ಹರಿದ, ಕೊಳಕಾದ ರೂ. 200, 2000 ನೋಟುಗಳ ವಿನಿಮಯಕ್ಕೆ ಆರ್ಬಿಐ ಒಪ್ಪಿಗೆ

ನಿಮ್ಮ ಬಳಿ ಇರುವ ರೂ. 200, ರೂ. 2000 ಮುಖಬೆಲೆಯ ನೋಟುಗಳು ಹರಿದಿದ್ದರೆ, ಕೊಳಕಾಗಿದ್ದರೆ, ಬಣ್ಣಗೆಟ್ಟಿದ್ದರೆ ಯಾವುದೇ ಬ್ಯಾಂಕಿನಲ್ಲಿ ವಿನಿಮಯ ಮಾಡಿಕೊಳ್ಳುವುದು ಕಷ್ಟವಾಗಬಹುದು.

ನಿಮ್ಮ ಬಳಿ ಇರುವ ರೂ. 200, ರೂ. 2000 ಮುಖಬೆಲೆಯ ನೋಟುಗಳು ಹರಿದಿದ್ದರೆ, ಕೊಳಕಾಗಿದ್ದರೆ, ಬಣ್ಣಗೆಟ್ಟಿದ್ದರೆ ಯಾವುದೇ ಬ್ಯಾಂಕಿನಲ್ಲಿ ವಿನಿಮಯ ಮಾಡಿಕೊಳ್ಳುವುದು ಕಷ್ಟವಾಗಬಹುದು. ಸದ್ಯ ಇಂತಹ ನೋಟುಗಳನ್ನು ಬದಲಾಸಿಕೊಳ್ಳುವ ಅಥವಾ ವಿನಿಮಯ ಮಾಡಿಕೊಳ್ಳುವ ಯಾವುದೆ ಕಾನೂನು ಇಲ್ಲ.

ಹರಿದ, ಕೊಳಕಾದ ರೂ. 200, 2000 ನೋಟುಗಳ ವಿನಿಮಯಕ್ಕೆ ಆರ್ಬಿಐ ಒಪ್ಪಿಗೆ

ಕಳೆದ ಕೆಲ ವಾರಗಳಿಂದ ಹಣಕಾಸು ಸಚಿವಾಲಯ ಹಾಗು ಭಾರತೀಯ ರಿಸರ್ವ್ ಬ್ಯಾಂಕ್ ಕಾನೂನು ತಿದ್ದುಪಡಿ ತರುವ ಕ್ರಮಕ್ಕೆ ಮುಂದಾಗಿವೆ. ರೂ. 5, 10, 20, 50, 100, 500 ಹಾಗು 1000 ಮುಖಬೆಲೆಯ ನೋಟುಗಳು ಹಾಳಾಗಿದ್ದರೆ, ಕೊಳಕಾಗಿದ್ದರೆ ಬದಲಾಯಿಸಿ ಕೊಡುವ ನಿಯಮ ಇದೆ.

ನೋಟು ವಿನಿಮಯ ಕಾನೂನು ತಿದ್ದುಪಡಿ
ನೋಟು ನಿಷೇಧದ ನಂತರದಲ್ಲಿ ಚಲಾವಣೆಗೆ ಬಂದಿರುವ ರೂ. 200, ರೂ. 2000 ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಡಲು ಈ ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಇದರಿಂದಾಗಿ ಸಾರ್ವಜನಿಕರು ಕಷ್ಟ ಅನುಭವಿಸುವಂತಾಗಿತ್ತು. ಇದೀಗ ಜನಸಮಾನ್ಯರ ಸಮಸ್ಯೆ ಅರಿತ ಆರ್ಬಿಐ ಹಾಗು ಹಣಕಾಸು ಸಚಿವಾಲಯ ಕಾಯಿದೆ ತಿದ್ದುಪಡಿ ಮಾಡುವ ಕಾರ್ಯಕ್ಕೆ ಒಪ್ಪಿಗೆ ಸೂಚಿಸಿವೆ. ಕಾನೂನು ತಿದ್ದುಪಡಿಯಾದರೆ ಇಂತಹ ನೋಟುಗಳನ್ನು ಬ್ಯಾಂಕ್ ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+