For Quick Alerts
ALLOW NOTIFICATIONS  
For Daily Alerts

ಪ್ರಯಾಣಿಕರಿಗೆ ಸಿಹಿಸುದ್ದಿ! ಭಾರತೀಯ ರೈಲ್ವೆ ಇಲಾಖೆಯ 10 ಹೊಸ ಸೌಲಭ್ಯ ನಿಮ್ಮದಾಗಿಸಿ..

ಬದಲಾಗುತ್ತಿರುವ ಆಧುನಿಕ ಜಗತ್ತಿಗೆ ತಕ್ಕಂತೆ ತಾನೂ ಬದಲಾಗುತ್ತಿರುವ ಭಾರತೀಯ ರೈಲ್ವೆ, ಈಗ ತನ್ನ ಐಆರ್‌ಸಿಟಿಸಿ ವೆಬ್‌ಸೈಟ್ ಅನ್ನು ಆಧುನೀಕರಣಗೊಳಿಸಿದೆ.

By Siddu
|

ಬದಲಾಗುತ್ತಿರುವ ಆಧುನಿಕ ಜಗತ್ತಿಗೆ ತಕ್ಕಂತೆ ತಾನೂ ಬದಲಾಗುತ್ತಿರುವ ಭಾರತೀಯ ರೈಲ್ವೆ, ಈಗ ತನ್ನ ಐಆರ್‌ಸಿಟಿಸಿ ವೆಬ್‌ಸೈಟ್ ಅನ್ನು ಆಧುನೀಕರಣಗೊಳಿಸಿದೆ. ಪ್ರಯಾಣಿಕರಿಗೆ ಪ್ರಮುಖವಾಗಿ ಇ-ಟಿಕೆಟಿಂಗ್ ಸೌಲಭ್ಯ ನೀಡುವ ಐಆರ್‌ಸಿಟಿಸಿ (Indian Railway Catering and Tourism Corporation) ಪೋರ್ಟಲ್ ಈಗ ಅತ್ಯಾಧುನಿಕ ತಾಂತ್ರಿಕ ಮಾರ್ಪಾಟು ಹೊಂದುವ ಮೂಲಕ, ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ನೀಡಲು ಸಜ್ಜಾಗಿದೆ.

 

ಆನ್ ಲೈನ್ ಮೂಲಕ ಇ-ಟಿಕೆಟ್ ಬುಕ್ ಮಾಡುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳವಾಗಿಸಲಾಗಿದ್ದು, ಇಂದಿನಿಂದಲೇ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಏನೇ ಮಾಹಿತಿ ನೋಡಬೇಕಾದರೂ ಮೊದಲು ವೆಬ್‌ಸೈಟ್ ಗೆ 'ಲಾಗ್ ಇನ್' ಮಾಡಬೇಕಾಗುತ್ತಿತ್ತು. ಈಗ ಇದನ್ನು ನಿವಾರಿಸಲಾಗಿದೆ. ಟಿಕೆಟ್ ಬುಕ್ ಮಾಡುವಾಗ ವೇಟಿಂಗ್ ಲಿಸ್ಟ್ ಬಂದರೆ, ಟಿಕೆಟ್ ಕನ್ಫರ್ಮ್ ಆಗುವ ಸಾಧ್ಯತೆಗಳೆಷ್ಟು ಎಂಬುದನ್ನು ಸಹ ವೆಬ್‌ಸೈಟ್ ತಿಳಿಸಿಕೊಡುವಂತೆ ವ್ಯವಸ್ಥೆ ಮಾಡಿದ್ದು ಅತಿ ಪ್ರಮುಖ ಬದಲಾವಣೆ ಆಗಿದೆ. ಈ ಎಲ್ಲ ಬದಲಾವಣೆಗಳ ಪ್ರಯೋಜನವನ್ನು ಪ್ರಯಾಣಿಕರು ಇಂದಿನಿಂದಲೇ ಬಳಸಬಹುದು.

ಐಆರ್‌ಸಿಟಿಸಿಯ ನೂತನ ನೆಕ್ಸ್ಟ್ ಜನರೇಶನ್ ಸುಧಾರಿತ ಇ-ಟಿಕೆಟಿಂಗ್ ಪೋರ್ಟಲ್ ಪ್ರಯಾಣಿಕರಿಗೆ ಯಾವೆಲ್ಲ ಅನುಕೂಲತೆಗಳನ್ನು ಒದಗಿಸಲಿದೆ ಎಂಬ ಬಗ್ಗೆ 'ಫೈನಾನ್ಸಿಯಲ್ ಎಕ್ಸ್ಪ್ರೆಸ್ ಆನ್ಲೈನ್' ಸರ್ವೆ ಮಾಡಿದ್ದು, ಅದರಲ್ಲಿ ಹೊರ ಹೊಮ್ಮಿದ ೧೦ ಪ್ರಮುಖ ಪ್ರಯೋಜನಗಳು ಹೀಗಿವೆ..

1. ಐಆರ್‌ಸಿಟಿಸಿ ಪೋರ್ಟಲ್

1. ಐಆರ್‌ಸಿಟಿಸಿ ಪೋರ್ಟಲ್

ಈ ಮುಂಚೆ ರೈಲುಗಳ ವೇಳಾಪಟ್ಟಿ ಹಾಗೂ ಮುಂಗಡ ಬುಕಿಂಗ್ ಗೆ ಸ್ಥಳ ಲಭ್ಯತೆ ನೋಡಬೇಕಾದರೆ ಐಆರ್‌ಸಿಟಿಸಿ ಪೋರ್ಟಲ್ ಗೆ ಲಾಗ್ ಇನ್ ಮಾಡುವುದು ಅಗತ್ಯವಾಗಿತ್ತು. ಆದರೆ ಪ್ರಸ್ತುತ ಸುಧಾರಿತ ಪೋರ್ಟಲ್ ನಲ್ಲಿ ಲಾಗ್ ಇನ್ ಆಗದೆಯೂ ಈ ಎಲ್ಲ ಮಾಹಿತಿಯನ್ನು ತಿಳಿಯಬಹುದು. ಜೊತೆಗೆ ವೆಬ್‌ಸೈಟ್ ನ ಯಾವುದೇ ವಿಭಾಗದಲ್ಲಿ ಫಾಂಟ್ ಸೈಜ್ ಬದಲಾಯಿಸುವ ಸೌಲಭ್ಯ ಅಳವಡಿಸಲಾಗಿದೆ.

2. ಟಿಕೆಟ್ ಬುಕಿಂಗ್

2. ಟಿಕೆಟ್ ಬುಕಿಂಗ್

ರೈಲುಗಳ ಆಗಮನ/ನಿರ್ಗಮನ, ಕ್ಲಾಸ್, ರೈಲು ಹಾಗೂ ಕೋಟಾಗಳನ್ನು ಹುಡುಕುವ ಸಲುವಾಗಿ ಫಿಲ್ಟರ್ ಗಳನ್ನು ಅಳವಡಿಸಲಾಗಿದ್ದು, ಪ್ರಯಾಣಿಕರು ಸುಲಭವಾಗಿ ತಮಗೆ ಬೇಕಾದ ಮಾಹಿತಿ ಪಡೆದು, ಯಾವುದೇ ಗೊಂದಲ ಇಲ್ಲದೆ ಟಿಕೆಟ್ ಬುಕ್ ಮಾಡಬಹುದು. ಇಷ್ಟೇ ಅಲ್ಲದೆ ಈಗಿನ ಸುಧಾರಿತ ವೆಬ್‌ಸೈಟ್ ವಿನ್ಯಾಸ ಸಂಪೂರ್ಣ ಬಳಕೆದಾರ ಸ್ನೇಹಿ ಆಗಿದೆ. ಪ್ರಯಾಣದ ವೇಳೆ ಹಾಗೂ ದಿನಾಂಕ ಬದಲಾವಣೆ, ಟಿಕೆಟ್ ದರ ಮಾಹಿತಿಗಳನ್ನು ಅತಿ ಸರಳವಾಗಿ ನೋಡುವಂತೆ ಐಆರ್ಸಿಟಿಸಿ ವೆಬ್‌ಸೈಟ್ ಅನ್ನು ವಿನ್ಯಾಸಗೊಳಿಸಲಾಗಿದೆ.

3. ಟಿಕೆಟ್ ಕಾಯ್ದಿರಿಸುವಿಕೆ
 

3. ಟಿಕೆಟ್ ಕಾಯ್ದಿರಿಸುವಿಕೆ

ವೇಟಿಂಗ್ ಲಿಸ್ಟ್ ಪೂರ್ವಾನುಮಾನ (Waitlist Prediction) ವೈಶಿಷ್ಟ್ಯತೆಯನ್ನು ಪೋರ್ಟಲ್ ನಲ್ಲಿ ಅಳವಡಿಸಲಾಗಿದೆ. ರಜಾ ಕಾಲದ ಪ್ರಯಾಣಿಕರ ದಟ್ಟಣೆ ಸಂದರ್ಭದಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸುವವರಿಗೆ ಈ ಅಂಶ ಅನುಕೂಲಕರವಾಗಿದೆ. ತಾವು ಬುಕ್ ಮಾಡುತ್ತಿರುವ ಟಿಕೆಟ್ ವೇಟಿಂಗ್ ಲಿಸ್ಟ್ ತೋರಿಸಿದರೆ, ಅದು ಕನ್ಫರ್ಮ್ ಆಗುವ ಸಾಧ್ಯತೆಗಳೆಷ್ಟು ಎಂಬುದನ್ನು ಪೋರ್ಟಲ್ ತೋರಿಸುತ್ತದೆ. ಹಿಂದಿನ ಹಲವಾರು ವರ್ಷಗಳ ಬುಕಿಂಗ್ ಟ್ರೆಂಡ್ ಆಧರಿಸಿ ಈ ಪ್ರಕ್ರಿಯೆ ಕೆಲಸ ಮಾಡುತ್ತದೆ.

4. ವಿಕಲ್ಪ ಸ್ಕೀಂ

4. ವಿಕಲ್ಪ ಸ್ಕೀಂ

ಪ್ರಯಾಣಿಕರು ತಾವು ಬುಕ್ ಮಾಡಿದ ಟ್ರೇನ್ ಬಿಟ್ಟು ಪರ್ಯಾಯ ಟ್ರೇನ್ ಆಯ್ಕೆ ಮಾಡಿಕೊಳ್ಳುವ ಅನುಕೂಲಕ್ಕಾಗಿ ವಿಶೇಷವಾದ 'ವಿಕಲ್ಪ ಸ್ಕೀಂ' ಜಾರಿಗೊಳಿಸಲಾಗಿದೆ. ವೇಟಿಂಗ್ ಲಿಸ್ಟ್ ನಲ್ಲಿ ಇರುವ ಪ್ರಯಾಣಿಕರು 'ವಿಕಲ್ಪ ಸ್ಕೀಂ' ಮೂಲಕ ಪರ್ಯಾಯ ಸ್ಥಳಾವಕಾಶ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದು ಸ್ಪೆಶಲ್ ಟ್ರೇನ್ ಗಳಿಗೂ ಅನ್ವಯಿಸುತ್ತದೆ.

5. ಸಪರೇಟ್ ಕಾರ್ಡ್

5. ಸಪರೇಟ್ ಕಾರ್ಡ್

ಟಿಕೆಟ್ ಬುಕ್ ಮಾಡುವಾಗ ಪ್ರತಿ ಪ್ರಯಾಣಿಕರಿಗೂ 'ಸಪರೇಟ್ ಕಾರ್ಡ್' ಅನುಕೂಲ ಮಾಡಲಾಗಿದೆ. ಪ್ರಯಾಣಿಕರು ಪ್ರತ್ಯೇಕವಾಗಿ ತಮ್ಮ ಮಾಹಿತಿ ನೀಡಲು ಇದು ಸಹಕಾರಿಯಾಗಿದೆ. ಅಲ್ಲದೆ ಪೂರ್ವಭಾವಿಯಾಗಿ ತುಂಬಲಾದ ಮಾಹಿತಿಗಳನ್ನು ಅಟೋಫಿಲ್ ಮಾಡುವ ಅವಕಾಶ ನೀಡಲಾಗಿರುವದರಿಂದ ಬುಕಿಂಗ್ ಸಮಯದಲ್ಲಿ ಉಳಿತಾಯವಾಗಲಿದೆ.

6. ಬ್ಯಾಂಕ್ ಆಯ್ಕೆ

6. ಬ್ಯಾಂಕ್ ಆಯ್ಕೆ

ಟಿಕೆಟ್ ಶುಲ್ಕ ಭರಿಸಲು ಈಗ, ಪ್ರೊಫೈಲ್ ಸೆಕ್ಷನ್ ನಲ್ಲಿ ಆರು ಬ್ಯಾಂಕ್ ಗಳನ್ನು ತಮ್ಮ ಆದ್ಯತೆಯ ಬ್ಯಾಂಕ್ ಗಳಾಗಿ ಆಯ್ಕೆ ಮಾಡಿಟ್ಟುಕೊಳ್ಳಬಹುದು.

7. ಗ್ರಾಹಕ ಸ್ನೇಹಿ ಮಾದರಿ

7. ಗ್ರಾಹಕ ಸ್ನೇಹಿ ಮಾದರಿ

ಬುಕಿಂಗ್ ಸಂದರ್ಭದಲ್ಲಿ ಪೇಮೆಂಟ್ ಮಾಡಿದ ನಂತರ, ಬುಕಿಂಗ್ ನ ಎಲ್ಲ ವಿವರಗಳನ್ನು ಬಳಕೆದಾರ ಸ್ನೇಹಿ ಮಾದರಿಯಲ್ಲಿ ತೋರಿಸಲಾಗುವುದು ಎಂದು ಭಾರತೀಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

8. ಟಿಕೆಟ್ ಬುಕಿಂಗ್ ಮಾಹಿತಿ

8. ಟಿಕೆಟ್ ಬುಕಿಂಗ್ ಮಾಹಿತಿ

‘My Transactions' ಆಪ್ಷನ್ ನಲ್ಲಿ ಹೆಚ್ಚುವರಿ ಫಿಲ್ಟರ್ ಗಳನ್ನು ಅಳವಡಿಸಲಾಗಿದೆ. ಬುಕಿಂಗ್ ದಿನಾಂಕ, ಪ್ರಯಾಣದ ದಿನಾಂಕ, ಮುಂಬರುವ ಪ್ರಯಾಣ ಹಾಗೂ ಪೂರ್ಣಗೊಂಡ ಪ್ರಯಾಣ ಹೀಗೆ ವಿವಿಧ ಅಂಶಗಳ ಆಧಾರದಲ್ಲಿ ಫಿಲ್ಟರ್ ಬಳಸುವ ಮೂಲಕ ಟಿಕೆಟ್ ಬುಕಿಂಗ್ ಮಾಹಿತಿಯನ್ನು ನೋಡಬಹುದಾಗಿದೆ.

9. ಏಕಕಾಲಕ್ಕೆ ಅನೇಕ ಪ್ರಕ್ರಿಯೆ

9. ಏಕಕಾಲಕ್ಕೆ ಅನೇಕ ಪ್ರಕ್ರಿಯೆ

ಹೊಸ ವಿನ್ಯಾಸದಲ್ಲಿ ಬುಕ್ಡ್ ಹಿಸ್ಟರಿ ಆಪ್ಷನ್ ಮೂಲಕ ಏಕಕಾಲಕ್ಕೆ ಅನೇಕ ಪ್ರಕ್ರಿಯೆಗಳನ್ನು ನೆರವೇರಿಸಬಹುದಾಗಿದೆ. ಟಿಕೆಟ್ ರದ್ದುಪಡಿಸುವಿಕೆ, ಎಸ್ಎಂಎಸ್ ಮನವಿ, ವಿಕಲ್ಪ ಸ್ಕೀಂ ಮೂಲಕ ಪರ್ಯಾಯ ಟ್ರೇನ್ ಆಯ್ಕೆ ಹಾಗೂ ಇಳಿಯುವ ಸ್ಥಳ ಬದಲಾವಣೆಗಳನ್ನು ಈ ಆಪ್ಷನ್ ಅಡಿ ಮಾಡಬಹುದಾಗಿದೆ. ಐಆರ್ಸಿಟಿಯ ಹೊಸ ವಿನ್ಯಾಸದಲ್ಲಿ ಪ್ರತಿ ಪುಟದಲ್ಲಿಯೂ 'ಹೆಲ್ಪ್' ಲಿಂಕ್ ನೀಡಲಾಗಿದೆ.

10. ನೂತನ ತಾಂತ್ರಿಕತೆ ಅಳವಡಿಕೆ

10. ನೂತನ ತಾಂತ್ರಿಕತೆ ಅಳವಡಿಕೆ

ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್ ಹೀಗೆ ಎಲ್ಲ ಪ್ಲಾಟ್ ಫಾರ್ಮ್‌ಗಳಲ್ಲೂ ತಡೆರಹಿತವಾಗಿ ಪೋರ್ಟಲ್ ಕೆಲಸ ಮಾಡುವಂತೆ ನೂತನ ತಾಂತ್ರಿಕತೆಯ ಯುಸರ್ ಇಂಟರ್ಫೇಸ್ ಅಳವಡಿಸಲಾಗಿದೆ ಎಂದು ಭಾರತೀಯ ರೈಲ್ವೆ ಹೇಳಿಕೊಂಡಿದೆ. ಸುಧಾರಿತ ಐಆರ್‌ಸಿಟಿಸಿ ವೆಬ್‌ಸೈಟ್ ಹೇಗಿದೆ ಎನ್ನುವ ಕುತೂಹಲವಿದ್ದರೆ ಒಮ್ಮೆ ನೀವೆ ಪೋರ್ಟಲ್ ಓಪನ್ ಮಾಡಿ ನೋಡಿ.

English summary

IRCTC website revamped! 10 new features every Indian Railways passenger

IRCTC next-generation e-ticketing website revamped! Indian Railway Catering and Tourism Corporation (IRCTC) has revamped its e-ticketing website with a focus on passenger convenience.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X