For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ನೋಂದಾಯಿತ ಉದ್ದಿಮೆದಾರರಿಗೆ ವಿಮಾ ಯೋಜನೆ

ಚುನಾವಣೆ ಹತ್ತಿರವಾಗುತ್ತಿದ್ದಂತೆ ಸರ್ಕಾರಗಳು ಹಲವು ರೀತಿಯ ಆಕರ್ಷಕ ಯೋಜನೆಗಳನ್ನು ಜನತೆಗೆ ಪರಿಚಯಿಸುತ್ತಿದೆ.

|

ಚುನಾವಣೆ ಹತ್ತಿರವಾಗುತ್ತಿದ್ದಂತೆ ಸರ್ಕಾರಗಳು ಹಲವು ರೀತಿಯ ಆಕರ್ಷಕ ಯೋಜನೆಗಳನ್ನು ಜನತೆಗೆ ಪರಿಚಯಿಸುತ್ತಿದೆ.

ಜಿಎಸ್ಟಿ ನೋಂದಾಯಿತ ಉದ್ದಿಮೆದಾರರಿಗೆ ವಿಮಾ ಯೋಜನೆ

ಈಗ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನೋಂದಾಯಿತ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಇನ್ಶುರೆನ್ಸ್ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದು, ಇದರ ಪ್ರಯೋಜನವನ್ನು ಲಕ್ಷಾಂತರ ಉದ್ದಿಮೆದಾರರು ಪಡೆಯಲಿದ್ದಾರೆ.

ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ (ಪಿಎಂಎಸ್ಬಿವೈ) ಫಲಾನುಭವಿಗಳಿಗೆ ಅಪಘಾತ ವಿಮೆ ದೊರೆಯಲಿದೆ. ಈ ಯೋಜನೆಯನ್ನು ಈಗಾಗಲೇ ಉತ್ತರ ಪ್ರದೇಶ ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಅದರ ಆಧಾರದ ಮೇಲೆ ದೇಶದಾದ್ಯಂತ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಸಣ್ಣ ಉದ್ದಿಮೆದಾರರು ಹತ್ತು ಲಕ್ಷದವರೆಗೆ ಅಪಘಾತ ವಿಮೆ ಪಡೆಯಬಹುದು. ಪ್ರಸ್ತುತ ತಿಂಗಳ ಒಳಗಾಗಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸುವ ಸಾಧ್ಯತೆ ಇದೆ.
ಈಗಾಗಲೇ ಪಿಎಂಎಸ್ಬಿವೈಯಡಿ ಎರಡು ಲಕ್ಷ ಅಪಘಾತ ವಿಮೆ ಸೌಕರ್ಯ ಲಭ್ಯವಿದೆ. ಇದಕ್ಕೆ ವರ್ಷಕ್ಕೆ ಕೇವಲ ಹನ್ನೆರಡು ರುಪಾಯಿ ಕಟ್ಟಿದರೆ ಸಾಕು. 18 ರಿಂದ 70 ವರ್ಷದವರಿಗೆ ಈ ಯೋಜನೆ ಸಿಗಲಿದೆ.

English summary

Government plans insurance scheme for GST-registered small traders

Government plans insurance scheme for GST-registered small traders.
Story first published: Saturday, January 12, 2019, 14:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X