For Quick Alerts
ALLOW NOTIFICATIONS  
For Daily Alerts

ಭಾರತದ ಟಾಪ್ 8 ರಿಯಲ್ ಎಸ್ಟೇಟ್ ಕಂಪನಿಗಳು

ಭಾರತದಲ್ಲಿನ ಪ್ರಮುಖ 8 ರಿಯಲ್ ಎಸ್ಟೇಟ್ ಸಂಸ್ಥೆಗಳ ವಿವರವನ್ನು ಇಲ್ಲಿ ನೀಡಲಾಗಿದೆ. ಇವು ದೇಶದಾದ್ಯಂತ ತಮ್ಮ ಬೃಹತ್ ಜಾಲವನ್ನು ಹೊಂದಿದ್ದು, ಗ್ರಾಹಕರ ನೆಚ್ಚಿನ ಕಂಪನಿಗಳೆನಿಸಿವೆ.

|

ಭಾರತದಲ್ಲಿನ ಪ್ರಮುಖ 8 ರಿಯಲ್ ಎಸ್ಟೇಟ್ ಸಂಸ್ಥೆಗಳ ವಿವರವನ್ನು ಇಲ್ಲಿ ನೀಡಲಾಗಿದೆ. ಇವು ದೇಶದಾದ್ಯಂತ ತಮ್ಮ ಬೃಹತ್ ಜಾಲವನ್ನು ಹೊಂದಿದ್ದು, ಗ್ರಾಹಕರ ನೆಚ್ಚಿನ ಕಂಪನಿಗಳೆನಿಸಿವೆ.

ಬ್ರಿಗೇಡ್ ಎಂಟರ್ಪ್ರೈಸಸ್ ಲಿಮಿಟೆಡ್

ಬ್ರಿಗೇಡ್ ಎಂಟರ್ಪ್ರೈಸಸ್ ಲಿಮಿಟೆಡ್

ಬ್ರಿಗೇಡ್ ಎಂಟರ್ಪ್ರೈಸಸ್ ಲಿಮಿಟೆಡ್ 1986ರಲ್ಲಿ ಎಂ. ಆರ್ ಜೈಶಂಕರ್ ಅವರಿಂದ ಸ್ಥಾಪಿಸಲ್ಪಟ್ಟಿತು. ಇದರ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ. ಇದು ತನ್ನಲ್ಲಿಯ ಉತ್ಪನ್ನ ವ್ಯಾಪ್ತಿಯಲ್ಲಿ ವಾಣಿಜ್ಯ ಕಚೇರಿಗಳು, ವಿರಾಮ ಮತ್ತು ಆತಿಥ್ಯ ಗೃಹಗಳು, ಶಾಪಿಂಗ್ ಮಾಲ್ ಗಳು, ಅಪಾರ್ಟ್ ಮೆಂಟ್ ಗಳು, ಚಿಲ್ಲರೆ ವ್ಯಾಪಾರಗಳು, ವಿಲ್ಲಾಗಳು ಇತ್ಯಾದಿಗಳನ್ನು ಹೊಂದಿದೆ.
ಇದು ಬ್ರಿಗೇಡ್ ಸಂಘ ಸಂಸ್ಥೆಯ ಪ್ರಮುಖ ಕಂಪನಿಯಾಗಿದೆ. ಬ್ರಿಗೇಡ್ ಎಂಟರ್ಪ್ರೈಸಸ್ ಲಿಮಿಟೆಡ್ ನ ಪ್ರತಿನಿಧಿ ಕಚೇರಿಯು ದುಬೈನಲ್ಲಿದೆ ಮತ್ತು ಇದರ ಶಾಖೆಗಳು ದಕ್ಷಿಣ ಭಾರತದಲ್ಲಿ ಹಲವಾರು ಕಡೆ ಇದೆ.

ಡಿಎಲ್ಎಫ್ ಲಿಮಿಟೆಡ್

ಡಿಎಲ್ಎಫ್ ಲಿಮಿಟೆಡ್

ಇದು ಭಾರತದಲ್ಲಿಯ ಅಗ್ರಮಾನ್ಯ 10 ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾಗಿದೆ. ಡಿಎಲ್ಎಫ್ 1946 ರಲ್ಲಿ ಸಿಎಚ್ ರಾಘವೇಂದ್ರ ಅವರಿಂದ ಸ್ಥಾಪಿಸಲ್ಪಟ್ಟಿತು. ಇದು ಕಚೇರಿ, ಅಪಾರ್ಟ್ ಮೆಂಟ್, ಹೋಟೇಲು, ಶಾಪಿಂಗ್ ಮಾಲ್ ಮತ್ತು ಗಾಲ್ಪ್ ಕೋರ್ಸ್ ಗಳು, ಮೂಲಸೌಕರ್ಯಗಳ ರಚನೆ ಇತ್ಯಾದಿಗಳ ನಿರ್ಮಾಣವನ್ನು ತನ್ನ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಡಿಎಲ್ಎಫ್ ನ ಮೊದಲ ವಸತಿ ಯೋಜನೆಯು 1949 ಪೂರ್ಣಗೊಂಡಿದ್ದು, ಇದು ಈಸ್ಟ್ (ಪೂರ್ವ) ದೆಹಲಿಯ ಕೃಷ್ಣ ನಗರದಲ್ಲಿದೆ.

ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್

ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್

ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ ಆದಿ ಗೋದ್ರೇಜ್ ಅವರಿಂದ 1990 ರಲ್ಲಿ ಸ್ಥಾಪಿಸಲ್ಪಟ್ಟಿತು. ಇದರ ಪ್ರಧಾನ ಕಚೇರಿಯು ಭಾರತದ ಮುಂಬೈನಲ್ಲಿದೆ. ಇದರ ಮುಖ್ಯ ವ್ಯವಹಾರ ವಸತಿ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಪಟ್ಟಣ ನಿವೇಶನ ನಿರ್ಮಾಣಗಳನ್ನು ಒಳಗೊಂಡಿದೆ.

ಇದು ಗೋದ್ರೇಜ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಂಗಸಂಸ್ಥೆಯಾಗಿದೆ. ಈ ಕಂಪನಿಯು ಭಾರತದ ಅನೇಕ ನಗರಗಳಲ್ಲಿ ತನ್ನ ಕಾರ್ಯನಿರ್ವಹಿಸುತ್ತದೆ. ಅವುಗಳಲ್ಲಿ ಹೈದರಾಬಾದ್ ಮುಂಬೈ, ಬೆಂಗಳೂರು, ಕೊಲ್ಕತ್ತಾ ನಾಗ್ಪುರ್, ಹೈದರಾಬಾದ್, ಪೂನಾ, ಚಂಡೀಗಢ ಮುಂತಾದ ನಗರಗಳಲ್ಲಿ ಶಾಖೆಯನ್ನು ಹೊಂದಿದೆ

ಎಚ್ಡಿಐಎಲ್ ಇನ್ಪ್ರಾ ಪ್ರೋಜೆಕ್ಟ್ಸ ಪ್ರೈವೆಟ್ ಲಿಮಿಟೆಡ್

ಎಚ್ಡಿಐಎಲ್ ಇನ್ಪ್ರಾ ಪ್ರೋಜೆಕ್ಟ್ಸ ಪ್ರೈವೆಟ್ ಲಿಮಿಟೆಡ್

ಎಚ್ ಡಿ ಐ ಎಲ್ ಇನ್ಪ್ರಾ ಪ್ರೋಜೆಕ್ಟ್ಸ ಪ್ರೈವೆಟ್ ಲಿಮಿಟೆಡ್ 1996 ರಲ್ಲಿ ಸ್ಥಾಪಿಸಲ್ಪಟ್ಟಿತು. ಇದರ ಪ್ರಧಾನ ಕಚೇರಿಯು ಮುಂಬೈಯಲ್ಲಿದೆ. ಈ ಕಂಪನಿಯು ಮುಖ್ಯವಾಗಿ ವಾಣಿಜ್ಯ, ರಿಟೈಲ್ ಯೋಜನೆಗಳು, ನಿರ್ಮಾಣ ಮತ್ತು ವಸತಿ ಅಭಿವೃದ್ದಿ ಯೋಜನೆಗಳ ಕಡೇಗೆ ಕೇಂದ್ರೀಕರಿಸುತ್ತದೆ. ಇದರಲ್ಲಿ ಕೊಳಚೆ ಪ್ರದೇಶದ ಪುನರ್ವಸತಿ ಮತ್ತು ಅಭಿವೃದ್ಧಿ ಯೋಜನೆಗಳನ್ನೂ ಒಳಗೊಂಡಿದೆ.

ಒಬೆರಾಯ್ ರಿಯಾಲ್ಟಿ ಲಿಮಿಟೆಡ್

ಒಬೆರಾಯ್ ರಿಯಾಲ್ಟಿ ಲಿಮಿಟೆಡ್

ಒಬೆರಾಯ್ ರಿಯಾಲ್ಟಿ ಲಿಮಿಟೆಡ್ 1980 ರಲ್ಲಿ ಸ್ಥಾಪಿತವಾಯಿತು. ಇದರ ಪ್ರಧಾನ ಕಚೇರಿಯು ಮುಂಬೈನಲ್ಲಿದೆ. ಇದು ಕಚೇರಿಗಳು, ಅಪಾರ್ಟ್ ಮೆಂಟ್, ಹೋಟೇಲುಗಳು, ಗಾಲ್ಫ್ ಕೋರ್ಸ್ ಗಳು ಮತ್ತು ಶಾಪಿಂಗ್ ಮಾಲ್ ಗಳು ಮುಂತಾದ ಯೋಜನೆಗಳನ್ನು ತನ್ನಲ್ಲಿ ಹೊಂದಿದೆ. ಅಲ್ಲದೆ ಇದು ಮುಂಬೈನಾದ್ಯಂತ ಅನೇಕ ದೊಡ್ಡ ದೊಡ್ಡ ಯೋಜನೆಗಳೊಂದಿಗೆ ವ್ಯವಹಾರ ನಡೆಸುತ್ತದೆ. ಇದರ ಕೆಲವು ಯೋಜನೆಗಳಲ್ಲಿ ಪ್ರಮುಖವಾದವುಗಳೆಂದರೆ - ಒಬೆರಾಯ್ ಗಾರ್ಡನ್ಸ್, ಕಂಡಿವಲಿ ಈಸ್ಟ್ ಬೀಚ್ ವುಡ್ ಹೌಸ್ , ಜುಹು,
ಒಬೆರಾಯ್ ಕ್ರೆಸ್ಟ್, ಖಾರ್ ವೆಸ್ಟ್ (ಪಶ್ಚಿಮ)
ಒಬೆರಾಯ್ ಪಾರ್ಕ್ ವ್ಯೂ, ಕಾಂಡಿವಲಿ ಈಸ್ಟ್
ಒಬೆರಾಯ್ ಸ್ಪ್ಲೆಂಡರ್, ಅಂಧೇರಿಯಲ್ಲಿರುವ ಒಂದು ವಸತಿ ಸಂಕೀರ್ಣ ಇತ್ಯಾದಿ.

ಒಮಾಕ್ಸೆ ಲಿಮಿಟೆಡ್

ಒಮಾಕ್ಸೆ ಲಿಮಿಟೆಡ್

ಇದು 1989 ರಲ್ಲಿ ರೋಥಾಸ್ ಗೋಯೆಲ್ ಅವರಿಂದ ಸ್ಥಾಪಿತವಾಯಿತು. ಇದರ ಪ್ರಧಾನ ಕಚೇರಿಯು ಭಾರತದ ದೆಹಲಿಯಲ್ಲಿದೆ. ಇದರ ನಿರ್ಮಾಣ ವ್ಯವಹಾರಗಳಲ್ಲಿ ಕಚೇರಿಗಳು, ಅಪಾರ್ಟ್ ಮೆಂಟ್ ಗಳು, ಹೋಟೇಲುಗಳು, ವಿಲ್ಲಾಗಳು, ಶಾಪಿಂಗ್ ಮಾಲ್ ಗಳು, ಪೆಂಟ್ ಹೌಸ್(ಗುಡಿಸಲು ಮನೆಗಳು) ಇತ್ಯಾದಿಗಳನ್ನು ಒಳಗೊಂಡಿದೆ. ಇದು ಭಾರತದ ಪ್ರಮುಖ ಎಲ್ಲಾ ರಾಜ್ಯಗಳಲ್ಲೂ ತಮ್ಮ ವ್ಯವಹಾರಗಳನ್ನು ನಡೆಸುತ್ತದೆ. ಇದರ ಇನ್ನಿತರ ಯೋಜನೆಗಳು ಈ ಕೆಳಗಿನವುಗಳನ್ನು ಒಳಗೊಂಡಿದೆ.

ಇಂಡಿಯಾ ಬುಲ್ಸ್ ರಿಯಲ್ ಎಸ್ಟೇಟ್ ಲಿಮಿಟೆಡ್

ಇಂಡಿಯಾ ಬುಲ್ಸ್ ರಿಯಲ್ ಎಸ್ಟೇಟ್ ಲಿಮಿಟೆಡ್

ಭಾರತದ ಅಗ್ರಮಾನ್ಯ 10 ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಇದೂ ಒಂದಾಗಿದೆ. ಇದು 2006 ರಲ್ಲಿ ಸ್ಥಾಪಿತವಾಯಿತು. ಇದನ್ನು ಪ್ರಮುಖವಾಗಿ ಭಾರತೀಯ ಮೆಟ್ರೋ, ವಾಣಿಜ್ಯ, ವಸತಿ ಮತ್ತು ಎಸ್ ಇ ಝೆಡ್ ಯೋಜನೆಗಳ ನಿರ್ಮಾಣ ಮತ್ತು ಅಭಿವೃದ್ಧಿಯ ಉದ್ದೇಶದಿಂದ ಇದನ್ನು ಪ್ರಾರಂಭಿಸಲಾಯಿತು.

ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರೋಜೆಕ್ಟ್ಸ್ ಲಿಮಿಟೆಡ್

ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರೋಜೆಕ್ಟ್ಸ್ ಲಿಮಿಟೆಡ್

ಪ್ರೆಸ್ಟೀಜ್ ಎಸ್ಟೇಟ್ ಪ್ರಾಜೆಕ್ಟ್ಸ್ ಲಿಮಿಟೆಡ್ 1986 ರಲ್ಲಿ ರಜಾಕ್ ಸತ್ತರ್ ಅವರಿಂದ ಸ್ಥಾಪಿಸಲ್ಪಟ್ಟಿತು. ಇದರ ಪ್ರಧಾನ ಕಚೇರಿಯು ಭಾರತದ ಬೆಂಗಳೂರಿನಲ್ಲಿದೆ. ಇದರ ನಿರ್ಮಾಣದಲ್ಲಿ ಈ ಕೆಳಗಿನವುಗಳನ್ನು ಒಳಗೊಂಡಿವೆ.

ಅಪಾರ್ಟ್ ಮೆಂಟು, ವಿಲ್ಲಾಗಳು, ಹೋಟೇಲುಗಳು, 
ರಿಟೈಲ್, ವಿಶ್ರಾಂತಿ ಮತ್ತು ಆತಿಥ್ಯ
ವಾಣಿಜ್ಯ ಕಚೇರಿ, ಶಾಪಿಂಗ್ ಮಾಲ್ ಗಳು
ಗಾಲ್ಫ್ ಕೋರ್ಸ್ ಗಳು ಇತ್ಯಾದಿಗಳು

English summary

TOP 8 REAL ESTATE COMPANIES IN INDIA

TOP 10 REAL ESTATE COMPANIES IN INDIA
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X