For Quick Alerts
ALLOW NOTIFICATIONS  
For Daily Alerts

ಕುಮಾರಸ್ವಾಮಿ ಮೊದಲ ಬಜೆಟ್: ಸಾಲಮನ್ನಾ ಸೇರಿದಂತೆ ಬಜೆಟ್ ನಿರೀಕ್ಷೆಗಳೇನು?

ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ಅನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಇಂದು ಮಂಡನೆ ಮಾಡಲಿದ್ದಾರೆ.ಸಾಲಮನ್ನಾ ಮಾಡುವುದಾಗಿ ಹೇಳಿರುವ ಸರ್ಕಾರ, ಇದು ಸಂಪೂರ್ಣ ಮನ್ನಾವೋ ಅಥವಾ ಅರ್ಧ ಮನ್ನಾವೋ ಎಂಬ ಕುತೂಹಲ.

By Siddu
|

ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ಅನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಇಂದು ಮಂಡನೆ ಮಾಡಲಿದ್ದಾರೆ.
ಸಾಲಮನ್ನಾ ಮಾಡುವುದಾಗಿ ಹೇಳಿರುವ ಸರ್ಕಾರ, ಇದು ಸಂಪೂರ್ಣ ಮನ್ನಾವೋ ಅಥವಾ ಅರ್ಧ ಮನ್ನಾವೋ ಎಂಬ ಕುತೂಹಲದ ಚರ್ಚೆಗೆ ಕಾರಣವಾಗಿದೆ. ರೈತರ ಸಾಲಮನ್ನಾ ಕಾರಣದಿಂದ ದೋಸ್ತಿ ಸರ್ಕಾರದ ಮೊದಲ ಹೆಚ್ಚು ಆಕರ್ಷಕವಾಗಿದೆ.

ಬಜೆಟ್ ನಿರೀಕ್ಷೆಗಳು

ಬಜೆಟ್ ನಿರೀಕ್ಷೆಗಳು

- ಈಗಾಗಲೇ ಗೊತ್ತಿರುವಂತೆ ಗರ್ಭಿಣಿ, ಬಾಣಂತಿಯರಿಗೆ ರೂ. 6 ಸಾವಿರದಂತೆ 6 ತಿಂಗಳವರೆಗೆ ಮಾಶಾಸನ ಸಾಧ್ಯತೆ
- ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಮಹಿಳಾ ಪೊಲೀಸರಿಗೆ ವಿಶೇಷ ಅನುದಾನ ಘೋಷಣೆ ನಿರೀಕ್ಷೆ
- ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಏರಿಕೆ ಸಾಧ್ಯತೆ
- ನೋಂದಣಿ, ಮುದ್ರಾಂಕ ಶುಲ್ಕ, ಅಬಕಾರಿ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಸಾಧ್ಯತೆ

ಕೃಷಿ ವಲಯ ಸಾಧ್ಯಾಸಾಧ್ಯತೆ

ಕೃಷಿ ವಲಯ ಸಾಧ್ಯಾಸಾಧ್ಯತೆ

- ಇಸ್ರೇಲ್ ಮಾದರಿ ಕೃಷಿ, ಹೊಸ ಮಾದರಿ ಕೃಷಿ ಪದ್ದತಿ ಘೋಷಣೆ
- ಕೃಷಿ ಹೊಂಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನ
- ಸ್ವಯಂ ಉದ್ಯೋಗ ಮಾಡುವವರಿಗೆ ಕಾಯಕ ಯೋಜನೆಯಡಿ ರೂ. ೧೦ ಲಕ್ಷ ಸಾಲ
- ಉದ್ಯೋಗ ಸೃಷ್ಟಿಗೆ ಆದ್ಯತೆ

ಇತರೆ ಸಂಭವನೀಯ ಘೋಷಣೆಗಳು

ಇತರೆ ಸಂಭವನೀಯ ಘೋಷಣೆಗಳು

- ಹೆಣ್ಣುಮಕ್ಕಳಿಗೆ ಪದವಿ ಮುಗಿಯುವವರೆಗೆ ಉಚಿತ ಶಿಕ್ಷಣ ಯೋಜನೆ
- ಫಿಲಂ ಸಿಟಿ ನಿರ್ಮಾಣ ಘೋಷಣೆ ಸಾಧ್ಯತೆ
- ಮೆಟ್ರೋಗೆ ಹೆಚ್ಚಿನ ಅನುದಾನ ಸಾಧ್ಯತೆ
- ವೃದ್ದಾಪ್ಯ ವೇತನ 500 ರಿಂದ 1000ಕ್ಕೆ ಹೆಚ್ಚಳ ಸಾಧ್ಯತೆ
- ಸಿದ್ದರಾಮಯ್ಯ ಸರ್ಕಾರದ `ಆರೋಗ್ಯ ಕರ್ನಾಟಕ' ಯೋಜನೆ ಮುಂದುವರಿಕೆ ಸಾಧ್ಯತೆ

ಸಾಲಮನ್ನಾ ಪ್ರಭಾವ

ಸಾಲಮನ್ನಾ ಪ್ರಭಾವ

ಸಾಲಮನ್ನಾ ಕುರಿತಂತೆ ಈಗಾಗಲೇ ಭಾರೀ ಚರ್ಚೆಗಳು ಶುರುವಾಗಿದ್ದು, ಮುಖ್ಯಂತ್ರಿ ಕುಮಾರಸ್ವಾಮಿಯವರು ರಾಜ್ಯದ ಹಣಕಾಸಿನ ಸ್ಥಿತಿಗತಿಗಳನ್ನು ಅದ್ಯಯನ ಮಾಡುತ್ತಿರುವುದರಿಂದ ಸಾಲಮನ್ನಾ ಮಾಡಲು ವಿಳಂಬವಾಗುತ್ತಿದೆ ಎಂದು ಹಿಂದೆ ಹೇಳಿದ್ದರು.
ಅದೇ ರೀತಿ ಆರ್ಥಿಕ ತಜ್ಞರುಹಾಗು ಸರ್ಕಾರಿ ಅಧಿಕಾರಿಗಳು ಸಾಲಮನ್ನಾದಿಂದ ರಾಜ್ಯದ ಹಣಕಾಸು ಮೇಲೆ ಆಗಬಹುದಾದ ಪರಿಣಾಮಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

English summary

HD Kumaraswamy Budget: What are Budget expectations, including Loan waiver?

Karnataka Chief Minister HD Kumaraswamy will present the Congress-JDS coalition government's maiden budget today, amid high expectations of farm loan waiver.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X