For Quick Alerts
ALLOW NOTIFICATIONS  
For Daily Alerts

ಫುಲ್ ಕಲರ್ 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಲೋಕಕ್ಕೆ ಎಚ್ ಪಿ ಪ್ರವೇಶ!

|

ಬೆಂಗಳೂರು, ಜನವರಿ 24: ಎಚ್‍ಪಿ ಕಂಪನಿ ಇಂದು ತನ್ನ ಹೊಸ ಜೆಟ್ ಫ್ಯೂಷನ್ 300/500 ಸರಣಿಯ 3ಡಿ ಪ್ರಿಂಟರ್ ಗಳನ್ನು ಪರಿಚಯಿಸುವ ಮೂಲಕ ತನ್ನ 3ಡಿ ಪ್ರಿಂಟಿಂಗ್ ಅನ್ನು ಭಾರತದಲ್ಲಿ ವಿಸ್ತರಿಸಿದೆ.

ಇದು ಕಂಪನಿಯ ಮೊದಲ 3ಡಿ ಪ್ರಿಂಟಿಂಗ್ ತಂತ್ರಜ್ಞಾನವಾಗಿದ್ದು, ಎಂಜಿನಿ ಯರಿಂಗ್ ದರ್ಜೆಯ, ಉತ್ತಮ ಕಾರ್ಯಕ್ಷಮತೆಯುಳ್ಳ, ಕ್ಷಣಮಾತ್ರದಲ್ಲಿ ಪೂರ್ಣ ಬಣ್ಣ, ಕಪ್ಪು ಅಥವಾ ಬಿಳುಪಿನಲ್ಲಿ ಮುದ್ರಣ ಮಾಡಲು ಉತ್ಪಾದಕರಿಗೆ ಅನುಕೂಲ ಮಾಡಿಕೊಡುತ್ತದೆ.

ಎಚ್ಪಿಯಿಂದ ಸ್ಮಾರ್ಟ್ ಪಾಕೆಟ್ ಪ್ರಿಂಟರ್ ಬಿಡುಗಡೆ

ಜೆಟ್‍ಫ್ಯೂಷನ್ 300/500 ಸರಣಿ ಸಣ್ಣಮಟ್ಟಿನಿಂದ ಮಧ್ಯಮಗಾತ್ರದ ಉತ್ಪನ್ನ ಅಭಿವೃದ್ಧಿ ತಂಡಗಳು ಮತ್ತು ವಿನ್ಯಾಸ ಉದ್ದಿಮೆದಾರರು, ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೆ ಎಚ್‍ಪಿ ಕಂಪನಿಯ ಮುಂಚೂಣಿಯಲ್ಲಿರುವ ಮಲ್ಟಿಜೆಟ್ ಫ್ಯೂಷನ್ ಪ್ರಿಂಟಿಂಗ್ ತಂತ್ರಜ್ಞಾನ ಲಭ್ಯವಾಗುವಂತೆ ಮಾಡಿದೆ.

ಫುಲ್ ಕಲರ್ 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಲೋಕಕ್ಕೆ ಎಚ್ ಪಿ ಪ್ರವೇಶ!

ಹೊಸ ಜೆಟ್ ಫ್ಯೂಷನ್ 300/500 ಸರಣಿಯು ಎಚ್‍ಪಿಯ ಹಾಲಿ ಇಂಡಸ್ಟ್ರಿಯಲ್ ಗ್ರೇಡ್ -ಜೆಟ್ ಫ್ಯೂಷನ್ 4200/4210 3ಡಿ ಸೊಲ್ಯೂಷನ್‍ಗೆ ಪೂರಕವಾಗಿದೆ. ಈಗ ಎಚ್‍ಪಿ ಕಂಪನಿಯು, ತನ್ನ ಮಲ್ಟಿ ಜೆಟ್ ಫ್ಯೂಷನ್ ಉತ್ಪನ್ನದ ಬಳಕೆದಾರರಿಗೆ, ಒಂದೇ ಪ್ಲಾಟ್‍ಫಾರಂನಲ್ಲಿ ಮೂಲಮಾದರಿ, ಹೊಸ ವಿನ್ಯಾಸ ಮತ್ತು ಅಪ್ಲಿಕೇಷನ್‍ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಒದಗಿಸಿದೆ.

'ಎಚ್‍ಪಿ ಕಂಪನಿಯು ತನ್ನ ಜಾಗತಿಕ ಬ್ರ್ಯಾಂಡ್‍ಗಳ ವ್ಯಾಪಕ ಸಂಗ್ರಹ ಮತ್ತು ಗುತ್ತಿಗೆ ತಯಾರಕರ ಮೂಲಕ ಏಷ್ಯಾದ 6 ಲಕ್ಷಕೋಟಿ ಡಾಲರ್ ಉತ್ಪಾನದಾ ಕೈಗಾರಿಕೆಯಲ್ಲಿ ಹೊಸ ಬದಲಾವಣೆ ತರುವಲ್ಲಿ ಬದ್ಧವಾಗಿದೆ' ಎಂದು ಎಚ್‍ಪಿ ಏಷ್ಯಾ-ಪೆಸಿಫಿಕ್ ಮತ್ತು ಜಪಾನ್‍ನ 3ಡಿ ಪ್ರಿಂಟಿಂಗ್ ಮತ್ತು ಡಿಜಿಟಲ್ ಉತ್ಪಾದನೆ ಮುಖ್ಯಸ್ಥ ರಾಬ್ ಮೆಸರೋಸ್ ಹೇಳಿದ್ದಾರೆ.

'ನಾವು ಅತ್ಯಂತ ಸುಧಾರಿತ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ವ್ಯಾಪಕ ಪ್ರಮಾಣದ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡುತ್ತಿದ್ದೇವೆ. ನಮ್ಮ ಕಂಪನಿಯ ಮೊದಲ ಕಡಿಮೆ-ವೆಚ್ಚದ ಫುಲ್-ಕಲರ್ 3ಡಿ ಪ್ಲಾಟ್‍ಫಾರಂ ಮೂಲಕ ಇದನ್ನು ಸಾಧಿಸಲಿದ್ದೇವೆ. ನಿಮ್ಮ ಉದ್ದಿಮೆ ಅಥವಾ ವಿನ್ಯಾಸದ ಸಂಕೀರ್ಣತೆ ಏನೇ ಆಗಿದ್ದರೂ, ಈ 3ಡಿ ಪ್ಲಾಟ್‍ಫಾರಂ ಫಂಕ್ಷನಲ್ ಪಾರ್ಟ್ಸ್ ಅನ್ನು ಉತ್ಪತ್ತಿ ಮಾಡುತ್ತದೆ' ಎಂದರು.

'3ಡಿ ಪ್ರಿಂಟಿಂಗ್ ತಂತ್ರಜ್ಞಾನವು ಉತ್ಪಾದನಾ ವಲಯದಲ್ಲಿ ಹೊಸ ಬದಲಾವಣೆ ಮೂಡಿಸಲಿದೆ ಎಂಬ ನಂಬಿಕೆ ಎಚ್‍ಪಿ ಕಂಪನಿಯದ್ದು. ನಮ್ಮ ಅತ್ಯುತ್ಕೃಷ್ಟ 3ಡಿ ಪ್ರಿಂಟಿಂಗ್ ತಂತ್ರಜ್ಞಾನದ ಮೂಲಕ, ವಿನ್ಯಾಸ ಗಾರರು, ಎಂಜಿನಿಯರ್ ಗಳು ಸಂಪೂರ್ಣವಾಗಿ ತಮ್ಮ ಉತ್ಪನ್ನಗಳನ್ನು ಮರುಕಲ್ಪಿಸಿಕೊಳ್ಳ ಬಹುದು, ಹೊಸ ಪರಿಕರಗಳನ್ನು ಅವಲಂಬಿಸಬಹುದು, ಸಾಂಪ್ರದಾಯಿಕ ಉತ್ಪಾದನಾ ಕ್ಷೇತ್ರದಲ್ಲಿದ್ದ ಮಿತಿಗಳಿಂದ ಹೊರಬರಬಹುದು ಮತ್ತು ಹೆಚ್ಚು ಕ್ಷಿಪ್ರವಾಗಿ, ದಕ್ಷವಾಗಿ ಹೊಸ ಉತ್ಪನ್ನಗಳನ್ನು ಉತ್ಪಾದಿಸಬಹುದು ಎಂದಿದ್ದಾರೆ' ಎಚ್‍ಪಿ ಇಂಕ್. ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸುಮೀರ್ ಚಂದ್ರ.

ಎಚ್‍ಪಿ ಜೆಟ್ ಫ್ಯೂಷನ್ 300/500 ಸರಣಿಯಲ್ಲಿ ಈ ಕೆಳಗಿನವು ಲಭ್ಯವಿವೆ

* ಎಚ್‍ಪಿ ಜೆಟ್ ಫ್ಯೂಷನ್ 340/380: ಸಣ್ಣಮಟ್ಟಿನ ಭಾಗಗಳನ್ನು ಬಯಸುವ ಅಥವಾ ಯಾರು ಸಾಮಾನ್ಯವಾಗಿ ಕನಿಷ್ಠ ಭಾಗಗಳನ್ನು ಮುದ್ರಿಸುತ್ತಾರೋ ಅಂಥ ಗ್ರಾಹಕರಿಗೆ ಸೂಕ್ತವಾದದ್ದು

* ಎಚ್‍ಪಿ ಜೆಟ್ ಫ್ಯೂಷನ್ 540(ಮೊನೋಕ್ರೋಮ್)/580(ಕಲರ್): 300 ಸರಣಿಗಿಂತ ದೊಡ್ಡ ಗಾತ್ರಕ್ಕಾಗಿ. ಅಧಿಕ ಉತ್ಪಾದನಾ ಬೇಡಿಕೆ ಇರುವಂಥದ್ದಕ್ಕೆ ಹಾಗೂ ದೊಡ್ಡ ದೊಡ್ಡ ಗಾತ್ರದ ಮುದ್ರಣಕ್ಕೆ ಅಗತ್ಯವಾದದ್ದು.

* ಎಚ್‍ಪಿ ಜೆಟ್ ಫ್ಯೂಷನ್ 540(ಮೊನೋಕ್ರೋಮ್) ಮತ್ತು 580(ಕಲರ್): ಇದು ಕ್ರಮವಾಗಿ 1 ಕೋಟಿ ರೂಪಾಯಿ ಮತ್ತು 1.5 ಕೋಟಿ (ತೆರಿಗೆ ಒಳಗೊಂಡು) ರೂಪಾಯಿಗಳಲ್ಲಿ ಲಭ್ಯವಿದೆ. ಈ ವೆಚ್ಚದಲ್ಲಿ ಎಚ್‍ಪಿ ಕಂಪನಿಯಿಂದ ಮೂರು-ವರ್ಷಗಳ ವಾರಂಟಿಯೂ ಸೇರಿದೆ.

* ಎಚ್‍ಪಿ ಜೆಟ್ ಫ್ಯೂಷನ್ 500 ಸರಣಿಯ 3ಡಿ ಪ್ರಿಂಟರ್ ಗಳು ಇಂದೇ ಆರ್ಡರ್ ಗೆ ಲಭ್ಯವಾಗಿದ್ದು, 2019ರ ಏಪ್ರಿಲ್‍ನಿಂದ ಸರಬರಾಜು ಆರಂಭವಾಗುತ್ತವೆ.

Read more about: hp ಎಚ್ ಪಿ
English summary

HP expands 3D Printing portfolio with Jet Fusion 300/500 series

HP India has expanded its 3D printing portfolio in India with the introduction of its new Jet Fusion 300/500 series of 3D printers, the industry’s first 3D printing technology to enable manufacturers to produce engineering-grade, functional, parts in full color, black or white – – in a fraction of the time of other solutions.
Story first published: Thursday, January 24, 2019, 18:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X