For Quick Alerts
ALLOW NOTIFICATIONS  
For Daily Alerts

ಬಜೆಟ್ 2019: ಟಿವಿ, ಎಸಿ, ಫ್ರೀಜ್ ಆಗಲಿದೆ ದುಬಾರಿ! ಯಾಕೆ ಗೊತ್ತಾ?

ಗೃಹೋಪಯೋಗಿ ಸರಕುಗಳಾದ ಟಿವಿ, ಎಸಿ, ವಾಷಿಂಗ್ ಮಷಿನ್, ರೆಫ್ರಿಜಿರೇಟರ್ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

|

ಫೆಬ್ರವರಿ 1 ರಂದು ಬಜೆಟ್ ಮಂಡನೆಯಾದ ನಂತರ ಗೃಹೋಪಯೋಗಿ ಸರಕುಗಳಾದ ಟಿವಿ, ಎಸಿ, ವಾಷಿಂಗ್ ಮಷಿನ್, ರೆಫ್ರಿಜಿರೇಟರ್ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

ಸಿದ್ದಪಡಿಸಿದ ಆಮದು ಸರಕುಗಳ ಮೇಲೆ ಕಸ್ಟಮ್ಸ್ ಸುಂಕ ಹೆಚ್ಚಿಸುವಂತೆ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಮತ್ತು ಅಪ್ಲೈಯನ್ಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ​​(CEAMA) ಸರ್ಕಾರವನ್ನು ವಿನಂತಿಸಿದೆ.

ಸರ್ಕಾರ ಈ ಬಜೆಟ್ ನಲ್ಲಿ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಮತ್ತು ಅಪ್ಲೈಯನ್ಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಮಾಡಿರುವ ವಿನಂತಿಯನ್ನು ಸ್ವೀಕರಿಸಿದರೆ ಟಿವಿ, ಎಸಿ, ವಾಷಿಂಗ್ ಮಷಿನ್, ರೆಫ್ರಿಜಿರೇಟರ್ ಬೆಲೆ ಹೆಚ್ಚಾಗಲಿದೆ.

ಬಜೆಟ್ 2019: ಟಿವಿ, ಎಸಿ, ಫ್ರೀಜ್ ಆಗಲಿದೆ ದುಬಾರಿ! ಯಾಕೆ ಗೊತ್ತಾ?

2018 ರ ಬಜೆಟ್ ನಲ್ಲಿ ಕಸ್ಟಮ್ಸ್ ಸುಂಕ ಏರಿಕೆ
2018 ರ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಮೊಬೈಲ್ ಫೋನ್ ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೆ. 15 ರಿಂದ 20ಕ್ಕೆ ಏರಿಸಿತ್ತು. ಮೊಬೈಲ್ ಫೋನ್ ಬಿಡಿ ಭಾಗಗಳು ಮತ್ತು ಟಿವಿ ಮೇಲಿನ ಕಸ್ಟಮ್ಸ್ ಸುಂಕ ಶೇ. 10 ರಿಂದ 15ಕ್ಕೆ ಏರಿಕೆ ಮಾಡಿತ್ತು. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ರೂಪಾಯಿ ಕುಸಿತದಿಂದಾಗಿ ಮತ್ತು ಕಚ್ಚಾ ತೈಲದ ಬೆಲೆ ಏರಿಕೆಯಿಂದಾದ ಕೊರತೆಯನ್ನು ಸರಿದೂಗಿಸಲು ವಾಷಿಂಗ್ ಮಷಿನ್, ರೆಫ್ರಿಜಿರೇಟರ್ ಮತ್ತು ಎಸಿ ಮೇಲೆ ಕಸ್ಟಮ್ಸ್ ಡ್ಯುಟಿಯನ್ನು ಶೇ. 10 ರಿಂದ 20ವರೆಗೆ ಹೆಚ್ಚಿಸಿತ್ತು.

ಪಿಯೂಶ್ ಗೋಯಲ್ ಬಜೆಟ್ ಮಂಡನೆ
ಅರುಣ್ ಜೇಟ್ಲಿ ಅನಾರೋಗ್ಯದ ಕಾರಣ ವಿದೇಶದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೇಲ್ವೆ ಸಚಿವ ಪಿಯೂಶ್ ಗೋಯಲ್ ಅವರು ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದಾರೆ. ಮಧ್ಯಂತರ ಬಜೆಟ್ ಸಾಮಾನ್ಯ ಕೇಂದ್ರ ಬಜೆಟ್ ನಂತೆ ಇರುವುದಿಲ್ಲ. ನರೇಂದ್ರ ಮೋದಿ ಸರ್ಕಾರ ಫೆ. ೧ಕ್ಕೆ ಮಧ್ಯಂತರ ಬಜೆಟ್ ಮಂಡಿಸಲಿದ್ದು, ಚುನಾವಣೆಯ ನಂತರದಲ್ಲಿ ಅಧಿಕಾರಕ್ಕೆ ಬರುವ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ.

ಈ ಬಜೆಟ್ ನಲ್ಲಿ ಕೃಷಿ ವಲಯ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆಯಿದೆ.

English summary

Budget 2019: TV, AC, Fridge may get costlier! Here's why

the Consumer Electronics and Appliances Manufacturers Association (CEAMA) has requested the government to raise customs duties on imported finished goods.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X