2019 ಇರಲಿ ಅಥವಾ 2020 ಬರಲಿ ಅಥವಾ ಬರಲಿರುವ ಮುಂದಿನ ಯಾವುದೇ ವರ್ಷದಲ್ಲೂ ಜೀವನದಲ್ಲಿ ಹಣಕ್ಕಿರುವ ಮಹತ್ವ ಮಾತ್ರ ಕಡಿಮೆಯಾಗಲಾರದು.
ಈಗಷ್ಟೇ ನಾವೇಲ್ಲ ಹೊಸ ವರ್ಷದ ಸಂಭ್ರಮಾಚರಣೆ ಮಾಡಿದ್ದು, 2019 ರ ಮೊದಲ ವಾರದ ಹೊಸ್ತಿಲಲ್ಲಿ ನಿಂತಿದ್ದೇವೆ. ಈ ವರ್ಷದಲ್ಲಿ ಭರಪೂರ 12 ತಿಂಗಳು ನಮ್ಮ ಮುಂದೆ ಬಾಕಿ ಇವೆ. ಒಂದು ರೀತಿಯಿಂದ 12 ತಿಂಗಳು ಸುದೀರ್ಘ ಅವಧಿಯೇ ಆಗಿದೆ. ಜಾಣತನದಿಂದ ಈ ಸಮಯವನ್ನು ಸದುಪಯೋಗಪಡಿಸಿಕೊಂಡಲ್ಲಿ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ಕಾಣಲು ಸಾಧ್ಯ. ಹಾಗೆಯೇ ಬೇಜವಾಬ್ದಾರಿಯುತವಾಗಿ ಬದುಕಿದಲ್ಲಿ ಈ 12 ತಿಂಗಳು ನೋಡ ನೋಡುತ್ತಲೇ ಕಳೆದು ಹೋಗಿ ಬಿಡುತ್ತವೆ.
2019 ಇರಲಿ ಅಥವಾ 2020 ಬರಲಿ ಅಥವಾ ಬರಲಿರುವ ಮುಂದಿನ ಯಾವುದೇ ವರ್ಷದಲ್ಲೂ ಜೀವನದಲ್ಲಿ ಹಣಕ್ಕಿರುವ ಮಹತ್ವ ಮಾತ್ರ ಕಡಿಮೆಯಾಗಲಾರದು. ಹೀಗಾಗಿ ಮುಂದಿನ 12 ತಿಂಗಳುಗಳನ್ನು ನಮ್ಮ ಆರ್ಥಿಕ ಸುಸ್ಥಿತಿಗಾಗಿ ಬಳಸಿಕೊಳ್ಳಲು ಸರಿಯಾದ ಯೋಜನೆ ರೂಪಿಸಬೇಕು ಹಾಗೂ ಅದರಂತೆ ನಡೆಯಬೇಕು.
ಹಣ ಎಂಬುದು ಒಂದು ವಿಚಿತ್ರ ವಸ್ತು. ಇದು ನಿಮ್ಮ ಬಳಿ ಇದ್ದರೆ ನಿಮಗೆ ಇನ್ನಷ್ಟು ಬೇಕು. ಒಂದೊಮ್ಮೆ ನಿಮ್ಮ ಬಳಿ ಹಣ ಇರದಿದ್ದರೆ ಆಗಲೂ ನಿಮಗೆ ಹಣ ಬೇಕು. ಜೀವನಕ್ಕೆ ಸಾಕಾಗುವಷ್ಟಾದರೂ ಹಣ ಗಳಿಸಲೇ ಬೇಕು. 60 ವರ್ಷಕ್ಕೂ ಮುನ್ನವೇ ಸಾಕಷ್ಟು ಹಣವನ್ನು ದುಡಿದು ಇಟ್ಟಲ್ಲಿ ನೆಮ್ಮದಿಯಿಂದ ನಿವೃತ್ತ ಜೀವನಕ್ಕೆ ಕಾಲಿಡಬಹುದು. ಇನ್ನು ಹೊಸ ದಂಪತಿಗಳಾಗಿದ್ದರೆ ತಮ್ಮ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಣ ಕೂಡಿಸುವ ಚಿಂತೆ ಇರುತ್ತದೆ. ಹೀಗಾಗಿ ಹಣ ಎಂಬುದು ನಮ್ಮೆಲ್ಲರ ಜೀವನದ ಅವಿಭಜ್ಯ ಅಂಗವಾಗಿದೆ.
ಹೊಸ ವರ್ಷದಲ್ಲಿ ಹಣದ ಸದ್ವಿನಿಯೋಗಕ್ಕಾಗಿ ಕೆಲ ಸಂಕಲ್ಪಗಳನ್ನು ಮಾಡಿದಲ್ಲಿ ನಿಮ್ಮ ಹಣಕಾಸು ಸ್ಥಿತಿಯನ್ನು ಖಂಡಿತವಾಗಿಯೂ ಉತ್ತಮ ಪಡಿಸಿಕೊಳ್ಳಬಹುದು. ಯಾವೆಲ್ಲ ಅಂಶಗಳನ್ನು ಪಾಲಿಸುವ ಮೂಲಕ ಜೀವನದಲ್ಲಿ ಆರ್ಥಿಕ ಶಿಸ್ತು ಮೂಡಿಸಬಹುದು ಎಂಬುದನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
2019 ರಲ್ಲಿ ಹಣಕಾಸು ಶಿಸ್ತಿಗೆ 6 ಪ್ರಮುಖ ಟಿಪ್ಸ್:
ಖರ್ಚು ಕಡಿಮೆ ಮಾಡಿ
ನೀವು ದುಡಿದ ಹಣದಲ್ಲಿ ಶೇ.90 ರಷ್ಟನ್ನು ಖರ್ಚು ಮಾಡುತ್ತಿದ್ದಲ್ಲಿ ನೀವು ಹಣ ಉಳಿತಾಯ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ ಹೊಸ ವರ್ಷಾರಂಭದಿಂದಲೇ ಆದಷ್ಟೂ ಖರ್ಚು ಕಡಿಮೆ ಮಾಡುವತ್ತ ಗಮನ ಹರಿಸಿ. ಸೂಕ್ತ ಹಣಕಾಸು ಯೋಜನೆ ರೂಪಿಸಿ ಭವಿಷ್ಯದಲ್ಲಿ ಬರಬಹುದಾದ ದೊಡ್ಡ ಖರ್ಚುಗಳ ಬಗ್ಗೆ ಅಂದಾಜು ಹಾಕಿಟ್ಟುಕೊಳ್ಳಿ. 2018 ರಲ್ಲಿ ನೀವೆಷ್ಟು ಖರ್ಚು ಮಾಡಿದಿರಿ ಎಂಬುದನ್ನು ಲೆಕ್ಕ ಹಾಕಿ ಈ ವರ್ಷ ಅದಕ್ಕೂ ಕಡಿಮೆ ಖರ್ಚಿನಲ್ಲಿ ಬದುಕು ಸಾಗಿಸಲು ಯತ್ನಿಸಿ. ಜಗತ್ತಿನಲ್ಲಿನ ಹಲವಾರು ಆಕರ್ಷಣೆಗಳು ನಮ್ಮನ್ನು ಖರ್ಚು ಮಾಡುವತ್ತ ಸೆಳೆಯುತ್ತವೆ. ಹೀಗಾಗಿ ಯಾವುದೇ ವಸ್ತು ಕೊಳ್ಳುವ ಮುನ್ನ 'ಅದು ನನಗೆ ಅವಶ್ಯಕತೆ ಇದೆಯಾ?' ಎಂದು ಕೇಳಿಕೊಂಡು ಮುಂದುವರೆಯಿರಿ.
ಉಳಿತಾಯ ಪ್ರವೃತ್ತಿ ಹೆಚ್ಚಾಗಲಿ
ನಿಮ್ಮ ಖರ್ಚುಗಳನ್ನು ಕಡಿಮೆ ಮಾಡಿದಲ್ಲಿ ಉಳಿತಾಯ ತಾನಾಗಿಯೇ ಆಗುತ್ತದೆ. ಆದರೆ ಹಾಗಂತ ಕಡಿಮೆ ಖರ್ಚು ಮಾಡುವವರೆಲ್ಲ ಹಣ ಉಳಿತಾಯ ಮಾಡಲಾರರು. ಯಾವುದೋ ಒಂದು ಹಂತದಲ್ಲಿ ಸಣ್ಣ ಖರ್ಚಿನಿಂದ ಪಾರಾದರೂ ಮುಂದೆ ದೊಡ್ಡ ಖರ್ಚು ಮಾಡುವ ಎಲ್ಲ ಸಾಧ್ಯತೆಗಳಿರುತ್ತವೆ. ಇದು ತೀರಾ ಅಪಾಯಕಾರಿಯಾಗಿದ್ದು ನಿಮ್ಮ ಸಂಪೂರ್ಣ ಹಣಕಾಸು ಯೋಜನೆಯನ್ನು ಹಾಳು ಮಾಡಬಲ್ಲದು.
ವಾರ್ಷಿಕ ಒಟ್ಟು ಆದಾಯದ ಶೇ.40 ರಷ್ಟನ್ನಾದರೂ ಉಳಿತಾಯ ಮಾಡಲು ಪ್ರಯತ್ನಿಸಿ. ಉಳಿತಾಯದ ಪ್ರವೃತ್ತಿಯನ್ನು ಹೆಚ್ಚಾಗಿ ಬೆಳೆಸಿಕೊಳ್ಳಿ. ಉಳಿತಾಯ ಮಾಡಿದವರಾರೂ ಬಡವರಾಗಿಲ್ಲ. ಆದರೆ ಉಳಿತಾಯ ನಿರ್ಲಕ್ಷಿಸಿದಲ್ಲಿ ಬಡತನ ಬರಬಹುದು.
ಹೂಡಿಕೆ ಮಾಡಿ, ಹೂಡಿಕೆ ಮಾಡಿ, ಹೂಡಿಕೆ ಮಾಡಿ
ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಹಣ ಇಡುವುದು ಹೂಡಿಕೆ ಮಾಡಿದಂತಲ್ಲ ಎಂಬುದು ಗೊತ್ತಿರಲಿ. ನಿರ್ದಿಷ್ಟ ಗುರಿಯೊಂದಿಗೆ ಹೂಡಿಕೆ ಮಾಡಬೇಕು ಹಾಗೂ ಅದರಿಂದ ಹಣದುಬ್ಬರ ಮೀರಿದ ಆದಾಯ ಸಿಗುವಂತಿರಬೇಕು. ಹಣದುಬ್ಬರಕ್ಕೂ ಕಡಿಮೆ ಮಟ್ಟದಲ್ಲಿ ಆದಾಯ ಬರುವಂತೆ ಹೂಡಿಕೆ ಮಾಡಿದಲ್ಲಿ ನಿಧಾನವಾಗಿ ನೀವು ಹಣ ಕಳೆದುಕೊಳ್ಳುತ್ತಿರುವಿರಿ ಎಂತಲೇ ಅರ್ಥ. ಮಾರುಕಟ್ಟೆಯಲ್ಲಿ ನೂರಾರು ಉತ್ತಮ ಹೂಡಿಕೆ ಆಯ್ಕೆಗಳಿವೆ. ಅದರಲ್ಲಿ ಅತ್ಯುತ್ತಮ ಆದಾಯ ನೀಡುವ ಹಾಗೂ ನಿಮಗೆ ತೆರಿಗೆ ಉಳಿಸಬಲ್ಲ ಯೋಜನೆಯನ್ನು ಆಯ್ದುಕೊಂಡು ಹೂಡಿಕೆ ಮಾಡಿ.
ಜೂಜು ಬೇಡವೇ ಬೇಡ
2017 ಹಾಗೂ 2018 ರಲ್ಲಿ ಬಿಟ್ ಕಾಯಿನಗಳ ಬಗ್ಗೆ ಸಾಕಷ್ಟು ಕೋಲಾಹಲ ಮೂಡಿತ್ತು. ಕ್ರಿಪ್ಟೊಕರೆನ್ಸಿ ಎಂದರೇನು ಎಂಬುದು ಸಹ ಗೊತ್ತಿರದ ಅನೇಕರು ಅದರಲ್ಲಿ ಹೂಡಿಕೆ ಮಾಡಿದರು. ಕೊನೆಗೆ ಬಿಟ್ ಕಾಯಿನ್ ಬೆಲೆ ಪಾತಾಳಕ್ಕೆ ಕುಸಿದಾಗ ಲಕ್ಷಾಂತರ ಜನ ಹಣ ಕಳೆದುಕೊಂಡರು. ಯಾರು ಎಷ್ಟೇ ಖಾತರಿದಾಯಕ 'ಟಿಪ್ಸ್' ನೀಡಿದರೂ ಜೂಜಿನ ಮೇಲೆ ಮಾತ್ರ ಹಣ ಹೂಡಲೇಬೇಡಿ. ಜೂಜಿಗೆ ಹಣ ಹೂಡಿ ಗೆಲುವಿನ ಚಾನ್ಸ್ ಪರಿಶೀಲಿಸುವುದಕ್ಕಿಂತ ನಿಮ್ಮ ಹಣವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳುವುದು ಸುರಕ್ಷಿತ.
ಪರ್ಯಾಯ ಆದಾಯದ ಮಾರ್ಗಗಳನ್ನು ಶೋಧಿಸಿ
ಹಣದುಬ್ಬರ ಎಂಬುದು ನಿರಂತರ ಪ್ರಕ್ರಿಯೆ. ಕಳೆದ ವರ್ಷಕ್ಕಿಂತ ಈ ವರ್ಷ ಎಲ್ಲ ವಸ್ತುಗಳೂ ದುಬಾರಿಯಾಗಿರುತ್ತವೆ. ಹಾಗೆಯೇ 2019, 2020, 2021.... ಹೀಗೆ ಬರುವ ವರ್ಷಗಳಿಗೂ ಇದೇ ನಿಯಮ ಅನ್ವಯಿಸುತ್ತದೆ. ಬೆಲೆಯೇರಿಕೆಯ ಪರಿಣಾಮ ತಡೆಗಟ್ಟಬೇಕಾದರೆ ಆದಾಯ ಹೆಚ್ಚು ಮಾಡಿಕೊಳ್ಳುವುದು ಅನಿವಾರ್ಯ. ಆದರೆ ಹಾಗಂತ ನಿಮ್ಮ ಸಂಬಳ ಹೆಚ್ಚಳದ ಮೇಲೆ ಮಾತ್ರ ಅವಲಂಬಿತರಾಗಿರುವುದು ಸಾಧ್ಯವಿಲ್ಲ. ಹೀಗಾಗಿ ಪರ್ಯಾಯ ಆದಾಯದ ಮಾರ್ಗಗಳನ್ನು ಶೋಧಿಸಬೇಕಾಗುತ್ತದೆ. ವಾರಾಂತ್ಯದಲ್ಲಿ ಇನ್ನೊಂದಿಷ್ಟು ಆದಾಯ ತಂದುಕೊಡಬಲ್ಲ ಕೆಲಸ ಮಾಡಿ. ಒಟ್ಟಾರೆಯಾಗಿ ಹೊಸ ವರ್ಷದಲ್ಲಿ ಇನ್ನೊಂದು ಆದಾಯದ ಮೂಲವನ್ನು ಹುಡುಕಿಕೊಳ್ಳಿ.
ಚುನಾವಣೆಯಲ್ಲಿ ಮತ ನೀಡಿ, ಹಣವನ್ನಲ್ಲ
ಹೊಸ ವರ್ಷ 2019 ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುವ ಪ್ರಮುಖ ವರ್ಷವಾಗಿದೆ. ಈ ಚುನಾವಣೆಯ ಫಲಿತಾಂಶದಿಂದ ಶೇರು ಮಾರುಕಟ್ಟೆಯ ಮೇಲೆ ಯಾವೆಲ್ಲ ಪರಿಣಾಮಗಳಾಗಬಹುದು ಎಂಬುದನ್ನು ಮಾರುಕಟ್ಟೆ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಆದರೆ ಚುನಾವಣಾ ಫಲಿತಾಂಶಗಳನ್ನು ನಿರೀಕ್ಷೆಯಲ್ಲಿಟ್ಟುಕೊಂಡು ಹೂಡಿಕೆ ಮಾಡುವುದು ಬೇಡ. ಒಂದು ಅಥವಾ ಎರಡು ವರ್ಷದ ಅವಧಿಯನ್ನು ಪರಿಗಣಿಸಿದಲ್ಲಿ ಚುನಾವಣೆಗಳಿಂದ ಹೂಡಿಕೆಯ ಮೇಲೆ ಹೇಳಿಕೊಳ್ಳುವಂತಹ ಪರಿಣಾಮವಾಗುವುದಿಲ್ಲ ಎಂಬುದು ಕಂಡು ಬರುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications