟಕದ ಅಭಿವೃದ್ಧಿಯ ಬದಲಾಗಿ ಮೋದಿ, ಶಾ, ಯಡಿಯೂರಪ್ಪನವರ ವಿರುದ್ಧ ಆಕ್ರಮಣ ಮಾಡುತ್ತಲೇ ಬಂದಿದ್ದಾರೆ. ಯುವ ಸಮುದಾಯವನ್ನು ಸೆಳೆಯುವಲ್ಲಿ ರಾಹುಲ್ ಗಾಂಧಿ ವಿಫಲರಾಗಿದ್ದಾರೆ. ಇವರ ಪ್ರಚಾರ ರಾಜ್ಯದಲ್ಲಿ ಅಂತಿಮ ಫಲಿತಾಂಶದ ಯಾವುದೇ ಪ್ರಭಾವ ಬೀರದೆ ಇರಬಹುದು. ಆದರೆ, ಇದು ಕಾಮಗ್ರೆಸ್ ಗೆಲುವಿಗೆ ಹಿನ್ನಡೆಯಾಗಬಹುದು ಎನ್ನಲಾಗಿದೆ.

  ಮೂರು ಕೋನಗಳಲ್ಲಿನ ಸ್ಪರ್ಧೆ

  ಕರ್ನಾಟಕದಲ್ಲಿನ ಮೂರು ಪಕ್ಷಗಳ ನಡುವಿನ ಚುನಾವಣೆ ಬಿಜೆಪಿಗೆ ಪ್ರಯೋಜನವಾಗಲಿದೆ. ಜೆಡಿಎಸ್ ಕಾಂಗ್ರೆಸ್ ನ ಮತಗಳನ್ನು ಒಡೆಯಲಿದೆ. ವಿರೋಧಿ ಅಧಿಕಾರದ ಮತಗಳು ಜೆಡಿಎಸ್ ಹಾಗು ಬಿಜೆಪಿ ಪಾಲಾಗಲಿವೆ. ಇದು ಕಾಂಗ್ರೆಸ್ ಗೆ ಹಾನಿ ಉಂಟು ಮಾಡಲಿದೆ.

  ಅಧಿಕಾರದ ವರ್ಗಾವಣೆ

  1983 ರಿಂದೀಚೆಗೆ ಕಳೆದ 35 ವರ್ಷಗಳಿಂದ ಕಾಂಗ್ರೆಸ್ ಮತ್ತು ಪ್ರತಿಸ್ಪರ್ಧಿ ಪಕ್ಷಗಳ ನಡುವೆ ಅಧಿಕಾರ ವರ್ಗಾವಣೆಗೆ ಕರ್ನಾಟಕ ಸಾಕ್ಷಿಯಾಗಿದೆ. ಅಧಿಕಾರ ವರ್ಗಾವಣೆಯ ಹಂತವನ್ನು ಮುರಿದು ಮತ್ತೆ ಅಧಿಕಾರಕ್ಕೆ ಬರುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಒಂದು ಬಾರಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಎಂಬ ನೀತಿಯನ್ನು ಮತದಾರರು ಪಾಲಿಸಿದರೆ ಬಿಜೆಪಿ ಅಧಿಕಾರಕ್ಕೆ ಬರಬಹುದು. ಜತೆಗೆ ಜೆಡಿಎಸ್ ಬಲವಾದ ಸ್ಪರ್ಧಿಯಾಗಿ ಸ್ಥಾನದಲ್ಲಿ ನಿಲ್ಲವುದು ಕಷ್ಟ. ಹೀಗಾಗಿ ಮೇ 15 ರಂದು ಫಲಿತಾಂಶ ಹೋರಬಿದ್ದಾಗ ಕರ್ನಾಟಕದಲ್ಲಿ ಬಿಜೆಪಿ ಪ್ರಯೋಜನಕಾರಿಯಾಗಿರಲಿದೆ.

  ಯುವಕರು ಮೋದಿಯ ಶಕ್ತಿ

  ದೇಶದೆಲ್ಲೆಡೆ ಯುವ ಸಮುದಾಯ ಮೋದಿಯವರನ್ನು ತುಂಬಾ ಹೆಚ್ಚಿನ ಸಂಖೆಯಲ್ಲಿ ಅನುಕರಣೆ ಮಾಡುತ್ತಿದೆ. ಯುವಕರನ್ನು ಸೆಳೆಯುವಲ್ಲಿ ಮೋದಿಯವರು ಯಶಸ್ವಿಯಾಗಿದ್ದು, ಭಾಗಶಹ ಯುವಕರ ಮತಗಳು ಮೋದಿಯವರ ಬುಟ್ಟಿಗೆ ಬೀಳಲಿವೆ. ಪ್ರತಿ ಹಳ್ಳಿಹಳ್ಳಿಗಳಲ್ಲೂ ಮೋದಿ ಅನುಯಾಯಿ ಯುವಪಡೆ ಇದ್ದು, ಅವರೇಲ್ಲಾ ಸ್ವತಹ ಪ್ರಚಾರದಲ್ಲಿ ತೊಡಗಿಕೊಂಡಿರುವುದು ಬಿಜೆಪಿಗೆ ವರದಾನವಾಗಲಿದೆ. ಅಲ್ಲಿನ ಅಭ್ಯರ್ಥಿಗಾಗಿ ವೋಟ್ ಅಲ್ಲದಿದ್ದರೂ ಮೋದಿಯವರಿಗಾಗಿ ನಮ್ಮ ವೋಟ್ ಅನ್ನುವಂತ ಯುವಕರಿದ್ದಾರೆ.

  English summary

  Why BJP will Win in Karnataka? What are the contributions to the economy?

  These are the few reasons why the BJP may have an edge in the Karnataka election.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more