ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಷೇರುಪೇಟೆಯಲ್ಲಿ ಕರಡಿ ಕುಣಿತ ಜೋರಾಗಿದ್ದು, ಸೆನ್ಸೆಕ್ಸ್ ಮತ್ತು ನಿಪ್ಟಿ ಸೂಚ್ಯಂಕಗಳು ಭಾರೀ ನಷ್ಟಕ್ಕೆ ಒಳಗಾದವು. ಮಧ್ಯಾಹ್ನ ಬಿಎಸ್ಇ ಸೆನ್ಸೆಕ್ಸ್ 1,000 ಪಾಯಿಂಟ್ ಕುಸಿತ ಕಂಡಿದ್ದು, ನಿಫ್ಟಿ ಸೂಚ್ಯಂಕ 11000
ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಷೇರುಪೇಟೆಯಲ್ಲಿ ಕರಡಿ ಕುಣಿತ ಜೋರಾಗಿದ್ದು, ಸೆನ್ಸೆಕ್ಸ್ ಮತ್ತು ನಿಪ್ಟಿ ಸೂಚ್ಯಂಕಗಳು ಭಾರೀ ನಷ್ಟಕ್ಕೆ ಒಳಗಾದವು. ಮಧ್ಯಾಹ್ನ ಬಿಎಸ್ಇ ಸೆನ್ಸೆಕ್ಸ್ 1,000 ಪಾಯಿಂಟ್ ಕುಸಿತ ಕಂಡಿದ್ದು, ನಿಫ್ಟಿ ಸೂಚ್ಯಂಕ 11000 ಕ್ಕೆ ಬಂದಿತ್ತು.
ಯೆಸ್ ಬ್ಯಾಂಕ್ ಸ್ಟಾಕ್ ಗಳ ತೀವ್ರ ಕುಸಿತಕ್ಕೆ ಇದು ಕಾರಣವಾಯಿತು. ಆದರೆ, ಸೂಚ್ಯಂಕಗಳು ತೀವ್ರ ಕುಸಿತದ ನಂತರ ಶೀಘ್ರದಲ್ಲೇ ಚೇತರಿಸಿಕೊಂಡವು.
ಮೊಹರಂ ಹಿನ್ನೆಲೆಯಲ್ಲಿ ಗುರುವಾರ ಷೇರು ಮಾರುಕಟ್ಟೆ ಬಂದ್ ಆಗಿತ್ತು. ಶುಕ್ರವಾರ ಷೇರುಪೇಟೆ ವಹಿವಾಟು ಆರಂಭವಾಗುತ್ತಿದ್ದಂತೆ ಉತ್ತಮ ಏರಿಕೆ ಕಂಡು ಬಂದಿತ್ತು. ಬೆಳಿಗ್ಗೆ ಆರಂಭದಲ್ಲಿ ಸೆನ್ಸೆಕ್ಸ್ 172 ಅಂಕ ಹಾಗೂ ನಿಫ್ಟಿ 69 ಅಂಕ ಏರಿಕೆಯಾಗಿತ್ತು. ಆದರೆ ಮಧ್ಯಾಹ್ನ 1ರ ವೇಳೆಗೆ ಸೆನ್ಸೆಕ್ಸ್ ಒಂದು ಸಾವಿರ ಪಾಯಿಂಟ್ ಕುಸಿಯಿತು.