For Quick Alerts
ALLOW NOTIFICATIONS  
For Daily Alerts

ಮ್ಯೂಚುವಲ್ ಫಂಡ್ ಗಳಲ್ಲಿ ರೂ. 33,000 ಕೋಟಿ ಹೂಡಿಕೆ

ಪ್ರಸ್ತುತ ಹಣಕಾಸು ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿ ಸುಮಾರು ರೂ. 33,000 ಕೋಟಿ ಹೂಡಿಕೆಯಾಗಿದೆ.

By Siddu
|

ಪ್ರಸ್ತುತ ಹಣಕಾಸು ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿ ಸುಮಾರು ರೂ. 33,000 ಕೋಟಿ ಹೂಡಿಕೆಯಾಗಿದೆ.

ಮ್ಯೂಚುವಲ್ ಫಂಡ್ ಗಳಲ್ಲಿ ರೂ. 33,000 ಕೋಟಿ ಹೂಡಿಕೆ

ವಿಶೇಷವಾಗಿ ಸಣ್ಣ ಪಟ್ಟಣಗಳಲ್ಲಿ ಚಿಲ್ಲರೆ ಹೂಡಿಕೆದಾರರು ಹೆಚ್ಚು ಪಾಲ್ಗೊಳ್ಳುವಿಕೆಯಿಂದಾಗಿ ಹೂಡಿಕೆ ಶೇ. 15ರಷ್ಟು ಏರಿಕೆಯಾಗಿದೆ.

ಕಳೆದ ಸಾಲಿನ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂ. 28,332 ಕೋಟಿ ಹೂಡಿಕೆಯಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಹೂಇಕೆ ಪ್ರಮಾಣ ಶೇ. 15ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ ತಿಳಿಸಿದೆ.

ಕಳೆದ ಕೆಲ ವರ್ಷಗಳಲ್ಲಿ ಸಣ್ಣ ನಗರಗಳಲ್ಲಿ ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚಾಗುತ್ತಿದ್ದು, ಇದರಿಂದ ಹೂಡಿಕೆ ಪ್ರಮಾಣದಲ್ಲಿಯೂ ಏರಿಕೆ ಕಂಡುಬರುತ್ತಿದೆ ಎಂದಿದೆ.

ಪ್ರಸ್ತುತ ದಿನಗಳಲ್ಲಿನ ಹೂಡಿಕೆಯಲ್ಲಿನ ಏರಿಳಿತದ ಹೊರತಾಗಿಯೂ ಉತ್ತಮ ಬಂಡವಾಳ ಹರಿದು ಬರುವ ವಿಶ್ವಾಸವಿದ್ದು, ಸಣ್ಣ ನಗರ ಹಾಗು ಚಿಲ್ಲರೆ ಹೂಡಿಕೆದಾರರಿಂದ ಹೆಚ್ಚು ಹೂಡಿಕೆ ಹರಿದು ಬರಲಿದೆ ಎಂದು ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ ತಿಳಿಸಿದೆ.

English summary

Equity mutual fund inflows rise 15% in Q1 to Rs 33,000 crore

Equity mutual funds saw inflow of nearly Rs 33,000 crore in the first quarter of the current fiscal, a surge of 15 per cent year-on-year.
Story first published: Tuesday, July 10, 2018, 14:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X