ದಂಪತಿಗಳು ಪಿಪಿಎಫ್ ಮೂಲಕ ರೂ. 1 ಕೋಟಿ ಹಣ ಗಳಿಸುವುದು ಹೇಗೆ?

ಜೀವನದಲ್ಲಿ ಒಮ್ಮೆಯಾದರೂ ಕೋಟ್ಯಧೀಶರಾಗಬೇಕೆಂದು ಬಹುತೇಕ ಎಲ್ಲರ ಹೆಗ್ಗುರಿಯಾಗಿರುತ್ತದೆ. ಆದರೆ ಸಾಮಾನ್ಯ ಸಂಬಳ ಪಡೆದು ಜೀವನ ಸಾಗಿಸುವವರಿಗೆ ಇದು ಕಷ್ಟದ ಕೆಲಸವೇ ಆಗಿದೆ.

ಜೀವನದಲ್ಲಿ ಒಮ್ಮೆಯಾದರೂ ಕೋಟ್ಯಧೀಶರಾಗಬೇಕೆಂದು ಬಹುತೇಕ ಎಲ್ಲರ ಹೆಗ್ಗುರಿಯಾಗಿರುತ್ತದೆ. ಆದರೆ ಸಾಮಾನ್ಯ ಸಂಬಳ ಪಡೆದು ಜೀವನ ಸಾಗಿಸುವವರಿಗೆ ಇದು ಕಷ್ಟದ ಕೆಲಸವೇ ಆಗಿದೆ. ಆದರೂ ದೀರ್ಘಾವಧಿಯಲ್ಲಿ ಒಂದು ಕೋಟಿ ರೂಪಾಯಿ ಹಣ ಸಂಗ್ರಹಿಸಲು ಹಲವಾರು ಹೂಡಿಕೆ ಯೋಜನೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಸಾಮಾನ್ಯವಾಗಿ ಇಂಥ ಹೂಡಿಕೆ ಯೋಜನೆಗಳು ಮಧ್ಯಮದಿಂದ ಅತಿ ಹೆಚ್ಚು ರಿಸ್ಕ್ ಅಂಶದ ಶ್ರೇಣಿಯಲ್ಲಿರುತ್ತವೆ.

ಒಂದೊಮ್ಮೆ ಕಡಿಮೆ ರಿಸ್ಕ್‌ ನೊಂದಿಗೆ ರೂ. 1 ಕೋಟಿ ಜಮೆ ಮಾಡುವ ಗುರಿಯನ್ನು ಹೊಂದಿರುವ ದಂಪತಿ ನೀವಾಗಿದ್ದಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (Public Provident Fund - PPF) ನಿಮಗೆ ಹೊಂದುವ ಅತಿ ಸೂಕ್ತ ಹೂಡಿಕೆ ಯೋಜನೆಯಾಗಿದೆ. ಒಂದು ಕಡೆ ಆದಾಯ ತೆರಿಗೆ ಕಾಯ್ದೆ 80ಸಿ ಅಡಿ ತೆರಿಗೆ ವಿನಾಯಿತಿ ಹಾಗೂ ಸುರಕ್ಷಿತ ಆದಾಯದೊಂದಿಗೆ ಪತ್ನಿಯ ಸಹಾಯ ಪಡೆದು 1 ಕೋಟಿ ರೂಪಾಯಿ ಉಳಿತಾಯ ಮಾಡಲು ಸಾಧ್ಯವಿದೆ. ಪಿಪಿಎಫ್ ನಲ್ಲಿ ಹೂಡಿಕೆ ಮಾಡಲು 10 ಕಾರಣ

ಪಿಪಿಎಫ್ ಎಂದರೇನು? ಇದರ ವೈಶಿಷ್ಟ್ಯತೆಗಳೇನು? 1 ಕೋಟಿ ಸಂಗ್ರಹಣೆಗೆ ನಿಮ್ಮ ಸಂಬಳದಲ್ಲಿ ಎಷ್ಟು ಹಣ ಹೂಡಿಕೆ ಮಾಡುತ್ತ ಬರಬೇಕು? ಹೀಗೆ ಹಲವಾರು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಉದ್ಭವಿಸಿರಬಹುದು. ಈ ಎಲ್ಲ ಪ್ರಶ್ನೆಗಳಿಗೂ ಈ ಅಂಕಣದಲ್ಲಿ ಉತ್ತರ ನೀಡಲಾಗಿದ್ದು, ಪಿಇಎಫ್ ಮೂಲಕ 1 ಕೋಟಿ ರೂ. ಉಳಿತಾಯ ಮಾಡುವುದು ಹೇಗೆ ಎಂಬುದನ್ನು ನೀವೂ ತಿಳಿದುಕೊಳ್ಳಿ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಎಂದರೇನು?

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಎಂದರೇನು?

ಪಿಪಿಎಫ್ ಎಂಬುದು 1968 ರಲ್ಲಿ ಆಗಿನ ಕೇಂದ್ರದ ಹಣಕಾಸು ಸಚಿವಾಲಯದಿಂದ ಜಾರಿಗೊಳಿಸಲಾದ ಒಂದು ದೀರ್ಘಾವಧಿ ಉಳಿತಾಯ ಯೋಜನೆಯಾಗಿದೆ. ದೇಶದ ಯಾವುದೇ ಅಂಚೆ ಕಚೇರಿ ಶಾಖೆ ಅಥವಾ ರಾಷ್ಟ್ರೀಕೃತ ಬ್ಯಾಂಕ್ ಶಾಖೆ ಅಥವಾ ಸೂಚಿತವಾದ ಖಾಸಗಿ ಬ್ಯಾಂಕ್‌ಗಳ ಶಾಖೆಯಲ್ಲಿ ಪಿಪಿಎಫ್ ಖಾತೆ ತೆರೆಯಬಹುದು. ಈ ಖಾತೆಯ ಅವಧಿ 15 ವರ್ಷ ಅವಧಿಯದಾಗಿರುತ್ತದೆ. ಪಿಪಿಎಫ್ ವಿವಿಧ ಹಂತಗಳಲ್ಲಿ 3 ರೀತಿಯ ತೆರಿಗೆ ವಿನಾಯಿತಿ ನೀಡುವ ವಿಶಿಷ್ಟ ಯೋಜನೆಗಳಲ್ಲೊಂದಾಗಿದೆ. ಪಿಪಿಎಫ್ ಖಾತೆ ಬಗ್ಗೆ ನಿಮಗೆ ಗೊತ್ತಿರದ ಹೊಸ ನಿಯಮ

ಪಿಪಿಎಫ್ 3 ಬಗೆಯ ತೆರಿಗೆ ವಿನಾಯಿತಿಗಳು

ಪಿಪಿಎಫ್ 3 ಬಗೆಯ ತೆರಿಗೆ ವಿನಾಯಿತಿಗಳು

1. ಪಿಪಿಎಫ್ ಖಾತೆಗೆ ಜಮೆ ಮಾಡಲಾದ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆ 80ಸಿ ಅಡಿ ತೆರಿಗೆ ವಿನಾಯಿತಿ ಸೌಲಭ್ಯವಿದೆ. (ಗರಿಷ್ಠ 1.50 ಲಕ್ಷ ರೂ. ಹೂಡಿಕೆ ಮೊತ್ತಕ್ಕೆ ಸೀಮಿತವಾಗಿ)
2. ಹೂಡಿಕೆಯ ಮೇಲೆ ಸಿಗುವ ಬಡ್ಡಿಗೆ ಶೇ.100 ರಷ್ಟು ತೆರಿಗೆ ವಿನಾಯಿತಿ
3. ಪಕ್ವತಾ ಅವಧಿಯ ನಂತರ ಸಿಗುವ ಸಂಪೂರ್ಣ ಮೊತ್ತಕ್ಕೆ ತೆರಿಗೆ ವಿನಾಯಿತಿ

ಪಿಪಿಎಫ್ ಖಾತೆಯ ವೈಶಿಷ್ಟ್ಯತೆಗಳು

ಪಿಪಿಎಫ್ ಖಾತೆಯ ವೈಶಿಷ್ಟ್ಯತೆಗಳು

1. ಪಿಪಿಎಫ್ ಇದು ತೆರಿಗೆ ಪಾವತಿಸುವ ನೌಕರರಿಗೆ ತೆರಿಗೆ ಉಳಿಸುವ ಅತ್ಯಂತ ಸೂಕ್ತ ಹೂಡಿಕೆ ಯೋಜನೆಯಾಗಿದೆ. ಹೂಡಿಕೆಯ ಮೇಲೆ ಸಿಗುವ ಬಡ್ಡಿ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ಹಾಗೆಯೇ ಹೂಡಿಕೆಯ ಮೊತ್ತಕ್ಕೆ ಸಹ ತೆರಿಗೆ ವಿನಾಯಿತಿ ಕ್ಲೇಮ್ ಮಾಡಬಹುದು.
2. ಇದರ ಬಡ್ಡಿದರಗಳನ್ನು ಕೇಂದ್ರ ಸರಕಾರವೇ ನಿರ್ಧರಿಸುತ್ತದೆ. ಪ್ರತಿ ತ್ರೈಮಾಸಿಕಕ್ಕೊಮ್ಮೆ (2016-17 ರಿಂದೀಚೆಗೆ) ಕೇಂದ್ರ ಸರಕಾರ ಬಡ್ಡಿ ದರಗಳನ್ನು ಪರಿಷ್ಕರಿಸುತ್ತದೆ. ಖಾತೆಗೆ ವಾರ್ಷಿಕವಾಗಿ ಬಡ್ಡಿಯನ್ನು ಲೆಕ್ಕ ಹಾಕಿ ಜಮೆ ಮಾಡಲಾಗುತ್ತದೆ.
3. ಕೇವಲ 100 ರೂ. ಆರಂಭಿಕ ಮೊತ್ತದಿಂದ ಖಾತೆ ಆರಂಭಿಸಬಹುದು.
4. ಖಾತೆಯ ಕಾಲಾವಧಿ 15 ವರ್ಷ
5. ವಾರ್ಷಿಕ 500 ರೂ.ಗಳಿಂದ ಗರಿಷ್ಠ 1.5 ಲಕ್ಷ ರೂ.ಗಳವರೆಗೆ ಎಷ್ಟಾದರೂ ಮೊತ್ತವನ್ನು ಖಾತೆಗೆ ಜಮೆ ಮಾಡಬಹುದು. ಆದಾಗ್ಯೂ ಸರಕಾರದ ನಿಯಮಾವಳಿಗಳ ಪ್ರಕಾರ ಇದು ಬದಲಾಗಬಹುದು. ವರ್ಷದಲ್ಲಿ ಒಂದು ಬಾರಿ ಅಥವಾ ಕಂತುಗಳಲ್ಲಿ ಹಣ ಪಾವತಿಸಬಹುದು. (ಗರಿಷ್ಠ 12 ಕಂತುಗಳು)
6. ಖಾತೆಯನ್ನು ಸಕ್ರಿಯವಾಗಿಡಲು ನಿಗದಿತ ವಾರ್ಷಿಕ ಕನಿಷ್ಠ ಮೊತ್ತ ಪಾವತಿಸುವುದು ಕಡ್ಡಾಯ.
7. ಹೂಡಿಕೆಯ ಸಂಪೂರ್ಣ ಮೊತ್ತವನ್ನು ಖಾತೆ ಪಕ್ವಗೊಂಡ ನಂತರ ಮಾತ್ರ ಹಿಂಪಡೆಯಲು ಸಾಧ್ಯ. ಆದರೂ ಕೆಲ ಷರತ್ತುಗೊಳಪಟ್ಟು ಅವಧಿಪೂರ್ವವಾಗಿ ಭಾಗಶಃ ಹಣ ಹಿಂಪಡೆಯುವ ಅವಕಾಶವಿದೆ.
8. ಓರ್ವ ವ್ಯಕ್ತಿ ಒಂದೇ ಪಿಪಿಎಫ್ ಖಾತೆ ತೆರೆಯಬಹುದು. ಜೊತೆಗೆ ಓರ್ವ ಅಪ್ರಾಪ್ತ ವಯಸ್ಸಿನ ವ್ಯಕ್ತಿಯ ಹೆಸರಲ್ಲೂ ಖಾತೆ ಆರಂಭಿಸಬಹುದು.
8. ಪ್ರತಿ ತ್ರೈಮಾಸಿಕ್ಕೊಮ್ಮೆ ಬಡ್ಡಿ ದರಗಳನ್ನು ಪರಿಷ್ಕರಿಸಲಾಗುತ್ತಿದ್ದು, ಪ್ರಸ್ತುತ ಅಕ್ಟೋಬರ್ 2018 ರಿಂದ ಡಿಸೆಂಬರ್ 2018 ರ ಅವಧಿಗೆ ಶೇ.8 ರಷ್ಟು ಬಡ್ಡಿದರ ಘೋಷಿಸಲಾಗಿದೆ. ಸಂಯೋಜಿತ ಬಡ್ಡಿಯನ್ನು ವಾರ್ಷಿಕವಾಗಿ ಖಾತಗೆ ಜಮೆ ಮಾಡಲಾಗುತ್ತದೆ.

ಪಿಪಿಎಫ್‌ನಲ್ಲಿ ಎಷ್ಟು ಹಣ ಹೂಡಬಹುದು?

ಪಿಪಿಎಫ್‌ನಲ್ಲಿ ಎಷ್ಟು ಹಣ ಹೂಡಬಹುದು?

ಒಬ್ಬ ವ್ಯಕ್ತಿ ವಾರ್ಷಿಕ ಗರಿಷ್ಠ ರೂ. 1.5 ಲಕ್ಷ ಪಿಪಿಎಫ್ ಖಾತೆಗೆ ಜಮಾ ಮಾಡಬಹುದು. ಪತಿ/ ಪತ್ನಿಯ ಹೆಸರಲ್ಲೂ ಖಾತೆ ಆರಂಭಿಸಬಹುದಾದರೂ ಹೂಡಿಕೆಯ ಗರಿಷ್ಠ ಮೊತ್ತ ಇದೇ ಆಗಿರುತ್ತದೆ. (ಸಂಗಾತಿಗೆ ಆದಾಯ ಇರಬಹುದು ಅಥವಾ ಇಲ್ಲದಿರಬಹುದು). ಅಂದರೆ ಪತಿ ಹಾಗೂ ಪತ್ನಿ ಇಬ್ಬರೂ ಸೇರಿಸಿ ವಾರ್ಷಿಕ 3 ಲಕ್ಷ ರೂ.ಗಳನ್ನು ಪಿಪಿಎಫ್ ಖಾತೆಯಲ್ಲಿ ಹೂಡಬಹುದು. ಅಪ್ರಾಪ್ತ ಮಕ್ಕಳ ಹೆಸರಲ್ಲೂ ಖಾತೆ ಆರಂಭಿಸಬಹುದಾದರೂ ಪಾಲಕರ ಹೆಸರಿನಲ್ಲಿರುವ ಖಾತೆಯ ಹೂಡಿಕೆ ಇದಕ್ಕೆ ಲಿಂಕ್ ಆಗಿರುತ್ತದೆ.

ಪಿಪಿಎಫ್ ಖಾತೆ ಅವಧಿ ವಿಸ್ತರಣೆ

ಪಿಪಿಎಫ್ ಖಾತೆ ಅವಧಿ ವಿಸ್ತರಣೆ

ಖಾತೆ ಮ್ಯಾಚುರಿಟಿಯ ನಂತರ ಪ್ರತಿ ಬಾರಿ 5 ವರ್ಷಗಳ ಅವಧಿಗೆ ಖಾತೆಯ ಅವಧಿಯನ್ನು ಹೆಚ್ಚಿಸಬಹುದು. ಹೀಗೆ 5 ವರ್ಷಕ್ಕೊಮ್ಮೆ ಎಷ್ಟು ಬಾರಿಯಾದರೂ ಖಾತೆಯ ಅವಧಿ ವಿಸ್ತರಿಸುವ ಅವಕಾಶವಿದೆ. ಖಾತೆಯ ಮ್ಯಾಚುರಿಟಿ ನಂತರ ಅದರಲ್ಲಿ ಹೂಡಿಕೆ ಮುಂದುವರಿಸುವುದು ಅಥವಾ ಬಿಡುವುದು ಖಾತೆದಾರರಿಗೆ ಬಿಟ್ಟ ನಿರ್ಧಾರವಾಗಿದೆ. ಆದರೆ ಖಾತೆ ಅವಧಿ ವಿಸ್ತರಣೆ ಮಾಡುವುದಾದಲ್ಲಿ ಮ್ಯಾಚುರಿಟಿಯ 1 ವರ್ಷದೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಮ್ಯಾಚುರಿಟಿ ನಂತರದ ಅವಧಿಯಲ್ಲಿ ಯಾವುದೇ ಹೊಸ ಹೂಡಿಕೆ ಮಾಡದೆ ಖಾತೆ ಮುಂದುವರಿಸಲು ಬಯಸಿದಲ್ಲಿ ಅದಕ್ಕೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ತಿಳಿಸುವ ಅವಶ್ಯಕತೆಯಿಲ್ಲ. ಈ ಸಂದರ್ಭದಲ್ಲಿ ಖಾತೆಯು ಸ್ವಯಂ ಚಾಲಿತವಾಗಿ ಜಾರಿಯಲ್ಲಿರುತ್ತದೆ ಹಾಗೂ ಖಾತೆಯಲ್ಲಿನ ಹಣಕ್ಕೆ ನಿಗದಿತ ಬಡ್ಡಿ ದರಗಳಂತೆ ಬಡ್ಡಿ ಆಕರಿಸುತ್ತ ಹೋಗಲಾಗುತ್ತದೆ.
ಒಂದೊಮ್ಮೆ ಹೊಸ ಹೂಡಿಕೆ ಮಾಡಲು ಬಯಸಿದರೆ ಈ ಬಗ್ಗೆ ಅಕೌಂಟ್ಸ್ ಆಫೀಸ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಫಾರ್ಮ ‘ಎಚ್' ಸಲ್ಲಿಸಬೇಕು. ಫಾರ್ಮ ‘ಎಚ್' ನೀಡದಿದ್ದರೆ ತೆರಿಗೆ ವಿನಾಯಿತಿ ಸೌಲಭ್ಯ ಸಿಗಲಾರದು.

ಪಿಪಿಎಫ್‌ನಿಂದ ಹೆಚ್ಚು ಆದಾಯ ಪಡೆಯುವುದು ಹೇಗೆ?

ಪಿಪಿಎಫ್‌ನಿಂದ ಹೆಚ್ಚು ಆದಾಯ ಪಡೆಯುವುದು ಹೇಗೆ?

ಈ ಕೆಳಗಿನ ವಿಧಾನಗಳನ್ನು ಅನುಸರಿಸುವ ಮೂಲಕ ಪಿಪಿಎಫ್ ಹೂಡಿಕೆಯ ಮೇಲೆ ಹೆಚ್ಚಿನ ಆದಾಯ ಗಳಿಸಬಹುದು:
1. ಹಣಕಾಸು ವರ್ಷದ ಆರಂಭದಲ್ಲಿ ಹೂಡಿಕೆ ಮಾಡಿ
ಹಣಕಾಸು ವರ್ಷದ ಆರಂಭದಲ್ಲಿಯೇ ಗರಿಷ್ಠ ಮೊತ್ತವನ್ನು ಹೂಡಿಕೆ ಮಾಡಿದಲ್ಲಿ ಆ ವರ್ಷದಲ್ಲಿ ಸಿಗುವ ಬಡ್ಡಿ ಆದಾಯದ ಮೇಲೆ ಹೆಚ್ಚಿನ ತೆರಿಗೆ ಉಳಿಸಬಹುದು. ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂ.ಗಳನ್ನು ಪಿಪಿಎಫ್ ಖಾತೆಗೆ ಜಮೆ ಮಾಡಬಹುದು. ಆದರೆ ಇದನ್ನು ವರ್ಷದುದ್ದಕ್ಕೂ ಕಂತುಗಳಲ್ಲಿ ಪಾವತಿಸುವ ಬದಲು ಹಣಕಾಸು ವರ್ಷಾರಂಭದಲ್ಲಿ ಏಕಗಂಟಿನಲ್ಲಿ ಪಾವತಿಸಿದರೆ ಹೆಚ್ಚು ಆದಾಯ ಪಡೆಯಬಹುದು. ಅದರಲ್ಲೂ ಸಾಧ್ಯವಾದರೆ ಏಪ್ರಿಲ್ 5 ರೊಳಗೆ ಏಕಗಂಟಿನಲ್ಲಿ ಹೂಡಿಕೆ ಮಾಡುವುದು ಸೂಕ್ತವಾಗಿದೆ. ಇದರಿಂದ ಹೂಡಿಕೆಗೆ ಗರಿಷ್ಠ ಮೊತ್ತದ ಬಡ್ಡಿ ಗಳಿಸಬಹುದು.

2. ಏಪ್ರಿಲ್ 5 ರೊಳಗೆ ವಂತಿಗೆ ಪಾವತಿಸಿ
ಏಪ್ರಿಲ್ 5 ರೊಳಗೆ ಗರಿಷ್ಠ ಕಂತನ್ನು ಪಾವತಿಸಿದಲ್ಲಿ ಸಂಪೂರ್ಣ ಏಪ್ರಿಲ್ ತಿಂಗಳು ಹಾಗೂ ಇನ್ನುಳಿದ ವರ್ಷದ 11 ತಿಂಗಳ ಸಂಪೂರ್ಣ ಬಡ್ಡಿ ಆದಾಯ ನಿಮ್ಮದಾಗುತ್ತದೆ. ಒಂದೊಮ್ಮೆ ಏಪ್ರಿಲ್ 5 ರ ನಂತರ ಹಣ ಕಟ್ಟಿದಲ್ಲಿ ಮುಂದಿನ 11 ತಿಂಗಳ ಬಡ್ಡಿಯನ್ನು ಮಾತ್ರ ಗಳಿಸಲು ಸಾಧ್ಯ. ಆಯಾ ತಿಂಗಳ 5ನೇ ತಾರೀಕಿನಿಂದ 30/31ನೇ ತಾರೀಕಿನ ಮಧ್ಯದಲ್ಲಿ ಖಾತೆಯಲ್ಲಿರುವ ಕನಿಷ್ಠ ಬ್ಯಾಲೆನ್ಸ್ ಮೊತ್ತ ಆಧರಿಸಿ ಬಡ್ಡಿ ಲೆಕ್ಕ ಹಾಕಲಾಗುತ್ತದೆ ಎಂಬುದು ಗೊತ್ತಿರಲಿ.
3. ಆನ್ಲೈನ್ ಮೂಲಕ ಪಾವತಿ
ನಗದು ಅಥವಾ ಚೆಕ್‌ಗಿಂತ ಆನ್ಲೈನ್ ಮೂಲಕ ವಂತಿಗೆ ಪಾವತಿಸುವುದು ಉತ್ತಮ ಆಯ್ಕೆಯಾಗಿದೆ. ಇದರಿಂದ ಪಾವತಿಸಿದ ಹಣ ತಕ್ಷಣ ಖಾತೆಗೆ ಜಮೆಯಾಗುತ್ತದೆ.

4. ನಿಮ್ಮ ಹಾಗೂ ಸಂಗಾತಿಯ ಖಾತೆಗಳೆರಡಕ್ಕೂ ವಂತಿಗೆ ಪಾವತಿಸಿ
ನಿಮ್ಮ ಸಂಗಾತಿಯ ಹೆಸರಲ್ಲೂ ಒಂದು ಪಿಪಿಎಫ್ ಖಾತೆ ತೆರೆಯಬಹುದು. ಪತಿ ಹಾಗೂ ಪತ್ನಿ ಇಬ್ಬರ ಖಾತೆಗೂ ಕ್ರಮವಾಗಿ ವಾರ್ಷಿಕ 1.5 ಲಕ್ಷ ರೂ. ಹೂಡಿಕೆ ಮಾಡಬಹುದು. ಅಂದರೆ ಒಟ್ಟಾರೆ 3 ಲಕ್ಷ ರೂ. ಮೊತ್ತಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ಗರಿಷ್ಠ ಮಿತಿಯ ಹೂಡಿಕೆ ಮಾಡಿದಲ್ಲಿ ಎರಡೂ ಖಾತೆ ಸೇರಿಸಿ 15 ವರ್ಷಗಳಲ್ಲಿ ಒಟ್ಟು 45 ಲಕ್ಷ ರೂ. ಮೊತ್ತವಾಗುತ್ತದೆ. (ವರ್ಷಕ್ಕೆ 3 ಲಕ್ಷ ರೂ.ಗಳಂತೆ 15 ವರ್ಷಕ್ಕೆ). 15 ವರ್ಷಗಳವರೆಗೆ ಈ ಎರಡೂ ಖಾತೆಯಲ್ಲಿನ ಹೂಡಿಕೆಗೆ ಬಡ್ಡಿ ಆದಾಯ ಗಳಿಸಬಹುದು.

 

ಪಿಪಿಎಫ್‌ನಿಂದ ರೂ. 1 ಕೋಟಿ ಉಳಿತಾಯ ಮಾಡುವುದು ಹೇಗೆ?

ಪಿಪಿಎಫ್‌ನಿಂದ ರೂ. 1 ಕೋಟಿ ಉಳಿತಾಯ ಮಾಡುವುದು ಹೇಗೆ?

ಪ್ರಸ್ತುತ ಪಿಪಿಎಫ್ ಖಾತೆಗೆ ಶೇ. 8 ರಷ್ಟು ಬಡ್ಡಿದರ ನಿಗದಿಪಡಿಸಲಾಗಿದ್ದು, ಸಂಯೋಜಿತ ಬಡ್ಡಿಯನ್ನು ವಾರ್ಷಿಕವಾಗಿ ಖಾತೆಗೆ ಜಮೆ ಮಾಡಲಾಗುತ್ತದೆ. ಪ್ರತಿ ತ್ರೈಮಾಸಿಕಕ್ಕೊಮ್ಮೆ ಬಡ್ಡಿದರಗಳನ್ನು ಪರಿಷ್ಕರಿಸಲಾಗುತ್ತದೆಯಾದರೂ, ಯೋಜನೆಯಲ್ಲಿನ ದೊಡ್ಡ ಸಂಖ್ಯೆಯ ಹೂಡಿಕೆದಾರರ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಬಡ್ಡಿದರಗಳನ್ನು ತೀರಾ ಹೆಚ್ಚು ಕಡಿಮೆ ಮಾಡಲಾಗುವುದಿಲ್ಲ. ಹೀಗಾಗಿ ಕೆಳಗಿನ ವಿಧಾನಗಳಲ್ಲಿ ಹೂಡಿಕೆ ಮಾಡಿದಲ್ಲಿ ಒಟ್ಟು 1 ಕೋಟಿ ರೂ. ಉಳಿತಾಯ ಮಾಡಬಹುದು.
ಉದಾಹರಣೆ 1 : ಈಗಿನ ಶೇ. 8 ರಷ್ಟು ಬಡ್ಡಿದರವನ್ನು ಪರಿಗಣಿಸಿದಲ್ಲಿ, ಓರ್ವ ವ್ಯಕ್ತಿ ತನ್ನ ಹಾಗೂ ಸಂಗಾತಿಯ ಖಾತೆಗೆ ಪ್ರತಿವರ್ಷ ಕ್ರಮವಾಗಿ ರೂ. 1.5 ಲಕ್ಷ ಒಟ್ಟು 3 ಲಕ್ಷ ರೂ.ಗಳನ್ನು 17 ವರ್ಷದವರೆಗೆ ಹೂಡಿಕೆ ಮಾಡಬೇಕು. ಅಂದರೆ 17 ವರ್ಷದಲ್ಲಿ ನೀವು ಹೂಡಿದ ರೂ. 51 ಲಕ್ಷಗಳಾಗುತ್ತದೆ. (ವರ್ಷಕ್ಕೆ 3 ಲಕ್ಷದಂತೆ 17 ವರ್ಷ) 17ನೇ ವರ್ಷದ ಅಂತ್ಯಕ್ಕೆ ಬಡ್ಡಿ ಆದಾಯ ಸೇರಿದಂತೆ 1.02 ಕೋಟಿ ರೂ.ಗಳಾಗುತ್ತವೆ.

ಉದಾಹರಣೆ 2 : ಸರಾಸರಿ ಬಡ್ಡಿದರ ಶೇ. 7 ಎಂದು ಇಟ್ಟುಕೊಂಡಲ್ಲಿ (ಭವಿಷ್ಯದಲ್ಲಿ ಬಡ್ಡಿದರ ಕಡಿಮೆಯಾಗಬಹುದು ಎಂಬ ಊಹೆಯೊಂದಿಗೆ), ಪತಿ ಹಾಗೂ ಪತ್ನಿ ಇಬ್ಬರೂ ವಾರ್ಷಿಕ ತಮ್ಮ ಖಾತೆಗಳಿಗೆ ಕ್ರಮವಾಗಿ 1.5 ಲಕ್ಷದಂತೆ ಒಟ್ಟು 3 ಲಕ್ಷ ರೂ.ಗಳನ್ನು 18 ವರ್ಷಗಳವರೆಗೆ ಪಾವತಿಸಬೇಕು. 18 ನೇ ವರ್ಷದ ಕೊನೆಯಲ್ಲಿ ಒಟ್ಟು ಹೂಡಿಕೆ ಮೊತ್ತ 54 ಲಕ್ಷ ರೂ. ಗಳಾಗಲಿದ್ದು (ವರ್ಷಕ್ಕೆ 3 ಲಕ್ಷದಂತೆ 18 ವರ್ಷ) ಇದಕ್ಕೆ ಬಡ್ಡಿ ಆದಾಯ ಸೇರಿಸಿದರೆ ಈ ಮೊತ್ತ 1.02 ಕೋಟಿ ರೂ.ಗಳಾಗುತ್ತದೆ.

ಉದಾಹರಣೆ 3 : ಸರಾಸರಿ ಬಡ್ಡಿದರ ಶೇ. 6.5 ಎಂದು ಇಟ್ಟುಕೊಂಡಲ್ಲಿ (ಭವಿಷ್ಯದಲ್ಲಿ ಬಡ್ಡಿದರ ಮತ್ತಷ್ಟು ಕಡಿಮೆಯಾಗಬಹುದು ಎಂಬ ಊಹೆಯೊಂದಿಗೆ), ಪತಿ ಹಾಗೂ ಪತ್ನಿ ಇಬ್ಬರೂ ವಾರ್ಷಿಕ ತಮ್ಮ ಖಾತೆಗಳಿಗೆ ಕ್ರಮವಾಗಿ 1.5 ಲಕ್ಷದಂತೆ ಒಟ್ಟು 3 ಲಕ್ಷ ರೂ.ಗಳನ್ನು 19 ವರ್ಷಗಳವರೆಗೆ ಪಾವತಿಸಬೇಕು. 19 ನೇ ವರ್ಷದ ಕೊನೆಯಲ್ಲಿ ಒಟ್ಟು ಹೂಡಿಕೆ ಮೊತ್ತ 57 ಲಕ್ಷ ರೂ.ಗಳಾಗಲಿದ್ದು (ವರ್ಷಕ್ಕೆ 3 ಲಕ್ಷದಂತೆ 19 ವರ್ಷ) ಇದಕ್ಕೆ ಬಡ್ಡಿ ಆದಾಯ ಸೇರಿಸಿದರೆ ಈ ಮೊತ್ತ 1.07 ಕೋಟಿ ರೂ.ಗಳಾಗುತ್ತದೆ.

ಉದಾಹರಣೆ 4 : ಒಂದು ನಿರ್ದಿಷ್ಟ ಮೊತ್ತವನ್ನು ನೀವು ಪ್ರತಿವರ್ಷ ಹೂಡಿಕೆ ಮಾಡಲು ಬಯಸುತ್ತೀರಿ ಎಂದಾದಲ್ಲಿ, ಸರಾಸರಿ ಬಡ್ಡಿದರ ಶೇ.8 ಎಂದು ಇಟ್ಟುಕೊಂಡಲ್ಲಿ ಪತಿ ಹಾಗೂ ಪತ್ನಿ ಇಬ್ಬರೂ ತಮ್ಮ ಖಾತೆಗೆ ಕ್ರಮವಾಗಿ ಪ್ರತಿವರ್ಷ 1.1 ಲಕ್ಷ ರೂ.ಗಳಂತೆ ಒಟ್ಟು 2.2 ಲಕ್ಷ ರೂ.ಗಳನ್ನು 20 ವರ್ಷಗಳವರೆಗೆ ಹೂಡಿಕೆ ಮಾಡಬೇಕು. 20 ನೇ ವರ್ಷದ ಕೊನೆಯಲ್ಲಿ ಒಟ್ಟು ಹೂಡಿಕೆ ಮೊತ್ತ 44 ಲಕ್ಷ ರೂ.ಗಳಾಗಲಿದ್ದು (ವರ್ಷಕ್ಕೆ 2.2 ಲಕ್ಷದಂತೆ 20 ವರ್ಷ) ಇದಕ್ಕೆ ಬಡ್ಡಿ ಆದಾಯ ಸೇರಿಸಿದರೆ ಈ ಮೊತ್ತ 1 ಕೋಟಿ ರೂ.ಗಳಾಗುತ್ತದೆ.

ಉದಾಹರಣೆ 5 : ಆರಂಭದಲ್ಲಿ ಕಡಿಮೆ ಹಾಗೂ ವರ್ಷಗಳು ಕಳೆದಂತೆ ಹೂಡಿಕೆಯನ್ನು (ಸಂಬಳ ಹೆಚ್ಚಾದಂತೆ) ಹೆಚ್ಚಿಸುತ್ತ ಹೋಗುವ ಇನ್ನೊಂದು ವಿಧಾನವನ್ನು ಪರಿಗಣಿಸೋಣ. ಶೇ. 8 ರಷ್ಟು ಬಡ್ಡಿದರವನ್ನು ಪರಿಗಣಿಸಿದಲ್ಲಿ ಪತಿ ಹಾಗೂ ಪತ್ನಿ ಇಬ್ಬರೂ ಕ್ರಮವಾಗಿ ವಾರ್ಷಿಕ 75 ಸಾವಿರ ರೂ.ಗಳಂತೆ ಒಟ್ಟು ವರ್ಷಕ್ಕೆ 1.5 ಲಕ್ಷ ರೂ.ಗಳಂತೆ 20 ವರ್ಷಗಳವರೆಗೆ ಕಂತು ಪಾವತಿಸಬೇಕು. ಹೀಗೆ ಮಾಡುವಾಗ ಪ್ರತಿವರ್ಷ ವಂತಿಗೆ ಪ್ರಮಾಣವನ್ನು ಶೇ.5 ರಷ್ಟು ಹೆಚ್ಚಿಸುತ್ತ ಹೋಗಬೇಕು. ಅಂದರೆ ಪ್ರಥಮ ವರ್ಷ ನೀವು 1.5 ಲಕ್ಷ ಹೂಡಿಕೆ ಮಾಡುವಿರಿ. ಅದರ ಮುಂದಿನ ವರ್ಷ ಶೇ.5ರಷ್ಟು ಹೆಚ್ಚು ಅಂದರೆ 7,500 ರೂ. ಹೆಚ್ಚಿಸಿದಲ್ಲಿ ಹೂಡಿಕೆ ಮೊತ್ತ 1,62,000 ಲಕ್ಷ ರೂ.ಗಳಾಗುತ್ತದೆ. ಇದೇ ಅನುಪಾತದಲ್ಲಿ ಹೂಡಿಕೆ ಹೆಚ್ಚಿಸುತ್ತ ಹೋದಲ್ಲಿ 20 ವರ್ಷಗಳಲ್ಲಿ ನೀವು ಒಟ್ಟು 47.3 ಲಕ್ಷ ರೂ. ಹೂಡಿಕೆ ಮಾಡಿದಂತಾಗುತ್ತದೆ. ಇದು 20 ವರ್ಷದ ಕೊನೆಯಲ್ಲಿ ಒಟ್ಟು 1 ಕೋಟಿ ರೂಪಾಯಿಗಳಾಗುತ್ತದೆ.

ಕಡಿಮೆ ರಿಸ್ಕ್‌ ನೊಂದಿಗೆ ಹೆಚ್ಚು ಆದಾಯಕ್ಕೆ ಪಿಪಿಎಫ್ ಬೆಸ್ಟ್

ಕಡಿಮೆ ರಿಸ್ಕ್‌ ನೊಂದಿಗೆ ಹೆಚ್ಚು ಆದಾಯಕ್ಕೆ ಪಿಪಿಎಫ್ ಬೆಸ್ಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+