For Quick Alerts
ALLOW NOTIFICATIONS  
For Daily Alerts

ಇಂದು ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇವೆಗೆ ಚಾಲನೆ, ತಿಳಿದುಕೊಳ್ಳಬೇಕಾದ ಸಂಗತಿಗಳೇನು?

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇವೆಗೆ ಇಂದು ನವ ದೆಹಲಿಯಲ್ಲಿ ಚಾಲನೆ ನೀಡಲಿದ್ದಾರೆ.

By Siddu
|

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇವೆಗೆ ಇಂದು ನವ ದೆಹಲಿಯಲ್ಲಿ ಚಾಲನೆ ನೀಡಲಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಬ್ಯಾಂಕಿಂಗ್ ಹಾಗು ಹಣಕಾಸು ಸೇವೆಗಳನ್ನು ನೀಡುವುದಕ್ಕೆ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಪ್ರಾಮುಖ್ಯತೆ ನೀಡಲಿದೆ.

 

ಡಿಸೆಂಬರ್ 31, 2018 ರ ವೇಳೆಗೆ ದೇಶದಲ್ಲಿನ 1.55 ಲಕ್ಷ ಅಂಚೆ ಕಚೇರಿಗಳು ಇಂಡಿಯ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ವ್ಯವಸ್ಥೆಯೊಂದಿಗೆ ಲಿಂಕ್ ಮಾಡಬೇಕು ಸರ್ಕಾರ ತಿಳಿಸಿದೆ.

ಅಂಚೆ ಇಲಾಖೆಯ ಅಡಿ ಕಾರ್ಯ

ಅಂಚೆ ಇಲಾಖೆಯ ಅಡಿ ಕಾರ್ಯ

ಮೋದಿಯವರು ಇಂದು ಇಂಡಿಯ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಗೆ ಚಾಲನೆ ನೀಡಲಿದ್ದು, ದೇಶದ 650 ಶಾಖೆಗಳಲ್ಲಿನ 3250 ಪ್ರವೇಶ ಪಾಯಿಂಟ್ ಗಳಲ್ಲಿ ಚಾಲನೆ ಸಿಗಲಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವ್ಯವಸ್ಥೆ ಅಂಚೆ ಇಲಾಖೆ, ಸಂವಹನ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ.

ಬಡ್ಡಿದರ, ಠೇವಣಿ

ಬಡ್ಡಿದರ, ಠೇವಣಿ

ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಉಳಿತಾಯ ಖಾತೆಗಳ ಮೇಲೆ ಶೇ. ೪ರಷ್ಟು ಬಡ್ಡಿದರ ನೀಡಲಿದೆ. ಒಬ್ಬ ವ್ಯಕ್ತಿ ಗರಿಷ್ಠ 1 ಲಕ್ಷದವರೆಗೆ ಠೇವಣಿ ಇಡಬಹುದು.

ಐಪಿಪಿಬಿ ಸೌಲಭ್ಯಗಳು
 

ಐಪಿಪಿಬಿ ಸೌಲಭ್ಯಗಳು

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೊಂದಿಗೆ, ಯಾವುದೇ ಬ್ಯಾಂಕ್ ಖಾತೆಯ ಗ್ರಾಮೀಣ ಪ್ರದೇಶದ ಜನರಿಗೆ ಮೊಬೈಲ್ ಬ್ಯಾಂಕ್ ಮತ್ತು ಹಣದ ವರ್ಗಾವಣೆ ಸೇರಿದಂತೆ ಹಣಕಾಸಿನ ಸೇವೆಗಳನ್ನು ಅಪ್ಲಿಕೇಶನ್ ಸಹಾಯದಿಂದ ಅಥವಾ ಅಂಚೆ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಪಡೆಯಬಹುದು. ಅಂಚೆ ಪಾವತಿ ಬ್ಯಾಂಕಿಯು ಆರ್ಟಿಜಿಎಸ್, ಎನ್ಇಎಫ್ಟಿ, ಐಎಂಪಿಎಸ್ (RTGS, NEFT, IMPS) ವ್ಯವಹಾರಕ್ಕೆ ಅವಕಾಶ ನೀಡಿದೆ. ಇದು ಯಾವುದೇ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಲು ಮತ್ತು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ.
ಹಣ ವರ್ಗಾವಣೆ, ಬಿಲ್, ಯುಟಿಲಿಟಿ ಪೇಮೆಂಟ್ಸ್, ಮರ್ಚಂಟ್ ಪೇಮೆಂಟ್ಸ್ ಇತ್ಯಾದಿ ಸೇವೆ ಒದಗಿಸಲಿದೆ.

1.55 ಲಕ್ಷ ಅಂಚೆ ಕಚೇರಿ

1.55 ಲಕ್ಷ ಅಂಚೆ ಕಚೇರಿ

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಯನ್ನು ಒದಗಿಸಲು ಸುಮಾರು 1.55 ಲಕ್ಷ ಅಂಚೆ ಕಚೇರಿ ಶಾಖೆಗಳನ್ನು ತಲುಪಲಿದೆ. ಈ ವರ್ಷ ಅಂತ್ಯದ ವೇಳೆಗೆ ಎಲ್ಲಾ 1.55 ಲಕ್ಷ ಅಂಚೆ ಕಛೇರಿಗಳನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಗಳೊಂದಿಗೆ ಸಂಪರ್ಕಿಸಲಾಗುವುದು ಎಂದು ಹೇಳಿದೆ.

English summary

India Post Payments Bank launch today: Know these things

Prime Minister Narendra Modi will launch India Post Payments Bank (IPPB) at Talkatora Stadium in New Delhi on Saturday
Story first published: Saturday, September 1, 2018, 11:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X