For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ! ಪಂಚರಾಜ್ಯ ಚುನಾವಣಾ ಎಫೆಕ್ಟ್

ಒಂದೇಡೆ ಆರ್ಬಿಐ ಗವರ್ನರ್ ಆಕಸ್ಮಿಕ ರಾಜೀನಾಮೆ, ಇನ್ನೊಂದೆಡೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಷೇರುಪೇಟೆಯ ಮೇಲೆ ಭಾರೀ ಪರಿಣಾಮವನ್ನೇ ಬೀರಿದೆ.

|

ಒಂದೇಡೆ ಆರ್ಬಿಐ ಗವರ್ನರ್ ಆಕಸ್ಮಿಕ ರಾಜೀನಾಮೆ, ಇನ್ನೊಂದೆಡೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಷೇರುಪೇಟೆಯ ಮೇಲೆ ಭಾರೀ ಪರಿಣಾಮವನ್ನೇ ಬೀರಿದೆ.
ಇಂದು ಷೇರುಪೇಟೆ ವಹಿವಾಟು ಆರಂಭವಾಗುತ್ತಿದ್ದಂತೆ ಬೆಳಿಗ್ಗೆ ೯.೪೦ರ ವೇಳೆಗೆ ಸೆನ್ಸೆಕ್ಸ್ 555.72 ಅಂಕ ಕುಸಿತಗೊಂಡು 35,114.93 ಅಂಶ ಕುಸಿತಕ್ಕೀಡಾಯಿತು.

 

ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಇದೀಗ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಚುನಾವಣಾ ಫಲಿತಾಂಶ ಹೂಡಿಕೆದಾರರನ್ನು ಚಿಂತೆಗೀಡು ಮಾಡಿದೆ.

ಭಾರಿ ನಷ್ಟ

ಭಾರಿ ನಷ್ಟ

ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಎಲ್ಲ ವಲಯಗಳ ಷೇರುಗಳೂ ನಷ್ಟ ಕಂಡಿದ್ದು, ರಿಲಯನ್ಸ್‌ ಇಂಡಸ್ಟ್ರೀಸ್‌, ಏಷ್ಯನ್‌ ಪೇಂಟ್ಸ್‌, ಟಾಟಾ ಮೋಟಾರ್ಸ್‌, ಅದಾನಿ ಪೋರ್ಟ್ಸ್ ಷೇರುಗಳು ಭಾರಿ ನಷ್ಟ ದಾಖಲಿಸಿತು.

ಚುನಾವಣಾ ಫಲಿತಾಂಶ

ಚುನಾವಣಾ ಫಲಿತಾಂಶ

ಇಂದಿನ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಷೇರುಪೇಟೆ ಮೇಲೆ ನೇರ ಪರಿಣಾಮ ಬೀರಿದ್ದು, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಘಡದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ಹಿನ್ನಡೆ ಅನುಭಿಸಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿ ಬಿಜೆಪಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಉಳಿದಂತೆ ತೆಲಂಗಾಣದಲ್ಲಿ ಟಿಆರ್ ಎಸ್ ಮತ್ತು ಮಿಜೋರಾಂ ನಲ್ಲಿ ಎಂಎನ್ ಎಫ್ ಪಕ್ಷಗಳು ಮುನ್ನಡೆ ಸಾಧಿಸಿವೆ.

ರೂಪಾಯಿ ಕುಸಿತ
 

ರೂಪಾಯಿ ಕುಸಿತ

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ ಬೆನ್ನಲ್ಲೇ ರೂಪಾಯಿ ಮೌಲ್ಯ ಕುಸಿತ ಕಂಡಿದೆ.
ನಿನ್ನೆ ಡಾಲರ್ ಎದುರು 50 ಪೈಸೆಯಷ್ಟು ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ಇಂದು ಮತ್ತೆ 61 ಪೈಸೆಗಳಷ್ಟು ಕುಸಿತ ಕಂಡಿದೆ. ಅಂದರೆ ಕೇವಲ ಎರಡು ದಿನಗಳ ಅಂತರದಲ್ಲಿ ರೂಪಾಯಿ ಮೌಲ್ಯ 1.11 ಪೈಸೆಗಳಷ್ಚು ಕುಸಿತಗೊಂಡಿದೆ.

Read more about: stock sensex mutual funds shares
English summary

Assembly Elections 2018 effects Sensex down by over 500 points

While today, the day of election the losses have been limited, as investors bet on domestic institutions lending support, the last few days have been disastrous.
Story first published: Tuesday, December 11, 2018, 11:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X