For Quick Alerts
ALLOW NOTIFICATIONS  
For Daily Alerts

ನರೇಂದ್ರ ಮೋದಿಯವರಿಂದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇವೆಗೆ ಚಾಲನೆ, ಪ್ರಯೋಜನಗಳೇನು?

ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 21ರಂದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇವೆಗೆ ಚಾಲನೆ ನೀಡಲಿದ್ದಾರೆ.

By Siddu
|

ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 21ರಂದು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಗೆ ಚಾಲನೆ ನೀಡಲಿದ್ದಾರೆ.

 

ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಶಾಖೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಹೊಂದುವುದರೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಹಣಕಾಸು ಸೇವೆಗಳ ಮೇಲೆ ಗಮನಹರಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗಾಗಲೇ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನ ಎರಡು ಶಾಖೆಗಳು ಕಾರ್ಯನಿರತವಾಗಿದ್ದು, ಇನ್ನುಳಿದಂತೆ 648 ಶಾಖೆಗಳನ್ನು ದೇಶದ ಪ್ರತಿ ಜಿಲ್ಲೆಯಲ್ಲೂ ಲಾಂಚ್ ಮಾಡಲಾಗುವುದು. 'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ, 90 ಸಾವಿರ ಸಬ್ಸಿಡಿ ಪಡೆಯಿರಿ

1.55 ಲಕ್ಷ ಅಂಚೆ ಕಚೇರಿ

1.55 ಲಕ್ಷ ಅಂಚೆ ಕಚೇರಿ

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಯನ್ನು ಒದಗಿಸಲು ಸುಮಾರು 1.55 ಲಕ್ಷ ಅಂಚೆ ಕಚೇರಿ ಶಾಖೆಗಳನ್ನು ತಲುಪಲಿದೆ.

ಪೇಮೆಂಟ್ಸ್ ಬ್ಯಾಂಕ್ ಸಂಪರ್ಕ

ಪೇಮೆಂಟ್ಸ್ ಬ್ಯಾಂಕ್ ಸಂಪರ್ಕ

ಈ ವರ್ಷ ಅಂತ್ಯದ ವೇಳೆಗೆ ಎಲ್ಲಾ 1.55 ಲಕ್ಷ ಅಂಚೆ ಕಛೇರಿಗಳನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಗಳೊಂದಿಗೆ ಸಂಪರ್ಕಿಸಲು ಪ್ರಯತ್ನಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸೌಲಭ್ಯಗಳು
 

ಸೌಲಭ್ಯಗಳು

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೊಂದಿಗೆ, ಯಾವುದೇ ಬ್ಯಾಂಕ್ ಖಾತೆಯ ಗ್ರಾಮೀಣ ಪ್ರದೇಶದ ಜನರಿಗೆ ಮೊಬೈಲ್ ಬ್ಯಾಂಕ್ ಮತ್ತು ಹಣದ ವರ್ಗಾವಣೆ ಸೇರಿದಂತೆ ಹಣಕಾಸಿನ ಸೇವೆಗಳನ್ನು ಅಪ್ಲಿಕೇಶನ್ ಸಹಾಯದಿಂದ ಅಥವಾ ಅಂಚೆ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಪಡೆಯಬಹುದು.
ಅಂಚೆ ಪಾವತಿ ಬ್ಯಾಂಕಿಯು ಆರ್ಟಿಜಿಎಸ್, ಎನ್ಇಎಫ್ಟಿ, ಐಎಂಪಿಎಸ್ (RTGS, NEFT, IMPS) ವ್ಯವಹಾರಕ್ಕೆ ಅವಕಾಶ ನೀಡಿದೆ. ಇದು ಯಾವುದೇ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಲು ಮತ್ತು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ.

ರೂ. 1 ಲಕ್ಷವರೆಗೆ ಠೇವಣಿ

ರೂ. 1 ಲಕ್ಷವರೆಗೆ ಠೇವಣಿ

ಏರ್ಟೆಲ್ ಮತ್ತು ಪೇಟಿಎಂ ನಂತರ ಪೇಮೆಂಟ್ ಬ್ಯಾಂಕ್ ಸೇವೆ ಒದಗಿಸುವ ಮೂರನೇ ಸಂಸ್ಥೆ ಭಾರತೀಯ ಅಂಚೆ ಕಚೇರಿ. ಪೇಮೆಂಟ್ ಬ್ಯಾಂಕ್ ಮೂಲಕ ಗ್ರಾಹಕರು ಗರಿಷ್ಠ ರೂ. 1 ಲಕ್ಷವರೆಗೆ ಠೇವಣಿ ಇಡಬಹುದು.

English summary

Narendra Modi to launch India Post Payments Bank, What are the Benefits?

The Prime Minister has given time on August 21 to launch IPPB. Two branches of the bank are already operational. Rest of the 648 branches will be launched across country in every district
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X