For Quick Alerts
ALLOW NOTIFICATIONS  
For Daily Alerts

ನಿಮ್ಮ ಟೇಕ್ ಹೋಮ್ ಸ್ಯಾಲರಿ ಹೆಚ್ಚಾಗಲಿದೆ, ಯಾಕೆ ಗೊತ್ತಾ?

ಕಾರ್ಮಿಕ ಸಚಿವಾಲಯ ಸಮಿತಿಯು ಎಲ್ಲಾ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆಗೆ ಸರ್ಕಾರದಿಂದ ಕಡಿಮೆ ಕೊಡುಗೆ ನೀಡಬೇಕೆಂದು ಶಿಫಾರಸ್ಸು ಮಾಡಿರುವುದರಿಂದ ನಿಮ್ಮ ಕೈಗೆ ಸಿಗುವ ಸಂಬಳ ಶೀಘ್ರದಲ್ಲಿಯೇ ಹೆಚ್ಚಾಗಬಹುದು.

By Siddu
|

ಕಾರ್ಮಿಕ ಸಚಿವಾಲಯ ಸಮಿತಿಯು ಎಲ್ಲಾ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆಗೆ ಸರ್ಕಾರದಿಂದ ಕಡಿಮೆ ಕೊಡುಗೆ ನೀಡಬೇಕೆಂದು ಶಿಫಾರಸ್ಸು ಮಾಡಿರುವುದರಿಂದ ನಿಮ್ಮ ಕೈಗೆ ಸಿಗುವ ಸಂಬಳ ಶೀಘ್ರದಲ್ಲಿಯೇ ಹೆಚ್ಚಾಗಬಹುದು.
ವರದಿಗಳ ಪ್ರಕಾರ, ಎಲ್ಲಾ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆಗಾಗಿ ಸರಕಾರ ನೀಡುವ ಪಿಎಫ್ (ಪ್ರಾವಿಡೆಂಟ್ ಫಂಡ್) ಕೊಡುಗೆಯನ್ನು ಶೇ. 2ರಷ್ಟು ಕಡಿತಗೊಳಿಸುವ ಸಾಧ್ಯತೆಯಿದೆ.

ಪ್ರಸ್ತುತ ಪಿಎಫ್ ಕಡಿತ ಎಷ್ಟು?

ಪ್ರಸ್ತುತ ಪಿಎಫ್ ಕಡಿತ ಎಷ್ಟು?

ಪ್ರಸ್ತುತ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ನಿರ್ವಹಿಸಲ್ಪಡುವ ನಿಮ್ಮ ಪಿಎಫ್ ಖಾತೆಗೆ ಶೇ. 24 ರಷ್ಟು ವೇತನವನ್ನು ಕಡಿತಗೊಳಿಸಲಾಗುತ್ತದೆ. ಈ ಶೇ. 24ರಲ್ಲಿ ಶೇ. 12 ರಷ್ಟು ಉದ್ಯೋಗದಾತರು ಕೊಡುಗೆ ನೀಡಿದ್ದರೆ, ಶೇ. 12 ರಷ್ಟು ನೌಕರರ ವೇತನದಿಂದ ಕಡಿತಗೊಳಿಸಲಾಗುತ್ತದೆ. ಟೇಕ್ ಹೋಂ ಸ್ಯಾಲರಿ (Take Home Salary) ಹೆಚ್ಚಿಸಿಕೊಳ್ಳುವುದು ಹೇಗೆ?

ಆಗಸ್ಟ್ ಅಂತ್ಯದೊಳಗೆ ಅಂತಿಮ

ಆಗಸ್ಟ್ ಅಂತ್ಯದೊಳಗೆ ಅಂತಿಮ

ವರದಿಗಳ ಪ್ರಕಾರ, ಆಗಸ್ಟ್ ಅಂತ್ಯದ ವೇಳೆಗೆ ಸಮಿತಿಯು ಈ ಶಿಫಾರಸನ್ನು ಅಂತಿಮಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಸಕ್ತ ಇರುವ 10 ಕೋಟಿ ಜನರ ವ್ಯಾಪ್ತಿಯಿಂದ ಸಾಮಾಜಿಕ ಭದ್ರತಾ ಯೋಜನೆಯ ವ್ಯಾಪ್ತಿಯನ್ನು 50 ಕೋಟಿಗೆ ಹೆಚ್ಚಿಸುವ ಉದ್ದೇಶವನ್ನು ಪ್ರಸ್ತಾಪಿಸಲಾಗಿದೆ. ಸಮಿತಿಯು ತನ್ನ ಶಿಫಾರಸುಗಳನ್ನು ಅಂತಿಮಗೊಳಿಸಿದ ನಂತರ, ಹಲವಾರು ಪಾಲುದಾರರನ್ನು (stakeholders) ಸಾಮಾಜಿಕ ಭದ್ರತಾ ಕೋಡ್ ಗೆ ಸೇರಿಸುವ ಮೊದಲು ಕಾರ್ಮಿಕ ಸಚಿವಾಲಯ ಅವರೊಂದಿಗೆ ಸಮಾಲೋಚನೆ ನಡೆಸಲಿದೆ. ಸ್ಯಾಲರಿ ಸ್ಲಿಪ್: ತಪ್ಪದೆ ತಿಳಿದುಕೊಳ್ಳಬೇಕಾದ 8 ಅಂಶಗಳು

ನಿಮ್ಮ ಖಾತೆಗೆ ಹೆಚ್ಚುವರಿ ಶೇ. 4ರಷ್ಟು ಜಮಾ

ನಿಮ್ಮ ಖಾತೆಗೆ ಹೆಚ್ಚುವರಿ ಶೇ. 4ರಷ್ಟು ಜಮಾ

ಸಾಮಾನ್ಯವಾಗಿ, ಕಂಪನಿಯ ಒಟ್ಟು ವೆಚ್ಚ ಸಿಟಿಸಿ (cost to company)ಉದ್ಯೋಗದಾತರ ಕೊಡುಗೆಯನ್ನು ಒಳಗೊಂಡಿರುತ್ತದೆ. ಒಂದು ವೇಳೆ ಪಿಎಫ್ ಕೊಡುಗೆ ಕಡಿತಗೊಂಡರೆ ನಿಮ್ಮ ಖಾತೆಯಲ್ಲಿ ಹೆಚ್ಚುವರಿ ಶೇ. 4ರಷ್ಟು ಸಂಬಳ ಜಮಾ ಆಗುತ್ತದೆ.

ಇಪಿಎಫ್ಒ ನೌಕರರ ಹಣ ಎಲ್ಲಿ ಹೂಡಿಕೆ ಮಾಡುತ್ತದೆ

ಇಪಿಎಫ್ಒ ನೌಕರರ ಹಣ ಎಲ್ಲಿ ಹೂಡಿಕೆ ಮಾಡುತ್ತದೆ

ಇಪಿಎಫ್ಒ ನೌಕರರ ಹಣವನ್ನು ಸ್ಥಿರ ಆದಾಯದ ಭದ್ರತೆಗಳಲ್ಲಿಯೇ ಹೆಚ್ಚಾಗಿ ಹೂಡಿಕೆ ಮಾಡುತ್ತದೆ. ಇತ್ತೀಚೆಗೆ ನಿಫ್ಟಿ 50, ಸೆನ್ಸೆಕ್ಸ್, ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಟರ್ಪ್ರೈಸಸ್ (ಸಿಪಿಎಸ್ಇ) ಮತ್ತು ಭಾರತ್ 22 ಸೂಚ್ಯಂಕಗಳ ಆಧಾರದ ಮೇಲೆ ಇಟಿಎಪ್ ಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದೆ. ಇದು ಪ್ರತ್ಯೇಕ ಕಂಪೆನಿಗಳ ಷೇರು ಮತ್ತು ಇಕ್ವಿಟಿಗಳಲ್ಲಿ ಹೂಡಿಕೆ ಮಾಡುವುದಿಲ್ಲ.

ಇಟಿಎಫ್ ಹೂಡಿಕೆ ನಿರ್ಧಾರ

ಇಟಿಎಫ್ ಹೂಡಿಕೆ ನಿರ್ಧಾರ

ಮಾರ್ಚ್ 31, 2015 ರಂದು ನಡೆದ 207 ನೇ ಸಭೆಯಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (ಸಿಬಿಟಿ) ಈಕ್ವಿಟಿ ಮತ್ತು ಸಂಬಂಧಿತ ಹೂಡಿಕೆಗಳ ಇಟಿಎಫ್ ಗಳಲ್ಲಿ ಹೂಡಿಕೆ ಮಾಡಲು ನಿರ್ಧಾರ ಕೈಗೊಂಡಿತು. ಇಪಿಎಫ್ಓ ಸಂಸ್ಥೆ ಜೂನ್, 2018ರಂತೆ ಇಟಿಎಫ್ ಗಳಲ್ಲಿ ಹೂಡಿಕೆ ಮಾಡಿರುವ ಒಟ್ಟು ಮೊತ್ತ ರೂ. 48,946 ಕೋಟಿ ದಾಟಿದೆ.

Read more about: epf money salary epfo finance news
English summary

Your Take Home Salary Will Increase, Do You Know Why ?

Your take home salary might soon increase, as a labour ministry committee is likely to recommend a lower contribution by the government.
Story first published: Wednesday, August 1, 2018, 13:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X