For Quick Alerts
ALLOW NOTIFICATIONS  
For Daily Alerts

ರೂಪಾಯಿ ಮೌಲ್ಯ ಐತಿಹಾಸಿಕ ರೂ. 70ಕ್ಕೆ ಕುಸಿತ, ನಿಮ್ಮ ಮೇಲಾಗಲಿರುವ 5 ಪರಿಣಾಮಗಳೇನು?

ಟರ್ಕಿ ಆರ್ಥಿಕ ಬಿಕ್ಕಟ್ಟಿನ ಪರಿಣಾಮದಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಐತಿಹಾಸಿಕ ಕನಿಷ್ಟ ಮಟ್ಟಕ್ಕೆ ರೂ. 70.08ಕ್ಕೆ ಕುಸಿತ ಕಂಡಿದೆ.

By Siddu
|

ಟರ್ಕಿ ಆರ್ಥಿಕ ಬಿಕ್ಕಟ್ಟಿನ ಪರಿಣಾಮದಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಐತಿಹಾಸಿಕ ಕನಿಷ್ಟ ಮಟ್ಟಕ್ಕೆ ರೂ. 70.08ಕ್ಕೆ ಕುಸಿತ ಕಂಡಿದೆ.

 

ಟರ್ಕಿಯಲ್ಲಿನ ಹಣಕಾಸು ಬಿಕ್ಕಟ್ಟು ಭಾರತದ ರೂಪಾಯಿ ಮೌಲ್ಯ ದುರ್ಬಲಗೊಳ್ಳಲು ಪ್ರಮುಖ ಕಾರಣವಾಗಿದೆ. ಇದೀಗ ರೂಪಾಯಿ ಮೌಲ್ಯ ಕುಸಿತ ರೂ. 70ರ ಪಾಸಿನಲ್ಲಿದೆ. ಈ ಹಿಂದೆ ಕನಿಷ್ಠ ರೂ. 69.20ಕ್ಕೆ ರೂಪಾಯಿ ಕುಸಿತ ಕಂಡಿತ್ತು.
ಸೋಮವಾರ ಡಾಲರ್‌ ಎದುರು ರೂಪಾಯಿ ಮೌಲ್ಯವು ರೂ. ಶೇ.1.57ರಷ್ಟು ಕುಸಿತ ಕಂಡಿದೆ. 72ನೇ ಸ್ವಾತಂತ್ರ್ಯೋತ್ಸವ: ಭಾರತದ ಆರ್ಥಿಕತೆ ಎದುರಿಸುತ್ತಿರುವ ಮುಖ್ಯ ಸಮಸ್ಯೆಗಳೇನು ಗೊತ್ತೆ?

ಚೀನಾ ಅಮೆರಿಕಾ ಆರ್ಥಿಕ ಸಮರ

ಚೀನಾ ಅಮೆರಿಕಾ ಆರ್ಥಿಕ ಸಮರ

ಚೀನಾ ಮತ್ತು ಅಮೆರಿಕ ನಡುವಿನ ಆರ್ಥಿಕ ಸಮರದ ಹಿನ್ನೆಲೆ ಯುಎಸ್ ಡಾಲರ್‌ ಮೌಲ್ಯ ವೃದ್ಧಿಗೆ ಮುಂದಾಗಿದೆ. ಕೃತಕ ಬೇಡಿಕೆಯನ್ನು ಸೃಷ್ಟಿಸುವ ಮೂಲಕ ಇತರೆ ಕರೆನ್ಸಿಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಇದು ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆ ಇದೆ. ಚೀನಾ-ಅಮೇರಿಕಾ ಟ್ರೇಡ್ ವಾರ್: ಭಾರತದ ಮೇಲಾಗುವ ಪರಿಣಾಮಗಳೇನು?

ಪೆಟ್ರೋಲ್, ಡೀಸೆಲ್ ಬೆಲೆ

ಪೆಟ್ರೋಲ್, ಡೀಸೆಲ್ ಬೆಲೆ

ರೂಪಾಯಿ ಮೌಲ್ಯ ಕುಸಿತದಿಂದ ಪೆಟ್ರೋಲ್, ಡೀಸೆಲ್ ಮೇಲಾಗುತ್ತಿರುವ ಪರಿಣಾಮ ನೋಡುತ್ತಿದ್ದೇವೆ. ತೈಲ ದರಗಳು ಗರಿಷ್ಠ ಮಟ್ಟಕ್ಕೆ ಏರುತ್ತಿದ್ದು, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ರೂ. ೮೩.೫೮ರಷ್ಟಾಗಿದೆ.

ಬಡ್ಡಿದರ ಹೆಚ್ಚಳ
 

ಬಡ್ಡಿದರ ಹೆಚ್ಚಳ

ರೂಪಾಯಿ ಕುಸಿತದ ಪರಿಣಾಮ ಬಡ್ಡಿದರ ಕೂಡ ಏರಿಕೆಯಾಗಲಿದೆ.
ಹಣದುಬ್ಬರ ನಿಯಂತ್ರಿಸುವುದು ಆರ್ಬಿಐಗೆ ಅನಿವಾರ್ಯತೆಯಾಗಿದೆ. ಅಂದರೆ ಹಣದುಬ್ಬರವನ್ನು ತಗ್ಗಿಸಲು ಬಡ್ಡಿ ದರಗಳನ್ನು ಹೆಚ್ಚಿಸಬಹುದು.

ಚಾಲ್ತಿ ಖಾತೆ ಕೊರತೆ

ಚಾಲ್ತಿ ಖಾತೆ ಕೊರತೆ

ಕಚ್ಚಾ ತೈಲ ದರಗಳು ಏರಿಕೆಯಾಗುತ್ತಿರುವುದು ಆರ್ಥಿಕ ಬೆಳವಣಿಗೆಗೆ ತೀವ್ರ ಹಾನಿ ಉಂಟುಮಾಡಬಹುದು. 2018 ರಲ್ಲಿನ ಆರ್ಥಿಕ ಸಮೀಕ್ಷೆಯು ಕಚ್ಚಾತೈಲಗಳ ಬೆಲೆ ಪ್ರತಿ ಬ್ಯಾರೆಲ್ ಗೆ 10 ಡಾಲರ್ ಏರಿಕೆಯಾಗುವುದು ಆರ್ಥಿಕ ಬೆಳವಣಿಗೆಯನ್ನು ಶೇ. 0.2-0.3 ಪಾಯಿಂಟ್ ಕಡಿಮೆಗೊಳಿಸುತ್ತದೆ. ಚಾಲ್ತಿ ಖಾತೆ ಕೊರತೆ ಕೂಡ ತೀವ್ರವಾಗಿ ಎದುರಾಗಲಿದೆ.

ಆರ್ಬಿಐ ಮಧ್ಯಪ್ರವೇಶ

ಆರ್ಬಿಐ ಮಧ್ಯಪ್ರವೇಶ

ಸತತವಾಗಿ ಡಾಲರ್ ಎದುರು ಕುಸಿತ ಕಾಣುತ್ತಿರುವ ರೂಪಾಯಿ ಮೌಲ್ಯವನ್ನು ಸರಿದೂಗಿಸಲು ಆರ್ಬಿಐ ಮಧ್ಯಪ್ರವೇಶಿಸುವ ಸಾಧ್ಯತೆ ಇದೆ. ಆರ್ಥಿಕ ನೀತಿಗಳಲ್ಲಿ ಬದಲಾವಣೆ ತಂದು ರೂಪಾಯಿ ಮೌಲ್ಯ ಕಾಯ್ದುಕೊಳ್ಳುವುದು ಆರ್‌ಬಿಐ ಜವಾಬ್ದಾರಿಯಾಗಿದೆ.

English summary

The Rupee all time low At 70: 7 Ways It Will Impact you

The rupee today plunged below the 70 levels, over strength in the US dollar, following a collapse in the Turkish Lira.
Story first published: Tuesday, August 14, 2018, 12:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X